• Home
  • »
  • News
  • »
  • lifestyle
  • »
  • Health Tips: ದಿನಕ್ಕೆರಡು ಬಿಯರ್ ಕುಡಿದರೆ ಮೆದುಳಿಗೆ ಡೇಂಜರ್! ಅಧ್ಯಯನದಲ್ಲಿ ರಿವೀಲಾಯ್ತು ಬಿಯರ್ ಅಪಾಯ

Health Tips: ದಿನಕ್ಕೆರಡು ಬಿಯರ್ ಕುಡಿದರೆ ಮೆದುಳಿಗೆ ಡೇಂಜರ್! ಅಧ್ಯಯನದಲ್ಲಿ ರಿವೀಲಾಯ್ತು ಬಿಯರ್ ಅಪಾಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದಿನಕ್ಕೆ ಎರಡು ಬಿಯರ್ ಗಳು ಕುಡಿಯುವುದು ಸಹ 10 ವರ್ಷ ವಯಸ್ಸಾಗುವಿಕೆ ಹೇಗೆ ನಿಮ್ಮ ಮೆದುಳಿನ ಮೇಲೆ ಹಾನಿ ಉಂಟು ಮಾಡಬಹುದೊ, ಅದೇ ರೀತಿಯ ಹಾನಿಯನ್ನು ಉಂಟು ಮಾಡಬಹುದು ಎಂದು ಎತ್ತಿ ತೋರಿಸಿದೆ.

  • Share this:

ಕೆಲವರು ತಮ್ಮ ದಿನವಿಡೀ ಕೆಲಸದಿಂದ ಬಂದ ಒತ್ತಡವನ್ನು ನಿರ್ವಹಿಸಿಕೊಳ್ಳಲು ಮತ್ತು ರಾತ್ರಿ ಹೊತ್ತು ಯಾವುದೇ ಯೋಚನೆ ಇಲ್ಲದೆ ಚೆನ್ನಾಗಿ ನಿದ್ರಿಸಬಹುದು ಎಂಬ ಕಲ್ಪನೆಗಳನ್ನು ಇರಿಸಿಕೊಂಡು ಮದ್ಯಪಾನ (Drinking) ಮಾಡಿದರೆ, ಇನ್ನೂ ಕೆಲವರು ಏನೂ ಕೆಲಸ ಮಾಡದೆ ಇದ್ದರೂ ಸಹ ದಿನವಿಡೀ ಮದ್ಯಪಾನ ಮಾಡಿ ರಸ್ತೆಯ ಮೇಲೆ ತೂರಾಡುತ್ತಾ ಅಲ್ಲೇ ಕೊನೆಗೆ ರಸ್ತೆಯ ಬದಿಯಲ್ಲಿ ಪರಿಜ್ಞಾನವೇ ಇಲ್ಲದೆ ಬಿದ್ದಿರುವುದನ್ನು ನಾವು ದಿನನಿತ್ಯದ ಜೀವನದಲ್ಲಿ ನೋಡುತ್ತಲೇ ಇರುತ್ತೇವೆ. ಮದ್ಯಪಾನ ಮಾಡಬೇಡಿ, ಆರೋಗ್ಯಕ್ಕೆ ಹಾನಿಕಾರಕ (Danger) ಮತ್ತು ಈ ಚಟದಿಂದ ಕುಟುಂಬವು (Family) ಬೀದಿಗೆ ಬರುತ್ತದೆ ಎಂದು ಟಿವಿಯಲ್ಲಿ ಎಷ್ಟೇ ಬಾರಿ ಎಚ್ಚರಿಸಿದರೂ ಸಹ ಜನರು ಈ ಚಟಕ್ಕೆ ಬಲಿಯಾಗುತ್ತಲೇ ಇರುತ್ತಾರೆ.


ಈ ಮದ್ಯಪಾನ ಅತಿಯಾಗಿ ಮಾಡಿದರೆ ಆರೋಗ್ಯಕ್ಕೆ (Health), ವಿಶೇಷವಾಗಿ ಮೆದುಳಿನ ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂಬುದು ಇನ್ನೂ ಗುಟ್ಟಾಗಿ ಉಳಿದಿಲ್ಲ. ಆದಾಗ್ಯೂ, ಮಿತವಾಗಿ ಸೇವಿಸುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ತುಂಬಾನೇ ಮದ್ಯಪಾನ ಮಾಡುವ ಜನರಿಗೆ ಈ ಚಟದ ನಿಯಂತ್ರಣವು ಒಂದು ದೊಡ್ಡ ಸವಾಲಾಗಿರುತ್ತದೆ. ಇಲ್ನೋಡಿ ಹೊಸ ಅಧ್ಯಯನವೊಂದು ಏನು ಹೇಳಿದೆ ಅಂತ. ಇದನ್ನು ಕೇಳಿದರೆ ನೀವು ಖಂಡಿತವಾಗಿ ಶಾಕ್ ಆಗ್ತಿರಾ.


ಮೆದುಳಿಗೆ ಹಾನಿ


ಏನಪ್ಪಾ ಈ ಹೊಸ ಅಧ್ಯಯನ ಹೇಳುವುದು ಅಂತೀರಾ? ದಿನಕ್ಕೆ ಎರಡು ಬಿಯರ್ ಗಳು ಕುಡಿಯುವುದು ಸಹ 10 ವರ್ಷ ವಯಸ್ಸಾಗುವಿಕೆ ಹೇಗೆ ನಿಮ್ಮ ಮೆದುಳಿನ ಮೇಲೆ ಹಾನಿ ಉಂಟು ಮಾಡಬಹುದೊ, ಅದೇ ರೀತಿಯ ಹಾನಿಯನ್ನು ಉಂಟು ಮಾಡಬಹುದು ಎಂದು ಎತ್ತಿ ತೋರಿಸಿದೆ.


ಮೆದುಳಿನಲ್ಲಿರುವ ಬೂದು ಮತ್ತು ಬಿಳಿ ದ್ರವ್ಯದ ಪರಿಮಾಣ


ಈ ಅಧ್ಯಯನವು ಮದ್ಯ ಸೇವನೆ ಮತ್ತು ಮೆದುಳಿನಲ್ಲಿರುವ ಬೂದು ಮತ್ತು ಬಿಳಿ ದ್ರವ್ಯದ ಪರಿಮಾಣಗಳನ್ನು ತುಂಬಾನೇ ಸೂಕ್ಷ್ಮವಾಗಿ ಗಮನಿಸಿದೆ, ಮಧ್ಯಮ ಪ್ರಮಾಣದ ಬಿಯರ್ ಹೇಗೆ ವರ್ಷಗಳ ಹಾನಿಗೆ ಕಾರಣವಾಗಬಹುದು ಎಂಬುದನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಇದು ಸಹಾಯಕವಾಯಿತು.


ಮೆದುಳಿನ ಮೇಲಾಗೋ ಪರಿಣಾಮವೇನು?


ಯುಕೆಯ ಬಯೋಬ್ಯಾಂಕ್ ನಲ್ಲಿ ಲಭ್ಯವಿರುವಂತಹ ಸುಮಾರು 36,000 ಕ್ಕೂ ಹೆಚ್ಚು ಜನರ ಮೆದುಳಿನ ಉತ್ತಮ ಗುಣಮಟ್ಟದ ಎಂಆರ್‌ಐ ಸ್ಕ್ಯಾನ್ ಗಳನ್ನು ಈ ಅಧ್ಯಯನದಲ್ಲಿ ವಿಶ್ಲೇಷಿಸಲಾಗಿದೆ. ಇದು ಅತಿಯಾದ ಮದ್ಯಪಾನಿಗಳ ಮೇಲೆ ಕೇಂದ್ರೀಕರಿಸಿದ ಅಧ್ಯಯನವನ್ನು ಸಹ ಅನುಸರಿಸಿತು.


ಇದನ್ನೂ ಓದಿ: ಬಿಯರ್ ಆರೋಗ್ಯಕ್ಕೆ ಹಾನಿಕಾರಕ ನಿಜ, ಆದರೆ ಈ ಒಂದು ಸಮಸ್ಯೆಗೆ ಮಾತ್ರ ರಾಮಬಾಣ; ಸಂಶೋಧನೆಯ ಅಚ್ಚರಿ ಸಂಗತಿ


ಮಧ್ಯಮ ಪ್ರಮಾಣದ ಮದ್ಯವನ್ನು ಕುಡಿಯುವುದರಿಂದ ಆಗಾಗ್ಗೆ ಬಿಳಿ ಮತ್ತು ಬೂದು ದ್ರವ್ಯದ ಪ್ರಮಾಣವು ಮೆದುಳಿನಲ್ಲಿ ಕುಗ್ಗಲು ಕಾರಣವಾಗಬಹುದು ಎಂದು ಸಂಶೋಧಕರು ಕಂಡು ಕೊಂಡಿದ್ದಾರೆ.


ಮಾನವ ಮೆದುಳಿನ ಮೇಲೆ ಬಿಯರ್ ಪರಿಣಾಮ


ಈ ಹೊಸ ಅಧ್ಯಯನವು ನಿಜವಾಗಿಯೂ ಬಹಳಷ್ಟು ಇತರ ಅಸ್ಥಿರತೆಗಳನ್ನು ನೋಡಿಲ್ಲ ಎಂಬುದನ್ನು ಇಲ್ಲಿ ಗಮನಿಸುವುದು ತುಂಬಾನೇ ಮುಖ್ಯವಾಗುತ್ತದೆ, ಆದರೆ ಇದು ಮಾನವ ಮೆದುಳಿನ ಮೇಲೆ ಮದ್ಯಪಾನದ ಪರಿಣಾಮಗಳ ಬಗ್ಗೆ ನಮಗೆ ಬಹಳ ಕಡಿಮೆ ತಿಳಿದಿದೆ ಎಂಬ ಅಂಶವನ್ನು ಸಹ ಎತ್ತಿ ತೋರಿಸುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.


ಹೆಚ್ಚೋ ಕಡಿಮೆಯೋ ಹಾನಿಯಾಗೋದು ಪಕ್ಕಾ


ಆಶ್ಚರ್ಯಕರ ಸಂಗತಿಯೆಂದರೆ, ಡೇಟಾದಿಂದ ಅತಿಯಾದ ಕುಡುಕರನ್ನು ತೆಗೆದುಹಾಕಿದ ನಂತರವೂ ಫಲಿತಾಂಶಗಳು ತುಂಬಾ ಭಿನ್ನವಾಗಿರಲಿಲ್ಲ, ನೀವು ಎಷ್ಟು ಸೇವಿಸುತ್ತೀರಿ ಎಂಬುದು ಮುಖ್ಯವಲ್ಲ, ಹಾನಿಯಾಗುತ್ತದೆ ಎಂಬುದಂತೂ ನಿಜವಾದ ಸಂಗತಿಯಾಗಿದೆ ಎಂದು ಸೂಚಿಸುತ್ತದೆ. ಅಧ್ಯಯನವು ಸರಾಸರಿ ಬಳಕೆಯನ್ನು ಗಮನಿಸಿದೆ, ಆದಾಗ್ಯೂ, ಸಂಶೋಧಕರು ಆವರ್ತನ ಮತ್ತು ವಿಭಿನ್ನ ಪ್ರಮಾಣಗಳು ಮತ್ತು ಮೆದುಳಿನ ಆರೋಗ್ಯದ ಮೇಲೆ ಅವುಗಳ ಪರಿಣಾಮವನ್ನು ಪರಿಶೀಲಿಸಲು ಪ್ರಯತ್ನಿಸಿದ್ದಾರೆ.


ಇದನ್ನೂ ಓದಿ: Cockroach Beer: ಜಿರಳೆಯಿಂದ ತಯಾರಿಸಿದ ಬಿಯರ್ ಕುಡಿದಿದ್ದೀರಾ? ಇಲ್ಲಿ ಭಾರೀ ಫೇಮಸ್ ಅಂತೆ ಮಾರ್ರೆ


ಈ ಅಧ್ಯಯನದ ಲೇಖಕರಲ್ಲಿ ಒಬ್ಬರಾದ ಗಿಡಿಯಾನ್ ನಾವ್, "ಈ ಅಧ್ಯಯನವು ಸರಾಸರಿ ಬಳಕೆಯನ್ನು ನೋಡಿತು, ಆದರೆ ವಾರದಲ್ಲಿ ಮತ್ತು ನಂತರ ವಾರಾಂತ್ಯದಲ್ಲಿ ಏಳು ಬಿಯರ್ ಕುಡಿಯುವುದಕ್ಕಿಂತ ದಿನಕ್ಕೆ ಒಂದು ಬಿಯರ್ ಕುಡಿಯುವುದು ಉತ್ತಮವೇ ಎಂಬುದರ ಬಗ್ಗೆ ನಮಗೆ ಇನ್ನೂ ತಿಳಿದುಕೊಳ್ಳಬೇಕು ಎಂಬುದರ ಬಗ್ಗೆ ಕುತೂಹಲವಿದೆ" ಎಂದು ಹೇಳಿದ್ದಾರೆ.

Published by:Divya D
First published: