Heart Disease: ಹೃದಯಾಘಾತದ ಮೊದಲು ಕಂಡು ಬರುವ ಈ ಲಕ್ಷಣಗಳನ್ನು ನಿರ್ಲಕ್ಷಿಸದಿರಿ!

ಹೃದಯಾಘಾತ ಅಥವಾ ಹೃದಯ ಬಡಿತ ಹಠಾತ್ ನಿಲ್ಲುವುದು ಇದು ಎರಡನ್ನೂ ಹೃದಯಾಘಾತ ಎಂದು ಕರೆಯುತ್ತಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯ ಕೊರತೆ ಇದೆ. ನಿಮ್ಮ ಹೃದಯದ ಆರೋಗ್ಯ ಕಾಪಾಡಲು ನೀವು ಮರೆಯಬಾರದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಅನೇಕ ಬಾರಿ ಜನರು (People) ಹೃದ್ರೋಗದ ಆರಂಭಿಕ ಸಂಕೇತಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ. ಮತ್ತು ತಾವು ಮಾಡುವ ಅಜಾಗರೂಕತೆಯಿಂದಾಗಿ ಜೀವಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಹೃದ್ರೋಗದಿಂದ (Heart Attack) ಸಾವನ್ನಪ್ಪುವ ಪ್ರತಿ ಆರು ಪ್ರಕರಣಗಳ (Cases) ಒಂದರಲ್ಲಿ ಜನರು ಆರಂಭಿಕ ಎಚ್ಚರಿಕೆಯ ಸಂಕೇತಗಳನ್ನು (Sign) ನಿರ್ಲಕ್ಷ್ಯ ಮಾಡಿರುತ್ತಾರೆ. ಬ್ರಿಟನ್ (Britain) ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಈ ಸಂಬಂಧ ಸಂಶೋಧಕರು 2006 ಮತ್ತು 2010 ರ ನಡುವೆ ಆಸ್ಪತ್ರೆಗಳಲ್ಲಿ ಹೃದಯಾಘಾತದಿಂದ ದಾಖಲಾದ ಮತ್ತು ಸಾವನ್ನಪ್ಪಿದ ರೋಗಿಗಳ ಎಲ್ಲಾ ಪ್ರಕರಣಗಳನ್ನು ಅಧ್ಯಯನ ಮಾಡಿದ್ದಾರೆ. ಲಂಡನ್‌ನ ಇಂಪೀರಿಯಲ್ ಕಾಲೇಜಿನ ತಂಡವು ಸಂಶೋಧನೆಯಲ್ಲಿ 16 ಪ್ರತಿಶತ ಪ್ರಕರಣಗಳಲ್ಲಿ ಆಸ್ಪತ್ರೆಗೆ ದಾಖಲಾದ ರೋಗಿಗಳು 28 ದಿನಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಕಂಡು ಹಿಡಿದಿದೆ.

  ಹೃದಯ ಬಡಿತ ಹಠಾತ್ ನಿಲ್ಲುವುದು

  ಹೃದಯಾಘಾತ ಅಥವಾ ಹೃದಯ ಬಡಿತ ಹಠಾತ್ ನಿಲ್ಲುವುದು ಇದು ಎರಡನ್ನೂ ಹೃದಯಾಘಾತ ಎಂದು ಕರೆಯುತ್ತಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯ ಕೊರತೆ ಇದೆ. ನಿಮ್ಮ ಹೃದಯದ ಆರೋಗ್ಯ ಕಾಪಾಡಲು ನೀವು ಮರೆಯಬಾರದು. ಹೃದಯದ ಆರೋಗ್ಯದ ಬಗ್ಗೆ ಆಗಾಗ ಗಮನ ಕೊಡುವುದು ತುಂಬಾ ಮುಖ್ಯ.

  ವಯಸ್ಸು 70 ಆಗಿದೆ. ಆದರೆ ಇದುವರೆಗೆ ಆಸ್ಪತ್ರೆಗೆ ಕಾಲಿಟ್ಟಿಲ್ಲ. ವೈದ್ಯರ ಮುಖ ನೋಡಿಲ್ಲ ಎಂದು ಕೆಲ ಜನರು ಹೇಳುವುದನ್ನು ನೀವು ಕೇಳಿರಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ನೀವು ಒಮ್ಮೆಯೂ ವೈದ್ಯರ ಭೇಟಿ ಮಾಡಿಲ್ಲ ಎಂದರೆ ಅದು ದೊಡ್ಡ ತಪ್ಪಿಗೆ ಕಾರಣ ಆಗಬಹುದು.

  ಇದನ್ನೂ ಓದಿ: ಹೀಟ್ ಸ್ಟ್ರೋಕ್​​ನಿಂದ ಹಲವು ಆರೋಗ್ಯ ಸಮಸ್ಯೆ! ಇದಕ್ಕೇನು ಪರಿಹಾರ?

  ಯಾಕೆಂದರೆ ಹೃದ್ರೋಗ ಮತ್ತು ಹೃದಯಾಘಾತದ ಕಾಯಿಲೆಯ ಬಗ್ಗೆ ತಿಳಿಯುವ ಹೊತ್ತಿಗೆ ಅದು ತುಂಬಾ ತಡವಾಗಿರುತ್ತದೆ. ಆಗ ನೀವು ಮೊದಲೇ ವೈದ್ಯರ ಬಳಿ ಚೆಕಪ್ ಮಾಡಿಸಬೇಕಿತ್ತು ಎಂದು ವಿಷಾದಿಸುತ್ತೀರಿ. ಆದ್ದರಿಂದ ಸರಿಯಾದ ಸಮಯಕ್ಕೆ ಚಿಕಿತ್ಸೆ ಪ್ರಾರಂಭಿಸಿ.

  35 ರಿಂದ 36 ವರ್ಷ ವಯಸ್ಸಿನ ಜನರಲ್ಲಿ ಹೆಚ್ಚು ಅಪಾಯ

  ನೀವು 35 ರಿಂದ 36 ವರ್ಷ ವಯಸ್ಸಿನವರಾಗಿದ್ದರೆ ಹೆಚ್ಚು ಅಪಾಯದಲ್ಲಿದ್ದೀರಿ. ನೀವು ವೈದ್ಯರ ಸಲಹೆ ಅನುಸರಿಸಿದರೆ, 35 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಮತ್ತು 40 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಪ್ರತಿ ವರ್ಷ ತಮ್ಮ ಹೃದಯ ಪರೀಕ್ಷೆ ಮಾಡಿಸುವುದು ಒಳ್ಳೆಯದು.

  ಕುಟುಂಬದಲ್ಲಿ ಯಾರಾದರೂ ಹೃದ್ರೋಗ ಹೊಂದಿದ್ದರೆ, 25 ನೇ ವಯಸ್ಸಿನಲ್ಲಿ ನಿಮ್ಮ ಇಡೀ ದೇಹವನ್ನು ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಲು ಸಲಹೆ ನೀಡಲಾಗಿದೆ.

  ಯಾವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು

  ಎದೆ ನೋವು

  ತೋಳಿನಲ್ಲಿ ನಡುಕ ಇರುವುದು

  ತಲೆನೋವು

  ದುರ್ಬಲ ಭಾವನೆ

  ಎದೆಯಲ್ಲಿ ಒತ್ತಡ

  ಹೃದಯದ ಮಧ್ಯದಲ್ಲಿ ಬಿಗಿತದ ಭಾವನೆ

  ದೇಹದ ಇತರ ಭಾಗಗಳಲ್ಲಿ ನೋವು

  ಎದೆಯಿಂದ ತೋಳುಗಳವರೆಗೆ ನೋವು ಅನುಭವಿಸಬಹುದು

  ದವಡೆ, ಕುತ್ತಿಗೆ, ಬೆನ್ನು ಮತ್ತು ಹೊಟ್ಟೆ ನೋವು.

  ಪ್ರಕ್ಷುಬ್ಧತೆ ಅಥವಾ ತಲೆತಿರುಗುವಿಕೆಯ ಭಾವನೆ.

  ಬೆವರುವುದು.

  ಉಸಿರಾಟದಲ್ಲಿ ತೊಂದರೆ.

  ವಾಕರಿಕೆ, ವಾಂತಿ

  ಹೃದಯದ ಆಳವಾದ ಪರೀಕ್ಷೆಯ ಪ್ರಕಾರ

  EKG, ECG (ಎಲೆಕ್ಟ್ರೋಕಾರ್ಡಿಯೋಗ್ರಾಮ್) ಮತ್ತು ಇಕೋಕಾರ್ಡಿಯೋಗ್ರಾಮ್ ನಿಮ್ಮ ಹೃದಯವನ್ನು ಆಳವಾಗಿ ಪರೀಕ್ಷಿಸುತ್ತವೆ. ಇದು ನಿಮ್ಮ ಹೃದಯ ವೈಫಲ್ಯದ ಅಪಾಯವನ್ನು ಕಡಿಮೆ ಮಾಡುತ್ತದೆ. ವೈದ್ಯರು ನಿಮ್ಮ ಹೃದಯವನ್ನು ಆಂಜಿಯೋಗ್ರಫಿ ಮೂಲಕ ಪರೀಕ್ಷಿಸುತ್ತಾರೆ.

  ಇದನ್ನೂ ಓದಿ: ಅಗತ್ಯ ನೆನಪಿಡಿ, ಕ್ಯಾನ್ಸರ್ ಅಪಾಯ ಹೆಚ್ಚಿಸೋ ಆಹಾರಗಳಿವು!

  ವೈದ್ಯರನ್ನು ಯಾವಾಗ ಕಾಣಬೇಕು

  ನಿಮಗೆ ಎದೆನೋವು, ಉಸಿರಾಟದ ತೊಂದರೆ, ಎಡಗೈಯಲ್ಲಿ ನೋವು ಅಥವಾ ನಡುಕ, ಅತಿಯಾದ ಬೆವರುವಿಕೆಯ ಭಾವನೆ ಇದ್ದರೆ ಆಗ ನೀವು ನಿಮ್ಮ ಹತ್ತಿರದ ವೈದ್ಯರನ್ನು ಅಥವಾ ಆಸ್ಪತ್ರೆಗೆ ಕೂಡಲೇ ಭೇಟಿ ನೀಡಬೇಕು.
  Published by:renukadariyannavar
  First published: