Coffee And Lemon: ಕಾಫಿಗೆ ನಿಂಬೆರಸ ಹಾಕಿ ಕುಡಿದರೆ ತೂಕ ಕಡಿಮೆ ಆಗುತ್ತಾ? ತಜ್ಞರು ಹೇಳೋದೇನು ಕೇಳಿ

Coffee And Lemon Juice: ಕಾಫಿಯಲ್ಲಿರುವ ಕೆಫಿನ್ ಎಂಬ ಅಂಶವು ವ್ಯಕ್ತಿಯನ್ನು ತುಂಬಾನೇ ಅಲರ್ಟ್ ಆಗಿರುವಂತೆ ಮತ್ತು ನರ ಸ್ನಾಯುಗಳ ಕೆಲಸವನ್ನು ವೇಗಗೊಳಿಸುತ್ತವೆ. ಕಾಫಿ ನಿಮ್ಮ ಜಡತ್ವಕ್ಕೆ ಬ್ರೇಕ್ ಹಾಕುವುದಲ್ಲದೆ ನಿಮ್ಮನ್ನು ಎಚ್ಚರವಾಗಿರುವಂತೆ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೆಲವರಂತೂ ತಮ್ಮ ದೇಹದಲ್ಲಿನ ಅತಿಯಾದ ತೂಕವನ್ನು (Heavy Weight) ಕಡಿಮೆ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಏನೇನೆಲ್ಲಾ ಪ್ರಯತ್ನಿಸಿರುತ್ತಾರೆ ಎಂದು ಲೆಕ್ಕವಿಡುವುದೇ ಅಸಾಧ್ಯ ಎಂದು ಹೇಳಬಹುದು. ಅವರಿಗೆ ತಮ್ಮ ದೇಹದಲ್ಲಿನ ಆ ಹೆಚ್ಚುವರಿ ತೂಕ ಕಡಿಮೆ (Weight Loss) ಮಾಡಬೇಕು ಎನ್ನುವ ಯೋಚನೆಯೊಂದೇ ಅವರ ತಲೆಯಲ್ಲಿ ಓಡುತ್ತಿರುತ್ತದೆ. ಹಾಗಾಗಿ ಯಾರೇ ಯಾವುದೇ ರೀತಿಯ ಡಯಟ್ (Diet)  ಹೇಳಿದರೂ ಅದನ್ನು ಕಣ್ಣು ಮುಚ್ಚಿಕೊಂಡು ಅದನ್ನೆಲ್ಲಾ ಫಾಲೋ ಮಾಡುತ್ತಿರುತ್ತಾರೆ. ಆ ಡಯಟ್ ಅವರ ಆರೋಗ್ಯಕ್ಕೆ ಎಷ್ಟು ಸೂಕ್ತ, ಏನಾದರೂ ಅಡ್ಡ ಪರಿಣಾಮಗಳು ಇವೆಯೇ, ದೇಹದ ತೂಕವು ನಿಜವಾಗಿಯೂ ಕಡಿಮೆ ಆಗುತ್ತದೆಯೇ ಎಂಬ ವಿಷಯದ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳದೆ ಫಾಲೋ ಮಾಡುತ್ತಾರೆ.

ಅದರಲ್ಲೂ ಈ ಇಂಟರ್‌ನೆಟ್‌ನಲ್ಲಿ ದೇಹದ ತೂಕ ಕಡಿಮೆ ಮಾಡಿಕೊಳ್ಳುವುದು ಹೇಗೆ ಅಂತ ಟೈಪ್ ಮಾಡಿದರೆ ಸಾಕು, ಲೆಕ್ಕವಿಡಲು ಸಾಧ್ಯವಾಗದಷ್ಟು ಸಲಹೆಗಳನ್ನು ನಾವು ನೋಡಬಹುದು. ಅದರಲ್ಲೂ ಈ ಪಾನೀಯಗಳನ್ನು ಕುಡಿಯುವುದರ ಮೂಲಕ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ತುಂಬಾನೇ ಸಲಹೆಗಳು ನೋಡಲು ಸಿಗುತ್ತವೆ.

ಈ ಪಟ್ಟಿಗೆ ಹೊಸ ಸಲಹೆಯೊಂದು ಸೇರ್ಪಡೆಯಾಗಿದೆ ನೋಡಿ. ಇದನ್ನು ಕೇಳಿದರೆ ಮೊದಲು ನೀವು ನಗುವುದಂತೂ ಗ್ಯಾರಂಟಿ. ಹೌದು.. ನೀವು ಕುಡಿಯುವ ಕಾಫಿಗೆ ನಿಂಬೆ ಹಣ್ಣಿನ ರಸವನ್ನು ಮಿಕ್ಸ್ ಮಾಡಿ ಕುಡಿದರೆ ನಿಮ್ಮ ದೇಹದ ತೂಕ ಕಡಿಮೆ ಆಗುತ್ತದೆ ಎಂದು ಹೇಳಿದ್ದಾರೆ. ಟಿಕ್‌ಟಾಕ್‌ನಲ್ಲಿ ಕಾಫಿಗೆ ನಿಂಬೆ ಹಣ್ಣಿನ ರಸವನ್ನು ಸೇರಿಸಿ ಕುಡಿಯಿರಿ ಮತ್ತು ಕೇವಲ 5 ದಿನಗಳಲ್ಲಿಯೇ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಸಂದೇಶ ಸಾರುತ್ತಿರುವ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ ಎಂದು ಹೇಳಬಹುದು.

ಈ ವಿಡಿಯೋದಲ್ಲಿ ಹೇಳಿದಂತೆ ಮಾಡಿ ಕಾಫಿಗೆ ನಿಂಬೆ ಹಣ್ಣಿನ ರಸವನ್ನು ಮಿಕ್ಸ್ ಮಾಡಿ ಕುಡಿಯುವುದು ಎಂದು ಕೇಳಿದರೆ ಒಂದು ರೀತಿಯ ಭಯವಾಗುತ್ತದೆ ಅಲ್ಲವೇ..? ಇದು ನಿಜವಾಗಿಯೂ ದೇಹದ ತೂಕವನ್ನು ಕಡಿಮೆ ಮಾಡಬಹುದೇ ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಪೌಷ್ಟಿಕ ತಜ್ಞರಾದ ರುತ್ ಟಂಗ್ ಅವರು ಇಂತಹ ಸುದ್ದಿಗಳನ್ನು ತಳ್ಳಿ ಹಾಕುವುದಲ್ಲದೆ ಇವರು “ಬರೀ ಬೆಳಗ್ಗೆ ಎದ್ದು ಕಾಫಿಯಲ್ಲಿ ನಿಂಬೆ ಹಣ್ಣಿನ ರಸವನ್ನು ಮಿಕ್ಸ್ ಮಾಡಿಕೊಂಡು ಕುಡಿದ ತಕ್ಷಣ ನಿಮ್ಮ ದೇಹದ ತೂಕ ಕಡಿಮೆ ಆಗುವುದಿಲ್ಲ” ಎಂದು ಹೇಳಿದ್ದಾರೆ. ಜನರು ತಮ್ಮ ದೇಹದಲ್ಲಿನ ಅತಿಯಾದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಅವರ ಒಂದು ಜೀವನಶೈಲಿಯಲ್ಲಿ ಅಗತ್ಯವಾದ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕು ಮತ್ತು ಅದಕ್ಕೆ ತಕ್ಕಂತೆ ವ್ಯಾಯಾಮ ಮಾಡಬೇಕು ಎಂದು ಹೇಳಿದ್ದಾರೆ.

“ಈ ಕಾಫಿ ಮತ್ತು ನಿಂಬೆ ಹಣ್ಣಿನ ರಸದಲ್ಲಿ ಎರಡರಲ್ಲೂ ದೇಹದ ತೂಕವನ್ನು ಕಡಿಮೆ ಮಾಡುವಂತಹ ಯಾವುದೇ ರೀತಿಯ ಗುಣಲಕ್ಷಣಗಳಿಲ್ಲ. ಅದರಲ್ಲೂ ಎರಡೂ ಸೇರಿಸಿ ಕುಡಿದರೂ ದೇಹದ ತೂಕವನ್ನು ಕಡಿಮೆ ಮಾಡುವುದಿಲ್ಲ” ಎಂದು ಹೇಳಿದ್ದಾರೆ. ದೇಹದ ತೂಕ ಕಡಿಮೆ ಮಾಡುವುದಿಲ್ಲ, ಆದರೆ ಬೇರೆ ಆರೋಗ್ಯಕರ ಪ್ರಯೋಜನಗಳನ್ನು ಇದು ಹೊಂದಿದೆ ಎಂದು ಹೇಳಿದರು.

ಇದನ್ನೂ ಓದಿ: ಗರ್ಭಿಣಿಯರು ಯಾವ ಆಹಾರ ತಿನ್ನಬೇಕು? ತಿನ್ನಬಾರದು? ವೈದ್ಯರು ವಿವರಿಸಿದ್ದಾರೆ

“ಕಾಫಿಯಲ್ಲಿರುವ ಕೆಫಿನ್ ಎಂಬ ಅಂಶವು ವ್ಯಕ್ತಿಯನ್ನು ತುಂಬಾನೇ ಅಲರ್ಟ್ ಆಗಿರುವಂತೆ ಮತ್ತು ನರ ಸ್ನಾಯುಗಳ ಕೆಲಸವನ್ನು ವೇಗಗೊಳಿಸುತ್ತವೆ. ಕಾಫಿ ನಿಮ್ಮ ಜಡತ್ವಕ್ಕೆ ಬ್ರೇಕ್ ಹಾಕುವುದಲ್ಲದೆ ನಿಮ್ಮನ್ನು ಎಚ್ಚರವಾಗಿರುವಂತೆ ಮಾಡುತ್ತದೆ. ಇನ್ನೊಂದು ಕಡೆ ನಿಂಬೆ ಹಣ್ಣಿನ ರಸದಲ್ಲಿ ವಿಟಮಿನ್ ಸಿ ಅಂಶವಿದ್ದು, ಇದು ನಿಮ್ಮ ದೇಹಕ್ಕೆ ಬೇಕಾಗುವ ಆ್ಯಂಟಿ ಆಕ್ಸಿಡೆಂಟ್‌ಗಳನ್ನು ಒದಗಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ನೀವ್ ತಿನ್ನೋ ಈ ತರಕಾರಿ, ಹಣ್ಣುಗಳಲ್ಲಿ ಕೀಟನಾಶಕಗಳು ಹೆಚ್ಚಿರುತ್ತಂತೆ ಎಚ್ಚರ

ಅದರಲ್ಲೂ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಯಾವುದೇ ರೀತಿಯ ಅಡ್ಡ ಮಾರ್ಗಗಳು ಇಲ್ಲ. ಇದನ್ನು ನೀವು ನಿಯಮಿತವಾಗಿ ವ್ಯಾಯಾಮ, ಉತ್ತಮ ಜೀವನಶೈಲಿ ಮತ್ತು ಆಹಾರ ನಿಯಂತ್ರಣದಿಂದ ಮಾತ್ರ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ.
Published by:Sandhya M
First published: