ಬ್ಲ್ಯಾಕ್‌ ಕಾಫಿ ಸೇವನೆಯಿಂದ ಹೃದಯ ಸಮಸ್ಯೆ ಕ್ಷೀಣ: ಸಂಶೋಧನೆ ಏನು ಹೇಳುತ್ತೆ?

Balck Coffee: ಪ್ರತಿನಿತ್ಯ ಕಾಫಿ ಸೇವನೆಯಿಂದ ಹೃದಯದ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅಧ್ಯಯನದ ಪ್ರಕಾರ ಕಾಫಿ ಕುಡಿಯುವವರಿಗೆ ಹೋಲಿಸಿದರೆ ಕಾಫಿ ಕುಡಿಯದೇ ಇದ್ದವರಿಗೆ ಹೃದಯ ಸಮಸ್ಯೆಗಳ ಪ್ರಮಾಣ ಹೆಚ್ಚಿದೆ. 

ಬ್ಲಾಕ್‌ ಕಾಫಿ (Photo: Google)

ಬ್ಲಾಕ್‌ ಕಾಫಿ (Photo: Google)

 • Share this:
  ಕಾಫಿ ಕುಡಿಯುವ ಜನರಿಗೆ ಒಂದು ಗುಡ್‌ನ್ಯೂಸ್‌. ಪ್ರತಿನಿತ್ಯ ಕಾಫಿ ಸೇವನೆಯಿಂದ ಆರೋಗ್ಯ ಲಾಭಗಳಿದ್ದು, ಇದು ರೋಗದ ಪ್ರಮಾಣವನ್ನು ತಗ್ಗಿಸುವ ಗುಣವನ್ನು ಹೊಂದಿದೆ ಎಂದು ಸಂಶೋಧನೆ ಮೂಲಕ ತಿಳಿಯುತ್ತದೆ. ಕಾಫಿ ಸೇವನೆಯಿಂದ ಆರೋಗ್ಯ ಲಾಭಗಳಿವೆ ಎಂದು ಅಧ್ಯಯನಗಳು ಬಹಿರಂಗಪಡಿಸಿದ್ದು, ಪ್ರತಿನಿತ್ಯ ಕಾಫಿ ಸೇವನೆಯಿಂದ ಹೃದಯ ಸಮಸ್ಯೆಯನ್ನು ಕೊಂಚ ತಗ್ಗಿಸುತ್ತದೆ ಎಂದು ಹೇಳುತ್ತದೆ.

  ಪ್ರತಿನಿತ್ಯ ಕಾಫಿ ಸೇವನೆಯಿಂದ ಹೃದಯದ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅಧ್ಯಯನದ ಪ್ರಕಾರ ಕಾಫಿ ಕುಡಿಯುವವರಿಗೆ ಹೋಲಿಸಿದರೆ ಕಾಫಿ ಕುಡಿಯದೇ ಇದ್ದವರಿಗೆ ಹೃದಯ ಸಮಸ್ಯೆಗಳ ಪ್ರಮಾಣ ಹೆಚ್ಚಿದೆ. ಇನ್ನು, ಹೃದಯ ಸಮಸ್ಯೆ ಹೊಂದಿದವರಿಗೆ ರಕ್ತ ಸಂಚಲನೆ ಸರಿಯಾಗಿ ಆಗದೆ ತೊಂದರೆ ಕಾಣಿಸಿಕೊಳ್ಳುತ್ತದೆ. ನಡಿಗೆ‌, ಮೆಟ್ಟಿಲುಗಳನ್ನು ಏರುವ ಅಭ್ಯಾಸದ ಮೂಲಕವೂ ಹೃದಯವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು.

  ಅಮೆರಿಕದ ಆಹಾರ ತಜ್ಞ ಪೆನ್ನಿಕ್ರಿಸ್ಈಥರ್ಟನ್ ಅವರು ಹೇಳುವ ಪ್ರಕಾರ, ಪ್ರತಿನಿತ್ಯ ಕಾಫಿ ಸೇವನೆಯಿಂದ ಹೃದಯ ಸಮಸ್ಯೆಯನ್ನು ತಗ್ಗಿಸಬಹುದು. ಹಾಲಿನ ಉತ್ಪನ್ನಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಉತ್ತಮ ಎಂದು ಹೇಳುತ್ತಾರೆ. ಆದರೆ, ಇದು ಬ್ಲ್ಯಾಕ್‌ ಕಾಫಿ ಕುಡಿಯುವವರಿಗೆ ಮಾತ್ರ ಎಂದೂ ಎಚ್ಚರಿಸಿದ್ದಾರೆ.

  ಎರಡು ಕಫ್‌ ಕಾಫಿಯಿಂದ ಶೇ.30ರಷ್ಟು ಹೃದಯ ಸಮಸ್ಯೆ ಕಡಿಮೆ!

  ಸಂಶೋಧನೆಗಾಗಿ ನಡೆಸಿದ ಅಧ್ಯಯನದಲ್ಲಿ  ಕಾಫಿ ಸೇವನೆಯಿಂದ ಹೃಯಯ ಸಮಸ್ಯೆ ಹೊಂದಿರುವವರಿಗೆ ಹೃದಯಾಘಾತದ ಅಪಾಯವನ್ನು ಕಡಿಮೆಗೊಳಿಸುತ್ತದೆ. ಪ್ರತಿ ಕಫ್‌ ಕಾಫಿ ಸೇವನೆಯಿಂದ ಶೇ.5 ಮತ್ತು ಶೇ.12 ರಷ್ಟು ಹೃದಯದ ಅಪಾಯವನ್ನು ಕಡಿಮೆಗೊಳಿಸುತ್ತದೆ ಎಂದು ಅಧ್ಯಯನ ಹೇಳುತ್ತದೆ.  ಇನ್ನು, ದಿನಕ್ಕೆ ಎರಡು ಕಪ್‌ ಕಾಫಿ ಸೇವನೆಯಿಂದ ಅಪಾಯದ ಪ್ರಮಾಣವನ್ನು ಶೇ.30ರಷ್ಟು ಕಡಿಮೆ ಆಗುತ್ತದೆ ಎಂಬುದು ವಿಶ್ಲೇಷಣೆ ಮೂಲಕ ಕಂಡುಹಿಡಿಯಲಾಗಿದೆ.

  ಕೊಲೊರಾಡೋ ಸೆಂಟರ್ ಫಾರ್ ಪರ್ಸನಲೈಸ್ಡ್ ಮೆಡಿಸಿನ್‌ನ ವೈದ್ಯಕೀಯ ನಿರ್ದೇಶಕ ಡಾ.ಡೇವಿಡ್ ಕಾವೊ ಅವರು ಹೇಳುವ ಪ್ರಕಾರ, ಕಾಫಿ ಸೇವನೆಯಿಂದ ಹೃದಯದ ಸಮಸ್ಯೆ ಕಡಿಮೆ ಆಗುತ್ತದೆ. ಇದು ನಿಜಕ್ಕೂ ಆಶ್ಚರ್ಯಕರ. ಆದರೆ, ಜನರು ಕಾಫಿ ಸೇವನೆ ಮಾಡಲು ಹಿಂಜರಿಯುತ್ತಾರೆ ಎಂದು ಕಾವೊ ಹೇಳುತ್ತಾರೆ.

  ಎಚ್ಚರಿಕೆ..!

  ಈ ಮೇಲಿನ ಎಲ್ಲಾ ಅಧ್ಯಯನಗಳು ಬ್ಲಾಕ್‌ ಕಾಫಿ ಕುಡಿಯುವವರ ಮೇಲೆ ನಡೆಸಲಾಗಿದೆ. ಆದರೆ, ಹೆಚ್ಚಿನ ಜನರು ಕಾಫಿ ಸೇವಿಸುವಾಗ ಡೈರಿ ಹಾಲು, ಸಕ್ಕರೆ, ಕ್ರೀಮರ್‌ಗಳನ್ನು ಬಳಸಿದರೆ ಇದರಿಂದ ಹೆಚ್ಚಿನ ಕ್ಯಾಲೋರಿ ದೇಹಕ್ಕೆ ಸೇರುತ್ತದೆ. ಈ ರೀತಿಯ ಕಾಫಿ ಸೇವನೆಯಿಂದ ಹೃದಯಕ್ಕೆ ಯಾವುದೇ ಪ್ರಯೋಜನ ಇಲ್ಲ ಎಂದು ಎಹೆಚ್‌ಎ ಎಚ್ಚರಿಸುತ್ತದೆ.

  ಹೃದಯ ಸಮಸ್ಯೆ ಇದ್ದವರು ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಕೊಬ್ಬು ರಹಿತ ಡೈರಿ ಉತ್ಪನ್ನಗಳನ್ನು ಸೇವಿಸಬೇಕು. ಅತಿಯಾದ ಕಾಫಿ ಸೇವನೆ ಕೂಡ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಸೇವನೆ ಚಟದಿಂದ ನಿದ್ರೆಯ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಕ್ರಿಸ್ ಈಥರ್ಟನ್ ಹೇಳುತ್ತಾರೆ.
  Published by:Harshith AS
  First published: