ನಿಮಗೆ ಕಾರ್ನ್ (Corn) ತಿನ್ನುವುದೆಂದರೆ ಸಖತ್ ಇಷ್ಟವಿರಬಹುದು (Like). ಮಳೆಗಾಲವಿರಲಿ, ಚಳಿಗಾಲ, ಬೇಸಿಗೆಕಾಲ ಯಾವುದೇ ಕಾಲವಿರಲಿ ಕಾರ್ನ್ ತಿನ್ನೋಕೆ ಬೇಸರ ಬರಲ್ಲ. ನೀವು ಕಾರ್ನ್ ಪ್ರಿಯರಾಗಿದ್ದರೆ ಯಾವಾಗಲೂ ಸೇವನೆ ಮಾಡುತ್ತೀರಿ. ಅದರಲ್ಲೂ ಸಂಜೆ ಹೊತ್ತು ಪಾರ್ಕ್ ನಲ್ಲಿ ನಡೆಯುತ್ತಾ ಕಾರ್ನ್ ಸವಿಯುವುದರ ಮಜವೇ ಬೇರೆ. ಕುದಿಸಿ, ಬೆಣ್ಣೆ ಹಾಕಿದ ಮಾಡಿದ ಕಾರ್ನ್, ಸುಟ್ಟು ತಿನ್ನುವುದು, ಚಾಟ್ ಮಸಾಲಾ ಜೊತೆ ಕಾರ್ನ್ ಸೇವಿಸುವುದು ರುಚಿಕರವಾಗಿರುತ್ತದೆ. ಅದಾಗ್ಯು ಸೀಮಿತ ಪ್ರಮಾಣದಲ್ಲಿ ದಿನವೂ ಕಾರ್ನ್ ಸೇವಿಸುವುದು ಹಲವು ಆರೋಗ್ಯ (Health) ಪ್ರಯೋಜನ ನೀಡುತ್ತದೆ. ಕಾರ್ನ್ ಸೇವನೆಯಷ್ಟೇ ಅದರ ಕೂದಲೂ (Corn Hair) ಪೋಷಕಾಂಶ ಸಮೃದ್ಧವಾಗಿದೆ.
ಸಾಮಾನ್ಯವಾಗಿ ಕಾರ್ನ್ ನ್ನು ಸಿಪ್ಪೆ ಸುಲಿದು ನಂತರ ಬೇಯಿಸಿ ತಿನ್ನಲಾಗುತ್ತದೆ. ಸಿಪ್ಪೆ ತೆಗೆದ ಜೋಳದ ಕಾಳುಗಳನ್ನು ಮಾತ್ರ ಬಳಸಿಕೊಂಡು ಉಳಿದ ಕೂದಲನ್ನು ತೆಗೆದು ಎಸೆಯಲಾಗುತ್ತದೆ. ಆದರೆ ಈ ತಪ್ಪು ಮಾಡಬೇಡಿ. ಕೆಲವೊಮ್ಮೆ ಕಾರ್ನ್ ಗೆ ಅಂಟಿದ ಕೂದಲು ಅದನ್ನು ಸುಡುವಾಗ ಸುಟ್ಟು ಹೋಗುತ್ತದೆ.
ರೇಷ್ಮೆಯಂತ ಮೃದುವಾದ ಈ ಕೂದಲುಗಳು ಕಾರ್ನ್ ಕಾಳಿಗಿಂತ ಹೆಚ್ಚು ಪೋಷಕಾಂಶಗಳಿಂದ ಸಮೃದ್ಧವಾಗಿದೆಯಂತೆ. ಇವುಗಳು ಹೆಚ್ಚು ಆರೋಗ್ಯ ಪ್ರಯೋಜನ ನೀಡುತ್ತವೆ.
ಕಾರ್ನ್ ಕೂದಲು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ
ಕಾರ್ನ್ ಕೂದಲು ಮನೆಯಲ್ಲಿ ಔಷಧಿಯಾಗಿ ಬಳಕೆ ಮಾಡಬಹುದು. ಕಾರ್ನ್ ಕೂದಲಿನಿಂದ ತಯಾರಿಸಿದ ಚಹಾವು ಅನೇಕ ಸಣ್ಣ ಕಾಯಿಲೆಗಳನ್ನು ನಿಯಂತ್ರಿಸುವಲ್ಲಿ ಬಹಳ ಪರಿಣಾಮಕಾರಿ ಅಂತಾರೆ ತಜ್ಞರು. ಕಾರ್ನ್ ಹುರಿಯುವುದು, ಸುಡುವ ಬದಲು ಅದರನ್ನು ಮೊದಲು ಚೆನ್ನಾಗಿ ತೊಳೆದು, ಕೂದಲನ್ನು ಸಂಗ್ರಹಿಸಿಡಿ.
ಕಾರ್ನ್ ಕೂದಲನ್ನು ಚೆನ್ನಾಗಿ ತೊಳೆದು ಫ್ರಿಡ್ಜ್‌ನಲ್ಲಿ ಗಾಳಿಯಾಡದ ಕಂಟೇನರ್ ನಲ್ಲಿ ಸಂಗ್ರಹಿಸಿದರೆ ಬೇಗ ಕೆಡುವುದಿಲ್ಲ. ಜೋಳದ ಕೂದಲಿನ ಚಹಾವನ್ನು ತಯಾರಿಸುವ ಮೂಲಕ ಈ ಕೂದಲಿನಲ್ಲಿರುವ ಔಷಧೀಯ ಗುಣಗಳ ಲಾಭ ಪಡೆಯಬಹುದು.
ಕಾರ್ನ್ ಕೂದಲಿನಲ್ಲಿರುವ ಪೋಷಕಾಂಶಗಳು
ಕಾರ್ನ್ ಕೂದಲಿನಲ್ಲಿ ಅನೇಕ ರೀತಿಯ ಪೋಷಕಾಂಶಗಳಿವೆ. ವಿಟಮಿನ್ ಎ, ಬಿ2, ಸಿ, ಇ, ಕೆ, ಖನಿಜಗಳು, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣದಲ್ಲಿ ಸಮೃದ್ಧವಾಗಿದೆ. ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ.
ಕಾರ್ನ್ ಕೂದಲಿನ ಚಹಾದ ಪ್ರಯೋಜನಗಳು
ಕಾರ್ನ್ ಕೂದಲಿನ ಚಹಾವು ದೇಹವು ನಿರ್ವಿಷಗೊಳ್ಳುತ್ತದೆ. ತೂಕ ನಷ್ಟಕ್ಕೆ ಸಹಕಾರಿ. ಇದರಲ್ಲಿರುವ ನಾರಿನಂಶವು ತೂಕ ಇಳಿಸಲು ಸಹ ಸಹಾಯ ಮಾಡುತ್ತದೆ. ಮಧುಮೇಹ ಇರುವವರು ದಿನಕ್ಕೆ ಒಂದು ಬಾರಿ ಕಾರ್ನ್ ಚಹಾ ಕುಡಿಯಬಹುದು. ಈ ಚಹಾಗಳು ದೇಹದಲ್ಲಿ ಇರುವ ಇನ್ಸುಲಿನ್ ಅನ್ನು ಸಕ್ರಿಯಗೊಳಿಸುತ್ತವೆ. ಇದು ಸಕ್ಕರೆಯ ಮಟ್ಟವು ನಿಯಂತ್ರಣಕ್ಕೆ ಬರುತ್ತದೆ ಎಂದು ಅಧ್ಯಯನವೊಂದು ಹೇಳಿದೆ.
ಮೂತ್ರಪಿಂಡದ ಆರೋಗ್ಯ ಕಾಪಾಡುತ್ತದೆ
ಕಾರ್ನ್ ಚಹಾ ಸೇವಿಸಿದರೆ ಕಿಡ್ನಿ ಕ್ಲೀನಿಂಗ್ ಆಗುತ್ತದೆ. ಕಲ್ಲುಗಳ ಅಪಾಯವೂ ಕಡಿಮೆ. ಆದರೆ ಚಹಾದ ಅತಿಯಾದ ಸೇವನೆ ಹೆಚ್ಚು ಮೂತ್ರ ವಿಸರ್ಜನೆಯ ಸಮಸ್ಯೆ ಉಂಟಾಗುತ್ತದೆ. ಆದರೆ ಕಿಡ್ನಿ ಸಮಸ್ಯೆ ಇರುವವರಿಗೆ ಇದು ಪ್ರಯೋಜನಕಾರಿಯಾಗಿದೆ. ಈ ಚಹಾದಿಂದ ದೇಹದಲ್ಲಿ ಸಂಗ್ರಹವಾದ ನೈಟ್ರೇಟ್ ಹೋಗುತ್ತದೆ. ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ದೂರವಾಗುತ್ತದೆ.
ಕಾರ್ನ್ ಕೂದಲು ಚಹಾ ಮಾಡುವುದು ಹೇಗೆ?
ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಬಿಸಿ ಮಾಡಿ. ನೀರು ಕುದಿಯುವಾಗ ಜೋಳದ ಕೂದಲನ್ನು ಸೇರಿಸಿ. ಸ್ವಲ್ಪ ಸಮಯ ಕುದಿಯಲು ಬಿಡಿ. ನಂತರ ತೆಗೆಯಿರಿ. ಕವರ್ ಮಾಡಿ ಇಪ್ಪತ್ತು ನಿಮಿಷ ಹಾಗೇ ಬಿಡಿ.
ಇದನ್ನೂ ಓದಿ: ದಿನವೂ ಪಪ್ಪಾಯಿ ನೀರನ್ನು ಕುಡಿಯಿರಿ, ಈ ಆರೋಗ್ಯ ಪ್ರಯೋಜನ ಪಡೆಯಿರಿ
ನಂತರ ಕಾರ್ನ್ ಕೂದಲಿನ ಬೇಯಿಸಿದ ನೀರಿನಲ್ಲಿ ನಿಂಬೆ ಮಿಶ್ರಣ ಮಾಡಿ. ಸೇವಿಸಿ. ಇದನ್ನು ನೀವು ಎರಡು ಮೂರು ದಿನಗಳವರೆಗೆ ಬಳಸಬಹುದು. ಫ್ರಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಚಹಾವನ್ನು ಕುಡಿಯುವುದು ಹೆಚ್ಚು ಪ್ರಯೋಜನಕಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ