ಆಲೂಗಡ್ಡೆ ಸಿಪ್ಪೆಯಿಂದ 20 ನಿಮಿಷಗಳಲ್ಲಿ ಕ್ರಿಸ್ಪಿ ಚಿಪ್ಸ್ ತಯಾರಿಸಿ..!; ಮಾಡುವ ವಿಧಾನ ಇಲ್ಲಿದೆ

ನಿರುಪಯುಕ್ತ ಎಂದು ಬಿಸಾಡುವ ಆಲೂಗಡ್ಡೆಯ ಸಿಪ್ಪೆಯಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಆಲೂಗಡ್ಡೆಯಲ್ಲಿ ಸಿಪ್ಪೆ ವಿಟಮಿನ್ ಸಿ, ಬಿ, ಕಬ್ಬಿಣ, ಕ್ಯಾಲ್ಶಿಯಂ, ಪೊಟ್ಯಾಶಿಯಮ್ ಮತ್ತು ಇತರ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತದೆ.

ಆಲೂಗಡ್ಡೆಯ ಸಿಪ್ಪೆಯಿಂದ ಮಾಡಿರುವ ಚಿಪ್ಸ್

ಆಲೂಗಡ್ಡೆಯ ಸಿಪ್ಪೆಯಿಂದ ಮಾಡಿರುವ ಚಿಪ್ಸ್

  • Share this:
ಕೆಲವು ತರಕಾರಿಗಳನ್ನು ನಾವು ಸಿಪ್ಪೆ ತೆಗೆದು ಅವುಗಳ ಒಳಭಾಗ ಮಾತ್ರ ಅಡುಗೆಗೆ ಉಪಯೋಗಿಸುತ್ತೇವೆ. ಆದರೆ ಎಷ್ಟೋ ತರಕಾರಿಗಳಲ್ಲಿ ಅವುಗಳ ಸಿಪ್ಪೆಗಳಿಂದಲೂ ನೀವು ಏನಾದರೂ ಒಂದು ತಿನಿಸು ಮಾಡಬಹುದು ಮತ್ತು ಆ ತರಕಾರಿಗಳ ಸಿಪ್ಪೆಯಲ್ಲಿ ಆರೋಗ್ಯಕ್ಕೆ ಅವಶ್ಯಕವಾಗಿರುವಂತಹ ಅನೇಕ ಪೋಷಕಾಂಶಗಳು ಇರುತ್ತವೆ ಎನ್ನುವುದರ ಬಗ್ಗೆ ನಮಗೆ ಅಷ್ಟಾಗಿ ಅರಿವಿರುವುದಿಲ್ಲ. ಆ ಸಾಲಿನಲ್ಲಿ ಆಲೂಗಡ್ಡೆಯು ಸಹ ಸೇರಿದೆ. ಬಹಳಷ್ಟು ಜನರಿಗೆ ಆಲೂಗಡ್ಡೆಯ ಸಿಪ್ಪೆಯಲ್ಲಿರುವ ಪೋಷಕಾಂಶಗಳು ಮತ್ತು ಅವುಗಳಿಂದ ಒಂದು ಬಗೆಯ ಕ್ರಿಸ್ಪಿ ಚಿಪ್ಸ್ ಮಾಡಿಕೊಳ್ಳಬಹುದು ಎಂದು ತಿಳಿದಿರಲಿಕ್ಕಿಲ್ಲ. ಇಲ್ಲಿ ಆಲೂಗಡ್ಡೆಯು ಆಹಾರಕ್ಕೆ ಎಷ್ಟು ಉಪಯೋಗಕಾರಿಯೋ ಅದರ ಸಿಪ್ಪೆಯಿಂದಲೂ ಅಷ್ಟೇ ಉಪಯೋಗಗಳಿವೆ.


ನೀವು ಪ್ರತಿದಿನ ಬೆಳಗ್ಗೆ ತಿಂಡಿ ತಯಾರು ಮಾಡುವುದರಿಂದ ಹಿಡಿದು ರಾತ್ರಿ ತಯಾರಿಸುವ ಅಡುಗೆಯಲ್ಲಿ ಎಲ್ಲಾದರೂ ಆಲೂಗಡ್ಡೆಯನ್ನು ಬಳಸಿರುತ್ತೀರಿ. ಬಳಸಿದ ಆಲೂಗಡ್ಡೆಯ ಸಿಪ್ಪೆಯನ್ನು ಮಾತ್ರ ಕಸದ ತೊಟ್ಟಿಗೆ ಹಾಕುತ್ತೀರಿ. ಆದರೆ, ನಿರುಪಯುಕ್ತ ಎಂದು ನೀವು ಬಿಸಾಡಿದ ಆಲೂಗಡ್ಡೆಯ ಸಿಪ್ಪೆಯಿಂದ ಕೇವಲ 20 ನಿಮಿಷಗಳಲ್ಲಿ ನಿಮ್ಮ ಮನೆಯಲ್ಲಿರುವ ಮಕ್ಕಳಿಗಾಗಿ ಮಸಾಲೆಯುಕ್ತ ಕ್ರಿಸ್ಪಿ ಚಿಪ್ಸ್ ತಯಾರಿಸಬಹುದಾಗಿದೆ.
ನಮ್ಮ ನಿಮ್ಮೆಲ್ಲರ ಮನೆಯಲ್ಲಿ ನಮ್‌ಕೀನ್‌, ಬಿಸ್ಕತ್ತು, ಭುಜಿಯಾಗಳಂತಹ ತಿನ್ನುವ ಪದಾರ್ಥಗಳಿಂದ ಡಬ್ಬಿಗಳು ತುಂಬಿರುತ್ತವೆ, ಅವುಗಳನ್ನೆಲ್ಲ ತಿಂದು ಬೇಸರವಾಗಿದ್ದರೆ, ಈ ಆಲೂಗಡ್ಡೆಯನ್ನು ಆಹಾರಕ್ಕೆ ಸೇರಿಸಿದ ನಂತರ ಸಿಪ್ಪೆ ಬಿಸಾಡದೆ ಅವುಗಳಿಂದ ಕೇವಲ 20 ನಿಮಿಷಗಳಲ್ಲಿ ಚಿಪ್ಸ್‌ ತಯಾರಿಸಿಕೊಂಡು ತಿನ್ನಬಹುದಾಗಿದೆ.ಆಲೂಗಡ್ಡೆಯ ಸಿಪ್ಪೆಯಿಂದ ಚಿಪ್ಸ್ ಹೇಗೆ ತಯಾರಿಸಬಹುದು? ಮಾಡುವ ವಿಧಾನ ಇಲ್ಲಿದೆ


ಆಲೂಗಡ್ಡೆ ಸಿಪ್ಪೆಯನ್ನು ಸಂಗ್ರಹಿಸಿ ಸ್ವಚ್ಛಗೊಳಿಸಿ, ನಂತರ ಅವುಗಳನ್ನು ಸ್ವಲ್ಪ ಎಣ್ಣೆಯಲ್ಲಿ ಹಾಕಿಕೊಂಡು ಚೆನ್ನಾಗಿ ಕಲಕಿ ಅವುಗಳನ್ನು ಮೈಕ್ರೋ ಓವನ್‌ನಲ್ಲಿಡಿ ಕಂದು ಬಣ್ಣಕ್ಕೆ ಬರುವವರೆಗೆ ಹೊರಗಡೆ ತೆಗೆಯಬೇಡಿ.


ಆನಂತರ ಬೇರೆ ಪಾತ್ರೆಯಲ್ಲಿ ಸ್ವಲ್ಪ ಉಪ್ಪು, ಮೆಣಸಿನ ಪುಡಿ, ಮೆಣಸು, ಇತರೆ ಮಸಾಲೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಅದರಲ್ಲಿ ಓವನ್‌ನಿಂದ ತೆಗೆದ ಚಿಪ್ಸ್ ಹಾಕಿಕೊಂಡು ಚೆನ್ನಾಗಿ ಕಲಕಿ ಸ್ವಲ್ಪ ಸಮಯದವರೆಗೆ ಹಾಗೆ ಬಿಡಿ, ನಂತರ ಸೇವಿಸಿ.


ನೀವು ಇದನ್ನು ಸಂಜೆಯ ಚಹಾದೊಂದಿಗೆ ಸೇವಿಸಬಹುದಾಗಿದೆ ಅಥವಾ ರುಚಿಕರವಾದ ಚಟ್ನಿಯೊಂದಿಗೂ ಸೇವಿಸಬಹುದು.


ಆಲೂಗಡ್ಡೆ ಸಿಪ್ಪೆಯಿಂದ ಆರೋಗ್ಯಕ್ಕಾಗುವ ಪ್ರಯೋಜನಗಳು


ನಿರುಪಯುಕ್ತ ಎಂದು ಬಿಸಾಡುವ ಆಲೂಗಡ್ಡೆಯ ಸಿಪ್ಪೆಯಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಆಲೂಗಡ್ಡೆಯಲ್ಲಿ ಸಿಪ್ಪೆ ವಿಟಮಿನ್ ಸಿ, ಬಿ, ಕಬ್ಬಿಣ, ಕ್ಯಾಲ್ಶಿಯಂ, ಪೊಟ್ಯಾಶಿಯಮ್ ಮತ್ತು ಇತರ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತದೆ. ಅದರೊಂದಿಗೆ ಈ ಆಲೂಗಡ್ಡೆ ಸಿಪ್ಪೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯಕವಾಗಿದೆ.

ಅಲ್ಲದೇ ಸಿಪ್ಪೆ ನಿಮ್ಮ ಚರ್ಮ, ಕೂದಲು ಮತ್ತು ಮೂಳೆಗಳಿಗೆ ತುಂಬಾ ಸಹಾಯಕವಾಗಿದೆ. ಈಗ ನಿಮಗೆ ಆಲೂಗಡ್ಡೆಯ ಸಿಪ್ಪೆಯಿಂದ ತಯಾರಿಸುವ ಖಾದ್ಯ ಮತ್ತು ಅದರಲ್ಲಿರುವ ಪೋಷಕಾಂಶಗಳ ಬಗ್ಗೆ ಅರಿವು ಮೂಡಿತಲ್ಲವೇ..?

Published by:Latha CG
First published: