• Home
  • »
  • News
  • »
  • lifestyle
  • »
  • Hair Care: ತಲೆಹೊಟ್ಟು ಸಮಸ್ಯೆ ನಿವಾರಿಸಲು ಜೊಜೊಬಾ ಎಣ್ಣೆಯನ್ನು ಬಳಸಿ, ಇದರ ಪ್ರಯೋಜನ ತಿಳಿಯಿರಿ

Hair Care: ತಲೆಹೊಟ್ಟು ಸಮಸ್ಯೆ ನಿವಾರಿಸಲು ಜೊಜೊಬಾ ಎಣ್ಣೆಯನ್ನು ಬಳಸಿ, ಇದರ ಪ್ರಯೋಜನ ತಿಳಿಯಿರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜೊಜೊಬಾ ಎಣ್ಣೆಯು ಕೂದಲಿಗೆ ಪೋಷಣೆ ನೀಡುತ್ತದೆ. ಜೊಜೊಬಾ ಎಣ್ಣೆಗೆ ಸಂಬಂಧಿಸಿದ ಸಂಶೋಧನೆ ಇದನ್ನು ಸಾಬೀತು ಪಡಿಸಿದೆ. ಜೊಜೊಬಾ ಎಣ್ಣೆಯು ಒಣ ನೆತ್ತಿಯ ಚಿಕಿತ್ಸೆಗೆ ಸಹಕಾರಿಯಾಗಿದೆ. ಜೊಜೊಬಾ ಎಣ್ಣೆಯು ಕೂದಲಿನ ಬೇರುಗಳಿಗೆ ಹೀರಿಕೊಳ್ಳುವ ಮೂಲಕ ಕೂದಲನ್ನು ಕಂಡೀಷನ್ ಮಾಡುತ್ತದೆ.

  • Share this:

    ಸುಂದರವಾದ (Beautiful) ಮತ್ತು ಉದ್ದವಾದ ಕೂದಲು (Hair) ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದರೆ ನಾವು ನಮ್ಮ ಕೂದಲಿಗೆ ವಿಶೇಷ ಪೋಷಣೆ (Special Care) ಮಾಡಿದಾಗ ಮಾತ್ರ ದಪ್ಪ ಮತ್ತು ರೇಷ್ಮೆಯಂತಹ ಕೂದಲು (Silky Hair) ಹೊಂದಲು ಸಾಧ್ಯ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಉತ್ಪನ್ನಗಳು (Products) ಇವೆ. ಆದರೆ ಅದೆಲ್ಲದ್ದಕ್ಕಿಂತ ನೈಸರ್ಗಿಕವಾಗಿ ಕೂದಲ ಆರೈಕೆ ಮಾಡುವುದು ಹೆಚ್ಚು ಉತ್ತಮ. ಇದರಿಂದ ಕೂದಲಿಗೆ ರಾಸಾಯನಿಕ ವಸ್ತುಗಳ ಅಂಶ ಕೂದಲನ್ನು ನಾಶ ಮಾಡುತ್ತದೆ ಎಂಬ ಭಯ ಇರಲ್ಲ. ಮನೆಯಲ್ಲಿ ಮನೆಮದ್ದುಗಳು ಕೂದಲ ಪೋಷಣೆಗೆ ಹೆಚ್ಚು ಸಹಕಾರಿ. ಅದರಿಂದ ಸಿಗುವ ಸೌಂದರ್ಯವೇ ಬೇರೆಯಾಗಿರುತ್ತದೆ. ಹಾಗಾಗಿ ಕೂದಲ ಪೋಷಣೆಗೆ ನೈಸರ್ಗಿಕವಾಗಿ ಕಾಳಜಿ ವಹಿಸಿ.


    ಕೂದಲಿಗೆ ಪ್ರಯೋಜನಕಾರಿಯಾಗುವ ನೈಸರ್ಗಿಕ ಎಣ್ಣೆಯಿಂದ ಕೂದಲ ಪೋಷಣೆಗೆ ಸಹಕಾರಿ. ಜೊಜೊಬಾ ಎಣ್ಣೆಯು ಕೂದಲ ಆರೈಕೆಗೆ ಲಾಭಕಾರಿ ಹೇಗೆ ಎಂಬುದನ್ನು ತಿಳಿಯೋಣ.


    ಜೊಜೊಬಾ ಎಣ್ಣೆ ನಿಮ್ಮ ಕೂದಲಿಗೆ ಒಳ್ಳೆಯದೇ?


    ಜೊಜೊಬಾ ಎಣ್ಣೆಯು ಕೂದಲಿಗೆ ಪೋಷಣೆ ನೀಡುತ್ತದೆ. ಜೊಜೊಬಾ ಎಣ್ಣೆಗೆ ಸಂಬಂಧಿಸಿದ ಸಂಶೋಧನೆ ಇದನ್ನು ಸಾಬೀತು ಪಡಿಸಿದೆ. ಜುನಿಪರ್ ಪಬ್ಲಿಷರ್ಸ್‌ನ ಸಂಶೋಧನೆಯ ಪ್ರಕಾರ, ಜೊಜೊಬಾ ಎಣ್ಣೆಯು ಕೂದಲಿಗೆ ಪೋಷಣೆ ನೀಡುತ್ತದೆ. ಹಾಗೂ ಕೂದಲ ಬೆಳವಣಿಗೆಗೆ ಉತ್ತೇಜಿಸುತ್ತದೆ.


    ಇದನ್ನೂ ಓದಿ: ಸಸ್ಯಾಹಾರಿಗಳಿಗೆ ಪ್ರೋಟೀನ್ ಕೊರತೆ ಕಾಡುತ್ತದೆ ಎಂಬ ಯೋಚನೆಯೇ? ಈ ಪದಾರ್ಥಗಳಲ್ಲಿದೆ ಸಮೃದ್ಧ ಪೋಷಕಾಂಶ!


    ಜೊಜೊಬಾ ಎಣ್ಣೆಯು ಒಣ ನೆತ್ತಿಯ ಚಿಕಿತ್ಸೆಗೆ ಸಹಕಾರಿಯಾಗಿದೆ. ಜೊಜೊಬಾ ಎಣ್ಣೆಯು ಕೂದಲಿನ ಬೇರುಗಳಿಗೆ ಹೀರಿಕೊಳ್ಳುವ ಮೂಲಕ ಕೂದಲನ್ನು ಕಂಡೀಷನ್ ಮಾಡುತ್ತದೆ. ಶುಷ್ಕ ಮತ್ತು ದುರ್ಬಲ ಕೂದಲನ್ನು ತಡೆಯಲು ಸಹಕಾರಿ.


    ಜೊಜೊಬಾ ಎಣ್ಣೆಯನ್ನು ಆಂಟಿ-ಡ್ಯಾಂಡ್ರಫ್ ಮತ್ತು ಕೂದಲಿನ ಪೋಷಣೆಯ ಹೇರ್ ಕ್ರೀಮ್‌ಗಳಲ್ಲಿ ಬಳಸುತ್ತಾರೆ. ಜೊಜೊಬಾ ಎಣ್ಣೆಯು ಕೂದಲಿಗೆ ಉತ್ತಮ ಆಯ್ಕೆ ಆಗಿದೆ.


    ಕೂದಲಿಗೆ ಜೊಜೊಬಾ ಎಣ್ಣೆಯ ಪ್ರಯೋಜನಗಳು


    ಜೊಜೊಬಾ ಎಣ್ಣೆಯು ಕೂದಲಿನ ಬೆಳವಣಿಗೆಗೆ ಉತ್ತೇಜಿಸುವ ಗುಣ ಹೊಂದಿದೆ. ಕೂದಲ ಬೆಳವಣಿಗೆಗೆ ಸಹಕಾರಿ. ಜೊಜೊಬಾ ಎಣ್ಣೆಯು ಕೂದಲಿಗೆ ಪರಿಣಾಮಕಾರಿ ಕ್ಲೆನ್ಸರ್, ಕಂಡೀಷನರ್, ಮಾಯಿಶ್ಚರೈಸರ್ ಮತ್ತು ಮೃದುವಾಗಿಸುವ ಕೆಲಸ ಮಾಡುತ್ತದೆ.


    ಒಣ ಕೂದಲು


    ಒಣ ಕೂದಲಿಗೆ ಜೊಜೊಬಾ ಎಣ್ಣೆ ಪರಿಣಾಮಕಾರಿಯಾಗಿದೆ. ಕೆಮಿಸ್ಟ್ರಿ ಜರ್ನಲ್ನಲ್ಲಿನ ಸಂಶೋಧನೆಯು ಜೊಜೊಬಾ ಎಣ್ಣೆಯನ್ನು ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಬಳಸಬಹುದು ಎಂದಿದೆ. ಕೂದಲಿಗೆ ನಿಯಮಿತವಾಗಿ ಜೊಜೊಬಾ ಎಣ್ಣೆ ಬಳಸಿದರೆ, ಕೂದಲಿನ ಶುಷ್ಕತೆ ದೂರವಾಗುತ್ತದೆ.


    ತಲೆಹೊಟ್ಟು ವಿರುದ್ಧ ರಕ್ಷಣೆ ನೀಡುತ್ತದೆ


    ಜೊಜೊಬಾ ಎಣ್ಣೆಯು ಕೂದಲ, ತಲೆಹೊಟ್ಟು ತೆಗೆದು ಹಾಕುತ್ತದೆ. ಜೊಜೊಬಾ ಎಣ್ಣೆಯು ಶಿಲೀಂಧ್ರ-ವಿರೋಧಿ ಗುಣಲಕ್ಷಣ ಹೊಂದಿದೆ. ತಲೆಹೊಟ್ಟು ಉಂಟು ಮಾಡುವ ಶಿಲೀಂಧ್ರದ ವಿರುದ್ಧ ಹೋರಾಡುತ್ತದೆ.


    ನೆತ್ತಿಯ ಕ್ಲೆನ್ಸರ್ ಆಗಿದೆ


    ಜೊಜೊಬಾ ಎಣ್ಣೆ ಕೂದಲು ಕ್ಲೆನ್ಸರ್ ಆಗಿದೆ. ಜೊಜೊಬಾ ಎಣ್ಣೆಯನ್ನು ಕ್ಲೆನ್ಸರ್ ಆಗಿ ಬಳಸಬಹುದು. ನೆತ್ತಿಯು ಹೆಚ್ಚುವರಿ ಮೇದೋಗ್ರಂಥಿಗಳ ಸ್ರಾವ ಉತ್ಪಾದಿಸಿದರೆ, ಜೊಜೊಬಾವು ಕರಗುವ ಏಜೆಂಟ್ ಆಗಿ ಆಗಿದೆ. ಕೂದಲನ್ನು ಸ್ವಚ್ಛಗೊಳಿಸತ್ತದೆ.


    ಜೊಜೊಬಾ ಎಣ್ಣೆ ಬಳಸುವ ವಿಧಾನ


    ಜೊಜೊಬಾ ಎಣ್ಣೆ ಮತ್ತು ಶಾಂಪೂವನ್ನು ನೀವು ಮಾರುಕಟ್ಟೆಯಿಂದ ಖರೀದಿಸಬಹುದು ಅಥವಾ ಮನೆಯಲ್ಲಿಯೇ ಜೊಜೊಬಾ ಎಣ್ಣೆ ಶಾಂಪೂ ತಯಾರಿಸಬಹುದು.


    ಬೇಕಾಗುವ ಸಾಮಾಗ್ರಿಗಳು: ಜೊಜೊಬಾ ಎಣ್ಣೆ ಒಂದು ಚಮಚ, ಹೇರ್ ಶಾಂಪೂ


    ಬಳಸುವುದು ಹೇಗೆ: ಒಂದು ಬೌಲ್‌ನಲ್ಲಿ ಅಗತ್ಯವಿರುವಂತೆ ಶಾಂಪೂ ತೆಗೆದುಕೊಂಡು ಅದರಲ್ಲಿ ಒಂದು ಚಮಚ ಜೊಜೊಬಾ ಎಣ್ಣೆಮಿಶ್ರಣ ಮಾಡಿ. ನೆತ್ತಿಗೆ ಮಸಾಜ್ ಮಾಡಿ. ನಂತರ ಸರಳ ನೀರಿನಿಂದ ಕೂದಲನ್ನು ಸ್ವಚ್ಛಗೊಳಿಸಿ.


    ಜೊಜೊಬಾ ಎಣ್ಣೆಯನ್ನು ಕಂಡಿಷನರ್ ಆಗಿಯೂ ಬಳಸಬಹುದು.


    ಬೇಕಾಗುವ ಪದಾರ್ಥಗಳು: ಜೊಜೊಬಾ ಎಣ್ಣೆ 1 ಟೀಸ್ಪೂನ್, ಕಂಡಿಷನರ್


    ಬಳಸುವುದು ಹೇಗೆ: ಶಾಂಪೂ ಮಾಡಿದ ನಂತರ, ಕೂದಲು ಒಣಗಿಸಿ. ನಂತರ ಅಂಗೈಗೆ ಕೆಲವು ಹನಿ ಜೊಜೊಬಾ ಎಣ್ಣೆ ಹಾಕಿ, ಎರಡೂ ಅಂಗೈಗಳನ್ನು ಒಟ್ಟಿಗೆ ಉಜ್ಜಿ, ಎಣ್ಣೆಯನ್ನು ಅಂಗೈಗೆ ಹರಡಿ ಮತ್ತು ಕೂದಲಿಗೆ ಹಚ್ಚಿ.


    ಜೊಜೊಬಾ ಆಯಿಲ್ ಮಸಾಜ್


    ಕೂದಲು ಮಸಾಜ್ ಮಾಡಲು ಜೊಜೊಬಾ ಎಣ್ಣೆ ಬಳಸಬಹುದು. ಕೂದಲಿಗೆ ಸಂಪೂರ್ಣ ಪೋಷಣೆ ದೊರೆಯುತ್ತದೆ.


    ಬೇಕಾಗುವ ಸಾಮಾಗ್ರಿಗಳು: ಜೊಜೊಬಾ ಎಣ್ಣೆ


    ಇದನ್ನೂ ಓದಿ: ರಕ್ತದೊತ್ತಡ ಸುಧಾರಿಸುವ ಖರ್ಜೂರದ ಪ್ರಯೋಜನ ತಿಳಿದರೆ ಇಂದೇ ಸೇವಿಸಲು ಪ್ರಾರಂಭಿಸುವಿರಿ


    ಬಳಸುವುದು ಹೇಗೆ: ಒಂದು ಬಟ್ಟಲಲ್ಲಿ ಜೊಜೊಬಾ ಎಣ್ಣೆ ತೆಗೆದುಕೊಳ್ಳಿ. ಉಗುರು ಬೆಚ್ಚಗಾಗಿಸಿ. ನಂತರ ನೆತ್ತಿ ಮತ್ತು ಕೂದಲಿಗೆ ಮಸಾಜ್ ಮಾಡಿ. ಕೆಲವು ಗಂಟೆ ಅಥವಾ ರಾತ್ರಿಯಿಡೀ ಬಿಡಿ. ನಂತರ ಶಾಂಪೂ ಮಾಡಿ.

    Published by:renukadariyannavar
    First published: