Carpal Tunnel Syndrome: ಕೈಗಳಲ್ಲಿ ಮರಗಟ್ಟುವಿಕೆ, ಜುಮ್ಮೆನ್ನುವುದನ್ನು ನಿರ್ಲಕ್ಷ್ಯ ಮಾಡದೇ, ಸಮಸ್ಯೆಯ ಬಗ್ಗೆ ಅರಿಯಿರಿ

ಕಾರ್ಪಲ್ ಟನಲ್ ಸಿಂಡ್ರೋಮ್, ನಿಮ್ಮ ಕೈಯಲ್ಲಿ ಮತ್ತು ತೋಳಿನಲ್ಲಿ ತೀವ್ರ ನೋವು ಮತ್ತು ಬಿಗಿತ ಉಂಟು ಮಾಡುತ್ತದೆ. ನಿಮ್ಮ ಮಣಿಕಟ್ಟಿನ ಮಧ್ಯದ ನರವು ಸೆಟೆದುಕೊಂಡಾಗ ಹೀಗೆ ಆಗುತ್ತದೆ. ಇಂಗ್ಲಿಷ್ ನಲ್ಲಿ ಕಾರ್ಪಸ್ ಎಂದರೆ ಕಾರ್ಪಲ್ ಎಂದರ್ಥ ಅದನ್ನು ಮಣಿಕಟ್ಟು ಎಂದು ಕರೆಯುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೈ (Hand) ಮಧ್ಯದಲ್ಲಿ (Middle) ಮರಗಟ್ಟುವಿಕೆ (Numbness) ಅಥವಾ ಜುಮ್ಮೆನಿಸುವುದು (Tingling) ಸಾಮಾನ್ಯ ಸಂಗತಿ ಆಗಿದೆ. ನೀವು ಕೆಲವು ಭಾರವಾದ ವಸ್ತುಗಳನ್ನು ಎತ್ತಿದಾಗ ಕೈಗಳನ್ನು ಹೆಚ್ಚು ಬಳಕೆ ಮಾಡಿ ಕೆಲಸ (Work) ಮಾಡಿದಾಗ ದೀರ್ಘಕಾಲ ಒಂದೇ ಭಂಗಿಯಲ್ಲಿ ಕುಳಿತುಕೊಂಡಿದ್ದರೆ ಕೈ ಮರಗಟ್ಟುವುದು, ಜುಮ್ಮೆನಿಸುವುದು ಆಗುತ್ತದೆ. ಆದರೆ ನೀವು ಆಗಾಗ್ಗೆ ಈ ಸಮಸ್ಯೆ ಎದುರಿಸುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು. ಏಕೆಂದರೆ ಕಾರ್ಪಲ್ ಟನಲ್ ಸಿಂಡ್ರೋಮ್ (Carpal Tunnel Syndrome) ನಿಂದಲೂ ಈ ಸಮಸ್ಯೆ ಬಂದಿರಬಹುದು. ಕಾರ್ಪಲ್ ಟನಲ್ ಸಿಂಡ್ರೋಮ್ ಅಥವಾ CTS ಎನ್ನುವುದು ನಿಮ್ಮ ಮಣಿಕಟ್ಟಿನ ನರವು ಸೆಟೆದುಕೊಂಡ ಸ್ಥಿತಿ ಆಗಿದೆ.

    ಕಾರ್ಪಲ್ ಟನಲ್ ಸಿಂಡ್ರೋಮ್ ಸಮಸ್ಯೆ

    ಕಾರ್ಪಲ್ ಟನಲ್ ಸಿಂಡ್ರೋಮ್, ನಿಮ್ಮ ಕೈಯಲ್ಲಿ ಮತ್ತು ತೋಳಿನಲ್ಲಿ ತೀವ್ರ ನೋವು ಮತ್ತು ಬಿಗಿತ ಉಂಟು ಮಾಡುತ್ತದೆ. ನಿಮ್ಮ ಮಣಿಕಟ್ಟಿನ ಮಧ್ಯದ ನರವು ಸೆಟೆದುಕೊಂಡಾಗ ಹೀಗೆ ಆಗುತ್ತದೆ. ಆಂಗ್ಲ ಭಾಷೆಯಲ್ಲಿ ಕಾರ್ಪಸ್ ಎಂದು ಕರೆಯಲ್ಪಡುವ ಕಾರ್ಪಲ್ ಅರ್ಥ ಮಣಿಕಟ್ಟು ಆಗಿದೆ.

    ಕಾರ್ಪಸ್ ಎಂಟು ಸಣ್ಣ ಮೂಳೆಗಳ ಗುಂಪು ಆಗಿದೆ

    ಕಾರ್ಪಸ್ ಎಂಬ ಪದವು ಗ್ರೀಕ್ ಭಾಷೆಯಿಂದ ಬಂದಿದೆ. ವೈದ್ಯಕೀಯ ಪರಿಭಾಷೆಯಲ್ಲಿ, ಕಾರ್ಪಸ್ ಮಣಿಕಟ್ಟಿನ ಸುತ್ತಲೂ ಇರುವ ಎಂಟು ಸಣ್ಣ ಮೂಳೆಗಳ ಗುಂಪಾಗಿದೆ. ವಾಸ್ತವವಾಗಿ, ಕೈಯ ರಕ್ತನಾಳಗಳು ಮಣಿಕಟ್ಟಿನಲ್ಲಿ ಸೆಟೆದುಕೊಳ್ಳುತ್ತವೆ. ಈ ರಕ್ತನಾಳವು ತೋಳಿನಿಂದ ಮಣಿಕಟ್ಟಿಗೆ ಸಂಪರ್ಕ ಹೊಂದಿದೆ.

    ಇದನ್ನೂ ಓದಿ: ಕೀಲು ನೋವು ಸಮಸ್ಯೆಗೆ ಪರಿಹಾರ ನೀಡಲು ಯಾವ ಹಣ್ಣುಗಳ ಸೇವನೆ ಮಾಡುವುದು ಉತ್ತ,ಮ ಗೊತ್ತಾ?

    ಈ ನಾಳವು ಯಾವ ಕೈಯ ಮೂಲಕ ಹೋಗುತ್ತದೆಯೋ ಆ ಭಾಗವನ್ನು ಸುರಂಗ ಎಂದು ಕರೆಯುತ್ತಾರೆ. ಸುರಂಗದಲ್ಲಿ ಊತ ಉಂಟಾದಾಗ ಅಭಿಧಮನಿಯ ಮೇಲೆ ಒತ್ತಡ ಉಂಟಾಗುತ್ತದೆ. ಇದು ಕೈ ಅಥವಾ ಮಣಿಕಟ್ಟಿನಲ್ಲಿ ಜುಮ್ಮೆನಿಸುವಿಕೆ ಮತ್ತು ವಿಚಿತ್ರವಾದ ನೋವಿನ ಸಮಸ್ಯೆಗೆ ಕಾರಣವಾಗುತ್ತದೆ. ಅಂತಹ ಸಂದರ್ಭದಲ್ಲಿ ನೀವು ಕೈಯನ್ನು ತಜ್ಞರ ಸಲಹೆ ಮೇರೆಗೆ ಮಸಾಜ್ ಮಾಡುವುದು ಹೆಚ್ಚಿನ ಪ್ರಯೋಜನ ನೀಡುತ್ತದೆ.

    ಕೈಗಳ ಟನಲ್ ಅಂದರೆ ಸುರಂಗದಲ್ಲಿ ಊತ ಉಂಟಾಗಲು ಕಾರಣಗಳು

    - ಕೈಗಳ ಅತಿಯಾದ ಬಳಕೆ

    - ಆಗಾಗ್ಗೆ ಭಾರವಾದ ವಸ್ತುಗಳನ್ನು ಎತ್ತುವುದು

    - ಕೈಗಳಲ್ಲಿ ಗಾಯ ಅಥವಾ ಅಪಘಾತ

    - ಕೈಗೆ ಯಾವುದಾದರೂ ವಸ್ತು ಜೋರಾಗಿ ತಾಗಿದಾಗ

    - ಥೈರಾಯ್ಡ್

    - ಗರ್ಭಾವಸ್ಥೆ ಸಮಯ

    ಇವುಗಳಲ್ಲಿ ಯಾವುದೇ ಕಾರಣಗಳು ಕೈ ಟನಲ್ ಊತಕ್ಕೆ ಕಾರಣವಾಗಿರಬಹುದು. ದ್ರವಧಾರಣ, ಅಥವಾ ಅಭಿಧಮನಿ ಹಿಸುಕುವುದು ಇದು ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆಗೆ ಕಾರಣವಾಗುತ್ತದೆ.

    ನಿಮ್ಮ ಕೈಯ ನೋವು ಸಿಂಡ್ರೋಮ್ನಿಂದ ಉಂಟಾಗಿದೆಯೋ ಅಥವಾ ಬೇರೆ ಕಾರಣದಿಂದ ಸಂಭವಿಸುತ್ತಿದೆಯೇ ಎಂದು ಹೇಗೆ ತಿಳಿಯುವುದು?

    ಕಾರ್ಪಲ್ ಸಿಂಡ್ರೋಮ್ನ ಲಕ್ಷಣಗಳು

    ಕೈ ಜುಮ್ಮೆನಿಸುವಿಕೆ ಮತ್ತು ಮರಗಟ್ಟುವಿಕೆ ಸಮಸ್ಯೆಯು ಮುಖ್ಯವಾಗಿ ಹೆಬ್ಬೆರಳು, ತೋರುಬೆರಳು ಮತ್ತು ಮಧ್ಯದ ಬೆರಳಿನವರೆಗೆ ಕಂಡು ಬರುತ್ತದೆ. ಸಮಸ್ಯೆ ಹೆಚ್ಚಾದರೆ ಉಂಗುರದ ಬೆರಳಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

    ಆದರೆ ಈ ಸಮಸ್ಯೆಯು ಕಾನಿಷ್ಕ ಬೆರಳಿನಲ್ಲಿ ಕಂಡು ಬರುವುದಿಲ್ಲ. ನೀವು ತೋಳು, ಮೊಣಕೈ ಮತ್ತು ಮಣಿಕಟ್ಟಿನಲ್ಲಿ ಈ ನೋವು ಉಂಟಾಗುತ್ತದೆ. ನೋವು ಹೆಚ್ಚಾದರೆ ಭುಜದವರೆಗೂ ತಲುಪುತ್ತದೆ.

    - ಕೈ  ಮತ್ತು ಬೆರಳುಗಳಲ್ಲಿ ಮರಗಟ್ಟುವಿಕೆ

    - ಹಿಡಿತದ ನಷ್ಟ ಅಥವಾ ಕೈ ನಷ್ಟ

    - ರಾತ್ರಿಯಲ್ಲಿ ಹೆಚ್ಚು ತೊಂದರೆ

    - ಡ್ರೈವಿಂಗ್, ಸೈಕ್ಲಿಂಗ್ ಮತ್ತು ಓದಲು ಕಷ್ಟ

    ಚಿಕಿತ್ಸೆ

    ಕಾರ್ಪಲ್ ಟನಲ್ ಸಿಂಡ್ರೋಮ್ಗೆ ಹಲವು ಚಿಕಿತ್ಸೆ ಇದೆ. ಇದರಲ್ಲಿ, ಫಿಸಿಯೋಥೆರಪಿ ಔಷಧಿಗಳು, ಶಸ್ತ್ರಚಿಕಿತ್ಸೆ ಮತ್ತು ಉರಿಯೂತದ ಔಷಧ ನೀಡುವುದು ಸಮಸ್ಯೆ ತಗ್ಗಿಸುತ್ತದೆ.

    ಇದನ್ನೂ ಓದಿ: ನಿಮ್ಮದು ಸೂಕ್ಷ್ಮ ತ್ವಚೆಯಾ? ಸ್ಕಿನ್ ಕೇರ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ

    ಜೀವನಶೈಲಿಯ ಬದಲಾವಣೆ, ಸರಿಯಾಗಿ ಚಿಕಿತ್ಸೆ ಮಾಡುವುದು ತುಂಬಾ ಸುಲಭ.  ಮಣಿಕಟ್ಟನ್ನು ಬೆಂಬಲಿಸಲು ಕಟ್ಟುಪಟ್ಟಿಗಳು ಮತ್ತು ಸ್ಪ್ಲಿಂಟ್‌ಗಳನ್ನು ಬಳಸಬಹುದು. ಅದರಲ್ಲು ವಿಶೇಷವಾಗಿ ರಾತ್ರಿ.
    Published by:renukadariyannavar
    First published: