ಪಕ್ಷಿಗಳಿಗೂ ಕಿಕ್ಕೇರಿಸುತ್ತಿರುವ ಹುಲು ಮಾನವ !

zahir | news18
Updated:July 22, 2018, 7:16 PM IST
ಪಕ್ಷಿಗಳಿಗೂ ಕಿಕ್ಕೇರಿಸುತ್ತಿರುವ ಹುಲು ಮಾನವ !
zahir | news18
Updated: July 22, 2018, 7:16 PM IST
-ನ್ಯೂಸ್ 18 ಕನ್ನಡ

ಒಂದು ದೇಶ ಅಂದರೆ ಅನೇಕ ಸಮಸ್ಯೆಗಳು ಕಾಣಿಸುತ್ತದೆ. ಅದರಲ್ಲೂ ಕೆಲವೊಂದು ದೇಶಗಳ ಸಮಸ್ಯೆಗಳನ್ನು ಗಮನಿಸಿದರೆ ವಿಚಿತ್ರವೆನಿಸುತ್ತದೆ. ಅಂತಹದೊಂದು ಸಮಸ್ಯೆ ಸೌತರ್ನ್​ ಇಂಗ್ಲೆಂಡ್​ನಲ್ಲಿ ತಲೆದೂರಿದೆ. ಅದೇನಪ್ಪಾ ಸಮಸ್ಯೆ ಅಂದುಕೊಳ್ಳುತ್ತಿದ್ದರೆ, ಅಲ್ಲಿನ ಪಕ್ಷಿಗಳು ಅಮಲಿನಲ್ಲಿ ತೇಲಾಡುತ್ತಿರುವುದು.

ನೈರುತ್ಯ ಇಂಗ್ಲೆಂಡ್​ ಭಾಗಗಳಲ್ಲಿ ಇತ್ತೀಚೆಗೆ ಆಲ್ಕೋಹಾಲ್​ ಕುಡಿದಿರುವ ಸೀಗುಲ್ ಪಕ್ಷಿಗಳು ಹಾರಾಲಾಗದೆ, ನಿಲ್ಲಲಾಗದೇ ಒದ್ದಾಡುತ್ತಿದೆಯಂತೆ. ಸ್ಥಳೀಯರು ಎಸೆಯುವ ಬಿಯರ್ ಬಾಟಲಿ ಮತ್ತು ಆಲ್ಕೋಹಾಲ್​ನ ತಾಜ್ಯಗಳನ್ನು ತಿನ್ನುತ್ತಿರುವ ಪಕ್ಷಿಗಳು ಎಣ್ಣೆ ಏಟಿನಲ್ಲಿ ತಿರುಗುತ್ತಿದೆ. ಅದರಲ್ಲೂ ಮದ್ಯದಂಗಡಿಗಳ ತಾಜ್ಯಗಳನ್ನು ಪಕ್ಷಿಗಳು ಹೆಚ್ಚಾಗಿ ಸೇವಿಸುವುದರಿಂದ ಕಿಕ್ ಏರಿ ಸಾಯುತ್ತಿದೆ ಎಂದು ವರದಿಯೊಂದು ತಿಳಿಸಿದೆ.

RSPCA ಎಂಬ ಸಂಸ್ಥೆಯು ಇಂತಹ ಪಕ್ಷಿಗಳ ಆರೈಕೆಯಲ್ಲಿ ತೊಡಗಿದ್ದು, ಈಗಾಗಲೇ ಅಮಲಿನಿಂದ ಗೊಂದಲಕ್ಕೀಡಾದ 12 ಕ್ಕೂ ಹೆಚ್ಚಿನ ಸೀಗುಲ್ ಪಕ್ಷಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ ಕೆಲವೊಂದು ಮರಣ ಹೊಂದಿದ್ದು, ಮತ್ತೆ ಕೆಲವು ಪಕ್ಷಿಗಳು ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಸಂಸ್ಥೆ ತಿಳಿಸಿದೆ.

ಡೆವೊನ್ ಕಡಲ ತೀರದ ಪ್ರದೇಶದಲ್ಲಿ ಹಲವು ಸೀಗುಲ್​ ಪಕ್ಷಿಗಳು ಕಂಡು ಬರುತ್ತಿದ್ದು, ಇವುಗಳು ಅಮುಲು ಮಿಶ್ರಿತ ಪದಾರ್ಥಗಳ ಸೇವನೆಯಿಂದ ಒದ್ದಾಡುತ್ತಿದೆ ಎಂದು ಪಕ್ಷಿಗಳಿಗೆ ಚಿಕಿತ್ಸೆ ನೀಡಿದ ಕೂಪರ್ ತಿಳಿಸಿದ್ದಾರೆ. ಈ ಹಿಂದೆ 30 ಕ್ಕೂ ಹೆಚ್ಚಿನ ಸೀಗುಲ್​ಗಳನ್ನು ರಕ್ಷಿಸಿದ್ದು, ಅವುಗಳಲ್ಲಿ ಕೆಲವು ಸಾವನ್ನಪ್ಪಿದರೆ ಮತ್ತೆ ಕೆಲ ಪಕ್ಷಿಗಳು ಚೇತರಿಸಿಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.

ಆಹಾರವೆಂದು ಪಕ್ಷಿಗಳು ತಿನ್ನುವ ಪದಾರ್ಥಗಳಲ್ಲಿ ಮದ್ಯಸಾರ ಮಿಶ್ರಿತವಾಗಿರುವುದರಿಂದ ವಾಂತಿ ಮಾಡಿಕೊಳ್ಳುತ್ತದೆ. ಹಾಗೆಯೇ ಕೊಳೆತ ಆಹಾರದಲ್ಲಿರುವ ಬ್ಯಾಕ್ಟೀರಿಯಾಗಳಿಂದ ಪಕ್ಷಿಗಳು ಅನಾರೋಗ್ಯಕ್ಕೀಡಾಗುತ್ತಿದ್ದು, ಇದೇ ವೇಳೆ ಆಲ್ಕೋಹಾಲ್ ಕೂಡ ದೇಹ ಸೇರುವುದರಿಂದ ಪಕ್ಷಿಗಳಲ್ಲಿ ಅಸ್ವಸ್ಥತೆ ಕಾಣಿಸುತ್ತಿದೆ ಎಂದು RSPCA ಅಧಿಕಾರಿ ಜೊ ಡೇನಿಯಲ್ ತಿಳಿಸಿದ್ದಾರೆ.

ಈ ಬಗ್ಗೆ ಎಚ್ಚೆತ್ತು ಕೊಂಡಿರುವ ಅನಿಮಲ್ ವೆಲ್​​ಫೇರ್ ಚಾರಿಟಿ ವರದಿಗಳನ್ನು ಬಿತ್ತರಿಸಿದ್ದು, ಸ್ಥಳೀಯ ತಾಜ್ಯ ಡಿಸ್ಟಿಲರಿಗಳು ಮತ್ತು ಮದ್ಯ ತಯಾರಕ ಕಂಪನಿಗಳ ತಾಜ್ಯಗಳನ್ನು ಪರಿಶೀಲಿಸಬೇಕೆಂದು ಒತ್ತಾಯಿಸಿದ್ದಾರೆ.
Loading...

ಇತ್ತೀಚಿನ ದಿನಗಳಲ್ಲಿ ಸೌತರ್ನ್​ ಇಂಗ್ಲೆಂಡ್​ನ ಪಕ್ಷಿಗಳು ಆಹಾರ ಸೇವಿಸಲಾಗದೇ ಕಷ್ಟಪಡುತ್ತಿದೆ. ಬಿಯರ್​ನಿಂದ ಕೂಡಿದ ಪದಾರ್ಥಗಳನ್ನು ಸೇವಿಸಿರುವುದರಿಂದ ಅಮಲಿನಲ್ಲಿರುತ್ತದೆ ಎಂದುಬ ಪ್ರಾಣಿ ಪ್ರಿಯೆ ಕ್ಲಾರಾ ಸ್ಕಲ್ಲಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಮಾನವನು ಕುಡಿತದಿಂದ ತಾನು ಹಾಳಾಗುವುದಲ್ಲದೆ ಪಕ್ಷಿಗಳ ಬಾಳನ್ನೂ ಹಾಳು ಮಾಡುತ್ತಿರುವುದು ವಿಪರ್ಯಾಸ.
First published:July 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ