Pregnancy Care: ಹೆರಿಗೆ ದಿನಗಳಲ್ಲಿ ಅತಿಸಾರ ಸಮಸ್ಯೆ ದೂರ ಮಾಡಲು ಏನು ಮಾಡಬೇಕು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಾರ್ಮಲ್ ಹೆರಿಗೆಯಾಗಲು ತಾಯಿಯ ಆರೋಗ್ಯ ಮತ್ತು ಶಕ್ತಿ ಇರಬೇಕಾಗುತ್ತದೆ. ಗರ್ಭಾವಸ್ಥೆಯ ಕೊನೆಯ ಅವಧಿ ಅಂದ್ರೆ ಹೆರಿಗೆ ಸಮಯ ಸಮೀಪಿಸುತ್ತಿದ್ದಂತೆ ಅತಿಸಾರ ಸೇರಿ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗೆ ಕಾಡುವ ಅತಿಸಾರ ಸಮಸ್ಯೆ ತಮ್ಮ ಮಗುವಿಗೆ ಅಥವಾ ಹೆರಿಗೆಗೆ ಹಾನಿ ಉಂಟು ಮಾಡಬಹುದು ಎಂದು ತಿಳಿದು ಭಯ ಪಡ್ತಾರೆ.

ಮುಂದೆ ಓದಿ ...
  • Share this:

    ಗರ್ಭಾವಸ್ಥೆ (Pregnancy) ಪ್ರತಿಯೊಬ್ಬರ ಜೀವನದಲ್ಲಿ (Life) ಹೊಸ ಹಾಗೂ ವಿಶೇಷ ಅನುಭವ (Special Feel) ನೀಡುವಂಥದ್ದು. ಒಂಬತ್ತು ತಿಂಗಳು ಮಗುವನ್ನು (Baby) ಹೊತ್ತ ತಾಯಿಗೆ ಹೆರಿಗೆ ದಿನಗಳು (Delivery Days) ಹತ್ತಿರವಾಗುತ್ತಿದ್ದಂತೆ ಕೆಲವು ಸಮಸ್ಯೆಗಳು (Problems) ಕಾಡುತ್ತವೆ. ಒಂಬತ್ತು ತಿಂಗಳ ನಂತರ ಗರ್ಭಧಾರಣೆ ಪ್ರತಿಯೊಬ್ಬರಿಗೂ ತುಸು ಕಷ್ಟವಾಗಿರುತ್ತದೆ. ಹೆರಿಗೆಯನ್ನು ಜನರು ಮರುಹುಟ್ಟು ಎಂದು ಕರೆಯುತ್ತಾರೆ. ಹೆರಿಗೆ ನೋವು ಮತ್ತು ಹೆರಿಗೆ ವೇಳೆ ಸಾಕಷ್ಟು ತಾಳ್ಮೆ ವಹಿಸಬೇಕಾಗುತ್ತದೆ. ನಾರ್ಮಲ್ ಹೆರಿಗೆಯಾಗಲು ತಾಯಿಯ ಆರೋಗ್ಯ ಮತ್ತು ಶಕ್ತಿ ಇರಬೇಕಾಗುತ್ತದೆ. ಗರ್ಭಾವಸ್ಥೆಯ ಕೊನೆಯ ಅವಧಿ ಅಂದ್ರೆ ಹೆರಿಗೆ ಸಮಯ ಸಮೀಪಿಸುತ್ತಿದ್ದಂತೆ ಅತಿಸಾರ ಸೇರಿ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.


    ಹೆರಿಗೆ ಸಮೀಪಿಸುತ್ತಿದ್ದಂತೆ ಶುರುವಾಗುವ ಅತಿಸಾರ ಸಮಸ್ಯೆ


    ಕೆಲವು ಗರ್ಭಿಣಿಯರಲ್ಲಿ ಹೆರಿಗೆ ದಿನಗಳು ಸಮೀಪಿಸುತ್ತಿದ್ದಂತೆ ಅತಿಸಾರ ಸಮಸ್ಯೆ ಕಾಡುತ್ತದೆ. ಹೀಗೆ ಕಾಡುವ ಅತಿಸಾರ ಸಮಸ್ಯೆ ತಮ್ಮ ಮಗುವಿಗೆ ಅಥವಾ ಹೆರಿಗೆಗೆ ಹಾನಿ ಉಂಟು ಮಾಡಬಹುದು ಎಂದು ತಿಳಿದು ಭಯ ಪಡ್ತಾರೆ.


    ಗರ್ಭಾವಸ್ಥೆಯ ಕೊನೆಯ ವಾರಗಳು ಅಂದ್ರೆ ಹೆರಿಗೆ ದಿನಗಳು ಹತ್ತಿರವಾಗುತ್ತಿದ್ದಂತೆ ಅತಿಸಾರ ಸಮಸ್ಯೆ ಕಾಡಿದರೆ ಅದರ ಪರಿಣಾಮ ಹೇಗಿರುತ್ತದೆ? ಹಾಗೂ ಆ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದನ್ನು ಇಲ್ಲಿ ತಿಳಿಯೋಣ.




    ಹೆರಿಗೆ ದಿನಗಳು ಸಮೀಪಿಸುತ್ತಿದ್ದಂತೆ ಅತಿಸಾರ ಸಮಸ್ಯೆ ಸಾಮಾನ್ಯವಾಗಿ ಕಂಡು ಬರುತ್ತದೆ. ಇಲ್ಲವೇ ಹೆರಿಗೆಗೆ ಕೆಲವು ಗಂಟೆಗಳ ಮೊದಲು ಅತಿಸಾರ ಉಂಟಾಗಬಹುದು. ಇದು ವಾಕರಿಕೆ ಅಥವಾ ವಾಂತಿ ಆರಂಭವಾಗುತ್ತದೆ. ಹೊಟ್ಟೆಯ ಸೋಂಕಿನಿಂದ ಗರ್ಭಾವಸ್ಥೆಯ ಯಾವುದೇ ಹಂತದಲ್ಲಿ ಬೇಕಾದ್ರೂ ಅತಿಸಾರ ಉಂಟಾಗಬಹುದು.


    ಹೆರಿಗೆ ದಿನಗಳು ಹತ್ತಿರವಾಗ್ತಿದ್ದಂತೆ ಅತಿಸಾರ ಸಮಸ್ಯೆ ಕಾಡಿದ್ರೆ ಏನು ಮಾಡಬೇಕು?


    ಗರ್ಭಾವಸ್ಥೆಯ ಯಾವುದೇ ಹಂತದಲ್ಲಿಯಾದ್ರೂ ಅತಿಸಾರ ಸಮಸ್ಯೆ ಕಾಣಿಸಿಕೊಂಡ್ರೆ ಏನು ಮಾಡ್ಬೇಕು ಎಂಬ ಬಗ್ಗೆ ನೋಯ್ಡಾದ ಆರಂಭಿಕ ಮಧ್ಯಸ್ಥಿಕೆ ಕೇಂದ್ರದ ಮಕ್ಕಳ ತಜ್ಞೆ ಡಾ.ಸ್ವಾತಿ ಸೇಠ್ ಹೇಳಿದ್ದಾರೆ. ಹೆರಿಗೆ ದಿನಗಳಲ್ಲಿ ಅತಿಸಾರ ಸಮಸ್ಯೆ ಕಾಣಿಸಿದ್ರೆ, ಸಾಕಷ್ಟು ನೀರು ಕುಡಿಯಬೇಕು.


    ಹೆರಿಗೆ ದಿನಗಳಲ್ಲಿ ಅತಿಸಾರ ಸಮಸ್ಯೆ ದೂರ ಮಾಡಲು ಹೆಚ್ಚು ನೀರು ಕುಡಿಯಬೇಕು


    ದೇಹದಲ್ಲಿ ಯಾವುದೇ ರೀತಿಯಿಂದ ನೀರಿನ ಕೊರತೆ ಆಗದಂತೆ ಮುಂಜಾಗ್ರತೆ ವಹಿಸಬೇಕು. ಹೆಚ್ಚು ದ್ರವ ಪದಾರ್ಥಗಳ ಸೇವನೆ ಮಾಡ್ಬೇಕು ಅಂತಾರೆ ತಜ್ಞರು. ಇದಕ್ಕಾಗಿ ಎಳನೀರು, ಒಆರ್ ಎಸ್, ಹಣ್ಣುಗಳ ಜ್ಯೂಸ್, ತರಕಾರಿ ಜ್ಯೂಸ್ ಸೇವನೆ ಮಾಡಿ. ಇವುಗಳು ಉಪ್ಪು, ಸಕ್ಕರೆ ಮತ್ತು ಖನಿಜಗಳನ್ನು ಬದಲಾಯಿಸುತ್ತವೆ. ಹಸಿವಾದ್ರೆ ಪೋಷಕಾಂಶ ಸಮೃದ್ಧ ಸಣ್ಣ ಅಥವಾ ಲಘು ಆಹಾರ ಸೇವಿಸಿ.


    ಸಾಂದರ್ಭಿಕ ಚಿತ್ರ


    ಗರ್ಭಾವಸ್ಥೆಯಲ್ಲಿ ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧ ಸೇವಿಸಬೇಡಿ. ವಾಂತಿ ಸೇರಿದಂತೆ ಇತರೆ ರೋಗ ಲಕ್ಷಣಗಳು ಹಾಗೂ ಅತಿಸಾರ ಸಮಸ್ಯೆ ಹೊಂದಿದ್ದರೆ ವೈದ್ಯರನ್ನು ಸಂಪರ್ಕಿಸಿ, ಸಲಹೆ ಪಡೆಯಬೇಕು. 48 ಗಂಟೆಗಿಂತ ಹೆಚ್ಚು ಕಾಲ ಅತಿಸಾರ ಅಥವಾ ವಾಂತಿ ಸಮಸ್ಯೆ ಕಾಡಿದರೆ, ನಿರ್ಜಲೀಕರಣ ಸಮಸ್ಯೆಯಿದ್ದರೆ, ಜ್ವರವಿದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ.


    ಹೆರಿಗೆ ನೋವಿನ ಮೊದಲು ಅತಿಸಾರ ಸಮಸ್ಯೆ


    ದೇಹವು ಹೆರಿಗೆಗೆ ಸಿದ್ಧವಾಗಲು ಹಾರ್ಮೋನುಗಳು ವೇಗವಾಗಿ ಬದಲಾವಣೆ ಆಗುತ್ತವೆ. ಹಾಗಾಗಿ ಇದು ಗರ್ಭಾಶಯದ ಸ್ನಾಯುಗಳು, ಗರ್ಭಕಂಠ ಮತ್ತು ಗುದನಾಳದ ವಿಶ್ರಾಂತಿಗೆ ಕಾರಣವಾಗುತ್ತದೆ. ಮಗುವಿಗೆ ಸ್ಥಳಾವಕಾಶ ಮತ್ತು ಮಾರ್ಗ ಸಿಗಲು ಹೆರಿಗೆ ನೋವಿನ ಮೊದಲು ಅತಿಸಾರ ಸಮಸ್ಯೆ ಕಾಣಿಸುವುದು ಸ್ವಾಭಾವಿಕ ಎನ್ನುತ್ತಾರೆ ತಜ್ಞರು.


    ಇದನ್ನೂ ಓದಿ: ದಿಢೀರ್​​ ಅಂತ ತೂಕ ಗಣನೀಯವಾಗಿ ಇಳಿಕೆಯಾದರೆ ಈ ಕಾಯಿಲೆಯ ಲಕ್ಷಣವಾಗಿರಬಹುದು!


    ಹೆರಿಗೆ ಮೊದಲು ಅತಿಸಾರ ಹೊಂದಿದ್ದರೆ ಏನು ಮಾಡ್ಬೇಕು?


    ಹೆರಿಗೆ ಪ್ರಾರಂಭದ ಮೊದಲು ಅತಿಸಾರ ಹೊಂದಿದ್ದರೆ ದೇಹವನ್ನು ಹೈಡ್ರೀಕರಿಸಿ. ಚೆನ್ನಾಗಿ ನೀರು ಕುಡಿಯಿರಿ. ಸಾಕಷ್ಟು ದ್ರವ ಪದಾರ್ಥ ಸೇವಿಸಿ. ಚಿಕನ್ ಸಾರು, ಪ್ರೋಟೀನ್ ಸಮೃದ್ಧ ಆಹಾರ ಸೇವಿಸಿ. ಫೈಬರ್ ಭರಿತ ಆಹಾರ ಸೇವಿಸಿ. ಶಾಂತವಾಗಿದ್ದು, ಆಹಾರ ಮತ್ತು ವೈದ್ಯಕೀಯ ಸರಿಯಾದ ಸಲಹೆ ಪಡೆಯಿರಿ.

    Published by:renukadariyannavar
    First published: