• Home
  • »
  • News
  • »
  • lifestyle
  • »
  • Milk And Health: ಹಾಲು ಒಳ್ಳೆಯದು ಅಂತಾ ಹೆಚ್ಚು ಹೆಚ್ಚು ಕುಡಿದ್ರೆ ಅಪಾಯ ಫಿಕ್ಸ್​!

Milk And Health: ಹಾಲು ಒಳ್ಳೆಯದು ಅಂತಾ ಹೆಚ್ಚು ಹೆಚ್ಚು ಕುಡಿದ್ರೆ ಅಪಾಯ ಫಿಕ್ಸ್​!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತುಂಬಾ ಜನರು ಮೂಳೆಗಳ ಆರೋಗ್ಯಕ್ಕೆ ಮತ್ತು ಮೂಳೆಗಳು ಗಟ್ಟಿಯಾಗಲು ಹಾಲು ಕುಡಿಯುತ್ತಾರೆ. ಹಾಲಿನ ಹಲವು ಪದಾರ್ಥ ಸೇವನೆ ಮಾಡಬಹುದು. ಆದರೆ ನೀವು ಕುಡಿಯುವ ಹಾಲು ಎಷ್ಟು ನಿಮ್ಮ ಆರೋಗ್ಯಕ್ಕೆ ಪ್ರಯೋಜನ ತಂದು ಕೊಡುತ್ತದೆ ಎಂಬುದು ನಿಮಗೆ ಗೊತ್ತಾ?

  • Share this:

    ತುಂಬಾ ಜನರು (People) ಕ್ಯಾಲ್ಸಿಯಂ ಕೊರತೆಯಿಂದ (Calcium Deficiency) ಬಳಲುತ್ತಿರುತ್ತಾರೆ. ಅಂತವರಿಗೆ ಡೈರಿ ಉತ್ಪನ್ನಗಳಲ್ಲಿ (Dairy Products) ಒಂದಾದ ಹಾಗೂ ಕ್ಯಾಲ್ಸಿಯಂ ಸಮೃದ್ಧ ಹಾಗೂ ಹಲವು ಪೋಷಕಾಂಶ (Nutrients) ಸಮೃದ್ಧ ಹಾಲನ್ನು (Milk) ಕುಡಿಯುವಂತೆ ಸಲಹೆ ನೀಡಲಾಗುತ್ತದೆ. ಬೆಳಗ್ಗೆ ಮತ್ತು ರಾತ್ರಿ ಮಲಗುವ ಮೊದಲು ಹಾಲು ಕುಡಿಯಬೇಕು ಎಂದು ಹೇಳಲಾಗುತ್ತದೆ. ಇದು ನಿಮಗೂ ಗೊತ್ತಿರಬಹುದು.  ಕ್ಯಾಲ್ಸಿಯಂ ಕೊರತೆಯಿಂದ ಮೂಳೆಗಳ ಆರೋಗ್ಯ ಹದಗೆಡುತ್ತದೆ.  ಹೀಗಾಗಿ ತುಂಬಾ ಜನರು ಮೂಳೆಗಳನ್ನು ಬಲಿಷ್ಠಗೊಳಿಸಲು ಹಾಲು ಸೇವನೆ ಮಾಡ್ತಾರೆ. ನೀವೂ ಸಹ ಮೂಳೆಗಳು ಗಟ್ಟಿಯಾಗಲು ದಿನವೂ ಹಾಲು ಕುಡಿಯುತ್ತೀರಾ? ಹೌದು.. ಅಂತಾದ್ರೆ ಯಾವ ಪ್ರಮಾಣದಲ್ಲಿ ಹಾಲು ಕುಡಿಯುವುದು ಆರೋಗ್ಯಕರ ಎಂಬುದನ್ನು ತಪ್ಪದೇ ತಿಳಿಯಿರಿ.


    ಮೂಳೆಗಳು ಗಟ್ಟಿಯಾಗಲು ಹಾಲು ಕುಡಿಯುವ ಮುನ್ನ ಎಚ್ಚರಿಕೆ ವಹಿಸಿ


    ತುಂಬಾ ಜನರು ಮೂಳೆಗಳ ಆರೋಗ್ಯಕ್ಕೆ ಮತ್ತು ಮೂಳೆಗಳು ಗಟ್ಟಿಯಾಗಲು ಹಾಲು ಕುಡಿಯುತ್ತಾರೆ. ಹಾಲಿನ ಹಲವು ಪದಾರ್ಥ ಸೇವನೆ ಮಾಡಬಹುದು. ಆದರೆ ನೀವು ಕುಡಿಯುವ ಹಾಲು  ನಿಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನ ತಂದು ಕೊಡುತ್ತದೆ? ಎಂಬುದು ನಿಮಗೆ ಗೊತ್ತಾ?


    ಹಾಲು ಕುಡಿಯುವುದರಿಂದ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ ಎಂದು ಯಾರೂ   ಯೋಚನೆ ಮಾಡಲ್ಲ. ಯಾಕಂದ್ರೆ ಹಾಲು ಆರೋಗ್ಯವರ್ಧಕ ಎಂದು ಹೇಳಲಾಗಿದೆ. ಹಾಲಿನಲ್ಲಿ ಅನೇಕ ಪೋಷಕಾಂಶಗಳಿದ್ದು, ಅದು ದೇಹದ ಆರೋಗ್ಯ ಕಾಪಾಡಲು ಸಹಕಾರಿ ಆಗಿದೆ.




    ಹಾಲಿನಲ್ಲಿ ಕ್ಯಾಲ್ಸಿಯಂ, ಖನಿಜ, ವಿಟಮಿನ್ ಬಿ 12, ವಿಟಮಿನ್ ಡಿ, ಪ್ರೋಟೀನ್, ಪೊಟ್ಯಾಸಿಯಮ್ ಮತ್ತು ರಂಜಕ ಇದೆ. ಹಾಲು ಸೇವನೆ ಮಾಡಿದರೆ ಅದು ದುರ್ಬಲ ಮೂಳೆ ತೊಂದರೆ ನಿವಾರಿಸುತ್ತದೆ.


    ನಿದ್ರಾಹೀನತೆ ಸಮಸ್ಯೆ ನಿವಾರಿಸುತ್ತದೆ. ಮಧುಮೇಹ, ಹೃದ್ರೋಗ, ಹಲ್ಲಿನ ಆರೋಗ್ಯ ಕಾಪಾಡುತ್ತದೆ. ಆದರೆ ಅಧ್ಯಯನವೊಂದಯ ಹಾಲಿನಿಂದ ಯಾವೆಲ್ಲಾ ಆರೋಗ್ಯ ಹಾನಿ ಉಂಟಾಗುತ್ತದೆ ಎಂದು ತಿಳಿಸಿದೆ.


     ದಿನಕ್ಕೆ ಎಷ್ಟು ಹಾಲು ಸೇವಿಸುವುದು ಉತ್ತಮ?


    ಒಂದು ವರದಿ ಪ್ರಕಾರ, ಕ್ಯಾಲ್ಸಿಯಂ ಪಡೆಯಲು ಮಕ್ಕಳು ದಿನಕ್ಕೆ 2 ರಿಂದ 3 ಲೋಟ ಅಂದ್ರೆ  400 ರಿಂದ 500 ಗ್ರಾಂ ಹಾಲು ಕುಡಿಯಬೇಕು. ವಯಸ್ಕರು ದಿನಕ್ಕೆ 2 ಲೋಟ ಹಾಲು ಸೇವಿಸುವುದು ಉತ್ತಮ.


    ಹೆಚ್ಚು ಹಾಲು ಕುಡಿದರೆ ಮೂಳೆ ತೊಂದರೆ ಉಂಟಾಗುತ್ತದೆ


    ದಿನಕ್ಕೆ ಮೂರು ಗ್ಲಾಸ್ ಅಥವಾ ಅದಕ್ಕಿಂತ ಹೆಚ್ಚು ಹಾಲು ಸೇವನೆ ಮಾಡಿದರೆ ನೀವು ಮೂಳೆ ಮುರಿತ ಹಾಗೂ ಸೊಂಟ ಮುರಿತದ ಅಪಾಯ ಎದುರಿಸಬಹದು ಅಂತಾರೆ ತಜ್ಞರು. ಜೊತೆಗೆ ಪ್ರತಿದಿನ ಮೂರು ಅಥವಾ ಹೆಚ್ಚು ಗ್ಲಾಸ್ ಹಾಲು ಕುಡಿಯುವ ಮಹಿಳೆಯರಲ್ಲಿ ಸಾವಿನ ಅಪಾಯ ಹೆಚ್ಚು ಎಂದು ವರದಿಯೊಂದು ಹೇಳಿದೆ.


    ಸಾಂದರ್ಭಿಕ ಚಿತ್ರ


    ಹೆಚ್ಚು ಹಾಲು ಸೇವನೆ ಜೀರ್ಣಕ್ರಿಯೆ ಹಾಳು ಮಾಡುತ್ತದೆ


    ಹಾಲಿನಲ್ಲಿ ಲ್ಯಾಕ್ಟೋಸ್ ಎಂಬ ಅಂಶ ಇದೆ. ಹೀಗಾಗಿ ಹೆಚ್ಚು ಹಾಲು ಕುಡಿದರೆ ಗ್ಯಾಸ್ಟ್ರಿಕ್ ಸಮಸ್ಯೆ, ಹೊಟ್ಟೆ ಉಬ್ಬುವುದು, ಅತಿಸಾರ ಹಾಗೂ ಜೀರ್ಣಕಾರಿ ಸಮಸ್ಯೆ ಅಪಾಯ ಹೆಚ್ಚುತ್ತದೆ.


    ಹೆಚ್ಚು ಹಾಲು ಕುಡಿದರೆ ರೋಗ ನಿರೋಧಕ ಶಕ್ತಿ ಹಾಳಾಗುತ್ತದೆ


    ಅತಿಯಾದರೆ ಅಮೃತವೂ ವಿಷ ಎಂಬಂತೆ ಹೆಚ್ಚು ಹಾಲು ಸೇವನೆ ಮಾಡಿದರೆ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತದೆ. ಅಲರ್ಜಿ ಇರುವ ಜನರಿಗೆ ಹಾಲು ವಿಷದಂತೆ ಕೆಲಸ ಮಾಡುತ್ತದೆ. ದೇಹದಲ್ಲಿ ಲ್ಯಾಕ್ಟೋಸ್ ಪ್ರಮಾಣ ಹೆಚ್ಚಾದರೆ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಕೆಡುತ್ತದೆ.


    ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಪಡೆಯಲು ಈ ಆಹಾರ ಸೇವಿಸಿ


    ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಪಡೆಯಲು ಪನೀರ್, ಮೊಸರು, ಗ್ರೀನ್ಸ್, ಸೋಯಾಬೀನ್, ಅಂಜೂರ ಹಣ್ಣುಗಳು, ಬ್ರೊಕೊಲಿ, ಕಿತ್ತಳೆ ಸೇವಿಸಿ. ಇವುಗಳನ್ನು ಹಾಲಿನ ಜೊತೆ ಬೆರೆಸಿ ಸೇವಿಸಿ.


    ಇದನ್ನೂ ಓದಿ: ಬಿಡದೇ ಕಾಡುವ ತಲೆನೋವಿಗೆ ಆಯುರ್ವೇದ ಚಹಾದಲ್ಲೇ ಇದೆ ಪರಿಹಾರ!


    ಹಸುವಿನ ಹಾಲು ಉತ್ತಮ


    ಹಸುವಿನ ಹಾಲನ್ನು ದೈನಂದಿನ ಸೇವನೆಗೆ ಆರೋಗ್ಯಕರ ಮತ್ತು ಉತ್ತಮ ಅಂತಾರೆ ತಜ್ಞರು. ಹಾಲನ್ನು ರಾತ್ರಿ ಕುಡಿಯುವುದು ಒಳ್ಳೆಯದು. ಇದು ಉತ್ತಮ ನಿದ್ದೆ ಹೊಂದಲು ಮತ್ತು ಬೆಳಗ್ಗೆ ಹೊಟ್ಟೆ ಚೆನ್ನಾಗಿ ಸ್ವಚ್ಛವಾಗಲು ಸಹಕಾರಿ.

    Published by:renukadariyannavar
    First published: