Relationship Tips: ನಿಮ್ಮ ನಿಶ್ಚಿತಾರ್ಥ, ಮದುವೆ ಮುರಿದು ಬಿತ್ತೆಂದು ಯೋಚಿಸಿ ಕೊರಗಬೇಡಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ

ಜೀವನದ ಒಡನಾಡಿ, ಸಂಗಾತಿ ನಮ್ಮನ್ನು ತೊರೆದು ಹೋದಾಗ ಎಲ್ಲವೂ ನಿಯಂತ್ರಣ ತಪ್ಪುತ್ತದೆ. ಜೀವನದಲ್ಲಿ ಎಲ್ಲವೂ ಮುಗಿದೇ ಹೋಯಿತು ಎನ್ನುವ ಭಾವನೆ ಬರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಜೀವನದ (Life) ಒಡನಾಡಿ, ಸಂಗಾತಿ (Partner) ನಮ್ಮನ್ನು ತೊರೆದು ಹೋದಾಗ ಎಲ್ಲವೂ ನಿಯಂತ್ರಣ ತಪ್ಪುತ್ತದೆ. ಮನಸ್ಸು ರಚ್ಚೆ ಹಿಡಿದು ರೋಧಿಸುತ್ತದೆ. ಜೀವನದಲ್ಲಿ ಎಲ್ಲವೂ ಮುಗಿದೇ ಹೋಯಿತು ಎನ್ನುವ ಭಾವನೆ (Feeling) ಬರುತ್ತದೆ. ನಾವು ಅತಿಯಾಗಿ ಹ್ಚಿಕೊಂಡವರು, ಪ್ರೀತಿಸುವವರು ನಮ್ಮನ್ನು ಬಿಟ್ಟು ಬೇರೆಯವರನ್ನು ಆಯ್ಕೆ ಮಾಡಿಕೊಂಡಾಗ ಅಥವಾ ಕೈ ಹಿಡಿದಾಗ ಮನ್ಸಯ ತಳಮಳಗೊಳ್ಳುತ್ತದೆ. ಏನೋ ಕಳೆದು ಹೋದ ಭಾವ ಕಾಡುತ್ತದೆ. ಅನೇಕ ಜನರು ಜೀವನದಲ್ಲಿ ಎದುರಾಗುವ ಇಂತಹ ಘಟನೆಯನ್ನು ನಿಭಾಯಿಸಲು ಸಾಧ್ಯವಿಲ್ಲದೆ ಖೊನ್ನತೆಗೆ ಒಳಗಾಗುತ್ತಾರೆ. ಜೀವನವೇ ಮುಗಿದಂತೆ ದುಃಖಿಸುತ್ತಾರೆ. ನೋವಿನಲ್ಲೇ (Pain) ದಿನಗಳನ್ನು ಕಳೆಯುತ್ತಾರೆ. ತಮ್ಮದು ಒಂದು ಜೀವನ ಅದರತ್ತ ಗಮನಹರಿಸಲು ಸಾಧ್ಯವಾಗದೇ ಕೊರಗುತ್ತಾರೆ. ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮನ್ನು ಧನಾತ್ಮಕವಾಗಿ (Positive) ಇಟ್ಟುಕೊಳ್ಳಬೇಕು. ಏನೇ ಬರಲಿ ಎದುರಿಸಬೇಕು ಎಂಬ ಮನೋಭಾವನೆ, ಗಟ್ಟಿತನ, ಧೈರ್ಯ ತಳೆದುಕೊಳ್ಳಬೇಕು.

  ಸಂಬಂಧವು ಮುರಿದು ಹೋದಾಗ

  ನಿಮ್ಮ ಮನಸ್ಸಿನಲ್ಲಿ ಆಳವಾಗಿ ಬೇರೂರುವ ನೋವು ನಿಮ್ಮ ಜೀವನದ ಮೇಲೆ ಹಾವಿಯಾಗಲು ಬಿಡಬೇಡಿ. ಕೆಲವೊಮ್ಮೆ ಸಂಬಂಧಗಳು ಕೊಡುವ ಖುಷಿಗಿಂತ ಮುರಿದು ಹೋದಾಗ ನೀಡುವ ದುಃಖವೇ ಜೀವನದ ತುಂಬ ಅಶಾಂತತೆಯನ್ನು ತುಂಬಿ ಬಿಡುತ್ತದೆ. ಯಾವುದೇ ಸಂಬಂಧವು ಮುರಿದು ಹೋದಾಗ, ವ್ಯಕ್ತಿಯು ಸ್ವತಃ ಆಂತರಿಕವಾಗಿ, ಮನಸ್ಸಿನಾಳದಿಂದ ಸಂಪೂರ್ಣವಾಗಿ ಕುಸಿಯುತ್ತಾನೆ. ಮನ್ಸು ಒಡೆಯುತ್ತದೆ.

  ನಿಶ್ಚಿತಾರ್ಥ ಅಥವಾ ವೈವಾಹಿಕ ಜೀವನದ ಘಟನೆ

  ಅದರಲ್ಲೂ ನಿಶ್ಚಿತಾರ್ಥ ಅಥವಾ ವೈವಾಹಿಕ ಜೀವನದ ಬಗ್ಗೆ ಇಂತಹ ಘಟನೆಗಳು ನಡೆದರೆ ವಧು ಅಥವಾ ವರ ಸುಧಾರಿಸಿಕೊಳ್ಳುವುದೇ ಒಂದು ಹರಸಾಹಸ ಆಗುತ್ತದೆ. ಮದುವೆ ಮುರಿದು ಬಿದ್ದ ನೋವಿನಿಂದ ಹೊರ ಬರಲು ಬಹಳ ಸಮಯ ಹಿಡಿಯುತ್ತದೆ. ಬದುಕಿನ ಒಡನಾಡಿ, ಸಂಗಾತಿ ಹೊರಟು ಹೋದಾಗ ಎಲ್ಲವೂ ಚದುರಿದಂತೆ ಕಾಣುತ್ತದೆ. ಅನೇಕ ಜನರು ಜೀವನದ ಈ ಕ್ಷಣವನ್ನು ನಿಭಾಯಿಸಲು ಸಾಧ್ಯವಿಲ್ಲದೇ ಸೋಲುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನಮ್ಮನ್ನು ನಾವು ಹೇಗೆ ನಿಭಾಯಿಸಬಹುದು ಎಂಬುದನ್ನು ಇಲ್ಲಿ ನೋಡಿ.

  ಇದನ್ನೂ ಓದಿ: ನಿಮ್ಮ ಸಂಗಾತಿ ಮತ್ತೊಬ್ಬರ ಜೊತೆ ಸಂಬಂಧ ಇಟ್ಕೊಂಡಿದ್ರೆ ನಿಭಾಯಿಸೋದು ಹೇಗೆ?

  ಸತ್ಯವನ್ನು ಒಪ್ಪಿಕೊಳ್ಳಿ

  ಸಮಾಜದ ಭಯದಿಂದ ಅನೇಕ ಬಾರಿ ಜನರು ನಿಶ್ಚಿತಾರ್ಥ ಅಥವಾ ಮದುವೆ ಮುರಿದು ಬೀಳುವಂತಹ ವಿಷಯಗಳನ್ನು ಒಪ್ಪಿಕೊಳ್ಳಲು ಹೆದರುತ್ತಾರೆ. ವಿಷಯವು ಹೃದಯವನ್ನು ಕಾಡಲು ಪ್ರಾರಂಭಿಸುತ್ತದೆ. ಜನರು ಏನು ಅನ್ನುತ್ತಾರೋ ಏನೋ, ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂದು ಮರ್ಯಾದೆಗೆ ಅಂಜುತ್ತಾರೆ. ಈ ಭಾವನೆಗಳಿಂದ ನಿಮ್ಮನ್ನು ನಿರುತ್ಸಾಹಗೊಳಿಸಬೇಡಿ. ಬದಲಿಗೆ ಅದನ್ನು ಸುಲಭವಾಗಿ ಸ್ವೀಕರಿಸಿ. ನಿಮ್ಮ ಸಂಬಂಧವು ಇಲ್ಲಿಯವರೆಗೆ ಮಾತ್ರ ಇತ್ತು. ಮತ್ತು ಜೀವನದಲ್ಲಿ ಮುಂದುವರಿಯಲು ಅದರಿಂದ ಹೊರಬರುವುದು ಅವಶ್ಯಕ ಎಂಬ ಅಂಶವನ್ನು ಒಪ್ಪಿಕೊಳ್ಳಿ.

   ನಿಮ್ಮನ್ನು ನೀವು ನಂಬಿರಿ

  ಮದುವೆ ಅಥವಾ ನಿಶ್ಚಿತಾರ್ಥವು ಮುರಿದು ಹೋದಾಗ ಮನಸ್ಸಿನ ನಂಬಿಕೆ ಕೊನೆಗೊಳ್ಳುತ್ತದೆ. ತಪ್ಪು ಬೇರೊಬ್ಬರದ್ದಾದರೂ ಮೊದಲು ಕಾಡುವುದು ನಮ್ಮನ್ನೇ. ಆಗ ವ್ಯಕ್ತಿ ನಂಬಿಕೆ ಕಳೆದುಕೊಳ್ಳುತ್ತಾನೆ. ಹಾಗಾಗಿ ಮೊದಲು ನಿಮ್ಮನ್ನು ನೀವು ನಂಬಿ. ನಿಮ್ಮ ಮೇಲೆ ನಂಬಿಕೆ ಇಡುವುದು ಅವಶ್ಯಕ. ಆತ್ಮವಿಶ್ವಾಸವನ್ನು ಕಳೆದುಕೊಳ್ಳುವುದು ನಿಮ್ಮ ಜೀವನದಲ್ಲಿ ತೊಂದರೆಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ ಯಾವುದೇ ಸಂದರ್ಭದಲ್ಲಿ, ನಿಮ್ಮ ಮೇಲೆ ನಂಬಿಕೆ ಇರಿಸಿ. ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ.

  ಧನಾತ್ಮಕವಾಗಿರಿ

  ಏನಾದರೂ ತಪ್ಪಾದಾಗ ನಕಾರಾತ್ಮಕ ಶಕ್ತಿಯು ನಮ್ಮೊಳಗೆ ಮೊದಲು ಹಾವಿಯಾಗುತ್ತದೆ. ದುಃಖದ ಸಮಯದಲ್ಲಿ ನಾವು ಸರಿಯಾದ ವಿಷಯಗಳನ್ನು ಯೋಚಿಸಲು ಸಾಧ್ಯವಾಗುವುದಿಲ್ಲ. ಆದರೆ ವಾಸ್ತವದಲ್ಲಿ ನಮ್ಮನ್ನು ಧನಾತ್ಮಕವಾಗಿ ಇಟ್ಟುಕೊಳ್ಳುವುದನ್ನು ಹೊರತುಪಡಿಸಿ ನಮ್ಮ ಕೈಯಲ್ಲಿ ಹೆಚ್ಚೇನೂ ಇಲ್ಲ. ಅಂತಹ ಪರಿಸ್ಥಿತಿಯಲ್ಲಿ, ಏನಾಯಿತು ಎಂದು ಊಹಿಸುವ ಮೂಲಕ ನಕಾರಾತ್ಮಕತೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ.

  ಇದನ್ನೂ ಓದಿ: ಮದುವೆಯ ನಂತರದ ಜೀವನ ಚೆನ್ನಾಗಿರಬೇಕು ಅಂದ್ರೆ ಈ ಸಲಹೆ ಪಾಲಿಸಿ

  ಒಂಟಿತನದಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ

  ನಿಮ್ಮ ಜೀವನದುದ್ದಕ್ಕೂ ನೀವು ಒಟ್ಟಿಗೆ ಇರಬೇಕೆಂದು ಕನಸು ಕಂಡ ವ್ಯಕ್ತಿಯನ್ನು ಕಳೆದುಕೊಳ್ಳುವುದು ತುಂಬಾ ದುಃಖಕರವಾಗಿದೆ. ಇದು ಸಂಭವಿಸಿದಾಗ, ಜನರು ಪ್ರತ್ಯೇಕವಾಗಿ ವಾಸಿಸಲು ಇಷ್ಟಪಡುತ್ತಾರೆ. ಏಕಾಂತದಲ್ಲಿ ದೀರ್ಘಕಾಲ ಕಳೆಯುವುದು ನಿಮಗೆ ವಿಷದಂತೆ ಕೆಲಸ ಮಾಡುತ್ತದೆ. ಆದ್ದರಿಂದ ಒಂಟಿತನದಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ. ನಿಮ್ಮನ್ನು ಕಾರ್ಯ ನಿರತವಾಗಿರಿಸಲು ಸ್ನೇಹಿತರೊಂದಿಗೆ ಮಾತನಾಡಿ, ಪುಸ್ತಕಗಳನ್ನು ಓದಿ ಅಥವಾ ಕೆಲವು ಹೊಸ ಚಟುವಟಿಕೆಗಳನ್ನು ಮಾಡಿ.
  Published by:renukadariyannavar
  First published: