• Home
  • »
  • News
  • »
  • lifestyle
  • »
  • Health Care: ನುಗ್ಗೆಸೊಪ್ಪಿನ ಆರೋಗ್ಯ ಪ್ರಯೋಜನ, ಅಡ್ಡ ಪರಿಣಾಮಗಳು

Health Care: ನುಗ್ಗೆಸೊಪ್ಪಿನ ಆರೋಗ್ಯ ಪ್ರಯೋಜನ, ಅಡ್ಡ ಪರಿಣಾಮಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಮ್ಮ ಸುತ್ತಲೂ ಇಂತಹ ಸಾವಿರಾರು ಮರಗಳು ಮತ್ತು ಸಸ್ಯಗಳು ಇವೆ. ಅವುಗಳು ಫಲ ನೀಡುವುದಿಲ್ಲ. ಆದರೆ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ನೀಡುತ್ತವೆ. ಆ ಮರಗಳು ಮತ್ತು ತರಕಾರಿಗಳು ಅವುಗಳ ಎಲೆಗಳು ಕಾಂಡಗಳು ಬೇರುಗಳು ಮತ್ತು ಹೂವುಗಳು ಔಷಧೀಯ ಗುಣಗಳಿಂದ ಸಮೃದ್ಧ ಆಗಿವೆ.

  • Share this:

    ಹಲವು ಕಾಯಿಲೆಗಳ (Many Disease) ನಿವಾರಣೆಗೆ ಹಲವು ಗಿಡಮೂಲಿಕೆಗಳನ್ನು (Herbs) ಬಳಕೆ ಮಾಡಲಾಗುತ್ತದೆ. ಗಿಡಮೂಲಿಕೆಗಳನ್ನು ನೀವು ಆಹಾರದಲ್ಲಿ (Food), ಚಹಾ ಅಥವಾ ಜ್ಯೂಸ್ (Tea And Juice) ರೂಪದಲ್ಲಿ ಸೇವನೆ ಮಾಡಬಹುದಾಗಿದೆ. ಹೆಚ್ಚಿನ ಜನರು (People) ಹಣ್ಣಿನ ಮರಗಳು ಮತ್ತು ಸಸ್ಯಗಳನ್ನು ತಮ್ಮ ಆಹಾರದಲ್ಲಿ ಸೇರಿಸುತ್ತಾರೆ. ಮತ್ತು ಅವುಗಳನ್ನು ಮಾತ್ರ ಸೇವನೆ ಮಾಡಲು ಇಷ್ಟ ಪಡುತ್ತಾರೆ. ಕೆಲವು ಮರಗಳನ್ನು ಪರಿಗಣಿಸುವ ಹಿಂದೆ ಮುಖ್ಯ ಕಾರಣ ಅವುಗಳು ಹಣ್ಣುಗಳನ್ನು ನೀಡುತ್ತವೆ. ಹಾಗೂ ತರಕಾರಿ ನೀಡುತ್ತವೆ. ಆದರೆ ನಿಮ್ಮ ಸುತ್ತಲೂ ಇಂತಹ ಸಾವಿರಾರು ಮರಗಳು ಮತ್ತು ಸಸ್ಯಗಳು ಇವೆ. ಅವುಗಳು ಫಲ ನೀಡುವುದಿಲ್ಲ. ಆದರೆ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ನೀಡುತ್ತವೆ.


    ಆ ಮರಗಳು ಮತ್ತು ತರಕಾರಿಗಳು ಅವುಗಳ ಎಲೆಗಳು, ಕಾಂಡಗಳು, ಬೇರುಗಳು ಮತ್ತು ಹೂವುಗಳು ಔಷಧೀಯ ಗುಣಗಳಿಂದ ಸಮೃದ್ಧ ಆಗಿವೆ. ಅಂತಹ ಒಂದು ಸಸ್ಯ ಅಂದ್ರೆ ಮೊರಿಂಗಾ, ಡ್ರಮ್ ಸ್ಟಿಕ್ ಮತ್ತು ನುಗ್ಗೆಸೊಪ್ಪು ಎಂದು ಕರೆಯುತ್ತಾರೆ.


    ನುಗ್ಗೆಸೊಪ್ಪು ಯಾವೆಲ್ಲಾ ಆರೋಗ್ಯ ಪ್ರಯೋಜನ ನೀಡುತ್ತದೆ?


    ನುಗ್ಗೆಸೊಪ್ಪು ಮರದ ಎಲೆಗಳು ಕೂದಲು ಉದುರುವಿಕೆ, ರಕ್ತಹೀನತೆ, ಸಂಧಿವಾತ, ಥೈರಾಯ್ಡ್, ಅಸ್ತಮಾ, ದುರ್ಬಲ ರೋಗ ನಿರೋಧಕ ಶಕ್ತಿ, ಮಧುಮೇಹ ಸೇರಿದಂತೆ ಎಲ್ಲಾ ಕಾಯಿಲೆ ನಿವಾರಣೆಗೆ ಸಹಾಯ ಮಾಡುತ್ತದೆ. ಮತ್ತು ತೂಕ ಕಡಿಮೆ ಮಾಡಲು ಉಪಯುಕ್ತ ಆಗಿದೆ.


    ಇದನ್ನೂ ಓದಿ: ಥೈರಾಯ್ಡ್​ನಿಂದ ಬಿಡುಗಡೆ ಹೊಂದಲು ಈ ಸೂಪರ್​ ಫುಡ್​​ಗಳು ಸಹಕಾರಿ


    ಆಯುರ್ವೇದದಲ್ಲಿ ಇದನ್ನು ಔಷಧೀಯ ಸಸ್ಯ ಎಂದು ಪರಿಗಣಿಸಲಾಗಿದೆ. ಇದನ್ನು ಅನೇಕ ರೋಗಗಳ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತದೆ. ಆಯುರ್ವೇದ ವೈದ್ಯೆ ದೀಕ್ಷಾ ಭಾವಸರ್ ಅವರ ಪ್ರಕಾರ, ನುಗ್ಗೆಸೊಪ್ಪು ಸಸ್ಯವು ಪೋಷಕಾಂಶಗಳ ನಿಧಿ ಆಗಿದೆ.


    ನುಗ್ಗೆಸೊಪ್ಪು ಇದು ವಿಟಮಿನ್ ಎ, ವಿಟಮಿನ್ ಬಿ 1, ಥಯಾಮಿನ್, ಬಿ 2 ರಿಬೋಫ್ಲಾವಿನ್, ಬಿ 3 ನಿಯಾಸಿನ್, ಬಿ -6, ಫೋಲೇಟ್, ಆಸ್ಕೋರ್ಬಿಕ್ ಆಮ್ಲ ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣ, ಮೆಗ್ನೀಸಿಯಮ್, ರಂಜಕ ಮತ್ತು ಸತು ಸೇರಿದಂತೆ ಅಗತ್ಯ ಪೋಷಕಾಂಶಗಳು ಕಂಡು ಬರುತ್ತವೆ.


    ನುಗ್ಗೆಸೊಪ್ಪು ಗುಣ ಲಕ್ಷಣಗಳು ಯಾವವು?


    ನುಗ್ಗೆಸೊಪ್ಪು ಇದು ಆಲ್ ಇನ್ ಒನ್ ಗಿಡಮೂಲಿಕೆ ಆಗಿದೆ. ನುಗ್ಗೆಸೊಪ್ಪು ಸಸ್ಯವು ಆಂಟಿ ಬಯೋಟಿಕ್, ನೋವು ನಿವಾರಕ, ಉತ್ಕರ್ಷಣ ನಿರೋಧಕ, ಉರಿಯೂತ, ಆಂಟಿಕಾನ್ಸರ್, ಆಂಟಿಡಯಾಬಿಟಿಕ್, ಆಂಟಿಫಂಗಲ್ ಮತ್ತು ಅತ್ಯಂತ ಅದ್ಭುತ ಕೆಲಸ ವಿರೋಧಿಯಾಗಿ ಕೆಲಸ ಮಾಡುತ್ತದೆ.


    ನುಗ್ಗೆಸೊಪ್ಪು ಯಾವೆಲ್ಲಾ ಪ್ರಯೋಜನಗಳು ಸಿಗಲಿವೆ?


    ನುಗ್ಗೆಸೊಪ್ಪು ಹಿಮೋಗ್ಲೋಬಿನ್ ನ್ನು ಸುಧಾರಿಸಲು ಸಹಾಯ ಮಾಡುತ್ತದೆ. ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ನ್ನು ನಿಯಂತ್ರಿಸಲು ಸಹಕಾರಿ. ಯಕೃತ್ತು ಮತ್ತು ಮೂತ್ರಪಿಂಡವನ್ನು ನಿರ್ವಿಷಗೊಳಿಸುತ್ತದೆ. ರಕ್ತವನ್ನು ಶುದ್ಧೀಕರಿಸುತ್ತದೆ. ಚರ್ಮ ರೋಗಗಳನ್ನು ನಿವಾರಿಸುತ್ತದೆ ಹಾಗೂ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ


    ಇತರೆ ನುಗ್ಗೆಸೊಪ್ಪುನ ಪ್ರಯೋಜನಗಳು?


    ಚಯಾಪಚಯ ಸುಧಾರಿಸುತ್ತದೆ, ನಿಮ್ಮ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ, ಒತ್ತಡ, ಆತಂಕ ಮತ್ತು ಮೂಡ್ ಸ್ವಿಂಗ್‌ ಕಡಿಮೆ ಮಾಡುತ್ತದೆ. ಥೈರಾಯ್ಡ್ ಕಾರ್ಯ ಸುಧಾರಿಸುತ್ತದೆ. ಶುಶ್ರೂಷಾ ತಾಯಂದಿರಲ್ಲಿ ಎದೆ ಹಾಲಿನ ಉತ್ಪಾದನೆ ಹೆಚ್ಚಿಸುತ್ತದೆ.


    ನುಗ್ಗೆಸೊಪ್ಪು ನ್ನು ಹೇಗೆ ಬಳಸುವುದು?


    ನುಗ್ಗೆಸೊಪ್ಪು ಸಸ್ಯದ ಎಲ್ಲಾ ಭಾಗಗಳು ಪ್ರಯೋಜನಕಾರಿ ಆಗಿವೆ. ಆದರೆ ಅದರ ಎಲೆಗಳು ಹೆಚ್ಚು ಪ್ರಯೋಜನಕಾರಿ. ನೀವು ತಾಜಾ ಎಲೆಗಳ ರಸವನ್ನು ಅಥವಾ ಒಣಗಿದ ಎಲೆಗಳ ಪುಡಿಯನ್ನು ಬಳಸಬಹುದು. ಇದರ ಬೀಜಗಳನ್ನು ಕುದಿಸಿ ಮತ್ತು ಅದರ ಸೂಪ್ ಕುಡಿಯುವುದು ಸಂಧಿವಾತ ನೋವು ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.


    ಆಹಾರದಲ್ಲಿ ನುಗ್ಗೆಸೊಪ್ಪು ಬಳಸಬಹುದು


    ನುಗ್ಗೆಸೊಪ್ಪನ್ನು ನಿಮ್ಮ ರೊಟ್ಟಿ, ಪ್ಯಾನ್‌ ಕೇಕ್‌ ಗಳು, ಸ್ಮೂಥಿ, ಎನರ್ಜಿ ಡ್ರಿಂಕ್, ಮಸೂರ ಇತ್ಯಾದಿ ಸೇರಿಸುವ ಮೂಲಕ ನೀವು ನುಗ್ಗೆಸೊಪ್ಪು ಎಲೆಗಳು ಅಥವಾ ಪುಡಿ ತಿನ್ನಬಹುದು. ನುಗ್ಗೆಸೊಪ್ಪುನ್ನು ಬಳಸುವ ಮೊದಲು ನೀವು ವೈದ್ಯರು ಅಥವಾ ತಜ್ಞರನ್ನು ಸಂಪರ್ಕಿಸಬೇಕು.


    ಇದನ್ನೂ ಓದಿ: ಕರುಳು ಮತ್ತು ಹೊಟ್ಟೆಯನ್ನು ಸ್ವಚ್ಛಗೊಳಿಸಲು ತಜ್ಞರು ಹೇಳಿರುವ ಸುಲಭ ಪರಿಹಾರ ಹೀಗಿದೆ!


    ನುಗ್ಗೆಸೊಪ್ಪು ಅಡ್ಡ ಪರಿಣಾಮಗಳು


    ನುಗ್ಗೆಸೊಪ್ಪು ಪ್ರಕೃತಿಯಲ್ಲಿ ಬಿಸಿ. ಹಾಗಾಗಿ ಶಾಖದ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಆಮ್ಲತೆ, ರಕ್ತಸ್ರಾವ, ಪೈಲ್ಸ್, ಭಾರೀ ಮುಟ್ಟು ಹಾಗೂ ಮೊಡವೆ ಸಮಸ್ಯೆ ಉಂಟಾಗುತ್ತದೆ. ಬೇಸಿಗೆಯಲ್ಲಿ ಇದನ್ನು ತಪ್ಪಿಸಬೇಕು. ಪಿತ್ತ ಇರುವವರು ಯಾವುದೇ ಚಿಂತೆಯಿಲ್ಲದೆ ಚಳಿಗಾಲದಲ್ಲಿ ತಿನ್ನಬಹುದು.

    Published by:renukadariyannavar
    First published: