ಚಳಿಗಾಲದಲ್ಲಿ (Winter) ಬೀಸುವ ತಂಪಾದ ಗಾಳಿಯಿಂದಾಗಿ (Cold Wave) ಜನರು ಹೆಚ್ಚು ತ್ವಚೆ ಸಮಸ್ಯೆ (Skin Problem) ಎದುರಿಸುತ್ತಾರೆ. ಚಳಿಗಾಲದಲ್ಲಿ ತಂಪು ವಾತಾವರಣದಿಂದ ಧೂಳು, ಕೊಳೆ ಹಾಗೂ ಮಾಲಿನ್ಯವು ಚರ್ಮದ ಆರೋಗ್ಯ (Health) ಹದಗೆಡಲು ಕಾರಣವಾಗಿದೆ. ದಿನದಿಂದ ದಿನಕ್ಕೆ ಕಳೆಗುಂದುವ ಚರ್ಮ ಹಲವು ಸಮಸ್ಯೆ ಎದುರಿಸಲು ಕಾರಣವಾಗಿದೆ. ಕೆಲವರು ಬಿಡುವಿಲ್ಲದ ಕಾರಣ ಚರ್ಮದ ಬಗ್ಗೆ ಗಮನ ಹರಿಸೋಕಾಗಲ್ಲ. ಹೀಗಾಗಿ ತ್ವಚೆಯ ಸಮಸ್ಯೆ ಹೆಚ್ಚುತ್ತಾ ಹೋಗುತ್ತವೆ. ಏನೇ ಇದ್ದರೂ ತ್ವಚೆಯ ಆರೋಗ್ಯದತ್ತ ಕಾಳಜಿ ವಹಿಸುವುದು ಮುಖ್ಯ. ತ್ವಚೆಯ ಒಣಗುವ ಮತ್ತು ಮಂದ ತ್ವಚೆ ಸಮಸ್ಯೆ ತೊಡೆದು ಹಾಕಲು ರಾಸಾಯನಿಕ ಉತ್ಪನ್ನಗಳ ಬದಲು ಮನೆಯಲ್ಲೇ ಮನೆಮದ್ದು ಮಾಡಿಕೊಳ್ಳಬಹುದು.
ತ್ವಚೆಯ ಸಮಸ್ಯೆ ತೊಡೆದು ಹಾಕಲು ಗೋವಿನಜೋಳದ ಹಿಟ್ಟಿನ ಫೇಸ್ ಪ್ಯಾಕ್
ಕಾರ್ನ್ ಫ್ಲೋರ್ ಮತ್ತು ಎಗ್ ವೈಟ್ ಫೇಸ್ ಪ್ಯಾಕ್
2 ಟೀಸ್ಪೂನ್ ಕಾರ್ನ್ ಫ್ಲೋರ್, 2 ಟೀಸ್ಪೂನ್ ಮೊಟ್ಟೆಯ ಬಿಳಿ, 2 ಟೀಸ್ಪೂನ್ ಕಿತ್ತಳೆ ರಸ, ಒಂದು ಟೀಸ್ಪೂನ್ ಜೇನುತುಪ್ಪ ಬೇಕು. ಬೌಲ್ನಲ್ಲಿ ಕಾರ್ನ್ಫ್ಲೋರ್, ಮೊಟ್ಟೆಯ ಬಿಳಿಭಾಗ, ಕಿತ್ತಳೆ ರಸ ಮತ್ತು ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಚರ್ಮವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಅನ್ವಯಿಸಿ. 15 ನಿಮಿಷ ಬಿಟ್ಟು, ತಣ್ಣೀರಿನಿಂದ ಸ್ವಚ್ಛಗೊಳಿಸಿ.
ಕಾರ್ನ್ ಫ್ಲೋರ್ ಮತ್ತು ಓಟ್ ಮೀಲ್ ಫೇಸ್ ಪ್ಯಾಕ್
ಕಾರ್ನ್ ಹಿಟ್ಟು, ಕಾಫಿ ಪುಡಿ, ಓಟ್ ಊಟದ ಪುಡಿ, ತೆಂಗಿನ ಎಣ್ಣೆ ಬೇಕು. ಸಣ್ಣ ಬಟ್ಟಲಿನಲ್ಲಿ ಕಾರ್ನ್ ಫ್ಲೋರ್, ಕಾಫಿ ಪುಡಿ, ಓಟ್ ಮೀಲ್ ಪೌಡರ್ ಮತ್ತು ತೆಂಗಿನ ಎಣ್ಣೆ ಸೇರಿಸಿ, ಅನ್ವಯಿಸಿ. 20 ನಿಮಿಷದ ನಂತರ ವಾಶ್ ಮಾಡಿ. ತೆಂಗಿನ ಎಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಬಹುದು.
ಕಾರ್ನ್ ಫ್ಲೋರ್ ಚರ್ಮಕ್ಕೆ ಹೇಗೆ ಪ್ರಯೋಜನಕಾರಿ?
ಕಪ್ಪು ಕಲೆ ಹೋಗಲಾಡಿಸುತ್ತದೆ
ಕಾರ್ನ್ ಹಲವು ವಿಧದ ಪ್ರಮುಖ ಪೋಷಕಾಂಶ ಹೊಂದಿದೆ. ಚರ್ಮದ ಮೇಲಿನ ಕಪ್ಪು ಕಲೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಮೆಲನಿನ್ ಉತ್ಪಾದನೆ ಹೆಚ್ಚಿಸುತ್ತದೆ. ಇದು ಚರ್ಮವು ಸ್ಪಷ್ಟ ಮತ್ತು ಸುಂದರವಾಗಿ ಕಾಣಲು ಮತ್ತು ವಯಸ್ಸಾದ ಚಿಹ್ನೆ ನಿಧಾನವಾಗಿಸುತ್ತದೆ.
ಕಾರ್ನ್ ಫ್ಲೋರ್ ಪ್ರೋಟೀನ್, ತಾಮ್ರ, ಸತು, ರಂಜಕ ಮತ್ತು ಮೆಗ್ನೀಸಿಯಮ್ ಸೇರಿ ಹಲವು ಪೋಷಕಾಂಶ ಹೊಂದಿದೆ. ಈ ಎಲ್ಲಾ ಪೋಷಕಾಂಶಗಳು ವಯಸ್ಸಾಗುವುದಕ್ಕಿಂತ ಮೊದಲು ಕಾಣಿಸಿಕೊಳ್ಳುವ ಸೂಕ್ಷ್ಮ ರೇಖೆ, ಸುಕ್ಕುಗಳು ಇತ್ಯಾದಿಗಳ ಸಮಸ್ಯೆ ನಿವಾರಿಸುತ್ತದೆ.
ಚರ್ಮದಿಂದ ಹೆಚ್ಚುವರಿ ಎಣ್ಣೆ ತೆಗೆದು ಹಾಕುತ್ತದೆ
ಕಾರ್ನ್ ಫ್ಲೋರ್ ಬಳಕೆಯು ತ್ವಚೆಯಲ್ಲಿ ಸಂಗ್ರಹವಾದ ಧೂಳು, ಕೊಳೆ ಮತ್ತು ಎಣ್ಣೆ ತೊಡೆದು ಹಾಕುತ್ತದೆ. ಇದು ತ್ವಚೆಯು ಸುಂದರ ಮತ್ತು ಹೊಳೆಯುವಂತೆ ಮಾಡುತ್ತದೆ. ಕಾರ್ನ್ ಫ್ಲೋರ್ ಎಣ್ಣೆಯುಕ್ತ ಚರ್ಮ ಮತ್ತು ಮೊಡವೆ ನಿವಾರಿಸಲು ಸಹಕಾರಿ.
ಇದನ್ನೂ ಓದಿ: ಪ್ರೋಟೀನ್ ಕೊರತೆ ನಿಮ್ಮ ದೇಹದ ಮೇಲೆ ಹೇಗೆಲ್ಲ ಪರಿಣಾಮ ಬೀರುತ್ತದೆ ಗೊತ್ತಾ..!
ಚರ್ಮದ ಅಲರ್ಜಿ ತೊಡೆದು ಹಾಕಲು ಪ್ರಯೋಜನಕಾರಿ
ಕಾರ್ನ್ ಫ್ಲೋರ್ ಬಳಕೆ ಚರ್ಮದ ಕಿರಿಕಿರಿ ಹಾಗೂ ಸಮಸ್ಯೆ ತೊಡೆದು ಹಾಕಲು ಪ್ರಯೋಜನಕಾರಿ. ಬಿಸಿಲಿನಲ್ಲಿ ತ್ವಚೆಯ ಮೇಲಾಗುವ ಸಮಸ್ಯೆ ತೊಡೆದು ಹಾಕಲು ಸಹಕಾರಿ. ಇದು ಚರ್ಮದ ತುರಿಕೆ ಕಡಿಮೆ ಮಾಡುತ್ತದೆ. ಚರ್ಮದ ದದ್ದು ಮತ್ತು ಶುಷ್ಕತೆ ಕಡಿಮೆ ಮಾಡುತ್ತದೆ. ತುರಿಕೆ ಬರುವ ಚರ್ಮ ಕೆಂಪು ದದ್ದು ಮತ್ತು ಶುಷ್ಕ ತ್ವಚೆಯ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ