• Home
  • »
  • News
  • »
  • lifestyle
  • »
  • Milk And Dates: ಹಾಲಿನ ಜೊತೆ ಖರ್ಜೂರ ತಿಂದ್ರೆ ನೆನಪಿನ ಶಕ್ತಿ ಹೆಚ್ಚಾಗುತ್ತಂತೆ

Milk And Dates: ಹಾಲಿನ ಜೊತೆ ಖರ್ಜೂರ ತಿಂದ್ರೆ ನೆನಪಿನ ಶಕ್ತಿ ಹೆಚ್ಚಾಗುತ್ತಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇತರೆ ಆಹಾರಗಳಿಗೆ ಹೋಲಿಸಿದರೆ ಖರ್ಜೂರ ಮತ್ತು ಹಾಲು ಆರೋಗ್ಯ ವರ್ಧಕ ಗುಣಗಳಿಂದ ಕೂಡಿವೆ. ಖರ್ಜೂರದಲ್ಲಿ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ ಮತ್ತು ಫೈಬರ್ ಅಧಿಕವಾಗಿದೆ. ಇದು ಪ್ರೋಟೀನ್ ಮತ್ತು ಅಮೈನೋ ಆಮ್ಲಗಳ ಅತ್ಯುತ್ತಮ ಮೂಲ ಎಂಬುದು ಗೊತ್ತಿರಲಿ.

  • Share this:

    ರಾತ್ರಿ (Night) ಹಾಲಿನ (Milk) ಜೊತೆ ಖರ್ಜೂರ (Dates) ಸೇವನೆ ಮಾಡುವುದು ಅನೇಕ ಆರೋಗ್ಯ ಪ್ರಯೋಜನ (Health Benefits) ನೀಡುತ್ತದೆ ಎಂಬುದು ತುಂಬಾ ಜನರಿಗೆ (People) ಗೊತ್ತಿಲ್ಲ. ಖರ್ಜೂರ ಸೇವನೆ ಮಾಡುವುದು ದೇಹದ ಉತ್ತಮ ಕಾರ್ಯ ನಿರ್ವಹಣೆಗೆ ಅಗತ್ಯವಾಗಿ ಬೇಕಾದ ಎಲ್ಲಾ ರೀತಿಯ ಪೋಷಕಾಂಶಗಳನ್ನು ನೀಡುತ್ತದೆ. ಇತರೆ ಆಹಾರಗಳಿಗೆ ಹೋಲಿಸಿದರೆ ಖರ್ಜೂರದಲ್ಲಿ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ ಮತ್ತು ಫೈಬರ್ ಅಧಿಕವಾಗಿದೆ. ಇದು ಪ್ರೋಟೀನ್ ಮತ್ತು ಅಮೈನೋ ಆಮ್ಲಗಳ ಅತ್ಯುತ್ತಮ ಮೂಲ ಎಂಬುದು ಗೊತ್ತಿರಲಿ. ಜೊತೆಗೆ ಇದು ವಿಟಮಿನ್ ಎ, ಸಿ ಮತ್ತು ಇ ಸೇರಿದಂತೆ ಬಿ ಗುಂಪಿನ ಜೀವಸತ್ವಗಳು ಇದರಲ್ಲಿ ಇವೆ.


    ಖರ್ಜೂರದಲ್ಲಿದೆ ವಿಟಮಿನ್, ಖನಿಜ


    ಖರ್ಜೂರದಲ್ಲಿ ಸೆಲೆನಿಯಮ್, ಫಾಸ್ಫರಸ್, ಫ್ಲೋರಿನ್, ಕ್ಯಾಲ್ಸಿಯಂ, ಸತು, ಪೊಟ್ಯಾಸಿಯಮ್, ತಾಮ್ರ, ಸಲ್ಫರ್, ಕೋಬಾಲ್ಟ್ ಮತ್ತು ಕಬ್ಬಿಣದ ಅಂಶ ಹೇರಳವಾಗಿದೆ.


    ಹಾಲಿನಲ್ಲಿರುವ ಗುಣಗಳು


    ಹಾಲು ಕ್ಯಾಲೋರಿ, ಪ್ರೋಟೀನ್, ಆರೋಗ್ಯಕರ ಕೊಬ್ಬು, ಕ್ಯಾಲ್ಸಿಯಂ, ವಿಟಮಿನ್ ಡಿ, ರೈಬೋಫ್ಲಾವಿನ್ ಬಿ2 ಮತ್ತು ವಿಟಮಿನ್ ಬಿ 12, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ನಂತಹ ಅಂಶಗಳ ನಿಧಿ ಆಗಿದೆ. ನಿರ್ದೇಶಕಿ ಮತ್ತು ಪೌಷ್ಟಿಕ ತಜ್ಞೆ ಹಾಗೂ


    ಇದನ್ನೂ ಓದಿ: ತ್ವಚೆಯ ಸಮಸ್ಯೆ ಇದ್ದಾಗ ಯಾವ ಪದಾರ್ಥಗಳ ಸೇವನೆ ತಪ್ಪಿಸಬೇಕು?


    ಡಯೆಟಿಷಿಯನ್, ಫ್ಯಾಟ್ ಟು ಸ್ಲಿಮ್ ಶಿಖಾ ಅಗರ್ವಾಲ್ ಶರ್ಮಾ ಹೇಳುವ ಪ್ರಕಾರ, ಹಾಲು ಮತ್ತು ಖರ್ಜೂರವನ್ನು ಒಟ್ಟಿಗೆ ಸೇವಿಸಿದಾಗ ದೇಹವು ಬಲಗೊಳ್ಳುತ್ತದೆ. ಮತ್ತು ಅನೇಕ ರೋಗಗಳು ದೂರವಾಗುತ್ತವೆ.


    ಸ್ನಾಯುಗಳ ಶಕ್ತಿ ಹೆಚ್ಚಿಸುತ್ತದೆ


    ದೇಹಕ್ಕೆ ಪ್ರೋಟೀನ್ ಅತ್ಯಗತ್ಯ. ಹಾಗೆಯೇ ಹಾಲು ಮತ್ತು ಖರ್ಜೂರ ಈ ಎರಡೂ ಪದಾರ್ಥಗಳು ಪ್ರೋಟೀನ್‌ ನ ಉತ್ತಮ ಮೂಲವಾಗಿದೆ. ಖರ್ಜೂರ ಮತ್ತು ಹಾಲು ಎರಡೂ ಗಮನಾರ್ಹ ಪ್ರೋಟೀನ್ ಅಂಶ ಹೊಂದಿದೆ. ಹಾಗೂ ಎರಡನ್ನೂ ಒಟ್ಟಿಗೆ ತಿನ್ನುವುದು ಮೂಳೆ ಸಾಂದ್ರತೆ ಹೆಚ್ಚಿಸುತ್ತದೆ ಮತ್ತು ಸ್ನಾಯುವಿನ ದ್ರವ್ಯರಾಶಿ ಹೆಚ್ಚಿಸುತ್ತದೆ.


    ಲೈಂಗಿಕ ಆರೋಗ್ಯ ಸುಧಾರಿಸುತ್ತವೆ ಹಾಲು ಮತ್ತು ಖರ್ಜೂರ


    ಮಾನಸಿಕ ಮತ್ತು ದೈಹಿಕ ಆರೋಗ್ಯದಂತೆಯೇ, ಉತ್ತಮ ಜೀವನಕ್ಕಾಗಿ ಸಮತೋಲಿತ ಲೈಂಗಿಕ ಆರೋಗ್ಯ ಸಹ ತುಂಬಾ ಮುಖ್ಯ ಆಗಿದೆ. ಲೈಂಗಿಕ ಸಾಮರ್ಥ್ಯ ಹೆಚ್ಚಿಸಲು ಕೆಲವು ಖರ್ಜೂರವನ್ನು ರಾತ್ರಿ ಹಾಲಿನಲ್ಲಿ ನೆನೆಸಿ ನಂತರ ಬೆಳಿಗ್ಗೆ ಆ ಹಾಲನ್ನು ಕುಡಿಯುವುದು ಉತ್ತಮ.


    ಹಾಲು ಮತ್ತು ಖರ್ಜೂರ ಶಕ್ತಿಯ ಮಟ್ಟ ವೇಗವಾಗಿ ಹೆಚ್ಚಿಸುತ್ತದೆ


    ಗ್ಲೂಕೋಸ್ ಮತ್ತು ಫ್ರಕ್ಟೋಸ್‌ ಪೋಷಕಾಂಶಗಳು ಖರ್ಜೂರದಲ್ಲಿ ಸಮೃದ್ಧವಾಗಿದೆ. ಬೆಳಗಿನ ತಿಂಡಿಯಲ್ಲಿ  ಖರ್ಜೂರ ಮತ್ತು ಹಾಲಿನ ಸೇವನೆ ನಿಮ್ಮ ಹೊಟ್ಟೆ ದೀರ್ಘ ಕಾಲ ತುಂಬಿಡಲು ಸಹಕಾರಿ. ಈ ಮಿಶ್ರಣವು ನಿಮಗೆ ಸಂಪೂರ್ಣ ಶಕ್ತಿ ನೀಡುತ್ತದೆ.


    ರಕ್ತಹೀನತೆಗೆ ಉತ್ತಮ ಚಿಕಿತ್ಸೆ


    ಖರ್ಜೂರದಲ್ಲಿ ಈಗಾಗಲೇ ಇರುವ ಅನೇಕ ಪದಾರ್ಥಗಳಲ್ಲಿ ಕಬ್ಬಿಣವೂ ಒಂದು. ಅದು ದೇಹದ ರಕ್ತ ಪೂರೈಕೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಇದು ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಪರಿಹಾರ ನೀಡುತ್ತದೆ. ಒಂದು ಲೋಟ ಬೆಚ್ಚಗಿನ ಹಾಲಿನೊಂದಿಗೆ ಕೇವಲ 3 ಖರ್ಜೂರ ಬೆರೆಸಿ ಸೇವಿಸಿ, ಪ್ರಯೋಜನ ಪಡೆಯಿರಿ.


    ಜೀರ್ಣಕ್ರಿಯೆಗೆ ಸಹಕಾರಿ


    ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಕಡಿಮೆ ಮಾಡಲು ಸಹಕಾರಿ ಆಗಿದೆ ಖರ್ಜೂರ. ಖರ್ಜೂರದಲ್ಲಿರುವ ಫೈಬರ್ ಹೊಂದಿಕೊಳ್ಳುವ ಜೀರ್ಣಕ್ರಿಯೆ ಮತ್ತು ಆರೋಗ್ಯಕರ ಕರುಳಿನ ಚಲನೆಗೆ ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಸಮಸ್ಯೆ ತಡೆಯುತ್ತದೆ.


    ನೆನಪಿನ ಶಕ್ತಿ ಹೆಚ್ಚಿಸುತ್ತದೆ


    ಹಾಲು ಮತ್ತು ಖರ್ಜೂರದ ಮಿಶ್ರಣವು ಸ್ಮರಣಾಶಕ್ತಿ ಸುಧಾರಿಸುತ್ತದೆ. ಏಕೆಂದರೆ ಇದು ವಿಟಮಿನ್ ಬಿ 6 ಹೊಂದಿದೆ. ಇದು ನಿಮ್ಮ ಒಟ್ಟಾರೆ ಮೆದುಳಿನ ಆರೋಗ್ಯ ಸುಧಾರಿಸುತ್ತದೆ. ಇವುಗಳ ಸೇವನೆ ಉತ್ತಮ.


    ಇದನ್ನೂ ಓದಿ: ಮೂಳೆಗಳ ಕಾಯಿಲೆಗೆ ಕಾರಣವಾಗುವ ಲೂಬ್ರಿಕಂಟ್ ಎಂದರೇನು? ಇದನ್ನು ಪೂರೈಸುವ ಪದಾರ್ಥಗಳಿವು!


    ಕೀಲು ನೋವು ದೂರವಾಗುತ್ತದೆ


    ಹಾಲಿನಲ್ಲಿ ಆರೋಗ್ಯಕರ ಪ್ರಮಾಣದ ಕ್ಯಾಲ್ಸಿಯಂ ಇದೆ. ಇದಕ್ಕೆ ಖರ್ಜೂರ ಸೇರಿಸಿದಾಗ ಅದರ ಪ್ರಯೋಜನ ದುಪ್ಪಟ್ಟಾಗುತ್ತವೆ. ಮೂಳೆ ಸಾಂದ್ರತೆ ಹೆಚ್ಚಿಸುವ ಮೂಲಕ ಈ ಪಾನೀಯವು ಕೀಲು ನೋವನ್ನು ಕಡಿಮೆ ಮಾಡಲು ಸಹಕಾರಿ.

    Published by:renukadariyannavar
    First published: