ಜನರು (People) ಹಲವು ರೀತಿಯ ಚರ್ಮ ಸಮಸ್ಯೆಗಳನ್ನು (Skin Problems) ಎದುರಿಸುತ್ತಾರೆ. ಅದರಲ್ಲಿ ಚರ್ಮವು ಮಂದವಾಗವುದು, ಹೊಳಪು (Glow) ಕಳೆದುಕೊಳ್ಳುವುದು ತುಂಬಾ ಮುಖ್ಯ ಸಮಸ್ಯೆ ಆಗಿದೆ. ಮುಖದಲ್ಲಿ ಹೊಳಪಿರದೇ ಇರುವುದು, ಸುಕ್ಕುಗಟ್ಟುವುದು ತುಂಬಾ ಮಹಿಳೆಯರನ್ನು (Women’s) ಚಿಂತೆಗೀಡು ಮಾಡುತ್ತದೆ. ಇದು ವಯಸ್ಸಾಗುವಿಕೆಯ ಲಕ್ಷಣಗಳನ್ನು ತೋರಿಸುತ್ತದೆ. ಹೀಗಾಗಿ ಮುಖದ (Face) ಹೊಳಪು ಕಾಪಾಡಿಕೊಳ್ಳಲು ತುಂಬಾ ಜನರು ಸಾಕಷ್ಟು ಪರಿಶ್ರಮ ಪಡುತ್ತಾರೆ. ತ್ವಚೆಯ ಮೇಲೆ ಕಾಣಿಸಿಕೊಳ್ಳುವ ಮೊಡವೆ, ಗೆರೆಗಳು, ಸುಕ್ಕುಗಳು, ಕಲೆಗಳು ಕೆಟ್ಟದಾಗಿ ಕಾಣುತ್ತವೆ. ಇದು ತುಂಬಾ ಜನರ ಸಮಸ್ಯೆ ಆಗಿದೆ. ಚಳಿಗಾಲದಲ್ಲಿ ಕಾಡುವ ಒಣತ್ವಚೆ ಹಾಗೂ ಚಳಿಗಾಲ ಮುಗಿಯುತ್ತಿದ್ದಂತೆ ಸೂರ್ಯನ ಪ್ರಖರ ಕಿರಣಗಳಿಂದ ತ್ವಚೆ ಕಪ್ಪಾಗುತ್ತದೆ.
ಮುಖದ ಹೊಳಪಿಗೆ ಏನು ಮಾಡಬೇಕು?
ಹೊಳಪು ಕಳೆದುಕೊಳ್ಳುತ್ತದೆ. ಇದನ್ನು ತೊಡೆದು ಹಾಕಲು ಮತ್ತು ಹೊಳೆಯುವ ತ್ವಚೆ ಪಡೆಯಲು ನೀವು ಕೆಲವು ಟಿಪ್ಸ್ ಫಾಲೋ ಮಾಡಿ. ಪದೇ ಪದೇ ಉಂಟಾಗುವ ಮೊಡವೆ, ಕಪ್ಪು ಕಲೆಗಳು ಹೋಗಲಾಡಿಸಲು ಅನೇಕರು ವಿವಿಧ ದುಬಾರಿ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಅವುಗಳಲ್ಲಿರುವ ರಾಸಾಯನಿಕ ಅಂಶವು ತ್ವಚೆಯನ್ನು ಮತ್ತಷ್ಟು ಹಾಳು ಮಾಡುತ್ತದೆ.
ತ್ವಚೆಯ ಮಂದವಾಗುವ ಸಮಸ್ಯೆ ಪರಿಹಾರಕ್ಕೆ ಮನೆಯಲ್ಲೇ ನೀವು ಕೆಲವು ಆಯುರ್ವೇದ ಸಲಹೆ ಫಾಲೋ ಮಾಡಬಹುದು. ಈ ಸಲಹೆಗಳು ನಿಮಗೆ ಉತ್ತಮ ಫಲಿತಾಂಶ ನೀಡುತ್ತವೆ. ಈ ಸಲಹೆಗಳು ಪ್ರಯೋಜನ ನೀಡುತ್ತವೆ.
ಚರ್ಮದ ಮೇಲೆ ನೈಸರ್ಗಿಕ ಹೊಳಪು ತರಲು ಸಲಹೆಗಳು
ಸಾಕಷ್ಟು ಹೈಡ್ರೀಕರಿಸಿ
ದೇಹಕ್ಕೆ ಸಾಕಷ್ಟು ಜಲಸಂಚಯನದ ಅಗತ್ಯವಿದೆ. ಚರ್ಮಕ್ಕೆ ತೇವಾಂಶ ತುಂಬಾ ಮುಖ್ಯ. ಚರ್ಮದ ಸಮಸ್ಯೆಗಳು ಸಹ ನಿರ್ಜಲೀಕರಣದ ಕಾರಣದಿಂದ ಹೆಚ್ಚುತ್ತವೆ. ಸಮರ್ಪಕವಾಗಿ ಹೈಡ್ರೀಕರಿಸಲು ಪ್ರಯತ್ನಿಸಿ.
ಸೌತೆಕಾಯಿ, ಕಿತ್ತಳೆ ಮುಂತಾದ ಹೈಡ್ರೀಕರಿಸಿದ ಆಹಾರ ಸೇವನೆ ಮಾಡಿ. ಆಯುರ್ವೇದದ ಪ್ರಕಾರ ದೇಹವನ್ನು ಸಮರ್ಪಕವಾಗಿ ಹೈಡ್ರೀಕರಿಸಲು ದಿನಕ್ಕೆ ಕನಿಷ್ಠ 8 ರಿಂದ 10 ಗ್ಲಾಸ್ ನೀರನ್ನು ಕುಡಿಯಬೇಕು.
ಹೆಚ್ಚುವರಿ ಸಕ್ಕರೆ ಮತ್ತು ಮಸಾಲೆ ಸೇವನೆ ತಪ್ಪಿಸಿ
ಸಕ್ಕರೆ ಮತ್ತು ಬಲವಾದ ಮಸಾಲೆಗಳ ಸೇವನೆಯು ನಿಮ್ಮ ಚರ್ಮದ ಸಮಸ್ಯೆ ಹೆಚ್ಚು ಮಾಡುತ್ತವೆ. ಇದರಲ್ಲಿ ಕಂಡು ಬರುವ ಆಮ್ಲೀಯ ಅಂಶಗಳು ಚರ್ಮದಲ್ಲಿ ಆಮ್ಲದ ಪ್ರಮಾಣ ಹೆಚ್ಚಿಸುತ್ತವೆ. ಇದು ಚರ್ಮದಲ್ಲಿ ಮೊಡವೆಗಳ ಸಮಸ್ಯೆ ಉಂಟಾಗಬಹುದು.
ಸಕ್ಕರೆ ಸೇವನೆಯು ಚರ್ಮದ ಕಾಲಜನ್ ಕಡಿಮೆ ಮಾಡುತ್ತದೆ. ಸುಕ್ಕು, ಶುಷ್ಕ ಮತ್ತು ಮಂದ ಚರ್ಮ ಉಂಟು ಮಾಡಬಹುದು. ಅತಿಯಾದ ಸೇವನೆ ದದ್ದು, ಮೊಡವೆ ಸಮಸ್ಯೆ ಹೆಚ್ಚಿಸುತ್ತದೆ.
ಸಾಕಷ್ಟು ನಿದ್ರೆ ಮಾಡಿ
ಸಾಕಷ್ಟು ನಿದ್ರೆ ಮಾಡುವುದು ಉತ್ತಮ. ಆಯುರ್ವೇದದಲ್ಲಿ ಸಮಯಕ್ಕೆ ಸರಿಯಾಗಿ ಮಲಗುವುದು ಮತ್ತು ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದೇಳುವುದು ಉತ್ತಮವೆಂದು ಹೇಳಿದೆ. ನಿದ್ರೆ ನಿಮ್ಮ ಮೈಬಣ್ಣವನ್ನು ನೈಸರ್ಗಿಕವಾಗಿ ಸುಧಾರಿಸುತ್ತದೆ. ಸುಕ್ಕುಗಳು ಮತ್ತು ಉಬ್ಬಿರುವ ಕಣ್ಣುಗಳ ಸಮಸ್ಯೆ ತಡೆಯುತ್ತದೆ.
ಮುಖದ ಯೋಗ ಭಂಗಿ ಮಾಡಿ
ಪ್ರತಿದಿನ ಬೆಳಿಗ್ಗೆ 20 ರಿಂದ 25 ನಿಮಿಷ ಮುಖದ ಯೋಗ ಭಂಗಿ ಅಭ್ಯಾಸ ಮಾಡಿ. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆ ತೆಗೆದು ಹಾಕುತ್ತದೆ. ಮಾನಸಿಕ ಆರೋಗ್ಯ ಸುಧಾರಿಸುತ್ತದೆ.
ಇದನ್ನೂ ಓದಿ: ಮುಖದ ತ್ವಚೆ ಸುಂದರವಾಗಲಿ ಅಂತ ಅಡುಗೆ ಸೋಡಾ ಬಳಸುತ್ತೀರಾ? ಹಾಗಿದ್ರೆ ಇದು ಎಷ್ಟು ಸೇಫ್?
ಮನೆಮದ್ದುಗಳ ಬಳಕೆ
ಚರ್ಮದ ಆರೈಕೆಗೆ ನೈಸರ್ಗಿಕ ವಸ್ತುಗಳ ಬಳಸುವಂತೆ ಆಯುರ್ವೇದ ಹೇಳುತ್ತದೆ. ಬೇಳೆ ಹಿಟ್ಟು, ಮುಲ್ತಾನಿ ಮಿಟ್ಟಿ, ಶ್ರೀಗಂಧದ ಪುಡಿ ಫೇಸ್‌ವಾಶ್ ಗೆ ಬಳಸಿ. ಮುಖಕ್ಕೆ ಮಸಾಜ್ ಮಾಡಲು ತೆಂಗಿನ ಎಣ್ಣೆ, ಅಲೋವೆರಾ ಜೆಲ್ ಮತ್ತು ಬಾದಾಮಿ ಎಣ್ಣೆ ಬಳಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ