• Home
  • »
  • News
  • »
  • lifestyle
  • »
  • Flesh-Eating Bacteria: ಕಾಸ್ಮೆಟಿಕ್ ಸರ್ಜರಿಯಿಂದ ಅಂಗಾಂಗ ಹಾನಿಗೊಳಗಾದ ಮಹಿಳೆಯ ಪ್ರಾಣ ಉಳಿಸಿದ ದುಬೈ ವೈದ್ಯ

Flesh-Eating Bacteria: ಕಾಸ್ಮೆಟಿಕ್ ಸರ್ಜರಿಯಿಂದ ಅಂಗಾಂಗ ಹಾನಿಗೊಳಗಾದ ಮಹಿಳೆಯ ಪ್ರಾಣ ಉಳಿಸಿದ ದುಬೈ ವೈದ್ಯ

ಕಾಸ್ಮೆಟಿಕ್ ಸರ್ಜರಿಗೆ ಒಳಗಾದ ಫಾತಿಮ ಅಮೀನ್‌ ಮತ್ತು ವೈದ್ಯರು

ಕಾಸ್ಮೆಟಿಕ್ ಸರ್ಜರಿಗೆ ಒಳಗಾದ ಫಾತಿಮ ಅಮೀನ್‌ ಮತ್ತು ವೈದ್ಯರು

ಮಾಂಸ ಭಕ್ಷಕ ಬ್ಯಾಕ್ಟೀರಿಯಾವು ದೇಹದ ಅಂಗಗಳಿಗೆ ಉಂಟುಮಾಡಿದ್ದ ಹಾನಿಯಿಂದ ನಡೆದಾಡಲೂ ಪ್ರಯಾಸ ಪಡುತ್ತಿದ್ದ ನವವಿವಾಹಿತೆ ಫಾತಿಮ ಅಮೀನ್‌ರ ಪ್ರಾಣವನ್ನು ದುಬೈನ ವೈದ್ಯರು ಉಳಿಸಿದ್ದಾರೆ. ಮಾಂಸವನ್ನು ತಿನ್ನುವ ಬ್ಯಾಕ್ಟೀರಿಯಾ ಅಥವಾ ನೆಕ್ರೋಟೈಸಿಂಗ್ ಫ್ಯಾಸಿಟಿಸ್ ಚರ್ಮ ಮತ್ತು ದೇಹದ ಅಂಗಾಂಶಗಳ ಅಪರೂಪದ ಸೋಂಕು ಆಗಿದ್ದು, ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಪ್ರಾಣಾಂತಿಕವಾಗಬಹುದು ಎಂಬುದು ವೈದ್ಯರ ಮಾತಾಗಿದೆ. 

ಮುಂದೆ ಓದಿ ...
  • Share this:

ಕಾಸ್ಮೆಟಿಕ್ ಸರ್ಜರಿಗೆ (Cosmetic surgery) ಒಳಗಾದ ನಂತರ ಮಾಂಸ ಭಕ್ಷಕ ಬ್ಯಾಕ್ಟೀರಿಯಾವು ದೇಹದ ಅಂಗಗಳಿಗೆ ಉಂಟುಮಾಡಿದ್ದ ಹಾನಿಯಿಂದ ನಡೆದಾಡಲೂ ಪ್ರಯಾಸ ಪಡುತ್ತಿದ್ದ ನವವಿವಾಹಿತೆ ಫಾತಿಮ ಅಮೀನ್‌ರ (Fatima Amin) ಪ್ರಾಣವನ್ನು ದುಬೈನ ವೈದ್ಯರು ಉಳಿಸಿದ್ದಾರೆ. ಮಾಂಸವನ್ನು ತಿನ್ನುವ ಬ್ಯಾಕ್ಟೀರಿಯಾ ಅಥವಾ ನೆಕ್ರೋಟೈಸಿಂಗ್ ಫ್ಯಾಸಿಟಿಸ್ ಚರ್ಮ ಮತ್ತು ದೇಹದ ಅಂಗಾಂಶಗಳ ಅಪರೂಪದ ಸೋಂಕು ಆಗಿದ್ದು, ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಪ್ರಾಣಾಂತಿಕವಾಗಬಹುದು ಎಂಬುದು ವೈದ್ಯರ ಮಾತಾಗಿದೆ. ದುಬೈನಲ್ಲಿ (Dubai) ರಿಯಾಲ್ಟಿ ವಲಯದಲ್ಲಿ ಕೆಲಸ ಮಾಡುತ್ತಿರುವ 30 ರ ಹರೆಯದ ಫಾತಿಮ ಅಮೀನ್ ತಮಗಾದ ಭಯಾನಕ ಅನುಭವವನ್ನು ಗಲ್ಫ್ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ಜೀವನದ ಅತ್ಯಂತ ಕೆಟ್ಟ ಅನುಭವ ಇದ್ದಾಗಿದ್ದು ಬದುಕಿರುವುದಕ್ಕೆ ದೇವರಿಗೆ ಕೃತಜ್ಞಳಾಗಿರುವೆ ಎಂದು ತಿಳಿಸಿದ್ದಾರೆ.


ದೇಹದ ಹೆಚ್ಚುವರಿ ಕೊಬ್ಬನ್ನು ತೆಗೆದುಹಾಕುವ ಲಿಪೊಸಕ್ಷನ್ ಮತ್ತು ಚರ್ಮವನ್ನು ಬಿಗಿಗೊಳಿಸುವ ಕಾಂಬೊ ಆಫರ್‌ ನೀಡುವ ಬೇರೊಂದು ದೇಶದ ಅತ್ಯಾಧುನಿಕ ಆಸ್ಪತ್ರೆಯ ಜಾಹೀರಾತನ್ನು ನೋಡಿ ಫಾತಿಮ ಶಸ್ತ್ರಚಿಕಿತ್ಸೆಗೆ ಒಳಗಾದರು ಎಂದು ತಿಳಿಸಿದ್ದಾರೆ.


ಆಫರ್‌ಗೆ ಮರುಳಾದ ಮಹಿಳೆ
ಈ ಆಫರ್ ಸಾಪ್ತಾಹಿಕ ಪ್ಯಾಕೇಜ್ ರೂಪದಲ್ಲಿದ್ದು ಶಸ್ತ್ರಚಿಕಿತ್ಸೆಯ ಕಾರ್ಯವಿಧಾನ ಹಾಗೂ ಅಗತ್ಯ ಚಿಕಿತ್ಸೆ ಮಾತ್ರವಲ್ಲದೆ ಹೋಟೆಲ್ ವಾಸ್ತವ್ಯ, ವಿಮಾನದ ಖರ್ಚುವೆಚ್ಚಗಳು ಹಾಗೂ ವಿಮಾನ ನಿಲ್ದಾಣದ ವೆಚ್ಚಗಳನ್ನು ಒಳಗೊಂಡಿತ್ತು. ಸಂಪೂರ್ಣ ಪ್ಯಾಕೇಜ್ ದರ $6,000 ವಾಗಿದ್ದು ಇದರಿಂದ ಮರುಳಾದೆ ಎಂಬುದು ಫಾತಿಮ ಅವರ ಮಾತಾಗಿದೆ.


ಆಫರ್ ಅನ್ನು ತೆಗೆದುಕೊಳ್ಳುವ ತೀರ್ಮಾನ ಮಾಡಿದ ಫಾತಿಮ, ಬಾಕಿ ಮೊತ್ತವನ್ನು ಪಾವತಿಸಿದರು. ತೂಕ ಕಳೆದುಕೊಳ್ಳಬೇಕೆಂಬ ಮಹದಾಸೆಯಿಂದ ಫಾತಿಮ ಹಿಂದು ಮುಂದು ನೋಡದೆ ಶಸ್ತ್ರಚಿಕಿತ್ಸೆ ಮಾಡಿಸಲು ಮುಂದಾದರು ಎಂದು ಹೇಳಿದ್ದಾರೆ.


ಫಾತಿಮಾರಿಗೆ ಉಂಟಾದ ಕರಾಳ ಅನುಭವ
ಆದರೆ ಫಾತಿಮ ಅಂದುಕೊಂಡಂತೆ ಯಾವುದೂ ನಡೆಯಲಿಲ್ಲ. ಶಸ್ತ್ರಚಿಕಿತ್ಸೆ ನಡೆಸುವುದಾಗಿ ತಿಳಿಸಲಾದ ಜಾಗದಲ್ಲಿ ಚಿಕಿತ್ಸೆಯನ್ನು ನಡೆಸದೆಯೇ ಶಸ್ತ್ರಚಿಕಿತ್ಸೆಗೆ ಅವರನ್ನು ಒಳಪಡಿಸಲಾಯಿತು.


ಆಪರೇಶನ್‌ನ ಮರುದಿನವೇ ಯಾವುದೇ ಔಷಧಿಗಳು ಹಾಗೂ ಮುಂದಿನ ಕ್ರಮಗಳ ಮಾಹಿತಿ ನೀಡದೆಯೇ ಅವರನ್ನು ಡಿಸ್‌ಚಾರ್ಜ್ ಮಾಡಲಾಯಿತು. ಏಳು ದಿನಗಳ ಕಾಲ ಆಸ್ಪತ್ರೆಯಲ್ಲಿರಬೇಕೆಂದು ಅವರಿಗೆ ಸೂಚಿಸಿದ್ದರು ಕೂಡ ನೋವು ನಿವಾರಕ ಕೂಡ ನೀಡದೆಯೇ ಅವರನ್ನು ಹೋಟೆಲ್ ಕೊಠಡಿಗೆ ತೆರಳಲು ಆಸ್ಪತ್ರೆಯವರು ಹೇಳಿದರು ಎಂಬುದು ಫಾತಿಮ ಹೇಳಿಕೆಯಾಗಿದೆ.


ಇದನ್ನೂ ಓದಿ: Mutual Divorce: ಪರಸ್ಪರ ಒಪ್ಪಿಗೆಯ ಮೇರೆಗೆ ಡಿವೋರ್ಸ್​ ಪಡೆಯಲು ಈ ನಿಯಮಗಳನ್ನು ಅನುಸರಿಸಬೇಕು


ತೀವ್ರ ನೋವಿನಿಂದ ಬಳಲುತ್ತಿದ್ದ ಫಾತಿಮ ಅಶಕ್ತರಾಗಿದ್ದರು ಈ ಸಮಯದಲ್ಲಿ ವೈದ್ಯಕೀಯ ತಂಡವನ್ನು ಸಂಪರ್ಕಿಸಿದಾಗ ಅವರು ಕೆಲವೊಂದಿಷ್ಟು ಔಷಧಗಳನ್ನು ನೀಡಿ ಗುಣವಾಗುತ್ತದೆ ಹೆದರದಿರಿ ಎಂಬ ಭರವಸೆಯನ್ನು ನೀಡಿದರು ಎಂದು ತಿಳಿಸಿದ್ದಾರೆ. ಆದರೆ ದಿನಗಳೆದಂತೆ ಅವರ ಸ್ಥಿತಿ ಬಿಗಡಾಯಿಸತೊಡಗಿತು ಹಾಗೂ ಸೋಂಕು ಅಂಗಾಗಾಂಗಳನ್ನು ತಲುಪತೊಡಗಿತು.


ದುಬೈಗೆ ಮರಳಿದ ಫಾತಿಮ
ಒಬ್ಬಂಟಿಯಾಗಿದ್ದ ಫಾತಿಮ ತುಂಬಾ ಭಯಭೀತರಾಗಿದ್ದರು ಹಾಗೂ ದುಬೈನಲ್ಲಿದ್ದ ಪತಿಯ ಬಳಿ ಹೋಗಲು ಆಕೆ ಮರಳಿ ವಿಮಾನದಲ್ಲಿ ಪ್ರಯಾಣಿಸಬೇಕಾಗಿತ್ತು.


ಆದರೆ ವಿಮಾನ ನಿಲ್ದಾಣದಲ್ಲಿ ಕೂಡ ಆಕೆ ಅಗ್ನಿಪರೀಕ್ಷೆಯನ್ನು ಅನುಭವಿಸಬೇಕಾಯಿತು ಎಂದು ಹೇಳಿಕೊಂಡಿದ್ದಾರೆ. ನಿಲ್ಲಲು ಸಾಧ್ಯವಾಗದೇ ಬೀಳುವಂತಹ ಪರಿಸ್ಥಿತಿಗೆ ಫಾತಿಮ ಒಳಗಾಗಿದ್ದರು. ಗಾಲಿ ಕುರ್ಚಿಯನ್ನು ಆಶ್ರಯಿಸಿಕೊಂಡೇ ಅವರು ವಿಮಾನವನ್ನೇರುವ ವಿಧಿ ವಿಧಾನಗಳನ್ನು ಪೂರೈಸಿದರು. ದುಬೈ ತಲುಪಿದೊಡನೆ ಫಾತಿಮ ಪತಿ ಹಮ್ಜಾ ಇದ್ರಿಸ್ ಆಕೆಯನ್ನು ನೇರವಾಗಿ ಆಂಬುಲೆನ್ಸ್‌ನಲ್ಲಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು.


ಮಾಂಸ ತಿನ್ನುವ ಬ್ಯಾಕ್ಟೀರಿಯಾ ಆಕೆಯ ದೇಹಕ್ಕೆ ಹಾನಿಯನ್ನುಂಟು ಮಾಡಿತ್ತು ಹಾಗೂ ಅವರ ಕೈ ಹಾಗೂ ಕಾಲುಗಳಲ್ಲಿ ಗಾಯ ಆಳವಾಗಿ ಕೀವು ತುಂಬಿ ಹೊರಬರಲಾರಂಭಿಸಿತು. ತಾವು ಅಂಗಗಳನ್ನು ಕಳೆದುಕೊಳ್ಳುತ್ತೇನೆ ಎಂಬ ಭಯದಲ್ಲಿದ್ದೆ ಎಂಬುದು ಫಾತಿಮ ಮಾತಾಗಿದೆ. ಎಂಟರಿಂದ ಹತ್ತು ಸುತ್ತಿನ ರಕ್ತವರ್ಗಾವಣೆಯನ್ನು ಮಾಡಲು ಫಾತಿಮ ಮೂರು ವಾರಗಳ ಕಾಲ ಆಕೆ ಆಸ್ಪತ್ರೆಯಲ್ಲಿದ್ದರು.


ಪುನಃ ನಡೆದಾಡಿದ ಫಾತಿಮ
ಚಿಕಿತ್ಸೆ ಮುಂದುವರಿಸಲು ಫಾತಿಮ ಪತಿ ಉತ್ತಮ ಪ್ಲಾಸ್ಟಿಕ್ ಸರ್ಜನ್ ಒಬ್ಬರನ್ನು ಹುಡುಕುತ್ತಿದ್ದರು ಆದರೆ ಅವರ ಸ್ನೇಹಿತರೊಬ್ಬರು ದುಬೈನ ಕೊಕೊನಾ ಕ್ಲಿನಿಕ್‌ನಲ್ಲಿರುವ ಡಾ. ಸಂಜಯ್ ಪರಾಶರ್ ಬಗ್ಗೆ ತಿಳಿಸಿದರು. ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ಸಂಜಯ್ ಫಾತಿಮಾರಿಗೆ ಎರಡು ಆಪರೇಶನ್‌ಗಳನ್ನು ನಡೆಸಿದರು. ಗಾಯಗಳನ್ನು ಸ್ವಚ್ಛಗೊಳಿಸಿ ಸೂಕ್ತ ಚಿಕಿತ್ಸೆಗಳನ್ನು ನೀಡಿದರು ಹಾಗೂ ಫಾತಿಮಾರ ನೋವನ್ನು ಶಮನಗೊಳಿಸಿದರು ಹೀಗಾಗಿ ಫಾತಿಮ ಪುನಃ ನಡೆಯುತ್ತಿದ್ದಾರೆ.


ಪರಾಶರ್ ಹೇಳುವಂತೆ ಫಾತಿಮಾರ ದೇಹದ ದ್ರವವನ್ನು ಹೊರಹಾಕಲು ಅವರ ಅಂಗಗಳಿಗೆ VAC ಯಂತ್ರವನ್ನು ಅಳವಡಿಸಿದ್ದರು. ಗಾಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಗಾಯವನ್ನು ಗುಣಪಡಿಸಲು VAC ಅಥವಾ ವ್ಯಾಕ್ಯೂಮ್ ಅಸಿಸ್ಟೆಡ್ ಕ್ಲೋಸರ್ ಒಂದು ರೀತಿಯ ಚಿಕಿತ್ಸೆಯಾಗಿದೆ ಎಂಬುದಾಗಿ ಪರಾಶರ್ ತಿಳಿಸಿದ್ದಾರೆ.


ಇದನ್ನೂ ಓದಿ:  Viral Video: 3 ವರ್ಷದ ಪುಟ್ಟ ಮಗುವಿಗೆ ಐಬ್ರೋ ಮಾಡಿದ ತಾಯಿ, ವೈರಲ್ ಆಯ್ತು ವಿಡಿಯೋ


ಫಾತಿಮಾರ ಅಂಗಾಂಗಳಲ್ಲಿದ್ದ ಗಾಯಗಳು ದೊಡ್ಡದಾಗಿದ್ದವು ಹಾಗಾಗಿ ವಿಶೇಷ ಹೊಲಿಗೆಗಳ ಮೂಲಕ ಚರ್ಮವನ್ನು ಜೊತೆಯಾಗಿ ಎಳೆದು ಗಾಯಕ್ಕೆ ಚಿಕಿತ್ಸೆ ನೀಡಲಾಯಿತು ಎಂಬುದು ವೈದ್ಯರ ಮಾತಾಗಿದೆ.

Published by:Ashwini Prabhu
First published: