• Home
  • »
  • News
  • »
  • lifestyle
  • »
  • Bridal Makeup Tips: ಮದುವೆ ದಿನ ಈ ರೀತಿ ಮೇಕಪ್ ಮಾಡ್ಕೊಂಡ್ರೆ ನಿಮ್ಮ ಲುಕ್ ಹಾಳಾಗೋದು ಗ್ಯಾರಂಟಿ

Bridal Makeup Tips: ಮದುವೆ ದಿನ ಈ ರೀತಿ ಮೇಕಪ್ ಮಾಡ್ಕೊಂಡ್ರೆ ನಿಮ್ಮ ಲುಕ್ ಹಾಳಾಗೋದು ಗ್ಯಾರಂಟಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Dos and Do nots Of Bridal Makeup: ಮುಖ್ಯವಾಗಿ ಮೇಕಪ್ ವಿಚಾರದಲ್ಲಿ ಸರಿಯಾದ ತಿಳುವಳಿಕೆ ಇಲ್ಲದೇ ಕೆಲ ಕೆಲಸಗಳನ್ನು ಮಾಡಬಾರದು. ಅದಕ್ಕಾಗಿಯೇ ಪರಿಣಿತರಾಗಿರುವ ಮೇಕಪ್ ಆರ್ಟಿಸ್ಟ್​ಗಳನ್ನು ನೀವು ಸಂಪರ್ಕಿಸಿ ಅವರ ಸಹಾಯ ಪಡೆಯಲೇಬೇಕು.

  • Share this:

ಸದ್ಯ ಮದುವೆಯ ಸೀಸನ್ (Wedding Season) ಆರಂಭವಾಗಿದೆ. ನೀವು ಸಹ ನಿಮ್ಮ ಮದುವೆಯ ದಿನಕ್ಕೆ ತಯಾರಿ ನಡೆಸುತ್ತಿದ್ದಾರೆ, ಬಹಳ ಕೆಲಸಗಳು ಇರುತ್ತದೆ. ಎಲ್ಲವನ್ನೂ ನೀವು ಪ್ಲ್ಯಾನ್ ಮಾಡುವಾಗ ಬಹಳ ಮುಖ್ಯವಾದ ವಿಚಾರವನ್ನು ನೆಗ್ಲೆಕ್ಟ್​​ ಮಾಡಬಾರದು. ಅದು ನಿಮ್ಮ ಮೇಕಪ್ (Makeup). ನಿಮ್ಮ ತ್ವಚೆ ಮತ್ತು ಕೂದಲು ನಿಮ್ಮ  ನಿಯಂತ್ರಣದಲ್ಲಿದ್ದರೆ, ನಿಮ್ಮ ಸ್ಪೆಷಲ್ ಡೇ (Special Day) ಬಹಳ ಸ್ಪೆಷಲ್ ಆಗಿರುತ್ತದೆ. ಮುಖ್ಯವಾಗಿ ಮೇಕಪ್ ವಿಚಾರದಲ್ಲಿ ಸರಿಯಾದ ತಿಳುವಳಿಕೆ ಇಲ್ಲದೇ ಕೆಲ ಕೆಲಸಗಳನ್ನು ಮಾಡಬಾರದು. ಅದಕ್ಕಾಗಿಯೇ ಪರಿಣಿತರಾಗಿರುವ ಮೇಕಪ್ ಆರ್ಟಿಸ್ಟ್​ಗಳನ್ನು ನೀವು ಸಂಪರ್ಕಿಸಿ ಅವರ ಸಹಾಯ ಪಡೆಯಲೇಬೇಕು. ಈ ನಿಮ್ಮ ವಿಶೇಷ ದಿನದಂದು ನೀವು ಏನು ಮಾಡಬೇಕು ಹಾಗೂ ಮಾಡಬಾರದು ಎನ್ನುವ ಕುರಿತು ಕೆಲ ಸಲಹೆಗಳು ಇಲ್ಲಿದೆ.


ಏನು ಮಾಡಬೇಕು?


 ನಿಮ್ಮ ಚರ್ಮವನ್ನ ಮೊದಲೇ ಸಿದ್ದ ಮಾಡಿಕೊಳ್ಳಿ 


ಅನೇಕ ವಧುಗಳು ಮೇಕಪ್ ಅನ್ನು ಮಾಡಿಸಿಕೊಳ್ಳುವಾಗ ಮೊದಲು ಅಗತ್ಯವಾದ ಚರ್ಮದ ಆರೈಕೆ ಕ್ರಮಗಳನ್ನು ಅನುಸರಿಸಲು ಮರೆಯುತ್ತಾರೆ. ಕ್ಲೀನಿಂಗ್, ಟೋನಿಂಗ್ ಮತ್ತು ಮಾಯ್ಚರೈಸಿಂಗ್ ಯಾವಾಗಲೂ ನಿಮ್ಮ ದೈನಂದಿನ ದಿನಚರಿಯ ಭಾಗವಾಗಿರಬೇಕು. ಈ ರೀತಿ ಮಾಡಿದರೆ ಮುಖ ಕಲ್ಮಶಗಳಿಂದ ಮುಕ್ತವಾಗಿರುತ್ತದೆ. ಈ ರೀತಿ ಮಾಡುವುದರಿಂದ ಮೇಕಪ್ ನಿಮ್ಮ ಚರ್ಮದ ಮೇಲೆ ಸರಿಯಾಗಿ ಕೂರುತ್ತದೆ. ಅಲ್ಲದೇ, ಮೇಕಪ್ ಸರಿಯಾಗಿ ಇದ್ದರೆ ಮಾತ್ರ ಲುಕ್ ಸುಂದರವಾಗಿ ಕಾಣುತ್ತದೆ.


 ನಿಮ್ಮ ಕಣ್ಣುಗಳಿಗೆ ಹೆಚ್ಚಿನ ಗಮನವನ್ನು ನೀಡಿ 


ನಿಮ್ಮ ಕಣ್ಣಿನ ಮೇಕಪ್ ನಿಮ್ಮ ಲುಕ್ ಹೆಚ್ಚು ಮಾಡುತ್ತದೆ ಅಥವಾ ಅದನ್ನು ಹಾಳು ಮಾಡುತ್ತದೆ. ಈ ಎರಡನ್ನೂ ಮಾಡುವ ಶಕ್ತಿ ಕಣ್ಣಿನ ಮೇಕಪ್​ಗೆ ಇದೆ. ಮೇಕಪ್ ಅನ್ನು ಹಚ್ಚುವ ಮೊದಲು ಸರಿಯಾದ ಕನ್ಸೀಲರ್ ಅನ್ನು ಆರಿಸಿ. ಅಲ್ಲದೇ, ಮದುವೆಗೆ ಮೊದಲು ಒಮ್ಮೆ ಟ್ರೈಯಲ್ ನೋಡುವುದು ಬಹಳ ಮುಖ್ಯ. ಏಕೆಂದರೆ ಯಾವುದು ಸರಿಯಾಗಿ ಕಾಣುತ್ತದೆಯೋ ಅದನ್ನು ನೀವು ಮದುವೆಯ ದಿನಕ್ಕೆ ಆಯ್ಕೆ ಮಾಡಿಕೊಳ್ಳಬಹುದು.


ನಿಮ್ಮ ಬೇಸ್ ಅನ್ನು ಸರಿಯಾಗಿ ಇರಬೇಕು 


ಪ್ರೈಮರ್ ನಿಮ್ಮ ತ್ವಚೆಯನ್ನು ಕ್ಯಾನ್ವಾಸ್‌ನಂತೆ ಸಿದ್ಧಪಡಿಸುತ್ತದೆ. ಇದು ನಿಮ್ಮ ಮೇಕಪ್ ಹೆಚ್ಚು ಕಾಲ ಉಳಿಯುವಂತೆ ಮಾಡುತ್ತದೆ. ಮೇಕಪ್​ನ ಪ್ರಮುಖ ಅಂಶವೆಂದರೆ ಸರಿಯಾದ ಬೇಸ್​ ಶೇಡ್​ ಆಯ್ಕೆ ಮಾಡುವುದು. ನಿಮ್ಮ ಚರ್ಮದ ಟೋನ್​ಗೆ ಸರಿಯಾಗುವುದನ್ನ  ಆರಿಸಿ. ಒಂದು ದಪ್ಪ ಕೋಟ್ ಬೇಸ್​ ಬದಲಿಗೆ, ತೆಳುವಾದ ಕೋಟ್ ಅನ್ನು ಹಚ್ಚಿ.


ಇದನ್ನೂ ಓದಿ: ಮಕ್ಕಳ ರೂಂನಲ್ಲಿ ಈ ವಸ್ತುಗಳನ್ನು ಇಡಲೇಬಾರದಂತೆ, ಆರೋಗ್ಯಕ್ಕೆ ಹಾನಿಕರ ಅಂತಾರೆ ತಜ್ಞರು


ಲಿಪ್ಸ್ಟಿಕ್ ಶೇಡ್​ ಸರಿಯಾಗಿ ಆಯ್ಕೆಮಾಡಿ


ಕೆಲವರು ತಮ್ಮ ಮೇಕಪ್ ಅನ್ನು ಸರಳ ಮತ್ತು ನೈಸರ್ಗಿಕವಾಗಿರಿಸಿಕೊಳ್ಳಲು ಬಯಸುತ್ತಾರೆ, ಈ ಸಮಯದಲ್ಲಿ ಲಿಪ್​ಸ್ಟಿಕ್​ ಶೇಡ್​ ಆಯ್ಕೆ ಮಾಡುವುದು ಸಹ ಬಹಳ ಮುಖ್ಯವಾಗುತ್ತದೆ. ಕೆಲವರಿಗೆ ಡಾರ್ಕ್ ಶೇಡ್​ ಆದರೆ, ಇನ್ನೂ ಕೆಲವರಿಗೆ ಲೈಟ್ ಶೇಟ್​ ಬಹಳ ಉಪಯುಕ್ತ.


ಈ ಸಮಯದಲ್ಲಿ ಯಾವ ತಪ್ಪು ಮಾಡಬಾರದು?


ಬೇಸ್​ ಹೆಚ್ಚು ದಪ್ಪ ಇರಬಾರದು


ಹೆಚ್ಚಿನ ಜನರು ಸಾಧ್ಯವಾದಷ್ಟು ಕಾಲ ಮೇಕಪ್ ಉಳಿಯುವಂತೆ ಮಾಡಲು ಹಲವಾರು ಲೇಯರ್ ಬೇಸ್​ ಬಳಸುತ್ತಾರೆ. ಇದು ಬಹಳ ದೊಡ್ಡ ತಪ್ಪು. ಇದು ಅತಿಯಾಗಿ ಮೇಕಪ್ ಮಾಡಿದಂತೆ ಕಾಣುತ್ತದೆ ಹಾಗೂ ಫೋಟೋದಲ್ಲಿ ಸಹ ಚೆನ್ನಾಗಿ ಬರುವುದಿಲ್ಲ.



ಸನ್‌ಸ್ಕ್ರೀನ್ ಅನ್ನು ಹಚ್ಚಬೇಡಿ 


ನಿಮ್ಮ ಮದುವೆಯ ದಿನದಂದು ಸನ್‌ಸ್ಕ್ರೀನ್ ಅನ್ನು ಹಚ್ಚದಿರುವುದು  ಉತ್ತಮ ಏಕೆಂದರೆ ಇದು ಕ್ಯಾಮರಾದ ಫ್ಲ್ಯಾಷ್‌ನೊಂದಿಗೆ ನಿಮ್ಮ ಮುಖವನ್ನು ತುಂಬಾ ಬಿಳಿಯಾಗಿ ಕಾಣುವಂತೆ ಮಾಡುತ್ತದೆ. ಅಲ್ಲದೇ, ಇದು ನಿಮ್ಮ ಚರ್ಮವನ್ನು ಜಿಗುಟಾಗಿ ಕಾಣುವಂತೆ ಮಾಡಬಹುದು. ಬದಲಿಗೆ SPF ಹೊಂದಿರುವ ಹಗುರವಾದ ಮಾಯಿಶ್ಚರೈಸರ್‌ಗಳನ್ನು ಬಳಸಿ.


ಇದನ್ನೂ ಓದಿ: ಮನೆಯಲ್ಲಿ ನೀರು ವೇಸ್ಟ್​ ಆಗದಂತೆ ತಡೆಯಲು ಸೂಪರ್ ಹ್ಯಾಕ್ಸ್​ ಟ್ರೈ ಮಾಡಿ


ಹಿಂದಿನ ದಿನ ವ್ಯಾಕ್ಸ್ ಅಥವಾ ಫೇಶಿಯಲ್ ಮಾಡಬೇಡಿ


ಈ ರೀತಿ ಮಾಡಿದ್ರೆ ನಿಮ್ಮ ಚರ್ಮವನ್ನು ಒಣಗಿಸುತ್ತವೆ ಮತ್ತು ಉರಿಯೂತವನ್ನು ಉಂಟುಮಾಡಬಹುದು. ಕನಿಷ್ಠ ಐದು ದಿನಗಳ ಮುಂಚಿತವಾಗಿ ವ್ಯಾಕ್ಸ್ ಮತ್ತು  ಫೇಶಿಯಲ್ ಮಾಡಿಸಿಕೊಳ್ಳಿ.  ತುಟಿ ಪ್ರದೇಶದ ಬಗ್ಗೆ ಸಹ ಗಮನವಿರಲಿ ಕನ್ಸೀಲರ್ ನಿಮ್ಮ ತುಟಿಯ ಬಣ್ಣವನ್ನು ಹೆಚ್ಚು ಕಾಲ ಉಳಿಯಲು ಸಹಾಯ ಮಾಡುತ್ತದೆ. ಹಾಗೆಯೇ, ನಿಮ್ಮ ತುಟಿಗಳ ಸುತ್ತ ಕಪ್ಪು ಬಣ್ಣವಿದ್ದರೆ, ಅದನ್ನು ಮುಚ್ಚಿ ನಂತರ ಲಿಪ್​ಸ್ಟಿಕ್ ಹಚ್ಚಿ.

Published by:Sandhya M
First published: