Weight Loss: ವೇಗವಾಗಿ ತೂಕ ಇಳಿಸುವ ಭರದಲ್ಲಿ ಈ ತಪ್ಪು ಮಾಡಬೇಡಿ; ಸತ್ಯ, ಮಿಥ್ಯದ ಅರಿವಿರಲಿ!

ಕೆಲವರು ಸೀಮಿತ ಆಹಾರ ಕ್ರಮ ಅನುಸರಿಸುತ್ತಾರೆ. ಹೀಗಾಗಿ ಎಲ್ಲಾ ರೀತಿಯ ಪದಾರ್ಥಗಳ ಸೇವನೆ ಮಾಡುವುದಿಲ್ಲ. ಸರಿಯಾದ ಡಯಟ್ ಪ್ಲಾನ್ ಅನುಸರಿಸಲು ಹೋಗಿ ಹಲವು ಪದಾರ್ಥಗಳನ್ನು ತಿನ್ನುವುದಿಲ್ಲ. ಅಥವಾ ತುಂಬಾ ಹೊತ್ತು ಏನನ್ನೂ ತಿನ್ನುವುದಿಲ್ಲ. ಆದರೂ ಹೆಚ್ಚು ತೂಕ ಇಳಿಕೆ ಸಾಧ್ಯವಾಗಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಸಾಮಾನ್ಯವಾಗಿ ಜನರು (People) ತೂಕ ಇಳಿಸಲು (Weight Loss) ಕೆಲವು ಪದಾರ್ಥಗಳ (Ingredients) ಸೇವನೆ ಮಾಡದಿರಲು ನಿರ್ಧರಿಸುತ್ತಾರೆ. ಅಷ್ಟೇ ಅಲ್ಲ, ಕೆಲವು ಪ್ರಮುಖ ನಿರ್ಣಯಗಳನ್ನೂ ತೆಗೆದುಕೊಳ್ತಾರೆ. ಅವರು ಕೆಲವು ವಿಚಾರಗಳಲ್ಲಿ ಅದರಲ್ಲೂ ತೂಕ ಇಳಿಕೆಗೆ ತುಂಬಾ ಪ್ರಯತ್ನಿಸುತ್ತಾರೆ.  ಈ ವಿಷಯದಲ್ಲಿ ತುಂಬಾ ಶ್ರಮಿಸುತ್ತಾರೆ. ತೂಕ ಕಳೆದುಕೊಳ್ಳುವುದು ಒಂದು ಸವಾಲಿನ ಸಂಗತಿ ಆಗುತ್ತದೆ. ಇದೊಂದು ಜೀವನದುದ್ದಕ್ಕೂ ಇರುವ ಯುದ್ಧ ಎಂದು ಭಾವಿಸುತ್ತಾರೆ. ಆದರೆ ತೂಕ ಇಳಿಕೆಯನ್ನು ಖುಷಿ ಹಾಗೂ ನವಚೈತನ್ಯದೊಂದಿಗೆ ಪ್ರಾರಂಭ ಮಾಡಬೇಕು. ಸ್ಥೂಲಕಾಯ ತುಂಬಾ ಹೆಚ್ಚಿದ್ದರೆ ತೂಕ ನಷ್ಟ ತುಂಬಾ ಕಷ್ಟವಾಗುತ್ತದೆ.  ದೂರದ ಕನಸಿನಂತೆ ಭಾಸವಾಗುತ್ತದೆ.

    ತೂಕ ಇಳಿಕೆಗೆ ಸೀಮಿತ ಆಹಾರ ಕ್ರಮ ಅನುಸರಿಸುವುದು

    ಅನೇಕ ಬಾರಿ ಸೀಮಿತ ಆಹಾರ ಕ್ರಮ ಅನುಸರಿಸುತ್ತಾರೆ. ಹೀಗಾಗಿ ಎಲ್ಲಾ ರೀತಿಯ ಪದಾರ್ಥಗಳ ಸೇವನೆ ಮಾಡುವುದಿಲ್ಲ. ಸರಿಯಾದ ಡಯಟ್ ಪ್ಲಾನ್ ಅನುಸರಿಸಲು ಹೋಗಿ ಹಲವು ಪದಾರ್ಥಗಳನ್ನು ತಿನ್ನುವುದಿಲ್ಲ. ಅಥವಾ ತುಂಬಾ ಹೊತ್ತು ಏನನ್ನೂ ತಿನ್ನುವುದಿಲ್ಲ. ಆದರೂ ಹೆಚ್ಚು ತೂಕ ಇಳಿಕೆ ಸಾಧ್ಯವಾಗಲ್ಲ. ಎಷ್ಟೇ ಪ್ರಯತ್ನಿಸಿದರೂ ಕೆಲವೇ ಕಿಲೋ ಕಳೆದುಕೊಳ್ಳುತ್ತಾರೆ.

    ತೂಕ ಇಳಿಸುವುದು ಕೆಲವು ಸತ್ಯ ಮತ್ತು ಮಿಥ್ಯ ಅಂಶಗಳನ್ನು ಹೊಂದಿದೆ. ಈ ಬಗ್ಗೆ ಪೌಷ್ಟಿಕಾಂಶ ತಜ್ಞೆ ಕವಿತಾ ದೇವಗನ್ ಏನು ಹೇಳಿದ್ದಾರೆ ನೋಡೋಣ.

    ಇದನ್ನೂ ಓದಿ: ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದಿರುವ ಕಿರುತೆರೆ ನಟಿ! ಅವರ ಆಹಾರ ಪದ್ಧತಿ ಹೀಗಿದೆ

    ತೂಕ ನಷ್ಟದ ಬಗ್ಗೆ ಇರುವ ಮಿಥ್ಯಗಳು

    ಮಿಥ್ಯ: ನೆಚ್ಚಿನ ಆಹಾರಗಳು ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತವೆ

    ಸತ್ಯ: ವೇಗವಾಗಿ ತೂಕ ಇಳಿಸಲು ಎಲ್ಲರೂ ಬಯಸುತ್ತಾರೆ. ಆದರೆ ಇದನ್ನು ಒಂದು ದಿನ ಅಥವಾ ಒಂದು ರಾತ್ರಿಯಲ್ಲಿ ಮಾಡುವ ಕೆಲಸವಲ್ಲ. ಇದು ನಿಧಾನ ಮತ್ತು ಸುಂದರ ಪ್ರಯಾಣ. ನಿಮ್ಮ ತೂಕದಲ್ಲಿ ಗಮನಾರ್ಹ ಬದಲಾವಣೆ ನೀವು ನೋಡಲು ಬಯಸಿದರೆ, ನೀವು ಅದರ ಬಗ್ಗೆ ತಿಳಿದಿರಬೇಕು. ಮತ್ತು ಪ್ರಯತ್ನಿಸುತ್ತಿರಬೇಕು.

    ಸ್ಥೂಲಕಾಯ ಕಡಿಮೆ ಮಾಡಲು ಜನಪ್ರಿಯ ಆಹಾರವು ಎಲ್ಲರಿಗೂ ಸೂಕ್ತವಲ್ಲ. ಕವಿತಾ ದೇವಗನ್ ಅವರ ಪ್ರಕಾರ ನಿಮ್ಮ ಇಷ್ಟದ ಆಹಾರ ಕ್ರಮ ಫಾಲೋ ಮಾಡುವುದರಿಂದ ಆರೋಗ್ಯಕರ ರೀತಿಯಲ್ಲಿ ತೂಕ ಕಳೆದುಕೊಳ್ಳಲು ಎಂದಿಗೂ ಸಹಾಯ ಮಾಡುವುದಿಲ್ಲ.

    Dont make this mistake in your weight loss journey and be aware of the truth and myth
    ಸಾಂದರ್ಭಿಕ ಚಿತ್ರ


    ಸರಿಯಾದ ಮಾಹಿತಿಯೊಂದಿಗೆ ವೇಟ್ ಲಾಸ್ ಮಾಡಿ. ತೂಕ ನಷ್ಟವು ವಿಜ್ಞಾನವಾಗಿದೆ. ಅದನ್ನು ಪಾಲಿಸುವುದರ ಜೊತೆಗೆ ಆಚರಣೆಗೆ ತರಬೇಕು. ಕೇವಲ ವದಂತಿ ನಂಬಬೇಡಿ. ಕೆಲವು ಪೌಷ್ಟಿಕತಜ್ಞರೊಂದಿಗೆ ಮಾತನಾಡಿ ಸಲಹೆ ಪಡೆಯಿರಿ ಎನ್ನುತ್ತಾರೆ.

    ಮಿಥ್ಯ: ಕಡಿಮೆ ಕೊಬ್ಬು ಎಂದರೆ ಆರೋಗ್ಯಕರ ಆಹಾರ

    ಸತ್ಯ: ಆಹಾರವು ಕಡಿಮೆ ಕೊಬ್ಬು ಎಂದು ಲೇಬಲ್ ಮಾಡಿದರೆ, ಅದನ್ನು ನಮ್ಮ ಆಹಾರದಲ್ಲಿ ಹಿಂದೆ ಮುಂದೆ ಯೋಚಿಸದೇ ಸೇರಿಸುತ್ತೇವೆ. ತೂಕ ಕಡಿಮೆ ಮಾಡಲು ಇದು ಒಂದು ಪರಿಪೂರ್ಣ ಮಾರ್ಗ. ಆದರೆ ಕಡಿಮೆ ಕೊಬ್ಬು ಅಂದ್ರೆ ಕಡಿಮೆ ಕ್ಯಾಲೊರಿ ಅರ್ಥವಲ್ಲ.

    ಕಡಿಮೆ ಕೊಬ್ಬಿನ ಹೊರತಾಗಿಯೂ, ಆಹಾರವನ್ನು ಕಾರ್ಬೋಹೈಡ್ರೇಟ್‌ಗಳು ಮತ್ತು ಸಕ್ಕರೆಯೊಂದಿಗೆ ಲೋಡ್ ಮಾಡಿರಬಹುದು. ಇದು ಹೆಚ್ಚಿನ ಕ್ಯಾಲೋರಿ ಸಹ ಹೊಂದಿರಬಹುದು.

    ಮಿಥ್ಯ: ಆಹಾರದಲ್ಲಿ ಕಾರ್ಬೋಹೈಡ್ರೇಟ್‌ಗಳನ್ನು ತೆಗೆದು ಹಾಕುವುದು ವೇಗವಾಗಿ ತೂಕ ನಷ್ಟಕ್ಕೆ ಕಾರಣವಾಗುತ್ತದೆ?

    ಸತ್ಯ: ವೇಗವಾಗಿ ತೂಕ ಕಳೆದುಕೊಳ್ಳಲು ಆಹಾರದಿಂದ ಕಾರ್ಬೋಹೈಡ್ರೇಟ್‌ಗಳನ್ನು ತೆಗೆದು ಹಾಕುತ್ತಾರೆ. ಆದರೆ ಇದು ನಿಜವಾಗಿಯೂ ಕೆಲಸ ಮಾಡಲ್ಲ. ನಮ್ಮ ದೇಹಕ್ಕೆ ಯಾವಾಗಲೂ ಕಾರ್ಬೋಹೈಡ್ರೇಟ್‌ಗಳ ಅವಶ್ಯಕತೆ ಇದೆ. ನಿಮ್ಮ ದೇಹಕ್ಕೆ ಕಾರ್ಬೋಹೈಡ್ರೇಟ್ಗಳನ್ನು ನೀಡಿ. ನೀವು ಸರಿಯಾದ ಕಾರ್ಬೋಹೈಡ್ರೇಟ್ಗಳನ್ನು ಆಯ್ಕೆ ಮಾಡಿ.

    Dont make this mistake in your weight loss journey and be aware of the truth and myth
    ಸಾಂದರ್ಭಿಕ ಚಿತ್ರ


    ನೀವು ತಿನ್ನುವ ಭಾಗವನ್ನು ನಿಯಂತ್ರಣದಲ್ಲಿಡಿ. ಕೆಲ ಕೊಬ್ಬಿನ ಆಹಾರ ಕುರುಕಲು, ಕರಿದ, ಹುರಿದ ಪದಾರ್ಥ ಸೇವನೆ ಬೇಡ. ನಿಮ್ಮ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವನೆ ಮಾಡಬೇಡಿ.

    ಇದನ್ನೂ ಓದಿ: ಹೃದಯದ ಆರೋಗ್ಯ ಕಾಪಾಡುತ್ತದೆ ಕೆಂಪು ಬೆಂಡೆಕಾಯಿ! ಇಲ್ಲಿದೆ ಇದರ ಆರೋಗ್ಯ ಗುಣಗಳು

    ಮಿಥ್ಯ: ಪೂರಕಗಳ ಸೇವನೆಯಿಂದ ತೂಕ ನಷ್ಟ ವೇಗವಾಗುತ್ತದೆ?

    ಸತ್ಯ: ಮಾರುಕಟ್ಟೆಯಲ್ಲಿ ಹಲವು ರೀತಿಯ ತೂಕ ನಷ್ಟ ಪೂರಕಗಳು ಲಭ್ಯ ಇವೆ. ಅವುಗಳಿಗೆ ಮಾರು ಹೋಗಬೇಡಿ. ಜನರು ಸ್ಮಾರ್ಟ್ ಮಾರ್ಕೆಟಿಂಗ್ ತಂತ್ರಕ್ಕೆ ಬಲಿಯಾಗುತ್ತಾರೆ. ಅವರು ಪೂರಕ ಆಹಾರದ ಅಗತ್ಯವನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ಸರಿಯಾಗಿ ತಿಳಿದು ಸೇವನೆ ಮಾಡಿ.
    Published by:renukadariyannavar
    First published: