ನೀವು ಆಹಾರ ಸೇವಿಸುವಾಗ ನೀರು ಕುಡಿಯುತ್ತೀರಾ? ಹಾಗಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ

ಈ ಅಧ್ಯಾಯನಕ್ಕಾಗಿ ಸಂಶೋಧಕರು 2 ತಂಡಗಳನ್ನು ರಚಿಸಿದ್ದರು. ಇದರಲ್ಲಿ ಒಂದು ತಂಡಕ್ಕೆ ಆಹಾರದೊಂದಿಗೆ ನೀರು ನೀಡಲಾಗಿದ್ದರೆ, ಮತ್ತೊಂದು ಗುಂಪಿಗೆ ಆಹಾರ ಸೇವಿಸುವ ಮುನ್ನ ನೀರು ಕುಡಿಯುವಂತೆ ಸೂಚಿಸಿತ್ತು.

zahir | news18
Updated:June 11, 2019, 3:33 PM IST
ನೀವು ಆಹಾರ ಸೇವಿಸುವಾಗ ನೀರು ಕುಡಿಯುತ್ತೀರಾ? ಹಾಗಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ
@washingtonpost
zahir | news18
Updated: June 11, 2019, 3:33 PM IST
ಮನುಷ್ಯ ಬದುಕಲು ಆಹಾರ ಎಷ್ಟು ಮುಖ್ಯವೋ, ನೀರನ್ನು ಕುಡಿಯುವುದೂ ಅಷ್ಟೇ ಮುಖ್ಯ. ಒಬ್ಬ ವ್ಯಕ್ತಿಯು ಆರೋಗ್ಯ ಪೂರ್ಣವಾಗಿರಬೇಕಿದ್ದರೆ ದಿನಕ್ಕೆ ಕನಿಷ್ಟ ಎಂದರೂ 6 ಲೀಟರ್ ನೀರು ಕುಡಿಯಬೇಕು. ಕಡಿಮೆ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಕೂಡ ಬೀರುತ್ತದೆ. ಅದರಲ್ಲೂ ನಾವು ಹೇಗೆ ನೀರನ್ನು ಕುಡಿಯುತ್ತೇವೆ ಎಂಬುದರ ಮೇಲೆ ಆರೋಗ್ಯ ನಿರ್ಧರಿತವಾಗುತ್ತದೆ ಎಂಬುದನ್ನು ಹೊಸ ಅಧ್ಯಾಯವೊಂದು ಪುಷ್ಠೀಕರಿಸಿದೆ.

ಸಾಮಾನ್ಯವಾಗಿ ಎಲ್ಲರೂ ಊಟ ಮಾಡುವಾಗ ಅಥವಾ ಅದರ ಬಳಿಕ ನೀರು ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತೀರಿ. ಆದರೆ ನಿಮ್ಮ ಈ ಅಭ್ಯಾಸ ಆರೋಗ್ಯವನ್ನು ಹದಗೆಡಿಸುವಲ್ಲಿ ಮುಖ್ಯ ಪ್ರಾತ್ರವಹಿಸುತ್ತದೆ ಎಂಬುದು ಗೊತ್ತಿರಲಿ. ತಿನ್ನುವಾಗ ನೀರು ಕುಡಿಯುವುದರಿಂದ ನಿಮ್ಮ ಜೀರ್ಣಕ್ರಿಯೆಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದಿದೆ ಹೊಸ ಅಧ್ಯಯನ.

ಆಹಾರ ಸೇವಿಸುವಾಗ ನೀರು ಕುಡಿದರೆ ಜೀರ್ಣಕಾರಿ ಕಿಣ್ವಗಳು ದೇಹದ ಆಮ್ಲದೊಂದಿಗೆ ಮಿಶ್ರವಾಗುತ್ತದೆ. ಇದರಿಂದ ಆಹಾರವನ್ನು ಜೀರ್ಣಿಸಿಕೊಳ್ಳು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಅಷ್ಟೇ ಅಲ್ಲದೆ ನಿಧಾನಗತಿಯ ಜೀರ್ಣಕ್ರಿಯೆಯಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಈ ಅಧ್ಯಾಯನಕ್ಕಾಗಿ ಸಂಶೋಧಕರು 2 ತಂಡಗಳನ್ನು ರಚಿಸಿದ್ದರು. ಇದರಲ್ಲಿ ಒಂದು ತಂಡಕ್ಕೆ ಆಹಾರದೊಂದಿಗೆ ನೀರು ನೀಡಲಾಗಿದ್ದರೆ, ಮತ್ತೊಂದು ಗುಂಪಿಗೆ ಆಹಾರ ಸೇವಿಸುವ ಮುನ್ನ ನೀರು ಕುಡಿಯುವಂತೆ ಸೂಚಿಸಿತ್ತು. 12 ವಾರಗಳ ಕಾಲ ನಡೆದ ಈ ಅಧ್ಯಯನದಲ್ಲಿ ಆಹಾರ ಸೇವಿಸುವಾಗ ಮುನ್ನ ನೀರು ಕುಡಿದವರ ದೇಹ ತೂಕ 2 ಕೆ.ಜಿಯಷ್ಟು ಕಡಿಮೆಯಾಗಿರುವುದು ಕಂಡು ಬಂದಿದೆ.

ಅಲ್ಲದೆ ಊಟದೊಂದಿಗೆ ನೀರು ಕುಡಿದವರಲ್ಲಿ ಮೆಟಾಬಾಲಿಸಂ ಸಮಸ್ಯೆ ಗೋಚರಿಸಿದ್ದು, ಅದರೊಂದಿಗೆ 8 ರಿಂದ 15 ರಷ್ಟು ಕ್ಯಾಲೊರಿ ಹೆಚ್ಚಾಗಿದೆ. ಹಾಗೆಯೇ ನೀವು ಗ್ಯಾಸ್ಟ್ರೋಸೊಫೆಜಿಲ್ ರಿಫ್ಲಕ್ಸ್ ರೋಗದಿಂದ ಬಳಲುತ್ತಿದ್ದರೆ, ತಿನ್ನುವ ಸಮಯದಲ್ಲಿ ಪಾನೀಯಗಳನ್ನು ಸೇವಿಸುವುದು ಹಾನಿಕಾರಕ ಎಂಬುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಇಷ್ಟೇ ಅಲ್ಲದೆ ಆಹಾರದೊಂದಿಗೆ ಆಲ್ಕೋಹಾಲ್ ಸೇವಿಸಿದರೂ ಅಡ್ಡ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ತಂಡ ಎಚ್ಚರಿಸಿದೆ. ಆಲ್ಕೋಹಾಲ್ ಮತ್ತು ಆಹಾರ ಜೊತೆಯಾಗುವುದರಿಂದ ಬಾಯಿಯ ಲಾಲಾರಸದ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಆಹಾರ ಸೇವಿಸುವ ಮುನ್ನ ನೀರು ಕುಡಿಯುವುದು ಉತ್ತಮ ಎಂದಿದ್ದಾರೆ ಎಂದು ಸಂಶೋಧಕರು.

First published:June 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...