ಕೆಲವರು ಜೀವನದಲ್ಲಿ (Life) ಎಷ್ಟೊಂದು ನೊಂದಿರುತ್ತಾರೆ ಎಂದರೆ ಅವರು ಹೋದಲೆಲ್ಲಾ ಅವರ ಜೀವನದಲ್ಲಿ ನಡೆದ ಕಹಿ ಘಟನೆಗಳ ಬಗ್ಗೆ ಎದುರಿಗಿರುವವರು ಕೇಳದೆ ಇದ್ದರೂ ಸಹ ಪದೇ ಪದೇ ಹೇಳುತ್ತಲೇ ಇರುತ್ತಾರೆ. ಜೀವನದಲ್ಲಿ ಕಷ್ಟ, ಸಮಸ್ಯೆಗಳು (Problem) ಯಾರಿಗೆ ತಾನೇ ಬಿಟ್ಟಿವೆ ಹೇಳಿ? ಜೀವ ಇರುವ ಪ್ರತಿಯೊಂದು ಜೀವಿಗೂ ಅದರದ್ದೇ ಆದ ಸಮಸ್ಯೆಗಳು ಇದ್ದೇ ಇರುತ್ತವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಸಮಸ್ಯೆ ಮತ್ತು ಕಷ್ಟಗಳನ್ನು ಒಬ್ಬರ ಹತ್ತಿರ ಹೇಳಿಕೊಂಡರೆ ಮನಸ್ಸು ಹಗುರವಾಗುತ್ತೆ ಅಂತ ಹೇಳುವುದನ್ನು ನಾವೆಲ್ಲಾ ಕೇಳಿರುತ್ತೇವೆ. ಇಲ್ಲದೆ ಹೋದರೆ ಆ ನೋವು (Pain) ಹಾಗೆಯೇ ಹೃದಯ (Heart) ಮತ್ತು ಮನಸ್ಸಿನಲ್ಲಿಯೇ ಉಳಿದು ಬಿಡುತ್ತದೆ ಅಂತ ಅನೇಕರು ಹೇಳುತ್ತಾರೆ.
ಆದರೆ ಕಷ್ಟಗಳನ್ನ ಮತ್ತು ನಮ್ಮ ಮಾನಸಿಕ ಆರೋಗ್ಯದ ಬಗ್ಗೆ ಎಲ್ಲರ ಹತ್ತಿರ ಮಾತಾಡಲು ಹೋಗಬಾರದು ಅಂತ ತಜ್ಞರು ಹೇಳುತ್ತಾರೆ ನೋಡಿ. ಕೆಲವೊಮ್ಮೆ ಸದಾ ನೋವಿನ ಬಗ್ಗೆ ಮತ್ತು ಆ ನೋವಿನಿಂದಾಗಿ ನಾವು ಅನುಭವಿಸುತ್ತಿರುವ ಮಾನಸಿಕ ಸಮಸ್ಯೆಯ ಬಗ್ಗೆ ಹೆಚ್ಚು ಜನರೊಡನೆ ಹಂಚಿಕೊಂಡಷ್ಟು ಅಪಾಯ ಜಾಸ್ತಿ ಅಂತಾರೆ ತಜ್ಞರು.
ಹೋದಲೆಲ್ಲಾ ಮಾನಸಿಕ ಆರೋಗ್ಯದ ಬಗ್ಗೆ ಮಾತಾಡೋದು ಒಳ್ಳೆಯದಲ್ವಂತೆ
ನಾವು ಹೋದಲ್ಲೆಲ್ಲಾ ನಮ್ಮ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಸಲಹೆಯನ್ನು ಕೇಳಿದರೂ, ನಾವು ಹಿಂದೆಂದಿಗಿಂತಲೂ ಹೆಚ್ಚು ಒತ್ತಡ ಮತ್ತು ಆತಂಕವನ್ನು ಅನುಭವಿಸುತ್ತೇವೆ. ಸಹಜವಾಗಿಯೇ, ಮಾನಸಿಕ ಆರೋಗ್ಯದ ಮೂಲವನ್ನು ಅರ್ಥ ಮಾಡಿಕೊಳ್ಳದೆ ಹೋದರೆ ಅದರ ಬಗ್ಗೆ ಹೆಚ್ಚು ಮಾತನಾಡುವುದು ಸಹ ಒಳ್ಳೆಯದಲ್ಲ. ಹೀಗೆ ಹೋದಲೆಲ್ಲಾ ಮಾನಸಿಕ ಆರೋಗ್ಯದ ಬಗ್ಗೆ ಮಾತಾಡುತ್ತಾ ಹೋದರೆ ಏನೆಲ್ಲಾ ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ ನೋಡಿ.
ಇದನ್ನೂ ಓದಿ: Health Care: ಕೊಲೆಸ್ಟ್ರಾಲ್ ಹೆಚ್ಚಾದ್ರೆ ನಾಲಗೆ, ಕಣ್ಣು, ಕಾಲುಗಳಲ್ಲಿ ಸ್ವಾಧ ಇರೋಲ್ವಂತೆ!
ಸರಿಯಾದ ವ್ಯಕ್ತಿಯೊಂದಿಗೆ ಮಾತ್ರ ಇದರ ಬಗ್ಗೆ ಮಾತಾಡೋದು ಒಳ್ಳೆಯದು
ಸಮಸ್ಯೆಯೆಂದರೆ, ಸೂಕ್ತ ಸನ್ನಿವೇಶದಲ್ಲಿ ಮತ್ತು ಸೂಕ್ತ ವ್ಯಕ್ತಿಯೊಂದಿಗೆ ಇದರ ಬಗ್ಗೆ ಮಾತಾಡಿದಾಗ ಮಾತ್ರವೇ ನಮಗೆ ಪ್ರಯೋಜನಕಾರಿಯಾಗುತ್ತದೆ. ಒಳ್ಳೆಯ, ಚಿಂತನಶೀಲ ಮತ್ತು ಸಹಾನುಭೂತಿಯುಳ್ಳ ಯಾರೊಂದಿಗಾದರೂ ನಾವು ಚಾಟ್ ಮಾಡಿದರೆ ನಾವು ಉತ್ತಮವಾದ ಭಾವನೆಯನ್ನು ಹೊಂದುತ್ತೇವೆ ಎಂಬುದು ನಿಜ. ಆದರೆ ಅರ್ಧಂಬರ್ಧ ತಿಳಿದುಕೊಂಡವರ ಬಳಿ ಮಾನಸಿಕ ಸಮಸ್ಯೆಗಳ ಮತ್ತು ಆರೋಗ್ಯದ ಬಗ್ಗೆ ಮಾತನಾಡುವುದು ತಪ್ಪಾಗಬಹುದು.
ಮಾನಸಿಕ ಆರೋಗ್ಯದ ಬಗ್ಗೆ ತಿಳಿದು ಕೆಲವರು ವಿಚಿತ್ರವಾಗಿ ವರ್ತಿಸ್ತಾರೆ
ನಿಮ್ಮ ಮಾನಸಿಕ ಸ್ಥಿತಿಯ ಬಗ್ಗೆ ತಿಳಿದಾಗ ಜನರು ವಿಚಿತ್ರವಾಗಿ ವರ್ತಿಸುತ್ತಾರೆ. ಸಂಪೂರ್ಣವಾಗಿ ಪ್ರಾಮಾಣಿಕವಾಗಿ ಹೇಳುವುದಾದರೆ, ಅವರಲ್ಲಿ ಕೆಲವರು ನಿಮಗೆ "ನೀವು ಚೆನ್ನಾಗಿ ಒಳ್ಳೆಯ ಆಲೋಚನೆಗಳನ್ನು ಆಲೋಚಿಸಿ" ಮತ್ತು "ಇದೆಲ್ಲವೂ ಕ್ಷಣಿಕ, ನಿಮ್ಮ ಸ್ಥಿತಿ ಸುಧಾರಿಸುತ್ತದೆ" ಅಂತೆಲ್ಲಾ ಪದೇ ಪದೇ ಹೇಳುವ ಮೂಲಕ ತಮ್ಮ ಸ್ನೇಹಿತರಿಗೆ ಆತ್ಮವಿಶ್ವಾಸವನ್ನು ನೀಡುತ್ತಾರೆ. ಕೆಲವೊಮ್ಮೆ ನಮ್ಮ ಸ್ನೇಹಿತರೊಂದಿಗೆ ಚರ್ಚಿಸಿದ ನಂತರವೂ ಸಹ ನಮಗೆ ಸಮಾಧಾನ ಆಗಿರುವುದಿಲ್ಲ. ನಮ್ಮ ಸ್ನೇಹಿತರು ಉತ್ತಮ ಕೇಳುಗರಾಗಿದ್ದರೆ ಮಾತ್ರ ನಾವು ಮಾತನಾಡುವುದು ಅರ್ಥಪೂರ್ಣವಾಗಿರುತ್ತದೆ.
ಇಷ್ಟವಿಲ್ಲದ ಸಲಹೆಗಳು ಹೆಚ್ಚಿನ ಒತ್ತಡ ತರಬಲ್ಲದು
ತಪ್ಪು ಜನರ ಬಳಿ ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಚರ್ಚಿಸುವಾಗ "ನಿಮ್ಮ ಒಳ ಮನಸ್ಸು ಏನ್ ಹೇಳುತ್ತೇ, ಅದನ್ನೇ ಕೇಳಿ" ಮತ್ತು "ನಿಮ್ಮ ಭಾವನೆಗಳ ಮೇಲೆ ಗಮನ ಹರಿಸಿ" ಎಂಬ ಮಾತುಗಳು ಸರಿ ಅಂತ ಅನ್ನಿಸಬಹುದು. ಆದರೆ ನಮ್ಮ ಮೆದುಳಿನ ಭಾವನಾತ್ಮಕ ಭಾಗವು ಮೆದುಳಿನ ಅತ್ಯಂತ ಶಕ್ತಿಯುತ, ವೇಗದ ಭಾಗವಾಗಿದೆ ಎಂದು ನಾವು ಗಣನೆಗೆ ತೆಗೆದುಕೊಂಡಾಗ, ನಮ್ಮ ಭಾವನೆಗಳು ನಮ್ಮನ್ನು ಅತಿಯಾಗಿ ಆಳಲು ಆರಂಭಿಸುತ್ತದೆ.
ಅದನ್ನು ನಿಮ್ಮಲ್ಲೇ ಇಟ್ಟುಕೊಳ್ಳುವುದು ಒಳ್ಳೆಯ ಉಪಾಯವಾಗಬಹುದು
ಕೆಲವೊಮ್ಮೆ ಮೌನವಾಗಿರುವುದು ವಿಮೋಚನೆಯನ್ನು ನೀಡುತ್ತದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಕೆಲವು ಜನರು ಮಾತನಾಡಲು ನಿರಾಕರಿಸುತ್ತಾರೆ, ಏಕೆಂದರೆ ಅವರ ಸುತ್ತಲಿನವರು ಅವರನ್ನು ನಂತರ ಗೇಲಿ ಮಾಡುತ್ತಾರೆ ಅಥವಾ ಬೇಕಾಬಿಟ್ಟಿ ಸಲಹೆಗಳನ್ನು ನೀಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ