ಮಗಳ ಸಾವಿಗೆ ಕಾರಣವಾಗಿತ್ತಾ ಅಳಿಯನ ಗುಪ್ತಾಂಗ? ಹೀಗೊಂದು ವಿಲಕ್ಷಣ ಪ್ರಕರಣ

ಮಗಳ ಸಾವಿಗೆ ನ್ಯಾಯ ಪಡೆಯಲೇಬೇಕು ಎಂದು ತೀರ್ಮಾನಿಸಿದ ತಂದೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

zahir | news18-kannada
Updated:November 4, 2019, 5:13 PM IST
ಮಗಳ ಸಾವಿಗೆ ಕಾರಣವಾಗಿತ್ತಾ ಅಳಿಯನ ಗುಪ್ತಾಂಗ? ಹೀಗೊಂದು ವಿಲಕ್ಷಣ ಪ್ರಕರಣ
ಪ್ರಾತಿನಿಧಿಕ ಚಿತ್ರ
  • Share this:
ಪ್ರಪಂಚದಲ್ಲಿ ನಡೆಯುವ ಕೆಲ ಘಟನೆಗಳು ವಿಚಿತ್ರ ಎನಿಸುತ್ತದೆ. ಅಂತಹದೊಂದು ಘಟನೆ ಇಂಡೋನೇಷ್ಯಾದ ಪೂರ್ವ ಜಾವಾದಲ್ಲಿ ನಡೆದಿದೆ. ಇತ್ತೀಚೆಗಷ್ಟೇ ತನ್ನ ಹೆಂಡತಿಯನ್ನು ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರನ್ನು ಪೊಲೀಸರು ವಿಶೇಷ ಪರೀಕ್ಷೆಗೆ ಒಳಪಡಿಸಿದ್ದರು. ಅದುವೇ ಈಗ ಆತನನ್ನು ವಿಶ್ವದಾದ್ಯಂತ ಸುದ್ದಿಯಾಗುವಂತೆ ಮಾಡಿದೆ.

ಕೆಲ ವರ್ಷಗಳ ಹಿಂದೆ 55 ವರ್ಷದ ನೇದಿ ತಮ್ಮ ಮಗಳು ಜುಮಂತ್ರಿಯ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದರು. ಮದುವೆಯಾಗಿ ದಂಪತಿಗಳು ಸಹ ಅನೋನ್ಯತೆಯಿಂದ ಬಾಳಿದ್ದರು. ಆದರೆ ಫೆಬ್ರವರಿ 25 ರಂದು, ಜುಮಂತ್ರಿ ಇದ್ದಕ್ಕಿದ್ದಂತೆ ಮರಣ ಹೊಂದಿದ ಸುದ್ದಿಯು ಕುಟುಂಬದವನ್ನು ನೋವಿನಲ್ಲಿ ದೂಡಿತ್ತು.

ರಾತ್ರಿಯೆಲ್ಲಾ ಆರೋಗ್ಯವಾಗಿದ್ದ 23 ಹರೆಯದ ಮಗಳು ಬೆಳ್ಳಿಗೆ ಹಾಸಿಗೆಯಿಂದ ಎದ್ದೇಳಿರಲಿಲ್ಲ. ಇದೊಂದು ಸಾಮಾನ್ಯ ಸಾವು ಎಂದು ತೀರ್ಮಾನಿಸಿದ ಕುಟುಂಬದವರು ಅಂತ್ಯಕ್ರಿಯೆಯನ್ನು ನೆರವೇರಿಸಿದ್ದರು. ಇದಾದ ಎರಡು ವಾರಗಳ ಬಳಿಕ ಊರಿನಲ್ಲಿ ಊಹಾಪೋಹಗಳು ಹರಿದಾಡಿದ್ದವು.

ಜುಮಂತ್ರಿ ಮರಣ ಹೊಂದಲು ಆಕೆಯ ಪತಿ ಪುರುಷಾಂಗ ದೊಡ್ಡದಾಗಿರುವುದೇ ಕಾರಣ ಎಂದು ಸುದ್ದಿಗಳು ಹುಟ್ಟಿಕೊಂಡವು. ರಾತ್ರಿಯಲ್ಲಿ ಲೈಂಗಿಕ ಕ್ರಿಯೆ ನಡೆಸುವಾಗ ಯುವತಿಯು ಸಾವನ್ನಪ್ಪಿದ್ದಾಳೆ ಎಂಬ ವಂದತಿ ನೇದಿಯ ಅವರ ಕಿವಿಗೂ ಬಿದ್ದಿದೆ.

ಇದನ್ನೂ ಓದಿ: IPL 2019-VIDEO: ಐಪಿಎಲ್​ಗೆ ಮತ್ತೆ ಅಂಟಿಕೊಂಡ ಮ್ಯಾಚ್​ ಫಿಕ್ಸಿಂಗ್ ಭೂತ: ಕೆಕೆಆರ್- ಡೆಲ್ಲಿ ಪಂದ್ಯ ಮೊದಲೇ ಫಿಕ್ಸ್​?

ಮಗಳ ಸಾವಿಗೆ ನ್ಯಾಯ ಪಡೆಯಲೇಬೇಕು ಎಂದು ತೀರ್ಮಾನಿಸಿದ ತಂದೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಅಳಿಯನ ವಿರುದ್ಧ ಕೇಸನ್ನು ದಾಖಲಿಸಿದರು. ಅದರಂತೆ ಅಳಿಯನನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು ಜುಮಂತ್ರಿಯ ಗಂಡನ ಜನನಾಂಗದ ಗಾತ್ರವನ್ನು ಪರೀಕ್ಷಿಸಿದ್ದಾರೆ. ಅಲ್ಲದೆ ಇದು ಸಾಮಾನ್ಯ ಏಷ್ಯಾದ ಜನರ ಗಾತ್ರವಾಗಿದ್ದು ಎಂದು ಆತನನ್ನು ಬಿಡುಗಡೆಗೊಳಿಸಿದ ಅಪರೂಪದ ಘಟನೆ ನಡೆದಿದೆ. ಅಲ್ಲದೆ ಯುವತಿಗೆ 14ನೇ ವರ್ಷದಿಂದಿರುವ ಎಪಿಲೆಪ್ಸಿ ಕಾಯಿಲೆಯಿಂದ ಮೃತಪಟ್ಟಿರುವುದಾಗಿ ತನಿಖೆಯ ಮೂಲಕ ಪತ್ತೆ ಹಚ್ಚಿದ್ದಾರೆ.

ನಿಮ್ಮ ನ್ಯೂಸ್​18 ಕನ್ನಡವನ್ನು ಇನ್‌ಸ್ಟಾಗ್ರಾಮ್​ನಲ್ಲಿ ಹಿಂಬಾಲಿಸಲು ಕೆಳಗಿನ ಲಿಂಕ್​ ಕ್ಲಿಕ್ ಮಾಡಿ: www.instagram.com/news18kannada
First published:November 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ