• Home
  • »
  • News
  • »
  • lifestyle
  • »
  • Tea Side Effects: ಟೀ ಟೀ ಟೀ ಅಂತ ಅತಿಯಾಗಿ ಟೀ ಕುಡಿತೀರಾ? ಹಾಗಾದ್ರೆ ಚಹಾದ ದುಷ್ಪರಿಣಾಮಗಳ ಬಗ್ಗೆ ಇರಲಿ ಎಚ್ಚರ

Tea Side Effects: ಟೀ ಟೀ ಟೀ ಅಂತ ಅತಿಯಾಗಿ ಟೀ ಕುಡಿತೀರಾ? ಹಾಗಾದ್ರೆ ಚಹಾದ ದುಷ್ಪರಿಣಾಮಗಳ ಬಗ್ಗೆ ಇರಲಿ ಎಚ್ಚರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೆಚ್ಚು ಚಹಾ ಕುಡಿಯುವವರು ದಿನಕ್ಕೆ ಪ್ರತಿ 2 ರಿಂದ 3 ಗಂಟೆಗಳ ನಂತರ ಅವರಿಗೆ ಚಹಾ ಬೇಕಾಗುತ್ತದೆ. ಆದಾಗ್ಯೂ ಚಹಾ ಕುಡಿಯುವುದು ಕೆಟ್ಟ ವಿಷಯವಲ್ಲ. ಆದರೆ ಸೀಮಿತ ಪ್ರಮಾಣದಲ್ಲಿ ಸೇವಿಸಿಸುವುದು ಉತ್ತಮ. ಸೀಮಿತ ಪ್ರಮಾಣದಲ್ಲಿ ಚಹಾ ಕುಡಿಯವುದು ಆರೋಗ್ಯಕ್ಕೆ ಹಾನಿ ಆಗಲ್ಲ.

  • Share this:

    ದಿನವನ್ನು (Day) ಪ್ರಾರಂಭಿಸಲು ಚಹಾ ಕುಡಿಯುವುದು (Tea Drinking) ಅಥವಾ ಅತಿಥಿಗಳ ಸ್ವಾಗತಕ್ಕೆ ಚಹಾ, ಕಚೇರಿಯಲ್ಲಿದ್ದಾಗ ಅಥವಾ ಕಚೇರಿಯಿಂದ ಹಿಂತಿರುಗಿದಾಗ ಚಹಾ ಕುಡಿಯುವುದು, ಆಯಾಸ ನಿವಾರಿಸಲು ಚಹಾ ಕುಡಿಯುವದು ಲಿಟಲ್ ಫ್ರೆಶ್ (Little Fresh) ನೀಡುತ್ತದೆ. ಒತ್ತಡದಲ್ಲಿದ್ದಾಗ (Stress) ನಾವು ಮೊದಲು ಒಂದು ಕಪ್ ಚಹಾ ಕುಡಿಯಲು ಬಯಸುತ್ತೇವೆ. ಅದೇ ವೇಳೆ ಅನೇಕ ಜನರು ಚಹಾ ಕುಡಿಯಲು ಇಷ್ಟ ಪಡುತ್ತಾರೆ. ಹೆಚ್ಚು ಚಹಾ ಕುಡಿಯುವವರು ದಿನಕ್ಕೆ ಪ್ರತಿ 2 ರಿಂದ 3 ಗಂಟೆಗಳ ನಂತರ ಅವರಿಗೆ ಚಹಾ ಬೇಕಾಗುತ್ತದೆ. ಆದಾಗ್ಯೂ ಚಹಾ ಕುಡಿಯುವುದು ಕೆಟ್ಟ ವಿಷಯವಲ್ಲ. ಆದರೆ ಸೀಮಿತ ಪ್ರಮಾಣದಲ್ಲಿ ಸೇವಿಸಿಸುವುದು ಉತ್ತಮ.


    ಸೀಮಿತ ಪ್ರಮಾಣದಲ್ಲಿ ಚಹಾ ಕುಡಿಯವುದು ಆರೋಗ್ಯಕ್ಕೆ ಹಾನಿ ಆಗಲ್ಲ.ಆದರೆ ಚಹಾ ಚಟವು ಕೆಟ್ಟ ವ್ಯಸನ ಆಗಿದೆ. ಜನರು ದಿನಕ್ಕೆ ಕನಿಷ್ಠ ಮೂರ್ನಾಲ್ಕು ಬಾರಿ ಚಹಾ ಕುಡಿಯುತ್ತಾರೆ. ನೀವೂ ಸಹ ಚಹಾ ಕುಡಿಯಲು ಇಷ್ಟ ಪಡುವವರಾಗಿದ್ದರೆ ಎಚ್ಚರಿಕೆ ವಹಿಸಿ.


    ಏಕೆಂದರೆ ನಿಮ್ಮ ಆಯಾಸ ನಿವಾರಿಸುವ ಈ ಟೀ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾದರೆ ಹೆಚ್ಚು ಚಹಾ ಸೇವನೆ ನಿಮಗೆ ಹೇಗೆ ಹಾನಿಕಾರಕ ಎಂದು ನೋಡೋಣ.


    ಇದನ್ನೂ ಓದಿ: ಅಜೀರ್ಣ ಸಮಸ್ಯೆಗೆ ಈ ಕಾಳು ಪರಿಹಾರ ಅನ್ನುತ್ತೆ ಆಯುರ್ವೇದ!


    ಅತಿಯಾಗಿ ಟೀ ಕುಡಿಯುವುದರ ದುಷ್ಪರಿಣಾಮಗಳು


    ನಿರ್ಜಲೀಕರಣ ಸಮಸ್ಯೆ


    ಹಾಲಿನ ಚಹಾ ಆಗಾಗ್ಗೆ ಕುಡಿಯುವ ಅಭ್ಯಾಸ ಅನೇಕ ಜನರಲ್ಲಿ ನಿರ್ಜಲೀಕರಣ ಉಂಟು ಮಾಡುತ್ತದೆ. ಅದೇ ವೇಳೆ ಚಹಾದಲ್ಲಿರುವ ಕೆಫೀನ್ ದೇಹಕ್ಕೆ ಹಲವು ವಿಧಗಳಲ್ಲಿ ಹಾನಿ ಮಾಡುತ್ತದೆ. ಅಲ್ಲದೆ ಇದು ದೇಹದಲ್ಲಿ ನೀರು ಸಂಗ್ರಹಗೊಳ್ಳಲು ಅನುಮತಿ ನೀಡಲ್ಲ.


    ಇದು ನಿರ್ಜಲೀಕರಣ ಉಂಟು ಮಾಡುತ್ತದೆ. ಹಾಗಾಗಿ ನೀವು ಚಹಾ ಕುಡಿಯುವ ಮೂಲಕ ಆರೋಗ್ಯ ಆಗಿರಲು ಬಯಸಿದರೆ ಅದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಲು ಪ್ರಯತ್ನಿಸಿ.


    ಮೊಡವೆ ಸಮಸ್ಯೆ


    ಹಾಲಿನಿಂದ ತಯಾರಿಸಿದ ಚಹಾ ಅತಿಯಾದ ಸೇವನೆ ನಿಮ್ಮ ಚರ್ಮದ ಮೇಲೆ ಮೊಡವೆ ಉಂಟು ಮಾಡುತ್ತದೆ. ಸೀಮಿತ ಪ್ರಮಾಣದಲ್ಲಿ ಚಹಾ ಸೇವಿಸುವುದು ದೇಹ ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.


    ಆದರೆ ಇದನ್ನು ಅನಿಯಂತ್ರಿತವಾಗಿ ತೆಗೆದುಕೊಂಡರೆ ಅದು ದೇಹದಲ್ಲಿ ಸಾಕಷ್ಟು ಶಾಖ ಉತ್ಪಾದಿಸುತ್ತದೆ. ಇದರಿಂದಾಗಿ ದೇಹದ ಹಾರ್ಮೋನುಗಳು ಅಸಮತೋಲನ ಆಗುತ್ತವೆ. ಮತ್ತು ಮೊಡವೆ ಸಮಸ್ಯೆ ಇರಬಹುದು.


    ರಕ್ತದೊತ್ತಡವು ಅಸಮತೋಲಿತ ಆಗಿರಬಹುದು


    ನೀವು ಅಗತ್ಯಕ್ಕಿಂತ ಹೆಚ್ಚು ಚಹಾ ಸೇವಿಸಿದಾಗ ಈ ಕಾರಣದಿಂದ ಕೆಲವೊಮ್ಮೆ ನಿಮ್ಮ ರಕ್ತದೊತ್ತಡವು ತುಂಬಾ ಹೆಚ್ಚಾಗುತ್ತದೆ. ಅದೇ ವೇಳೆ ಇದು ಹೃದಯ ಬಡಿತವೂ ಹೆಚ್ಚಾಗುತ್ತದೆ. ಇದು ಚಹಾದ ವಿಶ್ರಾಂತಿ ಗುಣವು ರಕ್ತದೊತ್ತಡ ಕಡಿಮೆ ಮಾಡುತ್ತದೆ. ಇದು ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.


    ನಿದ್ರಾಹೀನತೆ


    ಹಾಲಿನ ಚಹಾ ತಯಾರಿಸಲು ಬಳಸುವ ಕಪ್ಪು ಚಹಾ ಗಣನೀಯ ಪ್ರಮಾಣದ ಕೆಫೀನ್ ಹೊಂದಿದೆ. ಅದೇ ವೇಳೆ ದಿನದ ಎರಡನೇ ಭಾಗದಲ್ಲಿ ಅದರ ಸೇವನೆ ತಪ್ಪಿಸಿ. ನಿದ್ರೆ ಅಸಮತೋಲನವಾಗಬಹುದು. ಸರಿಯಾದ ಸಮಯದಲ್ಲಿ ಸೀಮಿತ ಪ್ರಮಾಣದಲ್ಲಿ ಇದನ್ನು ಸೇವಿಸುವುದು ಸಮಸ್ಯೆ ಉದ್ಭವಿಸುವುದಿಲ್ಲ. ಆದರೆ ಇದನ್ನು ಅನಿಯಂತ್ರಿತವಾಗಿ ತೆಗೆದುಕೊಂಡರೆ ನಿದ್ರೆಯ ಕೊರತೆ ಉಂಟಾಗುತ್ತದೆ. ಒಟ್ಟಾರೆ ಆರೋಗ್ಯ ಕೆಡುತ್ತದೆ.


    ಉಬ್ಬುವುದು ಸಮಸ್ಯೆ


    ಹೆಚ್ಚಿನ ಜನರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಸೇವಿಸುತ್ತಾರೆ. ಇದು ಹೊಟ್ಟೆಯನ್ನು ಉಬ್ಬುವಂತೆ ಮಾಡುತ್ತದೆ. ಏಕೆಂದರೆ ಹಾಲು ಮತ್ತು ಕೆಫೀನ್ ಎರಡೂ ಅನಿಲ ಉತ್ಪತ್ತಿ ಮಾಡುತ್ತವೆ. ಮತ್ತು ಈ ಎರಡು ಒಟ್ಟಿಗೆ ಸೇರಿದಾಗ ಅವು ಅನೇಕ ಆರೋಗ್ಯ ಅಪಾಯಗಳಿಗೆ ಕಾರಣವಾಗಬಹುದು. ಸೀಮಿತ ಪ್ರಮಾಣದಲ್ಲಿ ತೆಗೆದುಕೊಂಡರೆ ಹಾನಿ ಆಗಲ್ಲ. ರಾತ್ರಿ ಮಲಗುವ ಮೊದಲು ಚಹಾ ಕುಡಿಯುವುದು ಸಹ ಅಪಾಯಕಾರಿ.


    ಇದನ್ನೂ ಓದಿ: ಹಣ್ಣುಗಳ ಸೇವನೆ ಎಷ್ಟು ಅನುಕೂಲಕರ? ಇವುಗಳ ಜೊತೆ ಬೇರೆ ಏನನ್ನು ತಿನ್ನಬೇಕು?


    ಚಹಾ ಸೇವನೆ ಹೇಗೆ ಮಿತಿಗೊಳಿಸಬಹುದು ?


    ಚಹಾ ಸೇವನೆ ಮಿತಿಗೊಳಿಸಲು ಆರೋಗ್ಯಕರ ಪದಾರ್ಥ ಜ್ಯೂಸ್ ಕುಡಿಯಿರಿ. ಉದಾಹರಣೆಗೆ ಸ್ಮೂಥಿಗಳು, ಗಿಡಮೂಲಿಕೆ ಚಹಾಗಳು, ಹಣ್ಣಿನ ರಸಗಳು, ಇತ್ಯಾದಿ. ದೇಹವನ್ನು ಸಂಪೂರ್ಣವಾಗಿ ಹೈಡ್ರೀಕರಿಸಲು ಪ್ರಯತ್ನಿಸಿ. ಅಂದರೆ, ಸಾಕಷ್ಟು ನೀರು ಕುಡಿಯಿರಿ.

    Published by:renukadariyannavar
    First published: