ಸಿಟಿಗಳಲ್ಲಿ ಸಾಮ್ಯವಾಗಿ ಆರ್‌ಒ ವಾಟರ್ ( Reverse Osmosis) ಪ್ಯುರಿಫೈಯರ್ (Purified Water) ಅನ್ನು ಎಲ್ಲರ ಮನೆಗಳಲ್ಲೂ ಕಾಣಬಹುದು. ಬೋರ್‌ವೆಲ್ ನೀರಿನ (Borewell Water) ಉಪ್ಪಿನ ಅಂಶವನ್ನು ತೆಗೆಯಲು ಹಾಗೂ ಕಲುಷಿತ ನೀರನ್ನು ಶುದ್ಧ ನೀರನ್ನಾಗಿ ಪರಿವರ್ತಿಸುವ ಈ ನೀರಿನ ಫಿಲ್ಟರ್ ಅಗತ್ಯಗಳಲ್ಲಿ ಒಂದು ಎಂಬಂತಾಗಿದೆ. ಆದರೆ ಇಂಥ ರಿವರ್ಸ್ ಆಸ್ಮೋಸಿಸ್ (RO)ವಾಟರ್ ಫಿಲ್ಟರ್ (Water Filter) ನೀರನ್ನು ನೀವು ಕುಡಿಯುತ್ತಿದ್ದರೆ ನಿಮ್ಮ ದೇಹಕ್ಕೆ ಅತ್ಯಗತ್ಯವಾದ ವಿಟಮಿನ್ ಕೊರತೆ ಉಂಟಾಗಬಹುದು ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ. ಹೌದು, ಆರ್‌ಒ ನೀರನ್ನು ಕುಡಿಯುವುದರಿಂದ ಹೆಚ್ಚಿನ ವಿಟಮಿನ್ B12 (Vitamin B12) ಕೊರತೆಯನ್ನು ಅನುಭವಿಸುತ್ತಾರೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ಏನಿದು ರಿವರ್ಸ್ ಆಸ್ಮೋಸಿಸ್(ಆರ್‌ಒ)?
ರಿವರ್ಸ್ ಆಸ್ಮೋಸಿಸ್ ಎನ್ನುವುದು ಒತ್ತಡದಲ್ಲಿ ಪೊರೆಯ ಮೂಲಕ ನೀರನ್ನು ತಳ್ಳುವಂಥ ಪ್ರಕ್ರಿಯೆಯಾಗಿದೆ. ಹಾಗೆ ತಳ್ಳುವ ಮೂಲಕ ಕಲುಷಿತ ನೀರು ಅಥವಾ ಉಪ್ಪು ನೀರಿನಿಂದ ಶುದ್ಧ ನೀರನ್ನು ಎಳೆಯುವ ವಿಧಾನ ಇದಾಗಿದೆ. ಸರಳವಾಗಿ ಹೇಳುವುದಾದರೆ ಕಲುಷಿತ ನೀರನ್ನು ಫಿಲ್ಟರ್ ಮಾಡುವ ಪ್ರಕ್ರಿಯೆ ಇದಾಗಿದೆ.
ದೇಹಕ್ಕೆ ಅತ್ಯಗತ್ಯ ವಿಟಮಿನ್ ಬಿ12!
ವಿಟಮಿನ್ ಬಿ 12 ನಮ್ಮ ದೇಹಕ್ಕೆ ಅತ್ಯಗತ್ಯವಾದ ವಿಟಮಿನ್ ಆಗಿದೆ. ಅದನ್ನು ಕೋಬಾಲಾಮಿನ್ ಎಂದೂ ಕರೆಯುತ್ತಾರೆ. ನಮ್ಮ ಮೆದುಳು ಮತ್ತು ನರ ಕೋಶಗಳ ಕಾರ್ಯ ಮತ್ತು ಬೆಳವಣಿಗೆಯಲ್ಲಿ ಈ ವಿಟಮಿನ್ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ವಿಟಮಿನ್ ಬಿ 12 ನಮ್ಮ ದೇಹದ ರಕ್ತ ಮತ್ತು ನರ ಕೋಶಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುವ ಪೋಷಕಾಂಶವಾಗಿದೆ. ಇದು ಎಲ್ಲಾ ಜೀವಕೋಶಗಳಲ್ಲಿನ ಆನುವಂಶಿಕ ವಸ್ತುವಾದ ಡಿಎನ್‌ಎ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ ಇದು ಮೆಗಾಲೊಬ್ಲಾಸ್ಟಿಕ್ ರಕ್ತಹೀನತೆಯನ್ನು ತಡೆಯಲು ಸಹಾಯ ಮಾಡುತ್ತದೆ.
ನೀರಿನಲ್ಲಿರುವ ಕೋಬಾಲ್ಟ್ ಅನ್ನು ತೆಗೆದುಹಾಕುತ್ತದೆ ಆರ್‌ಒ ವ್ಯವಸ್ಥೆ
ಎಸ್‌ಎಸ್‌ಜಿ ಆಸ್ಪತ್ರೆ ನಡೆಸಿದ ಹೊಸ ಅಧ್ಯಯನದ ಪ್ರಕಾರ, ಆರ್‌ಒ ವ್ಯವಸ್ಥೆಯು ನೀರಿನಲ್ಲಿರುವ ಕೋಬಾಲ್ಟ್ ಅನ್ನು ತೆಗೆದುಹಾಕುವುದರಿಂದ ಆರ್‌ಒ ನೀರಿನ ಬಳಕೆಯು ಅಪಾಯಕಾರಿ ಅಂಶವಾಗಿದೆ ಎಂದು ಹೇಳಲಾಗುತ್ತಿದೆ. ವಿಜ್ಞಾನಿಗಳ ಪ್ರಕಾರ, ಕೋಬಾಲ್ಟ್ ವಿಟಮಿನ್ ಬಿ 12 ನ ಅತ್ಯಗತ್ಯ ಅಂಶವಾಗಿದೆ. ಈ ಅಧ್ಯಯನದಲ್ಲಿ ಬಿ12 ಕೊರತೆಯಿರುವ 160 ರೋಗಿಗಳು ಪಾಲ್ಗೊಂಡಿದ್ದಾರೆ. ಅವರೆಲ್ಲರೂ ಸಾಮಾನ್ಯ ಮಿತಿಯೊಳಗೆ B12 ಹೊಂದಿರುವ ರೋಗಿಗಳಾಗಿದ್ದರು. ವರದಿಯ ಪ್ರಕಾರ, ಸಂಶೋಧಕರ ತಂಡವು ಲಾಜಿಸ್ಟಿಕ್ ರಿಗ್ರೆಷನ್ ಮಾದರಿಯನ್ನು ಬಳಸಿಕೊಂಡು ಅಧ್ಯಯನ ನಡೆಸಿದೆ.
ಇದರಲ್ಲಿ ವಿಟಮಿನ್ ಬಿ 12 ಕೊರತೆಯ ಮೇಲೆ ಪರಿಣಾಮ ಬೀರುವ ಅಪಾಯಕಾರಿ ಅಂಶಗಳನ್ನು ದೃಢೀಕರಿಸಲು ಮಲ್ಟಿವೇರಿಯೇಟ್ ವಿಶ್ಲೇಷಣೆಯನ್ನು ನಡೆಸಿದೆ. ಆರ್‌ಒ ನೀರನ್ನು ಕುಡಿಯಲು ಬಳಸುವವರು ನಿಯಂತ್ರಣಗಳಿಗೆ ಹೋಲಿಸಿದರೆ 3.61 ಹೆಚ್ಚಿನ ವಿಟಮಿನ್ B12 ಕೊರತೆಯನ್ನು ಅನುಭವಿಸುತ್ತಾರೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಅಲ್ಲದೇ ಸಸ್ಯಾಹಾರಿಗಳು ಮತ್ತು ಅಸ್ವಾಭಾವಿಕ ಕಪ್ಪು ಬಣ್ಣವನ್ನು ಹೊಂದಿರುವ ಜನರು ಸಹ ವಿಟಮಿನ್ ಬಿ 12 ಕೊರತೆಯನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೊಂದಿರುತ್ತಾರೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. ಅಂದಹಾಗೆ ಬರೋಡಾ ಮೆಡಿಕಲ್ ಕಾಲೇಜಿನ ಕಮ್ಯುನಿಟಿ ಮೆಡಿಸಿನ್ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕರಾದ ಡಾ.ಸಂಗೀತಾ ವಿ ಪಟೇಲ್ ಅವರು ಅಧ್ಯಯನದ ನೇತೃತ್ವ ವಹಿಸಿದ್ದರು.
ಖನಿಜರಹಿತ ನೀರು ಆರೋಗ್ಯಕ್ಕೆ ಹಾನಿಕರ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ