• Home
  • »
  • News
  • »
  • lifestyle
  • »
  • Diet Tips: ರಾತ್ರಿಯಿಂದ ಬೆಳಗ್ಗೆವರಗೆ ಎಷ್ಟು ಗಂಟೆ ಹೊಟ್ಟೆ ಖಾಲಿ ಇರಬೇಕು? ಇದು Dry Fasting ಎನ್ನುವ ಹೊಸಾ ಆರೋಗ್ಯ ಸೂತ್ರ !

Diet Tips: ರಾತ್ರಿಯಿಂದ ಬೆಳಗ್ಗೆವರಗೆ ಎಷ್ಟು ಗಂಟೆ ಹೊಟ್ಟೆ ಖಾಲಿ ಇರಬೇಕು? ಇದು Dry Fasting ಎನ್ನುವ ಹೊಸಾ ಆರೋಗ್ಯ ಸೂತ್ರ !

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Weight Loss: ಲ್ಯೂಕ್‍ನ ಪ್ರಕಾರ, ಒಣ ಉಪವಾಸ ಸವಾಲು ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ 12 ಗಂಟೆಗಳ ಕಾಲ ಆಹಾರ ಮತ್ತು ನೀರನ್ನು ತ್ಯಜಿಸುವುದನ್ನು ಸೂಚಿಸುತ್ತದೆ. ಅದಕ್ಕೆ ತಯಾರಿ ಮಾಡಲು, ನಿಮ್ಮ ದೈಹಿಕ ಚಟುವಟಿಕೆಯನ್ನು ಅವಲಂಬಿಸಿ 8 ರಿಂದ 14 ಗ್ಲಾಸ್ ನೀರಿನೊಂದಿಗೆ ದಿನವಿಡೀ ಹೈಡ್ರೇಟ್ ಮಾಡುವಂತೆ ಆತ ಸೂಚಿಸುತ್ತಾನೆ.

ಮುಂದೆ ಓದಿ ...
  • Share this:

Dry Fasting: ಫಿಟ್‌ನೆಸ್ ವಿಚಾರದಲ್ಲಿ ಇತ್ತೀಚಿನ ದಿನಗಳಲ್ಲಿ ಉಪವಾಸ ಕೈಗೊಳ್ಳುವುದನ್ನು ನೀವು ನೋಡಿರಬಹುದು ಅಥವಾ ಕೇಳಿರಬಹುದು. ಆದರೆ, ಉಪವಾಸವನ್ನು ಮನಸೋ ಇಚ್ಛೆ ಮಾಡುವಂತಿಲ್ಲ. ಅನುಭವವಿಲ್ಲದ ಫಿಟ್‌ನೆಸ್ ತರಬೇತುದಾರರು ಸಾಮಾಜಿಕ ಜಾಲತಾಣವನ್ನು ಬಂಡವಾಳವನ್ನಾಗಿ ಮಾಡಿಕೊಂಡು ಉಪಯೋಗಕ್ಕೆ ಬಾರದ ಸಲಹೆಗಳನ್ನು ನೀಡುತ್ತಿದ್ದಾರೆ. ಇಂತಹ ಸಲಹೆಗಳನ್ನು ಪಾಲಿಸಿ ಕೆಲವರು ದೇಹ ತೂಕವನ್ನು ಇನ್ನಷ್ಟು ಹೆಚ್ಚಿಸಿಕೊಂಡಿರುವುದು ಇದೆ. ಸರಿಯಾದ ಮಾರ್ಗದಲ್ಲಿ ನಿಮಗೆ ವೇಗವಾಗಿ ಸಹಾಯ ಮಾಡಲು ತರಬೇತುದಾರ ಲ್ಯೂಕ್ ಕೌಟಿನ್ಹೋ ಅವರು ಫೇಸ್‍ಬುಕ್ ಲೈವ್ ಸೆಶನ್‍ನಲ್ಲಿ "ಒಣ ಉಪವಾಸ" ಅಥವಾ ಶುಷ್ಕ ಉಪವಾಸದ ಕುರಿತು ಮಾತನಾಡಿ ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ, ಉಪವಾಸವನ್ನು ಸರಿಯಾಗಿ ಮಾಡಿದರೆ, ದೇಹ ಮತ್ತು ಆರೋಗ್ಯವನ್ನು ಪುನಃಸ್ಥಾಪಿಸಲು ಒಂದು ಸಮಗ್ರ ಪ್ರಕ್ರಿಯೆ. ಎಲ್ಲಾ ಅಂಗಗಳ ಉತ್ತಮ ಕಾರ್ಯನಿರ್ವಹಣೆ ಮತ್ತು ದೇಹದೊಳಗೆ ಅವುಗಳ ಪರಸ್ಪರ ಅವಲಂಬಿತ ಕಾರ್ಯಗಳನ್ನು ಖಚಿತಪಡಿಸಿಕೊಳ್ಳಲು ಒಂದು ಸಮಗ್ರ ವಿಧಾನದ ಅಗತ್ಯವಿದೆ. ಅದುವೇ ಒಣ ಉಪವಾಸ ಎಂದು ಹೇಳುತ್ತಾರೆ. ತೂಕ ನಷ್ಟವನ್ನು ಹೊರತುಪಡಿಸಿ ಅನೇಕ ಪ್ರಯೋಜನಗಳು ಈ ಒಣ ಉಪವಾಸದಲ್ಲಿದೆ.


ಒಣ ಉಪವಾಸ ಹೇಗೆ ಮಾಡುವುದು?
ಲ್ಯೂಕ್‍ನ ಪ್ರಕಾರ, ಒಣ ಉಪವಾಸ ಸವಾಲು ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ 12 ಗಂಟೆಗಳ ಕಾಲ ಆಹಾರ ಮತ್ತು ನೀರನ್ನು ತ್ಯಜಿಸುವುದನ್ನು ಸೂಚಿಸುತ್ತದೆ. ಅದಕ್ಕೆ ತಯಾರಿ ಮಾಡಲು, ನಿಮ್ಮ ದೈಹಿಕ ಚಟುವಟಿಕೆಯನ್ನು ಅವಲಂಬಿಸಿ 8 ರಿಂದ 14 ಗ್ಲಾಸ್ ನೀರಿನೊಂದಿಗೆ ದಿನವಿಡೀ ಹೈಡ್ರೇಟ್ ಮಾಡುವಂತೆ ಆತ ಸೂಚಿಸುತ್ತಾನೆ. ಸೂರ್ಯಾಸ್ತದ ಸಮಯದಲ್ಲಿ ಅಥವಾ ಸೂರ್ಯಾಸ್ತದ ಒಂದು ಗಂಟೆಯೊಳಗೆ ಊಟವನ್ನು ಮುಗಿಸಿ.


ಇದನ್ನೂ ಓದಿ: Breastfeeding: ಹಾಲುಣಿಸುವ ತಾಯಿ ಏನನ್ನು ತಿನ್ನಬೇಕು? ಏನು ತಿನ್ನಬಾರದು? ವೈದ್ಯರು ಹೇಳಿದ ಕಿವಿಮಾತು...

ಅದರ ನಂತರ, ಮರುದಿನ ಬೆಳಿಗ್ಗೆ ತನಕ ನೀರು ಮತ್ತು ಆಹಾರವನ್ನು ಸೇವಿಸಬಾರದು. ಕೆಲವರಿಗೆ ಹಸಿವು ಮತ್ತು ಬಾಯಾರಿಕೆ ಸಂಭವಿಸಬಹುದು. ಮೊದಲ ರಾತ್ರಿ ಚೆನ್ನಾಗಿ ನಿದ್ರೆ ಬರದಿದ್ದರೂ, ಸತತವಾಗಿ ಐದರಿಂದ ಆರು ದಿನಗಳವರೆಗೆ ಇದನ್ನು ಮುಂದುವರಿಸಿ.


ಪ್ರಯೋಜನಗಳು
1. ಸಕ್ಕರೆ ಮತ್ತು ಕೆಫೀನ್ ಸೇವನೆ ಹಂಬಲ ಕಡಿಮೆಯಾಗುತ್ತದೆ
2. ಹಸಿವು ಕಡಿಮೆಯಾಗುತ್ತದೆ. ಇದರಿಂದ ತೂಕ ನಷ್ಟ ಉಂಟಾಗುತ್ತದೆ.
3. ನಿಯಮಿತವಾಗಿ ಊಟ ತಿನ್ನಲು ಬಯಸುವಿರಿ
4. ಶಕ್ತಿಯ ಮಟ್ಟ ಹೆಚ್ಚಾಗಲಿದೆ
5. ಧ್ಯಾನ, ಅಭ್ಯಾಸಗಳು ಸುಧಾರಿಸಬಹುದು
6. ಚರ್ಮ ಮತ್ತು ಕೂದಲಿನ ಸಮಸ್ಯೆಗಳು ಪರಿಹಾರವಾಗುತ್ತದೆ
7. ಇದು ಉರಿಯೂತದ ಮಟ್ಟವನ್ನು ಕಡಿಮೆ ಮಾಡುತ್ತದೆ, ಇದು ಸಂಧಿವಾತ ಮತ್ತು ಇತರ ಉರಿಯೂತದ ರೋಗಿಗಳಿಗೆ ಸಹಾಯ ಮಾಡುತ್ತದೆ.


ಈ ಶುಷ್ಕ ಉಪವಾಸ ಆರಂಭಿಸಿದ ಎರಡು ದಿನಗಳ ತರುವಾಯ ಇದು ನಿಮ್ಮ ದೇಹಕ್ಕೆ ಪರವಾಗಿ ಅಥವಾ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ತೀವ್ರವಾದ ಸ್ವಯಂ ನಿರೋಧಕ ವ್ಯವಸ್ಥೆ ಮತ್ತು ಥೈರಾಯ್ಡ್ ಸಮಸ್ಯೆಗಳಿರುವ ಜನರು 12 ಗಂಟೆಗಳ ಒಣ ಉಪವಾಸ ಮಾಡುವುದು ಅಸಾಧ್ಯವಾಗುತ್ತದೆ. ಆದ್ದರಿಂದ ಇಂತಹವರು 8 ಗಂಟೆಗಳಿಂದ ಪ್ರಾರಂಭಿಸಿ ನಂತರ ಅವಧಿಯನ್ನು ಹೆಚ್ಚಿಸುತ್ತಾ ಹೋಗಬಹುದು.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

Published by:Soumya KN
First published: