ರಕ್ತದಲ್ಲಿನ ಸಕ್ಕರೆ ಮಟ್ಟ, ರಕ್ತದೊತ್ತಡ ನಿಯಂತ್ರಿಸಲು ಕುಡಿಯಿರಿ ದಿನಕ್ಕೊಂದು ಎಳನೀರು!

ಎಳನೀರಿನಲ್ಲಿ ಸಾಕಷ್ಟು ಪೊಟ್ಯಾಸಿಯಮ್ ಇದ್ದು, ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಎಳನೀರು

ಎಳನೀರು

 • Share this:
  ಎಳನೀರು (Tender Coconut) ಎಂಬುದು ಕೇವಲ ಪಾನೀಯವಲ್ಲ. ಬದಲಾಗಿ ಹಲವಾರು ಪೋಷಕಾಂಶಗಳ ಮೂಲ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಮಧುಮೇಹ (Diabetes) ರೋಗಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಿಹಿ ಆಹಾರದಿಂದ ದೂರವಿರುತ್ತಾರೆ. ವಿಶೇಷವಾಗಿ ಸಿಹಿ ಪಾನೀಯಗಳನ್ನು ತ್ಯಜಿಸಲು ವೈದ್ಯರು ಶಿಫಾರಸ್ಸು ಮಾಡುತ್ತಾರೆ.

  ಈ ಕಾರಣದಿಂದಾಗಿ ಮಧುಮೇಹಿ ರೋಗಿಗಳು ಯಾವುದೇ ವಸ್ತುವನ್ನು ಸೇವಿಸುವ ಮುನ್ನ ಅದರಲ್ಲಿ ಸಿಹಿ ಪದಾರ್ಥಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಇದಾಗ್ಯೂ ಎಳನೀರನ್ನು ಸೇವಿಸಬಹುದು ಎಂಬುದು ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಗೊತ್ತಿಲ್ಲ. ಏಕೆಂದರೆ ಎಳನೀರು ಕುಡಿಯುವುದರಿಂದ ಸಕ್ಕರೆ ಮಟ್ಟ ಹೆಚ್ಚಾಗಲ್ಲ. ಬದಲಾಗಿ ಎಳನೀರನ್ನು ನಿಯಮಿತವಾಗಿ ಸೇವಿಸುವುದರಿಂದ, ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿ ಇರುತ್ತದೆ. ಹೀಗಾಗಿ ದಿನದಲ್ಲಿ ಒಂದು ಎಳನೀರು ಸೇವಿಸುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಪ್ರಯೋಜನ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೇ ಚರ್ಮದ ಕಾಂತಿ ಹೆಚ್ಚು ಮಾಡಲು ಸಹ ಎಳನೀರು ಸಾಕಷ್ಟು ಪ್ರಯೋಜನಕಾರಿ ಆಗಲಿದೆ.

  ಬದಲಾಗುತ್ತಿರುವ ಜೀವನ ಶೈಲಿಯಿಂದಾಗಿ, ಇಂದು ಮಧುಮೇಹ ರೋಗಿಗಳ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದೆ. ಈ ಸಮಸ್ಯೆ ಕಾಣಿಸಿಕೊಂಡರೆ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ ಮತ್ತು ಮೇದೋಜ್ಜೀರಕ ಗ್ರಂಥಿಯಿಂದ ಇನ್ಸುಲಿನ್ ಹಾರ್ಮೋನ್ ನಿಲ್ಲುತ್ತದೆ. ಇದರಿಂದಾಗಿ ಸಕ್ಕರೆಯನ್ನು ನಿಯಂತ್ರಿಸಲು ಅವರಿಗೆ ಸೂಚಿಸಲಾಗುತ್ತದೆ. ಈ ಬಗ್ಗೆ ನಿರ್ಲಕ್ಷ್ಯವಹಿಸಿದರೆ ಹೃದಯ ಸಮಸ್ಯೆಗಳು ತಲೆದೂರಬಹುದು. ಅಲ್ಲದೆ ಇದುವೇ ಪ್ರಾಣಪಾಯಕ್ಕೆ ಕಾರಣವಾಗಬಹುದು.

  ಪ್ರಪಂಚದಾದ್ಯಂತ ಎಳನೀರಿನ ಬಗ್ಗೆ ಅನೇಕ ಸಂಶೋಧನೆಗಳು ನಡೆದಿವೆ. ಇದರಲ್ಲಿ ಎಳನೀರು ನಮ್ಮ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ ಎಂದು ತಿಳಿದುಬಂದಿದೆ. ಕ್ಯಾಲೊರಿಗಳ ಬಗ್ಗೆ ಹೇಳುವುದಾದರೆ, ಸುಮಾರು 250 ಗ್ರಾಂ ಎಳನೀರಿನಲ್ಲಿ ಕೇವಲ 40 ಗ್ರಾಂ ಕ್ಯಾಲೊರಿಗಳಿವೆ. ರಿಸರ್ಚ್‌ಗೇಟ್.ನೆಟ್ ನಲ್ಲಿ ಪ್ರಕಟವಾದ ವರದಿಯಲ್ಲಿ, ಮಧುಮೇಹ ರೋಗಿಗಳಿಗೆ ಎಳನೀರು ಸಹ ಪ್ರಯೋಜನಕಾರಿ ಎಂದು ದೃಢಪಡಿಸಲಾಗಿದೆ. ಈ ಪಾನೀಯವನ್ನು ಪ್ರತಿದಿನ ಸೇವಿಸಬಹುದು ಎಂದು ತಿಳಿಸಲಾಗಿದೆ. ಇಲಿಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ, ಎಳನೀರಿನ ಸೇವನೆಯು ಇಲಿಗಳ ಸಕ್ಕರೆ ಮಟ್ಟ ಕಡಿಮೆಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇದಲ್ಲದೆ ಎಳನೀರು ಕುಡಿಯುವುದರಿಂದ ಇನ್ನೂ ಅನೇಕ ಪ್ರಯೋಜನಗಳನ್ನು ಪಡೆಯಬಹುದು.

  ಇದನ್ನು ಓದಿ: ಪುರುಷರ ವೀರ್ಯ ಕೆಲವೊಮ್ಮೆ ಬಣ್ಣ ಬದಲಾಗಬಹುದು; ಅದಕ್ಕೆ ಕಾರಣವೇನು ಗೊತ್ತೆ?

  ಎಳನೀರಿನಿಂದ ಸಿಗುವ ಪ್ರಯೋಜನಗಳೇನು ಗೊತ್ತಾ?

  -ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ಎಳನೀರಿನಲ್ಲಿ ಸಾಕಷ್ಟು ಕಂಡುಬರುತ್ತವೆ. ಇದು ನಿಮ್ಮ ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ.

  -ಎಳನೀರನ್ನು ಬೇಸಿಗೆಯಲ್ಲಿ ಕುಡಿಯುವುದು ಉತ್ತಮ. ಇದು ದೇಹದ ಉಷ್ಣತೆಯನ್ನು ನಿಯಂತ್ರಿಸುವುದಲ್ಲದೆ, ಆರೋಗ್ಯವನ್ನು ಕಾಪಾಡುತ್ತದೆ.

  - ಗರ್ಭಿಣಿಯರು ಎಳನೀರನ್ನು ಕುಡಿಯಲು ವೈದ್ಯರು ಸೂಚಿಸುತ್ತಾರೆ. ಇದು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಗರ್ಭಾವಸ್ಥೆಯಲ್ಲಿನ ಎದೆಯುರಿಗೂ ಸಹ ಇದು ಪರಿಹಾರ ನೀಡುತ್ತದೆ.

  - ಎಳನೀರು ಕುಡಿಯುವುದರಿಂದ ದೇಹ ಹೈಡ್ರೀಕರಣಗೊಳ್ಳುತ್ತದೆ. ಇದರಿಂದ ನೀವು ಮೂತ್ರಪಿಂಡದ ಕಲ್ಲಿನ ಸಮಸ್ಯೆ ತಪ್ಪಿಸಬಹುದು.

  - ಎಳನೀರಿನಲ್ಲಿ ಸಾಕಷ್ಟು ಪೊಟ್ಯಾಸಿಯಮ್ ಇದ್ದು, ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

  -ಅ್ಯಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿರುವ ಎಳನೀರು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
  - ಚರ್ಮದ ಕಾಂತಿ ಹೆಚ್ಚಲು ಸಹ ಎಳನೀರು ಸಹಕಾರಿ ಆಗಲಿದೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.  Published by:HR Ramesh
  First published: