HOME » NEWS » Lifestyle » DRINKING TOO MUCH WATER CAN RESULT IN HYPONATREMIA STG AE

Health Tips: ಹೆಚ್ಚು ನೀರು ಕುಡಿಯುವುದರಿಂದಲೂ ಅಪಾಯ ಜೋಕೆ..!

ಹೆಚ್ಚು ನೀರು ಕುಡಿಯುವುದರಿಂದ ನಮ್ಮ ದೇಹದಲ್ಲಿ ಸೋಡಿಯಂ ದುರ್ಬಲಗೊಳ್ಳುತ್ತದೆ. ಹಾಗಾದಾಗ ದೇಹದ ನೀರಿನ ಮಟ್ಟ ಹೆಚ್ಚಿ ನಮ್ಮ ದೇಹದ ಜೀವಕೋಶಗಳಲ್ಲಿ ಊತ ಉಂಟಾಗಲು ಆರಂಭವಾಗುತ್ತದೆ. ಆ ಊತ ಹಲವಾರು ಮಾರಣಾಂತಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

Trending Desk
Updated:June 3, 2021, 2:45 PM IST
Health Tips: ಹೆಚ್ಚು ನೀರು ಕುಡಿಯುವುದರಿಂದಲೂ ಅಪಾಯ ಜೋಕೆ..!
ಸಾಂದರ್ಭಿಕ ಚಿತ್ರ
  • Share this:
ಅಮೆರಿಕದಲ್ಲಿ 2007ರಲ್ಲಿ , ರೇಡಿಯೋ ಸ್ಟೇಷನ್‌ವೊಂದು ಆಯೋಜಿಸಿದ್ದ ನೀರು ಕುಡಿಯುವ ಸ್ಪರ್ಧೆಯಿಂದಾಗಿ, ಜೆನಿಫರ್ ಸ್ಟ್ರೇಂಜ್ ಎಂಬ ಮಹಿಳೆಯ ಮರಣವಾಗಿತ್ತು. ಅದಕ್ಕಾಗಿ ಆ ರೇಡಿಯೋ ಸ್ಟೇಷನ್ , ಮೃತಳ ಪತಿಗೆ 16.5 ಮಿಲಿಯನ್ ಡಾಲರ್‌ಗಳನ್ನು ಪರಿಹಾರ ಧನವಾಗಿ ನೀಡಬೇಕಾಯಿತು. ಹೈಫೊನಾಟ್ರೀಮಿಯಾ ಅಥವಾ ಅಕ್ಯೂಟ್ ವಾಟರ್ ಇಂಟಾಕ್ಸಿಕೇಶನ್‍ನಿಂದಾಗಿ ಸ್ಟ್ರೇಂಜ್ ಸಾವನ್ನಪ್ಪಿದರು. ತುರ್ತು ವೈದ್ಯಕೀಯ ಇಕಿತ್ಸೆ ದೊರೆತಿದ್ದರೆ ಅವರನ್ನು ಉಳಿಸಬಹುದಿತ್ತು ಎಂದು ವೈದ್ಯರು ಹೇಳಿದ್ದರು. 2007ರ ಜನವರಿ 12ರಂದು ನಡೆದ ಈ ಸ್ಪರ್ಧೆಯಲ್ಲಿ, ಸ್ಟ್ರೇಂಜ್, ಮೂತ್ರ ವಿಸರ್ಜನೆ ಕೂಡ ಮಾಡದೇ ನಿರಂತರ ಸುಮಾರು ಮೂರು ಗಂಟೆಗಳ ಕಾಲ ನೀರನ್ನು ಕುಡಿದಿದ್ದರು. ಪರಿಣಾಮವಾಗಿ, ಅವಳು ನೀರಿನ ವಿಷದಿಂದ ಸಾವನ್ನಪ್ಪಿದರು. ಜೀವ ಉಳಿಸಲಿಕ್ಕಾಗಿ ನೀರು ಕುಡಿಸುವುದು ಗೊತ್ತು, ಆದರೆ ನೀರು ಕುಡಿದು ಸಾಯೋದನ್ನ ಕೇಳಿದ್ದೀರಾ? ಹೈಫೊನಾಟ್ರೀಮಿಯಾದಿಂದ ಇದು ಸಾಧ್ಯ. ಏನಿದು ಹೈಫೊನಾಟ್ರೀಮಿಯಾ..! ಇಲ್ಲಿದೆ ಮಾಹಿತಿ.

ನೀರಿನ ವಿಷ! ನಿಜವೇ? ಏನಿದು ಹೈಫೊನಾಟ್ರೀಮಿಯಾ?

ಈ ಘಟನೆ ಜನರನ್ನು ಬೆಚ್ಚಿ ಬೀಳಿಸಿದ್ದು ಮಾತ್ರವಲ್ಲ, ಹೈಫೊನಾಟ್ರೀಮಿಯಾದ ಬಗ್ಗೆ ತಿಳಿದುಕೊಳ್ಳುವಂತೆ ಮಾಡಿತು. ಹೈಫೊನಾಟ್ರೀಮಿಯಾ ಎಂದರೆ, ಮನುಷ್ಯನ ರಕ್ತದಲ್ಲಿ ಸೋಡಿಯಂ ಸಾಂದ್ರತೆ ಅಸಹಜವಾಗಿ ಕಡಿಮೆ ಆಗುವ ಸ್ಥಿತಿ. ಸೋಡಿಯಂ, ನಮ್ಮ ಜೀವಕೋಶ ಮತ್ತು ಅದರ ಸುತ್ತಮುತ್ತಲು ನೀರಿನ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುವ ಎಲೆಕ್ಟ್ರೋಲೈಟ್.

Hyponatremia, Low sodium, Water, ಹೈಫೊನಾಟ್ರೀಮಿಯಾ, ಕಡಿಮೆ ಸೋಡಿಯಂ, ನೀರು, Drinking too much water can result in Hyponatremia ae
ಸಾಂದರ್ಭಿಕ ಚಿತ್ರ


ಹೆಚ್ಚು ನೀರು ಕುಡಿಯುವುದರಿಂದ ನಮ್ಮ ದೇಹದಲ್ಲಿ ಸೋಡಿಯಂ ದುರ್ಬಲಗೊಳ್ಳುತ್ತದೆ. ಹಾಗಾದಾಗ ದೇಹದ ನೀರಿನ ಮಟ್ಟ ಹೆಚ್ಚಿ ನಮ್ಮ ದೇಹದ ಜೀವಕೋಶಗಳಲ್ಲಿ ಊತ ಉಂಟಾಗಲು ಆರಂಭವಾಗುತ್ತದೆ. ಆ ಊತ ಹಲವಾರು ಮಾರಣಾಂತಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಹೈಫೊನಾಟ್ರೀಮಿಯಾ ಮತ್ತು ಕಡಿಮೆ ಸೋಡಿಯಂ ಸಂಬಂಧ
ನಮ್ಮ ದೇಹದಲ್ಲಿ ಸೋಡಿಯಂ ಮಹತ್ವದ ಪಾತ್ರ ಪಹಿಸುತ್ತದೆ. ಅದು ಸಾಮಾನ್ಯ ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ನರಗಳು ಮತ್ತು ಸ್ನಾಯುಗಳ ಕೆಲಸಕ್ಕೆ ಬೆಂಬಲ ನೀಡುತ್ತದೆ ಮತ್ತು ದೇಹದ ನೀರಿನ ಮಟ್ಟದ ಸಮತೋಲನವನ್ನು ಕಾಪಾಡುತ್ತದೆ.ಇದನ್ನೂ ಓದಿ: Disha Patani-Tiger Shroff: ದಿಶಾ ಪಟಾನಿ-ಟೈಗರ್​ ಶ್ರಾಫ್​ ವಿರುದ್ಧ ಎಫ್​ಐಆರ್​ ದಾಖಲಿಸಿದ ಮುಂಬೈ ಪೊಲೀಸರು..!

ರಕ್ತದಲ್ಲಿ ಸಾಮಾನ್ಯವಾಗಿ ಸೋಡಿಯಂ ಮಟ್ಟವು 135 ಮತ್ತು 145 ಮಿಲಿಕ್ವಿವಾಲೆಂಟ್‍ಗಳ ನಡುವೆ ಇರುತ್ತದೆ. ರಕ್ತದಲ್ಲಿನ ಸೋಡಿಯಂ 135 ಮಿಲಿಕ್ವಿವಾಲೆಂಟ್‍ಗಿಂತ ಕಡಿಮೆ ಆದಾಗ ಹೈಫೊನಾಟ್ರೀಮಿಯಾ ಉಂಟಾಗುತ್ತದೆ.

ಹೈಫೊನಾಟ್ರೀಮಿಯಾ ಅಥವಾ ರಕ್ತದಲ್ಲಿ ಸೋಡಿಯಂ ಅಪಾಯಕಾರಿ ಮಟ್ಟದಲ್ಲಿ ಕಡಿಮೆ ಆಗಲು ಕಾರಣ
1. ಕೆಲವು ಔಷಧಿಗಳು –ಖಿನ್ನತೆ ಮತ್ತು ನೋವುನಿವಾರಕ ಔಷಧಿಗಳ ಕಾರಣದಿಂದ ಸೋಡಿಯಂ ಸಾಂದ್ರತೆಯನ್ನು ಆರೋಗ್ಯಕರ ಮಟ್ಟದಲ್ಲಿ ಇಡಲು ಸಹಕಾರಿಯಾಗುವ ಸಾಮಾನ್ಯ ಹಾರ್ಮೋನಲ್ ಮತ್ತು ಕಿಡ್ನಿ ಪ್ರಕ್ರಿಯೆಗೆ ಅಡ್ಡಿಯಾಗಬಹುದು.

2. ಹೃದಯ, ಕಿಡ್ನಿ ಮತ್ತು ಲಿವರ್ ಸಮಸ್ಯೆಗಳು -ಹೃದಯ, ಕಿಡ್ನಿ ಮತ್ತು ಲಿವರ್ ಕಾಯಿಲೆಗಳ ಕಾರಣದಿಂದ ದೇಹದಲ್ಲಿ ನೀರಿನ ಸಂಗ್ರಹಣೆ ಹೆಚ್ಚಬಹುದು, ಅದರಿಂದ ಸೋಡಿಯಂ ಮಟ್ಟ ಕಡಿಮೆ ಆಗಬಹುದು.

3. ಇನ್ ಅಪ್ರೋಪ್ರಿಯೇಟ್ ಆ್ಯಂಟಿ-ಡ್ಯುರೇಟಿಕ್ ಹಾರ್ಮೋನ್ ಸಿಂಡ್ರೋಮ್- ಈ ಸಮಸ್ಯೆಯಿಂದಾಗಿ ದೇಹದಲ್ಲಿ ಅನಗತ್ಯ ನೀರು ಮೂತ್ರದ ಮೂಲಕ ಹೋಗಲು ಸಾಧ್ಯವಾಗದೆ ಹಾಗೇ ಉಳಿದುಕೊಳ್ಳುತ್ತದೆ.

4. ತೀವ್ರ ವಾಂತಿ ಅಥವಾ ಅತಿಸಾರ ಮತ್ತು ನಿರ್ಜಲೀಕರಣದ ಇತರ ಕಾರಣಗಳು-ಇದು ದೇಹದಲ್ಲಿ ಎಲೆಕ್ಟ್ರೋಲೈಟ್‍ಗಳು ಕಡಿಮೆಯಾಗಲು ಕಾರಣವಾಗಿ, ಆ್ಯಂಟಿ-ಡ್ಯುರೇಟಿಕ್ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ.

5. ಅತಿಯಾಗಿ ನೀರು ಕುಡಿಯುವುದು –ಇದು ಹೆಚ್ಚಾಗಿ ವ್ಯಕ್ತಿ ಮ್ಯಾರಥಾನ್ ಅಥವಾ ಟ್ರಯತ್ಲಾನ್‍ನಲ್ಲಿ ಭಾಗವಹಿಸಿದಾಗ ನಡೆಯುತ್ತದೆ. ಆಟಗಾರ ಬೆವರಿನ ಮೂಲಕ ಸೋಡಿಯಂ ಕಳೆದುಕೊಳ್ಳುತ್ತಿರುತ್ತಾನೆ, ಅದೇ ಸಮಯಕ್ಕೆ ಅತಿಯಾಗಿ ನೀರು ಕುಡಿಯುತ್ತಿರುತ್ತಾನೆ. ಇದು ಸೋಡಿಯಂ ಮಟ್ಟ ಕಡಿಮೆ ಆಗಿ, ಕಿಡ್ನಿಗಳು ಮೂತ್ರವನ್ನು ಹೊರ ಹಾಕದಂತಹ ಪರಿಸ್ಥಿತಿಗೆ ತಲುಪಿಸುತ್ತದೆ.

6. ಹಾರ್ಮೋನ್‍ಗಳಲ್ಲಿ ಬದಲಾವಣೆ –ಮೂತ್ರ ಜನಕಾಂಗದ ಗ್ರಂಥಿಯ ನ್ಯೂನ್ಯತೆ (ಅಡಿಸನ್ ಕಾಯಿಲೆ), ದೇಹದಲ್ಲಿ ಸೋಡಿಯಂ, ಪೊಟಾಶಿಯಂ ಮತ್ತು ನೀರಿನ ಸಮತೋಲನಕ್ಕೆ ಸಹಾಯ ಮಾಡುವ ಹಾರ್ಮೋನ್ ಉತ್ಪಾದಿಸಲು ಮೂತ್ರ ಜನಕಾಂಗಕ್ಕೆ ಅಡ್ಡಿಪಡಿಸುತ್ತದೆ. ಥೈರಾಯ್ಡ್ ಹಾರ್ಮೋನ್‍ನ ಕಡಿಮೆ ಮಟ್ಟ ಕೂಡ, ಕಡಿಮೆ ಸೋಡಿಯಂ ಮಟ್ಟಕ್ಕೆ ಕಾರಣವಾಗುತ್ತದೆ.

7. ಮನರಂಜನಾ ಔಷಧಿಯ ಭಾವೋತ್ಕರ್ಷತೆ-ಈ ಕೇಂದ್ರ ನರವ್ಯೂಹ ಪ್ರಚೋದಕ ಔಷಧಿಯು ಹೈಫೊನಾಟ್ರೀಮಿಯಾ ಮಾರಣಾಂತಕ ಪ್ರಕರಣಗಳನ್ನು ಹೆಚ್ಚಿಸುತ್ತದೆ.

8. ವಯಸ್ಸು –ವೃದ್ಧಾಪ್ಯದಲ್ಲಿ ನಿರ್ದಿಷ್ಟ ಔಷಧಿಗಳು ಮತ್ತು ದೀರ್ಘ ಕಾಲದ ಕಾಯಿಲೆಗಳು, ದೇಹದ ಸೋಡಿಯಂ ಸಮತೋಲವನ್ನು ಹಾಳು ಮಾಡುತ್ತವೆ.

ಇದನ್ನೂ ಓದಿ: Amitabh Bachchan: ಅಮಿತಾಭ್​ ಬಚ್ಚನ್​-ಜಯಾ ಬಚ್ಚನ್​ ದಾಂಪತ್ಯಕ್ಕೆ 48ರ ಸಂಭ್ರಮ...!

ಎಷ್ಟು ನೀರು ಕುಡಿಯುವುದು ಸುರಕ್ಷಿತ..?
ಅಮೆರಿಕದ ನ್ಯಾಶನಲ್ ಅಕಾಡಮಿಕ್ಸ್ ಆಫ್ ಸೈನ್ಸ್, ಎಂಜಿನಿಯರಿಂಗ್ ಮತ್ತು ಮೆಡಿಸಿನ್‍ನ , ಮಾಯೋ ಕ್ಲಿನಿಕ್ ಪ್ರಕಾರ, ದೈನಂದಿನ ನೀರು ಸೇವನೆ ಎಷ್ಟಿರಬೇಕೆಂದರೆ:
• ಪುರುಷರಿಗೆ ನಿತ್ಯ 3.7 ಲೀಟರ್
• ಮಹಿಳೆಯರಿಗೆ ನಿತ್ಯ 2.7 ಲೀಟರ್

ಇದು ಕೇವಲ ನೀರಲ್ಲದೇ ನಾವು ಸೇವಿಸುವ ಎಲ್ಲಾ ರೀತಿಯ ದ್ರವಾಹಾರವನ್ನು ಒಳಗೊಂಡಿದೆ. ಬಾಯಾರಿಕೆ ಆದಾಗಲಷ್ಟೇ ನೀರು ಕುಡಿಯಿರಿ. ಆದರೆ, ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ತಮ್ಮ ದೇಹಕ್ಕೆ ಎಷ್ಟು ನೀರಿನ ಅಗತ್ಯ ಇದೆ ಎಂಬುದನ್ನು ವೈದ್ಯರು ಅಥವಾ ತಜ್ಷರನ್ನು ಕೇಳಿ ತಿಳಿಯಬೇಕು.


Published by: Anitha E
First published: June 3, 2021, 2:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories