• Home
  • »
  • News
  • »
  • lifestyle
  • »
  • Weight Loss: ಹಬ್ಬಗಳಲ್ಲಿ ತೂಕ ಇಳಿಕೆ ಜರ್ನಿ ಸುಲಭವಾಗ್ಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

Weight Loss: ಹಬ್ಬಗಳಲ್ಲಿ ತೂಕ ಇಳಿಕೆ ಜರ್ನಿ ಸುಲಭವಾಗ್ಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಿಹಿ ತಿಂಡಿಗಳು ಹೊರಗಿನ ಆಹಾರ ಮತ್ತು ಜಂಕ್ ಫುಡ್‌ ಸೇವನೆ ಮಾಡುತ್ತಾ ಮೋಜು ಮಸ್ತಿ ಮಾಡಲಾಗುತ್ತದೆ. ಹಬ್ಬಗಳ ಹಿನ್ನೆಲೆ ಜನರು ಒಂದು ತಿಂಗಳ ಮುಂಚಿತವಾಗಿ ತಯಾರಿ ಪ್ರಾರಂಭಿಸುತ್ತಾರೆ. ಹಾಗಾಗಿ ಮೊದಲೇ ಸಿಹಿ ತಿಂಡಿಗಳು ಮತ್ತು ಕರಿದ ತಿಂಡಿ ಹೀಗೆ ಹೆಚ್ಚು ಎಣ್ಣೆ ಪದಾರ್ಥಗಳ ಸೇವನೆ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಮುಂದೆ ಓದಿ ...
  • Share this:

    ಹಬ್ಬಗಳು (Festival) ಅಂದ್ರೆ ಅಲಂಕಾರ ಆಹಾರ ಸೇವನೆಗೆ (Food Eating) ಹೆಚ್ಚು ಮಹತ್ವ (Importance) ಕೊಡಲಾಗುತ್ತದೆ. ಭಾರತೀಯ ಹಬ್ಬಗಳಲ್ಲಿ ಹೆಚ್ಚು ಸಿಹಿ ಪದಾರ್ಥ (Sweet Ingredients) ಮತ್ತು ಕರಿದ ಪದಾರ್ಥಗಳನ್ನು ಮಾಡಲಾಗುತ್ತದೆ. ಹೀಗೆ ಮಾಡುವ ಪದಾರ್ಥಗಳ ಸೇವನೆ ನಿಮ್ಮ ತೂಕ ಹೆಚ್ಚಿಸುವ ಸಾಧ್ಯತೆ ಹೆಚ್ಚು. ಹಬ್ಬಗಳಲ್ಲಿ ಕುಟುಂಬ, ಸ್ನೇಹಿತರು ಮತ್ತು ಸಾಕಷ್ಟು ಸಿಹಿ ತಿಂಡಿಗಳು, ಹೊರಗಿನ ಆಹಾರ ಮತ್ತು ಜಂಕ್ ಫುಡ್‌ ಸೇವನೆ ಮಾಡುತ್ತಾ ಮೋಜು ಮಸ್ತಿ ಮಾಡಲಾಗುತ್ತದೆ. ಹಬ್ಬಗಳ ಹಿನ್ನೆಲೆ ಜನರು ಒಂದು ತಿಂಗಳ ಮುಂಚಿತವಾಗಿ ತಯಾರಿ ಪ್ರಾರಂಭಿಸುತ್ತಾರೆ. ಹಾಗಾಗಿ ಮೊದಲೇ ಸಿಹಿ ತಿಂಡಿಗಳು ಮತ್ತು ಕರಿದ ಅವಲಕ್ಕಿ ಹೀಗೆ ಹೆಚ್ಚು ಎಣ್ಣೆ ಪದಾರ್ಥಗಳ ಸೇವನೆ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.


    ಅನಾರೋಗ್ಯಕರ ಆಹಾರ ಮತ್ತು ತೂಕ ಇಳಿಕೆ


    ನಿಮ್ಮ ಫಿಟ್ನೆಸ್ ಅನ್ನು ಟ್ರ್ಯಾಕ್ನಲ್ಲಿ ಇರಿಸಲು ತುಂಬಾ ಕಷ್ಟವಾಗುತ್ತದೆ. ಅದರಲ್ಲೂ ನೀವು ತೂಕ ಇಳಿಸಲು ಪ್ರಯತ್ನಿಸುತ್ತಿದ್ದರೆ ಆಹಾರ ಪದಾರ್ಥಗಳ ಸೇವನೆ ಬಗ್ಗೆ ಎಚ್ಚರಿಕೆ ವಹಿಸುವುದು ಮುಖ್ಯ. ಹೆಚ್ಚಿನ ಬೊಜ್ಜು ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರದಿಂದ ಉಂಟಾಗುತ್ತದೆ. ಹಾಗಾಗಿ ಸ್ಥೂಲಕಾಯ ಕಡಿಮೆ ಮಾಡುವ ವಿಷಯದಲ್ಲಿ ಹೆಚ್ಚು ಜಾಗ್ರತೆ ವಹಿಸಬೇಕಾಗುತ್ತದೆ.


    ಆಹಾರ ಪದ್ಧತಿ ಮತ್ತು ಜೀವನಶೈಲಿ ಬದಲಾವಣೆ ತೂಕ ಇಳಿಕೆಗೆ ತುಂಬಾ ಸಹಾಯ ಮಾಡುತ್ತದೆ. ಭಾರತದಲ್ಲಿದ್ದರೆ ಇಲ್ಲಿನ ಹಬ್ಬದ ವೈಬ್ ನಿಮ್ಮ ತೂಕ ಇಳಿಸುವ ಪ್ರಯಾಣಕ್ಕೆ ಇದು ತೊಂದರೆ ಉಂಟು ಮಾಡಬಹುದು. ಇಂತಹ ವೇಳೆ ನಿಮ್ಮ ತೂಕ ಸಹ ಕಾಪಾಡಿಕೊಳ್ಳುವ ಮತ್ತು ಹಬ್ಬಗಳ ರುಚಿ ಕಳೆಗುಂದದಂತೆ ನೋಡಿಕೊಳ್ಳುವ ಉಪಾಯ, ಮಾರ್ಗ ನೋಡಿಕೊಳ್ಳಬೇಕು.


    ಇದನ್ನೂ ಓದಿ: ತೂಕ ಹೆಚ್ಚಾಗ್ಬೇಕು ಅಂತ ಸಿಕ್ಕಿದ್ದೆಲ್ಲಾ ತಿಂತೀರಾ? ಅದರ ಬದಲು ಈ ಆರೋಗ್ಯಕರ ಆಹಾರ ಸೇವಿಸಿ


    ಸಾಕಷ್ಟು ನಿದ್ರೆ  ಮಾಡಿ


    ಸ್ಲೀಪ್ ಫೌಂಡೇಶನ್ ಪ್ರಕಾರ, ನಿಮ್ಮ ತೂಕ ಮತ್ತು ನಿಮ್ಮ ನಿದ್ರೆಗೆ ಸಂಬಂಧಿಸಿದೆ. ಅಂತಹ ವೇಳೆ ನೀವು ತೂಕ ಇಳಿಸಲು ಬಯಸಿದರೆ ಸಾಕಷ್ಟು ನಿದ್ರೆ ನಿಮಗೆ ಬಹಳ ಮುಖ್ಯ. ಅಸಮರ್ಪಕ ನಿದ್ರೆ ತೂಕ ನಷ್ಟದ ಪ್ರಯಾಣಕ್ಕೆ ತೊಂದರೆ ಉಂಟು ಮಾಡುತ್ತದೆ. ಹಾಗಾಗಿ ಹಬ್ಬದ ತಯಾರಿಯಲ್ಲಿ ನಿಮ್ಮ ನಿದ್ರೆ 7 ರಿಂದ 8 ಅಗತ್ಯ ತೆಗೆದುಕೊಳ್ಳಿ.


    ನಿಯಮಿತ ವ್ಯಾಯಾಮ ಮಾಡಿ


    ಹಬ್ಬ ಹರಿದಿನಗಳಲ್ಲಿ ಮನೆಯನ್ನು ಶುಚಿಗೊಳಿಸಿ. ಪೂಜೆಗೆ ಸಿಹಿತಿಂಡಿ ಆರ್ಡರ್ ಮಾಡುವವರೆಗೆ ತುಂಬಾ ಕೆಲಸ ಇರುತ್ತದೆ. ಆದರೆ ಇದೆಲ್ಲದರ ಹೊರತಾಗಿಯೂ ಫಿಟ್ ಆಗಿರಲು ನಿಯಮಿತ ವ್ಯಾಯಾಮ ಬಹಳ ಮುಖ್ಯ. ವ್ಯಾಯಾಮ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಆದರೆ ನೀವು ಟೋನ್ಡ್ ದೇಹವನ್ನು ಪಡೆಯಲು ಸಹಾಯ ಮಾಡುತ್ತದೆ. ಮತ್ತು ನಿಮ್ಮ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ.


    ಹೆಚ್ಚು ಸೇವನೆ ಮಾಡಬೇಡಿ


    ಎನ್ ಸಿಬಿಐ ವರದಿ ಪ್ರಕಾರ, ಹೆಚ್ಚು ಪ್ರಮಾಣದ ಆಹಾರ ಸೇವಿಸುವ ಜನರು ಬೇಗನೆ ತೂಕ ಹೆಚ್ಚಿಸುತ್ತಾರೆ. ಹಬ್ಬ ಹರಿದಿನಗಳು ಬಂದರೆ ಊಟದ ಹತೋಟಿ ಕಷ್ಟವಾಗುತ್ತದೆ. ನೀವು ತೂಕ ನಷ್ಟದ ಪ್ರಯತ್ನದಲ್ಲಿದ್ದರೆ ಈ ತಪ್ಪು ಮಾಡಬೇಡಿ.


    ಆರೋಗ್ಯಕರ ಆಹಾರ ಸೇವನೆ ಮಾಡಿ


    ಆರೋಗ್ಯ ಮತ್ತು ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಆರೋಗ್ಯಕರ ಆಹಾರ ಸೇವನೆ ಮಾಡುವುದು ಬಹಳ ಮುಖ್ಯ. ಆದರೆ ಹಬ್ಬ ಹರಿದಿನಗಳಲ್ಲಿ ಆರೋಗ್ಯಕರ ಆಹಾರ ಕ್ರಮ ಫಾಲೋ ಮಾಡುವುದು ಕಡಿಮೆ ಕೆಲಸವಲ್ಲ. ಏಕೆಂದರೆ ಆರೋಗ್ಯಕರ ಆಹಾರ ಎಂದರೆ ಜಂಕ್ ಫುಡ್ ಮತ್ತು


    ಹೆಚ್ಚಿನ ಎಣ್ಣೆಯುಕ್ತ ಆಹಾರ ಮತ್ತು ಸಕ್ಕರೆ ಸೇವನೆ ತಪ್ಪಿಸಿ, ತೂಕ ನಿಯಂತ್ರಿಸಿ. ನೀವು ತೂಕ ಇಳಿಸಲು ಪ್ರಯತ್ನಿಸುತ್ತಿದ್ದರೆ ನಿಮ್ಮ ತಟ್ಟೆಯಲ್ಲಿ ಹೆಚ್ಚಿನ ಫೈಬರ್ ಮತ್ತು ಕಡಿಮೆ ಕ್ಯಾಲೊರಿ ಹೊಂದಿರುವ ಆಹಾರ ಇರಿಸಲು ಪ್ರಯತ್ನಿಸಿ.


    ಇದನ್ನೂ ಓದಿ: ನೈಸರ್ಗಿಕವಾಗಿ ಚರ್ಮದ ಕಾಳಜಿಗೆ ಈ ಆಹಾರ ಸೇವಿಸಿ, ಒಮ್ಮೆ ಟ್ರೈ ಮಾಡಿ ನೋಡಿ


    ಕಡಿಮೆ ಸಿಹಿ ಸೇವನೆ ಮಾಡಿ


    ಹಬ್ಬ ಎಂದರೆ ಬಹಳಷ್ಟು ಸಿಹಿ ತಿಂಡಿಗಳು. ಆದರೆ ಹೆಚ್ಚು ಸಕ್ಕರೆ ತಿನ್ನುವುದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ. ಇದು ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಿಸುವುದು ಮಾತ್ರವಲ್ಲದೆ ನಿಮ್ಮ ತೂಕ ಹೆಚ್ಚಿಸುತ್ತದೆ. ಸಿಹಿ ತಿಂಡಿಗಳನ್ನು ಕಡಿಮೆ ಸೇವಿಸಿ.

    Published by:renukadariyannavar
    First published: