DRDO recruitment: ಎಸ್​ಎಸ್​ಎಲ್​ಸಿ ಪಾಸಾದವರಿಗೆ ಡಿಆರ್‌ಡಿಒನಲ್ಲಿ ಉದ್ಯೋಗಾವಕಾಶ: ಮಾಸಿಕ ವೇತನ 63 ಸಾವಿರ ರೂ.

zahir | news18-kannada
Updated:September 27, 2019, 10:56 AM IST
DRDO recruitment: ಎಸ್​ಎಸ್​ಎಲ್​ಸಿ ಪಾಸಾದವರಿಗೆ ಡಿಆರ್‌ಡಿಒನಲ್ಲಿ ಉದ್ಯೋಗಾವಕಾಶ: ಮಾಸಿಕ ವೇತನ 63 ಸಾವಿರ ರೂ.
JOB
zahir | news18-kannada
Updated: September 27, 2019, 10:56 AM IST
DRDO recruitment 2019: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನಿರ್ವಾಹಕ (admin) ಮತ್ತು ಅಲೈಡ್ ಕೇಡರ್ (allied cadre) ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 15 (ಸಂಜೆ 5 ರವರೆಗೆ) ರೊಳಗೆ ಅಪ್ಲಿಕೇಶನ್ ಸಲ್ಲಿಸಬೇಕಾಗುತ್ತದೆ.

ನಿರ್ವಾಹಕ ಮತ್ತು ಅಲೈಡ್ ಕೇಡರ್ ಹುದ್ದೆಗಳಿಗೆ ಅರ್ಹತೆ ಪಡೆದ ಅಭ್ಯರ್ಥಿಗಳು ಮುಂದಿನ ಆಯ್ಕೆಗಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮತ್ತು ಕೌಶಲ್ಯ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಸಿಬಿಟಿಯಲ್ಲಿ 150 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಪ್ರಶ್ನೆಗಳಿಗೆ ಉತ್ತರಿಸಲು 100 ನಿಮಿಷ ಕಾಲಾವಕಾಶ ನೀಡಿರುತ್ತಾರೆ. ಈ ಹುದ್ದೆಗಳ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಒಟ್ಟು ಹುದ್ದೆಗಳು ಮತ್ತು ನೇಮಕಾತಿ:

ಒಟ್ಟು ಹುದ್ದೆಗಳ ಸಂಖ್ಯೆ- 224 ಹುದ್ದೆಗಳು
ಸ್ಟೆನೋಗ್ರಾಫರ್ ಗ್ರೇಡ್ II - 13 ಹುದ್ದೆಗಳು
ಅಡ್ಮಿನ್ಸೆಟ್ರೇಟಿವ್ ಅಸಿಸ್ಟೆಂಟ್ ಇಂಗ್ಲಿಷ್ - 54 ಹುದ್ದೆಗಳು
ಅಡ್ಮಿನ್ಸೆಟ್ರೇಟಿವ್ ಅಸಿಸ್ಟೆಂಟ್ ಹಿಂದಿ - 4 ಹುದ್ದೆಗಳು
Loading...

ಸ್ಟೋರ್ ಅಸಿಸ್ಟೆಂಟ್​ ಇಂಗ್ಲಿಷ್ ಟೈಪಿಂಗ್ - 28 ಹುದ್ದೆಗಳು
ಸ್ಟೋರ್ ಅಸಿಸ್ಟೆಂಟ್​ ಹಿಂದಿ ಟೈಪಿಂಗ್ - 4 ಹುದ್ದೆಗಳು
ಭದ್ರತಾ ಸಹಾಯಕ - 40 ಹುದ್ದೆಗಳು
ಕ್ಲರ್ಕ್ - 3 ಹುದ್ದೆಗಳು
ಕುಕ್ - 29 ಹುದ್ದೆಗಳು
ವಾಹನ ಸಂಚಾಲಕರು - 23 ಹುದ್ದೆಗಳು
ಅಗ್ನಿಶಾಮಕ ಚಾಲಕ - 6 ಹುದ್ದೆಗಳು
ಫೈರ್‌ಮ್ಯಾನ್ - 20 ಹುದ್ದೆಗಳು

ಶಿಕ್ಷಣ ಅರ್ಹತೆ:
ಪಿಯುಸಿ ಪಾಸಾದ ಅಭ್ಯರ್ಥಿಗಳು ಸ್ಟೆನೋಗ್ರಾಫರ್, ಆಡಳಿತ ಸಹಾಯಕ, ಕುಕ್, ಗುಮಾಸ್ತ, ಭದ್ರತಾ ಸಹಾಯಕ ಮತ್ತು ಅಂಗಡಿ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
10ನೇ ಪಾಸ್ ಅಭ್ಯರ್ಥಿಗಳು ವಾಹನ ಆಪರೇಟರ್, ಫೈರ್ ಎಂಜಿನ್ ಚಾಲಕ ಮತ್ತು ಫೈರ್‌ಮ್ಯಾನ್‌ ಪೋಸ್ಟ್​ಗಳಿಗೆ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಅಮೆರಿಕದ ಈ ಆರು ನಗರಗಳಲ್ಲಿ ಹೆಣ್ಮಕ್ಕಳಿಗೆ ಟಾಪ್​ಲೆಸ್​ ಸ್ವಾತಂತ್ರ್ಯ..!

ವಯೋಮಿತಿ:
ಅರ್ಜಿ ಸಲ್ಲಿಸುವವರು ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷಗಳ ಒಳಗಿರಬೇಕು.

ಅರ್ಜಿ ಸಲ್ಲಿಕೆ ಹೇಗೆ?
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಧಿಕೃತ ವೆಬ್​ಸೈಟ್​ Drdo.gov.in ಗೆ ಹೋಗಿ ನಿರ್ವಾಹಕ (admin) ಮತ್ತು ಅಲೈಡ್ ಕೇಡರ್ (allied cadre) ಆನ್‌ಲೈನ್ ಅಪ್ಲಿಕೇಶನ್‌ಗಳ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ:
ಈ ಹುದ್ದೆಗಳಿಗೆ ಅರ್ಜಿ ಶುಲ್ಕ 100 ರೂ. ಎಂದು ನಿಗದಿ ಪಡಿಸಲಾಗಿದೆ.

ವೇತನ:
ಸ್ಟೆನೋಗ್ರಾಫರ್ ತಿಂಗಳ ವೇತನ- 81,100 ರೂ.
ಇತರೆ ಎಲ್ಲ ಹುದ್ದೆಗಳ ಮಾಸಿಕ ವೇತನ- 63,200 ರೂ.

ಪ್ರಮುಖ ದಿನಾಂಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ- ಅಕ್ಟೋಬರ್ 15 (ಸಂಜೆ 5 ರವರೆಗೆ), 2019

 
First published:September 27, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...