ರಾತ್ರಿ ಬೀಳೋ ಯಾವ ಕನಸುಗಳು ನಿಜವಾಗುತ್ತವೆ.. Dreams ಭವಿಷ್ಯ ಸೂಚಕಗಳಾ?

Science Dream: ಕನಸು ಶುಭವಾಗಿರಲಿ ಅಥವಾ ಕೆಟ್ಟದ್ದಾಗಿರಲಿ ಅದು ಖಂಡಿತವಾಗಿಯೂ ಅದರ ಫಲವನ್ನು ನೀಡುತ್ತದೆ. ವ್ಯಕ್ತಿಯ ಕರ್ಮ-ಅದೃಷ್ಟದ ಪ್ರಕಾರ, ಕನಸಿನ ಫಲದ ಪ್ರಮಾಣವು ಹೆಚ್ಚು ಅಥವಾ ಕಡಿಮೆ ಆಗಿರಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ರಾತ್ರಿ (Night dreams) ಕನಸುಗಳು ಸೆಕೆಂಡಿನ ಲೆಕ್ಕದಲ್ಲಿ ಸಂಭವಿಸುತ್ತವೆ. ಮತ್ತೆ ಅವನ್ನು ನೆನಪಿಸಿಕೊಳ್ಳಲು ಎಷ್ಟು ಪ್ರಯತ್ನಿಸಿದರೂ, ನಾವು ವಿಫಲರಾಗುತ್ತೇವೆ. ಅದರಲ್ಲೂ ಒಳ್ಳೆ ಕನಸುಗಳು ಬಿದ್ದರೇ, ಅಯ್ಯೋ ಕನಸು ನಿಜವಾಗಬಾರದೇ ಅಂತ ಪೇಚಾಡುತ್ತೇವೆ. ದುಃಸ್ವಪ್ನವಾದರೇ ಅಚಾತುರ್ಯ ಸಂಭವಿಸದಂತೆ ದೇವರಲ್ಲಿ ಕೇಳಿಕೊಳ್ಳುತ್ತೇವೆ. ಇನ್ನು ಕನಸಿನ ಬಗ್ಗೆ ಸ್ವಪ್ನ ಶಾಸ್ತ್ರದಲ್ಲೂ ಉಲ್ಲೇಖ (conveying)ಮಾಡಲಾಗಿದ್ದು, ನಿಮಗೆ ಬಿದ್ದ ಕನಸು ಯಾವಾಗ ಫಲ ನೀಡುತ್ತದೇ, ಇಲ್ಲವೋ ಎಂದು ಹೇಳಲಾಗಿದೆಯಂತೆ. ಸ್ವಪ್ನ ಶಾಸ್ತ್ರದಲ್ಲಿ(science of the dream) ಕನಸುಗಳ ಅರ್ಥವನ್ನು ಹೇಳುವುದರ ಹೊರತಾಗಿ, ಯಾವ ಸಮಯದಲ್ಲಿ(what time) ಬಿದ್ದ ಕನಸು ಯಾವಾಗ ತನ್ನ ಫಲವನ್ನು ನೀಡಲಿದೆ ಎಂಬ ಬಗ್ಗೆಯೂ ಹೇಳಲಾಗಿದೆ.

  ಕೂತಹಲಕರ ವಿಚಾರ
  ಇದರ ಪ್ರಕಾರ, ಬೆಳಗಿನ ಕನಸುಗಳು ಮಾತ್ರವಲ್ಲದೆ ರಾತ್ರಿಯಲ್ಲಿ ಕಂಡುಬರುವ ಕನಸುಗಳೂ ಸಹ ಫಲ ನೀಡುತ್ತವೆ. ಆದಾಗ್ಯೂ, ವಿಭಿನ್ನ ಹಂತಗಳಲ್ಲಿ ಕಂಡುಬರುವ ಕನಸುಗಳು ವಿಭಿನ್ನ ಸಮಯಗಳಲ್ಲಿ ಫಲಿತಾಂಶಗಳನ್ನು ನೀಡುತ್ತವೆ. ಯಾವ ಸಮಯದಲ್ಲಿ ಕಂಡ ಕನಸು ಎಷ್ಟು ದಿನಗಳ ನಂತರ ಅದರ ಪರಿಣಾಮವನ್ನು ತೋರಿಸುತ್ತದೆ ಎಂಬುದು ಹೇಳಿರುವುದು ನಿಜಕ್ಕೂ ಕೂತಹಲಕರ ವಿಚಾರವೂ ಹೌದು. ಆನಂದ ನೀಡುವಂತಹ ಸ್ವಪ್ನಗಳ ಜೊತೆಗೇ ದುಃಸ್ವಪ್ನಗಳು ಪ್ರತಿದಿನವೂ ಪ್ರತಿ ಮನುಷ್ಯರಿಗೂ ಬೀಳುತ್ತವೆ. ಕೆಲವು ಸ್ವಪ್ನಗಳು ಮಾತ್ರ ನೆನಪಿನಾಳದಲ್ಲಿ ಉಳಿದು ಬಿಡದೇ ಕಾಡುವುದನ್ನು ಕೇಳಿದ್ದೇವೆ.

  ಕನಸು ಶುಭವಾಗಿರಲಿ ಅಥವಾ ಕೆಟ್ಟದ್ದಾಗಿರಲಿ ಅದು ಖಂಡಿತವಾಗಿಯೂ ಅದರ ಫಲವನ್ನು ನೀಡುತ್ತದೆ. ವ್ಯಕ್ತಿಯ ಕರ್ಮ-ಅದೃಷ್ಟದ ಪ್ರಕಾರ, ಕನಸಿನ ಫಲದ ಪ್ರಮಾಣವು ಹೆಚ್ಚು ಅಥವಾ ಕಡಿಮೆ ಆಗಿರಬಹುದು. ಅಂದರೆ, ಶುಭ ಕನಸಿನ ಫಲವು ಯಾರಿಗಾದರೂ ಉತ್ತಮ ಯಶಸ್ಸನ್ನು ತರುತ್ತದೆ ಎಂದು ನಂಬಿದರೇ, ಅದೇ ರೀತಿ ನೀವು ಮತ್ತೆ ಮತ್ತೆ ದುರುದ್ದೇಶಪೂರಿತ ಕನಸುಗಳನ್ನು ಅಂದರೆ ದುಸ್ವಪ್ನಗಳನ್ನು ಕಾಣುತ್ತಿದ್ದರೆ ಮುಂದೆ ಏನೋ ಅಶುಭವಾಗಲಿದೆ ಎಂಬ ಸಂಕೇತವಾಗಿದೆ ಎಂದು ಹೇಳುವುದನ್ನು ನಂಬಲೇಬೇಕು.

  ಇದನ್ನೂ ಓದಿ: Dream Meaning: ಕನಸಿನಲ್ಲಿ ಈ ವಸ್ತುಗಳು ಕಂಡ್ರೆ ಅದೃಷ್ಟವಂತೆ!

  ಸಾಮಾನ್ಯವಾಗಿ, ಪ್ರತಿಯೊಬ್ಬರೂ ದೇವರನ್ನು ನೆನೆದು, ಅವನನ್ನು ಪ್ರಾರ್ಥಿಸಿ ನಂತರ ಮಲಗಬೇಕು. ಇದರಿಂದ ಒಳ್ಳೆಯ ಮತ್ತು ನಿರಂತರ ನಿದ್ರೆ ಅಥವಾ ಒಳ್ಳೆಯ ಕನಸುಗಳು ಬರುತ್ತವೆ ಎಂದು ಹೇಳಲಾಗುತ್ತದೆ.

  ಕನಸು ಯಾವಾಗ ಫಲ ನೀಡುತ್ತದೆ?
  ರಾತ್ರಿಯ ಮೊದಲ ಭಾಗದಲ್ಲಿ ಕಂಡುಬರುವ ಕನಸಿನ ಶುಭ ಮತ್ತು ಕೆಟ್ಟ ಫಲಿತಾಂಶಗಳು ಸಾಮಾನ್ಯವಾಗಿ ಒಂದು ವರ್ಷದೊಳಗೆ ಸಂಭವಿಸಲಿದೆ ಎಂದು ಹೇಳುತ್ತಾರೆ. ಅದೇ ಸಮಯದಲ್ಲಿ, ರಾತ್ರಿಯ ಎರಡನೇ ಭಾಗದಲ್ಲಿ ಕಂಡುಬರುವ ಕನಸಿನ ಫಲವು 9 ತಿಂಗಳಲ್ಲಿ ಸಿಗಲಿದೆ ಎಂದು ಹೇಳಲಾಗಿದೆ. ಮೂರನೆಯ ಪ್ರಹಾರ್‌ನಲ್ಲಿ ಕಂಡುಬರುವ ಕನಸು ತನ್ನ ಫಲವನ್ನು 3 ತಿಂಗಳಲ್ಲಿ ನೀಡುತ್ತದೆ. ಅಂದರೆ, ಯಶಸ್ಸನ್ನು ಪಡೆಯುವ ಕನಸು ಇದ್ದರೆ, ಮುಂದಿನ ಮೂರು ತಿಂಗಳೊಳಗೆ ಅದರ ಫಲಿತಾಂಶ ಲಭ್ಯವಾಗಲಿದೆ.

  ರಾತ್ರಿಯ ನಾಲ್ಕನೇ ಭಾಗದಲ್ಲಿ ಕಂಡುಬರುವ ಕನಸು 10 ರಿಂದ 12 ದಿನಗಳಲ್ಲಿ ಬೇಗನೆ ಫಲ ನೀಡುತ್ತದೆ ಎಂದು ಹೇಳಲಾಗುತ್ತದೆ. ನಾಲ್ಕನೆಯ ಪ್ರಹಾರ್ ಎಂದರೆ ರಾತ್ರಿ ಮುಗಿಯುವ ಸಮಯ/ಬೆಳಗಿನ ಜಾವಾ ಇದನ್ನು ಬೆಳಿಗ್ಗೆ ಕನಸು ಎಂದು ಕರೆಯಲಾಗುತ್ತದೆ. ಸ್ವಪ್ನ ಶಾಸ್ತ್ರವು ಬಹಳ ನಿಗೂಢ ಗ್ರಂಥವಾಗಿದೆ. ಇದರಲ್ಲಿ, ನಿದ್ರೆಯಲ್ಲಿ ಕಂಡುಬರುವ ಕನಸುಗಳ ಅರ್ಥವನ್ನು ಹೇಳಲಾಗಿದೆ. ಇದಲ್ಲದೇ ರಾತ್ರಿಯ ಹೊತ್ತು ಯಾವ ಸಮಯದಲ್ಲಿ ಬಿದ್ದ ಕನಸು ಎಷ್ಟು ದಿನಗಳ ನಂತರ ಫಲ ನೀಡುತ್ತದೆ ಎಂದು ಉಲ್ಲೇಖಸಿರುವುದು ಗಮನಾರ್ಹ.

  ಹೀಗೆ ಮಾಡಬೇಡಿ
  ನಿದ್ರಿಸುವ ಹಾಸಿಗೆ ಸಮೀಪವೇ ಚಪ್ಪಲಿ, ಬೂಟುಗಳನ್ನು ಬಿಡಬಾರದು. ಅದೇ ರೀತಿ ಅವುಗಳನ್ನು ಇಡುವ ರ್‍ಯಾಕ್ಸ್ ಸಹ ಹಾಸಿಗೆಯಿಂದ ದೂರ ಇಡಬೇಕು. ಅವುಗಳನ್ನು ಬೆಡ್ ಪಕ್ಕದಲ್ಲಿ ಇಟ್ಟುಕೊಳ್ಳಬಾರದು. ಇಟ್ಟರೆ ನೆಗಟೀವ್ ಎನರ್ಜಿ ಪ್ರಸಾರವಾಗುತ್ತದೆ. ಅದು ವಾಸ್ತು ದೋಷಗಳನ್ನು ಉಂಟು ಮಾಡುತ್ತದೆ. ನಿದ್ದೆಗೆ ಭಂಗವಾಗುತ್ತದೆ. ದುಃಸ್ವಪ್ನಗಳು ಬೀಳುತ್ತವೆ.

  ಸ್ವಲ್ಪ ಏಲಕ್ಕಿ ತೆಗೆದುಕೊಂಡು ಒಂದು ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ ಆ ವಸ್ತ್ರವನ್ನು ನಿಮ್ಮ ದಿಂಬಿನ ಪಕ್ಕದಲ್ಲಿ ಇಟ್ಟುಕೊಳ್ಳಿ. ಇದರಿಂದ ನಿದ್ದೆ ಚೆನ್ನಾಗಿ ಬರುತ್ತದೆ. ಹಾಸಿಗೆಗೆ ಹೊರಳಿದ ಕೂಡಲೆ ನಿದ್ದೆಗೆ ಜಾರುತ್ತೀರ. ಅಷ್ಟೇ ಅಲ್ಲ ಈ ರೀತಿ ಮಾಡುವುದರಿಂದ ಕೆಟ್ಟ ಕನಸುಗಳು ಬೀಳಲ್ಲ. ಬಹಳ ಹಾಯಾಗಿ ನಿದ್ರಿಸಬಹುದು.

  ಇದನ್ನೂ ಓದಿ: Bad Dreams: ಕನಸಿನಲ್ಲಿ ಬೆಕ್ಕು, ಸೂರ್ಯಾಸ್ತ ಕಂಡರೆ ಏನು ಅರ್ಥ; ಏನು ಹೇಳುತ್ತದೆ ಸ್ವಪ್ನಾ ಶಾಸ್ತ್ರ?

  ಒಂದು ರಾಗಿಯನ್ನು ಚೆಂಬು ಅಥವಾ ಪಾತ್ರೆ, ಗ್ಲಾಸ್‌ನಲ್ಲಿ ನೀರು ತುಂಬಿಡಬೇಕು. ಬಳಿಕ ಅದನ್ನು ದಿಂಬಿನ ಪಕ್ಕ ಟೇಬಲ್ ಮೇಲೆ ಇಟ್ಟುಕೊಂಡು ನಿದ್ರಿಸಬೇಕು. ಈ ರೀತಿ ಮಾಡುವುದರಿಂದ ಒಳ್ಳೆಯ ನಿದ್ದೆ ಬರುತ್ತದೆ. ವಾಸ್ತುದೋಷ ನಿವಾರಣೆಯಾಗುತ್ತದೆ. ಕೆಟ್ಟ ಕನಸು ಬೀಳಲ್ಲ. ಆದರೆ ಈ ರೀತಿ ಇಟ್ಟುಕೊಂಡ ನೀರನ್ನು ಕುಡಿಯಬಾರದು. ಗಿಡಗಳಿಗೆ ಹಾಕಿದರೆ ಒಳ್ಳೆಯದಾಗುತ್ತದೆ
  Published by:vanithasanjevani vanithasanjevani
  First published: