ಹೊತ್ತಲ್ಲದ ಹೊತ್ತಲ್ಲಿ ಗ್ರೀನ್‌ ಟೀ ಸೇವಿಸಿದರೆ ಹಾನಿ ಖಂಡಿತಾ..!

ಗ್ರೀನ್ ಟೀ ಕುಡಿಯುವುದು ಉತ್ತಮ. ಆದರೆ ಅದು ಬೆಳಗಿನ ಹೊತ್ತಲ್ಲಿ ಎಂಬುದು ನೆನಪಿರಲಿ. ನೀವು ರಾತ್ರಿಯಲ್ಲಿ ವೇಳೆ ಈ ಚಹಾವನ್ನು ಕುಡಿಯುವುದರಿಂದ ಅನೇಕ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ಗ್ರೀನ್​ ಟೀ (Photo:Google)

ಗ್ರೀನ್​ ಟೀ (Photo:Google)

  • Share this:
ಗ್ರೀನ್ ಟೀ ಕುಡಿಯುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ ಎಂಬುದು ಎಲ್ಲರಿಗೂ ತಿಳಿದೇ ಇದೆ. ಕೇವಲ ಆರೋಗ್ಯ ಮಾತ್ರವಲ್ಲ, ಗ್ರೀನ್‌ ಟೀ ಸೇವನೆ ನಿಮ್ಮ ಚರ್ಮ ಮತ್ತು ಕೂದಲ ಸೌಂದರ್ಯದ ಹೆಚ್ಚಿಸುವುದಕ್ಕೂ ಸಹಕಾರಿ. ಹಾಗಾಗಿ, ಬಹಳಷ್ಟು ಮಂದಿಗೆ ಹಸಿರು ಚಹಾವೆಂದರೆ ಅಚ್ಚುಮೆಚ್ಚು. ಗ್ರೀನ್‌ ಟೀ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದ ಮಾತ್ರಕ್ಕೆ ಅದನ್ನು ಮನ ಬಂದಂತೆ ಸೇವಿಸುವ ಹಾಗಿಲ್ಲ. ದಿನದ ಕೆಲವು ವೇಳೆಗಳಲ್ಲಿ ಗ್ರೀನ್‌ ಟೀ ಸೇವಿಸುವಂತಿಲ್ಲ ಎಂಬುದು ನಿಮಗೆ ತಿಳಿದಿದೆಯೇ? ಹೌದು, ದಿನದ ಕೆಲವು ನಿರ್ದಿಷ್ಟ ವೇಳೆಯಲ್ಲಿ ಹಸಿರು ಚಹಾ ಸೇವಿಸಿದರೆ, ಅದರಿಂದ ನಿಮಗೆ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು.

ಸಾಮಾನ್ಯವಾಗಿ ಫಿಟ್‌ನೆಸ್‌ ಪ್ರಿಯರು ಗ್ರೀನ್ ಟೀ ಕುಡಿಯುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಇದಕ್ಕೆ ಒಂದು ಕಾರಣ ಗ್ರೀನ್ ಟೀ ಸೇವಿಸುವುದರಿಂದ ಸಿಗುವ ಆರೋಗ್ಯಕಾರಿ ಪ್ರಯೋಜನಗಳು. ಆದರೆ ಇದುವೇ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರಲಿದೆ ಎಂದರೆ..! ಆಶ್ಚರ್ಯವಾಗುತ್ತದೆಯಲ್ಲವೇ. ಹೌದು, ಗ್ರೀನ್ ಟೀ ಕುಡಿಯುವುದು ಉತ್ತಮ. ಆದರೆ ಅದು ಬೆಳಗಿನ ಹೊತ್ತಲ್ಲಿ ಎಂಬುದು ನೆನಪಿರಲಿ. ನೀವು ರಾತ್ರಿಯಲ್ಲಿ ವೇಳೆ ಈ ಚಹಾವನ್ನು ಕುಡಿಯುವುದರಿಂದ ಅನೇಕ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

White Tea, Tamil Nadu, Nilgiri District, Auction, International Tea day,ಬಿಳಿ ಚಹಾ, ತಮಿಳುನಾಡು, ನೀಲಗಿರಿ ಜಿಲ್ಲೆ, ಹರಾಜು, ಅಂತರಾಷ್ಟ್ರೀಯ ಟೀ ದಿನ, Tamil Nadu Nilgiri Silver needle White Tea sold for rs 16 thousand 400 per KG at international Tea auction stg ae
ಸಾಂದರ್ಭಿಕ ಚಿತ್ರ


ಗ್ರೀನ್​ ಟೀ ಕುಡಿಯಬೇಡಿ ಹಾಗಾದರೆ ಗ್ರೀನ್‌ ಟೀ ಯಾವಾಗ ಸೇವಿಸಬಾರದು:

1. ಮಲಗುವ ಮುನ್ನನಿಮಗೆ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ, ಮಲಗುವ ಮುನ್ನ ಗ್ರೀನ್‌ ಟೀ ಸೇವಿಸಲೇಬೇಡಿ. ಗ್ರೀನ್‌ ಟೀ ಸೇವನೆಯಿಂದ ಆರಾಮ ಸಿಗುತ್ತದೆ ನಿಜ, ಆದರೆ ನಿದ್ರೆ ಬರುವುದಿಲ್ಲ. ಯಾಕೆಂದರೆ, ಅದರಲ್ಲಿರುವ ಕೆಫಿನ್, ಮೆಲಟೊನಿನ್ ಬಿಡುಗಡೆಗೆ ಭಂಗ ತರುವ ಮೂಲಕ , ನಿಮಗೆ ಸುಖ ನಿದ್ರೆ ಬಾರದಂತೆ ಮಾಡಬಹುದು.

ಇದನ್ನೂ ಓದಿ: Priyanka Chopra: ತೊಟ್ಟ ವಿನ್ಯಾಸಿತ ಡ್ರೆಸ್​ನಿಂದಲೇ ಮತ್ತೆ ಟ್ರೋಲಾದ ಪ್ರಿಯಾಂಕಾ ಚೋಪ್ರಾ..!

2. ಬೆಳಗ್ಗೆ ಎದ್ದ ಕೂಡಲೆ ಖಾಲಿ ಹೊಟ್ಟೆಯಲ್ಲಿ ಗ್ರೀನ್‌ ಟೀ ಸೇವಿಸುವುದರಿಂದ, ನಿಮ್ಮ ಚಯಾಪಚಯ ಕ್ರಿಯೆಗೆ ಒಳ್ಳೆಯ ಆರಂಭ ಸಿಗುತ್ತದೆ ಎಂದು ನೀವು  ನಂಬಿರಬಹುದು, ಆದರೆ ವಿಷಯ ಹಾಗಿಲ್ಲ. ಗ್ರೀನ್‌ ಟೀಯಲ್ಲಿ ಇರುವ ಪ್ರಬಲ ಆ್ಯಂಟಿಆ್ಯಕ್ಸಿಡೆಂಟ್‍ಗಳು ಮತ್ತು ಪಾಲಿಫೆನಾಲ್ಸ್ ಗ್ಯಾಸ್ಟ್ರಿಕ್ ಆ್ಯಸಿಡ್‍ನ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಅದರಿಂದ ನಿಮ್ಮ ಹೊಟ್ಟೆಯಲ್ಲಿ ಕಿರಿಕಿರಿ ಉಂಟಾಗಬಹುದು.

3. ಔಷಧಿ ತೆಗೆದುಕೊಂಡ ಕೂಡಲೆಗ್ರೀನ್‌ ಟೀ ಜೊತೆಗೆ ಔಷಧಿ ತೆಗೆದುಕೊಳ್ಳುವ ಅಭ್ಯಾಸ ನಿಮಗಿದ್ದರೆ, ಅದನ್ನು ನಿಲ್ಲಿಸಿ. ಗ್ರೀನ್‌ ಟೀಯೊಂದಿಗೆ ಔಷಧಿ ಸೇವಿಸುವುದು ಅಥವಾ ಔಷಧಿ ತೆಗೆದುಕೊಂಡ ಕೂಡಲೇ ಗ್ರೀನ್‌ ಟೀ ಸೇವಿಸುವುದು ಹಾನಿಕಾರಕ ಆಗಬಹುದು. ಔಷಧಿಗಳಲ್ಲಿ ಇರುವ ರಾಸಾಯನಿಕಗಳು, ಗ್ರೀನ್‌ ಟೀಯೊಂದಿಗೆ ರಿಯಾಕ್ಟ್‌ ಮಾಡಿ, ಆ್ಯಸಿಡಿಟಿಗೆ ಕಾರಣ ಆಗಬಹುದು. ನಿಮ್ಮ ಔಷಧಿಗಳನ್ನು ಯಾವಾಗಲೂ ನೀರಿನೊಂದಿಗೆ ಸೇವಿಸಿ.

4. ಊಟದ ಜೊತೆಗೆ ಅಥವಾ ಊಟವಾದ ಕೂಡಲೆಗ್ರೀನ್‌ ಟೀ ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ. ಆದರೆ ನೀವು ಊಟದ ಜೊತೆ ಗ್ರೀನ್‌ ಟೀ ಸೇವಿಸಿದರೆ ಅಥವಾ ಊಟವಾದ ಮರುಕ್ಷಣವೇ ಹಸಿರು ಚಹಾ ಸೇವಿಸಿದರೆ, ಅದು ಆಹಾರದಿಂದ ಪೋಷಕಾಂಶಗಳಲ್ಲಿ ಹೀರಿಕೊಳ್ಳುವ ಪ್ರಕಿಯೆಯನ್ನು ಕುಗ್ಗಿಸುತ್ತದೆ. ಇದು ದೀರ್ಘಕಾಲಕದ ಅಪೌಷ್ಠಿಕತೆಗೆ ಕಾರಣವಾಗಬಹುದು. ಹಾಗಾಗಿ, ನೀವು ಊಟದ ಜೊತೆ ಅಥವಾ ಊಟವಾದ ಮರುಕ್ಷಣವೇ ಹಸಿರು ಚಹಾ ಸೇವಿಸಬೇಡಿ. ಊಟ ಮತ್ತು ಹಸಿರು ಚಹಾ ಸೇವನೆಯ ನಡುವೆ ಕನಿಷ್ಠ ಒಂದು ಗಂಟೆಯ ಅಂತರ ಇರುವ ಹಾಗೆ ನೋಡಿಕೊಳ್ಳಿ.

ಇದನ್ನೂ ಓದಿ: Kareena Kapoor: 2ನೇ ಮಗುವಿಗೆ ಗರ್ಭಿಣಿಯಾಗಿದ್ದಾಗ ತೆಗೆದಿದ್ದ ಫೋಟೋಗಳನ್ನು ಶೇರ್​ ಮಾಡಿದ ಕರೀನಾ ಕಪೂರ್​..!

ದಿನಕ್ಕೆ ಮೂರು ಕಪ್‍ಗಿಂತ ಹೆಚ್ಚು ಗ್ರೀನ್‌ ಟೀ ಸೇವಿಸಿದರೆ, ನಿರ್ಜಲೀಕರಣ ಉಂಟಾಗುತ್ತದೆ. ಅಷ್ಟು ಮಾತ್ರವಲ್ಲ ಗ್ರೀನ್‌ ಟೀ ಅತಿಯಾದ ಸೇವನೆ ದೇಹದಿಂದ ಅಗತ್ಯ ಪೋಷಕಾಂಶಗಳು ಹೊರ ಹೋಗುವಂತೆ ಮಾಡಬಹುದು. ಹಾಗಾಗಿ , ಗ್ರೀನ್‌ ಟೀ ಸೇವನೆ ಮಿತಿಯಲ್ಲಿ ಇರಲಿ.
Published by:Anitha E
First published: