ಎಚ್ಚರ: ನೀವು ಬಿಸಿ ಬಿಸಿ ಚಹಾ ಕುಡಿಯುತ್ತೀರಾ..! ಹಾಗಿದ್ರೆ ತಪ್ಪದೇ ಇದನೊಮ್ಮೆ ಓದಿ

ಇಂಟರ್ನಾಷ್ಯನಲ್ ಜರ್ನಲ್ ಆಫ್ ಕ್ಯಾನ್ಸರ್​ ಬಿಡುಗಡೆ ಮಾಡಿರುವ ವರದಿ ಪ್ರಕಾರ, 60 ಡಿಗ್ರಿ ಸೆಲ್ಸಿಯಸ್ ಅಥವಾ 140 ಡಿಗ್ರಿ ಫಾರ್ಹನ್ಹೀಟ್​ಗಿಂತ ಹೆಚ್ಚು ಬಿಸಿಯಾಗಿರುವ ಚಹಾ ಕುಡಿದರೆ ಅನ್ನನಾಳದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿದೆ.

zahir | news18
Updated:May 29, 2019, 2:47 PM IST
ಎಚ್ಚರ: ನೀವು ಬಿಸಿ ಬಿಸಿ ಚಹಾ ಕುಡಿಯುತ್ತೀರಾ..! ಹಾಗಿದ್ರೆ ತಪ್ಪದೇ ಇದನೊಮ್ಮೆ ಓದಿ
@HT
  • News18
  • Last Updated: May 29, 2019, 2:47 PM IST
  • Share this:
ಚುಮು ಚುಮು ಚಳಿಯಲ್ಲಿ ಬೆಳಗ್ಗೆ ಎದ್ದಾಗ ಬಿಸಿ ಬಿಸಿ ಚಹಾ ಕುಡಿದರೆ ಮನಸ್ಸಿಗೆ ಅದೇನೋ ಆನಂದ. ಒಂದು ಕಪ್ ಟೀ ಕುಡಿದರೆ ಹೊಸ ಉಲ್ಲಾಸದೊಂದಿಗೆ ದಿನಚರಿ ಆರಂಭವಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ಹೀಗಾಗಿಯೇ ಭಾರತ ಸೇರಿದಂತೆ ಹಲವು ದೇಶಗಳ ಮುಖ್ಯ ಪೇಯವಾಗಿ ಇಂದು ಚಹಾ ಗುರುತಿಸಿಕೊಂಡಿದೆ. ಆದರೆ ಫ್ರೆಶ್​ನೆಸ್​ಗಾಗಿ ನೀವು ಕುಡಿಯುವ ಚಹಾ ಕೂಡ ಅಪಾಯಕಾರಿ ಎನ್ನುತ್ತದೆ ಅಧ್ಯಯನವೊಂದು.

ಸಾಮಾನ್ಯವಾಗಿ ಹೆಚ್ಚಿನವರು ಬಿಸಿ ಬಿಸಿ ಚಹಾವನ್ನೇ ಬಯಸುತ್ತಾರೆ. ಟೀ ಸ್ವಲ್ಪ ತಣ್ಣಗಾದರೂ ಕುಡಿಯಲು ಹಿಂದೆ ಮುಂದೆ ನೋಡುವವರೇ ಹೆಚ್ಚು. ಆದರೆ ಬಿಸಿ ಬಿಸಿ ಅಭ್ಯಾಸವೇ ನಿಮಗೆ ಅನ್ನನಾಳದ ಕ್ಯಾನ್ಸರ್ ಉಂಟು ಮಾಡುತ್ತದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಇಂಟರ್ನಾಷ್ಯನಲ್ ಜರ್ನಲ್ ಆಫ್ ಕ್ಯಾನ್ಸರ್​ ಬಿಡುಗಡೆ ಮಾಡಿರುವ ವರದಿ ಪ್ರಕಾರ, 60 ಡಿಗ್ರಿ ಸೆಲ್ಸಿಯಸ್ ಅಥವಾ 140 ಡಿಗ್ರಿ ಫಾರ್ಹನ್ಹೀಟ್​ಗಿಂತ ಹೆಚ್ಚು ಬಿಸಿಯಾಗಿರುವ ಚಹಾ ಕುಡಿದರೆ ಅನ್ನನಾಳದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಹೆಚ್ಚು ಬಿಸಿಯಾಗಿರುವ ಟೀ ಕುಡಿಯುವ ಅಭ್ಯಾಸವು ಅಪಾಯಕಾರಿ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

ಮನುಷ್ಯನ ದೇಹದಲ್ಲಿ ಆಹಾರ ಸರಬರಾಜು ಮಾಡುವಂತಹ ಕಾರ್ಯ ನಿರ್ವಹಿಸುವ ಅನ್ನನಾಳದ ಮೇಲೆ ಪರಿಣಾಮ ಬೀರಿದರೆ, ಅದು ಮಾರಕವಾಗಬಹುದು. ಈಗಾಗಲೇ ವಿಶ್ವದಲ್ಲಿ ಕ್ಯಾನ್ಸರ್​ ಸಾವಿಗೆ ಇದು ಒಂದು ಕಾರಣವಾಗಿದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.

ಈ ಅಧ್ಯಯನಕ್ಕಾಗಿ 40 ರಿಂದ 75ರ ಹರೆಯದ 50,045 ಜನರನ್ನು ಪರೀಕ್ಷಿಸಲಾಗಿತ್ತು. ಇವರಲ್ಲಿ ಹೆಚ್ಚಿನವರು ಬಿಸಿ ಬಿಸಿ ಚಹಾ ಕುಡಿಯುವ ಅಭ್ಯಾಸವನ್ನು ರೂಢಿಸಿಕೊಂಡಿದ್ದರು. ಇಂತಹವರಲ್ಲಿ ಅನ್ನನಾಳದ ಮೇಲಿನ ಮಾರಕ ಕ್ಯಾನ್ಸರ್​ ಅಪಾಯ ಕಂಡು ಬಂದಿದೆ. 60 ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚಿನ ಬಿಸಿಯಲ್ಲಿ ಚಹಾ ಕುಡಿಯುವವರಲ್ಲಿ ಕ್ಯಾನ್ಸರ್ ಮಹಾಮಾರಿಯ ಅಪಾಯದ ಪ್ರಮಾಣ ಶೇ.90 ರಷ್ಟು ಹೆಚ್ಚು ಎಂಬುದು ಈ ಅಧ್ಯಯನದಿಂದ ತಿಳಿದು ಬಂದಿದೆ.

ಇದನ್ನೂ ಓದಿ: 'ಸಲಗ' ಸಖತ್ ಸೌಂಡ್: ಚಿತ್ರದಲ್ಲಿ 'ಡಾಲಿ' ಡಾನ್ ಅಲ್ವಂತೆ!

ಹೆಚ್ಚು ಬಿಸಿಯಾಗಿರುವ ಚಹಾ ನೇರವಾಗಿ ಅನ್ನನಾಳದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಹೆಚ್ಚು ಬಿಸಿಯಾಗಿರುವ ಪಾನೀಯ ಕುಡಿಯುವುದರ ಬದಲು ತಣ್ಣಗಾಗುವಾಗ ಕುಡಿಯುವುದು ಉತ್ತಮ ಎಂದಿದ್ದಾರೆ ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ ವೈದ್ಯರಾದ ಡಾ.ಫರ್ಹಾ ಇಸ್ಲಾಮಿ.ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ 'ರಾಬರ್ಟ್'​ ಅಡ್ಡಾದಲ್ಲಿ 'ಟೈಗರ್' ಘರ್ಜನೆ..!

First published:May 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ