ವಯಸ್ಸಾಗುತ್ತಿದ್ದಂತೆ (Aged) ಮುಖದ ಮೇಲೆ ನೆರಿಗೆಗಳು ಬೀಳುವುದು, ಸುಕ್ಕುಗಳು, ಮೊಡವೆಗಳಂತಹ ಸಮಸ್ಯೆ (Acne Problem) ಹೆಚ್ಚುತ್ತದೆ. ಇದನ್ನು ತೊಡೆದು ಹಾಕಲು ತುಂಬಾ ಜನರು ಚಿಂತೆಗೆ ಒಳಗಾಗುತ್ತಾರೆ. ಕಪ್ಪು ಕಲೆಗಳು ಮತ್ತು ಚರ್ಮ ನೆರಿಗೆ ಬೀಳುವುದು ಸಾಕಷ್ಟು ಸಮಸ್ಯೆ ತಂದೊಡ್ಡುತ್ತದೆ. ಇದು ಸೌಂದರ್ಯ (Beauty) ಹಾಳು ಮಾಡುತ್ತದೆ. ಅಲ್ಲದೇ ಕೆಲವೊಮ್ಮೆ ಚರ್ಮ ಸಮಸ್ಯೆಗಳಿಗೂ (Skin Problems) ಕಾರಣವಾಗುತ್ತದೆ. ಆದರೆ ವಯಸ್ಸಾದ ನಂತರ ಈ ತರಹದ ಸಮಸ್ಯೆಗಳು ಕಾಮನ್. ಆದರೂ ಸಹ ಸೂಕ್ತವಾಗಿ ಚರ್ಮದ ಆರೈಕೆ ಮಾಡಿಕೊಳ್ಳುವುದರಿಂದ ಚರ್ಮದ ಸಮಸ್ಯೆಗಳು ನಿವಾರಣೆ ಆಗುತ್ತವೆ. ವಯಸ್ಸಾದ ನಂತರ ಚರ್ಮದ ಸಮಸ್ಯೆಗೆ ದಿನವೂ ನಿಯಮಿತವಾಗಿ ಆರೈಕೆ ಮಾಡುವುದು ಮುಖ್ಯ.
ವಯಸ್ಸಾದ ನಂತರ ಚರ್ಮದ ಆರೈಕೆಗೆ ಕಾಳಜಿ ವಹಿಸಿ
ವಯಸ್ಸಿನ ನಂತರ ಚರ್ಮದ ಮೇಲೆ ಸೂಕ್ಷ್ಮ ಗೆರೆ, ಸುಕ್ಕು ಮತ್ತು ಕಪ್ಪು ಕಲೆಗಳಂತಹ ವಯಸ್ಸಾದ ಚಿಹ್ನೆಗಳು ಸಹಜ. ಅದರಲ್ಲೂ ಇಂದಿನ ದಿನಗಳಲ್ಲಿ ಧೂಳು, ಕೊಳಕು, ಪರಿಸರದಲ್ಲಿ ಹೆಚ್ಚುತ್ತಿರುವ ಮಾಲಿನ್ಯ, ಸೂರ್ಯನ ಹಾನಿಕಾರಕ ಕಿರಣಗಳು ಮತ್ತು ವಿವಿಧ ರೀತಿಯ ರಾಸಾಯನಿಕಯುಕ್ತ ಉತ್ಪನ್ನಗಳ ಬಳಕೆಯು ಚರ್ಮವನ್ನು ಬೇಗ ಹಾಳು ಮಾಡುತ್ತದೆ.
ಚರ್ಮವು ಅಕಾಲಿಕ ವಯಸ್ಸಿಗೆ ಬಲಿಯಾಗುತ್ತಿದೆ. ಇದರಿಂದ ತುಂಬಾ ಮಹಿಳೆಯರು ಚಿಂತೆಗೆ ಒಳಗಾಗುತ್ತಾರೆ. ಹಾಗಾಗಿ ಚರ್ಮಕ್ಕೆ ಸರಿಯಾದ ಕಾಳಜಿ ಮಾಡುವ ಮೂಲಕ ಅಕಾಲಿಕ ವಯಸ್ಸಾದ ಚಿಹ್ನೆಗಳನ್ನು ತಡೆಯಬಹುದು.
ಆ್ಯಂಟಿ ಏಜಿಂಗ್ ಆಯಿಲ್ ಗಳು
ರೋಸ್ಮರಿ ಎಣ್ಣೆ
ವಯಸ್ಸಾದ ಚಿಹ್ನೆಗಳು ಅಕಾಲಿಕವಾಗಿ ಹೊರಹೊಮ್ಮುವುದನ್ನು ತಡೆಯಲು ಆ್ಯಂಟಿ ಏಜಿಂಗ್ ತೈಲಗಳು ಸಹಕಾರಿ. ರೋಸ್ಮರಿ ಎಣ್ಣೆ ಅನ್ವಯಿಸಿ. ಇದು ಆಂಟಿಮೈಕ್ರೊಬಿಯಲ್ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣ ಹೊಂದಿದೆ. ಚರ್ಮದ ಮೇಲೆ ಅದರ ಬಳಕೆಯು ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುತ್ತದೆ.
ದಿನಕ್ಕೆ ಒಮ್ಮೆ ನಿಯಮಿತವಾಗಿ ರೋಸ್ಮರಿ ಎಣ್ಣೆಯಿಂದ ಚರ್ಮವನ್ನು ಮಸಾಜ್ ಮಾಡಿದರೆ ಅನೇಕ ಸಕಾರಾತ್ಮಕ ಸುಧಾರಣೆ ಕಂಡು ಬರುತ್ತದೆ. ಚರ್ಮದ ರಕ್ತ ಪರಿಚಲನೆ ಹೆಚ್ಚಾಗಿ ಚರ್ಮದ ಊತದಲ್ಲಿ ಗಮನಾರ್ಹ ಇಳಿಕೆ ಕಂಡು ಬರುತ್ತದೆ. ಈ ಎಲ್ಲಾ ಅಂಶಗಳು ವಯಸ್ಸಾದ ಚಿಹ್ನೆಗಳು ಅಕಾಲಿಕವಾಗಿ ಕಾಣಿಸಿಕೊಳ್ಳುವುದನ್ನು ತಡೆಯುತ್ತದೆ.
ವಿಟಮಿನ್ ಇ ಎಣ್ಣೆ
ವಿಟಮಿನ್ ಇ ಎಣ್ಣೆಯು ಶಕ್ತಿಯುತವಾದ ಉತ್ಕರ್ಷಣ ನಿರೋಧಕ. ಚರ್ಮದ ಮೇಲೆ ಅದರ ಸಾಮಯಿಕ ಬಳಕೆಯು ಚರ್ಮವನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಚರ್ಮದ ಟೋನ್ ಅನ್ನು ಸುಧಾರಿಸುದೆ. ವಿಟಮಿನ್ ಇ ಚರ್ಮದ ಮೇಲೆ ಸ್ವತಂತ್ರ ರಾಡಿಕಲ್ಗಳ ಪರಿಣಾಮ ಕಡಿಮೆ ಮಾಡುತ್ತದೆ. ಚರ್ಮದ ಮೇಲೆ ಸಾರಭೂತ ತೈಲದ ಪರಿಣಾಮ ಹೆಚ್ಚಿಸಲು ವಿಟಮಿನ್ ಇ ಒಂದರಿಂದ ಎರಡು ಹನಿ ಸೇರಿಸಿ, ಮಸಾಜ್ ಮಾಡಿ.
ಶ್ರೀಗಂಧದ ಎಣ್ಣೆ
ಶ್ರೀಗಂಧದ ಎಣ್ಣೆಯಲ್ಲಿ ಉರಿಯೂತ ನಿವಾರಕ ಗುಣಗಳಿವೆ. ಇದು ವಿವಿಧ ರೀತಿಯ ಚರ್ಮದ ಸಮಸ್ಯೆಗಳಿಗೆ ಸೂಕ್ತ ಪರಿಹಾರವಾಗಿದೆ. ನೈಸರ್ಗಿಕವಾಗಿ ಚರ್ಮವನ್ನು ಹೈಡ್ರೇಟ್ ಮತ್ತು ಹೊಳೆಯುವಂತೆ ಮಾಡುತ್ತದೆ. ಸುಕ್ಕುಗಳನ್ನು ತಡೆಯುತ್ತದೆ. ಚರ್ಮದಲ್ಲಿ ಸಾಕಷ್ಟು ತೇವಾಂಶ ಉಳಿಸುತ್ತದೆ.
ನಿಂಬೆ ಎಣ್ಣೆ
ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧ ನಿಂಬೆ ಎಣ್ಣೆಯಲ್ಲಿ ವಿಟಮಿನ್ ಸಿ ಸಾಕಷ್ಟು ಪ್ರಮಾಣದಲ್ಲಿದೆ. ಉತ್ಕರ್ಷಣ ನಿರೋಧಕ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಚರ್ಮದ ಮೇಲೆ ಅಕಾಲಿಕ ವಯಸ್ಸಾದ ಚಿಹ್ನೆಗಳ ಬೆಳವಣಿಗೆ ತಡೆಯುತ್ತದೆ.
ಇದನ್ನೂ ಓದಿ: ಸದೃಢ ಆರೋಗ್ಯಕ್ಕೆ ಈ ಹಣ್ಣುಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿ!
ಗುಲಾಬಿ ಎಣ್ಣೆ.
ಗುಲಾಬಿ ಜನಪ್ರಿಯ ಹೂವು. ವಿವಿಧ ರೀತಿಯ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ನಿವಾರಣೆಗೆ ಬಳಸುತ್ತಾರೆ. ಎಣ್ಣೆಯ ಬಳಕೆಯು ಚರ್ಮಕ್ಕೆ ಪರಿಣಾಮಕಾರಿ. ಗುಲಾಬಿ ಎಣ್ಣೆಯು ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ. ಗುಲಾಬಿ ಎಣ್ಣೆಯ ಬಳಕೆಯು ನೋವು ಮತ್ತು ಆತಂಕ ನಿವಾರಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ