• Home
  • »
  • News
  • »
  • lifestyle
  • »
  • Siddhant Vir Heart Attack: ಜಿಮ್‌ನಲ್ಲಿ ಸಾವನ್ನಪ್ಪಿದ್ದು ಹೇಗೆ ಸಿದ್ಧಾಂತ್? ಮೊದಲೇ ಅಪಾಯದ ಮುನ್ಸೂಚನೆ ಕೊಡುತ್ತಾ ಹೃದಯ?

Siddhant Vir Heart Attack: ಜಿಮ್‌ನಲ್ಲಿ ಸಾವನ್ನಪ್ಪಿದ್ದು ಹೇಗೆ ಸಿದ್ಧಾಂತ್? ಮೊದಲೇ ಅಪಾಯದ ಮುನ್ಸೂಚನೆ ಕೊಡುತ್ತಾ ಹೃದಯ?

ನಟ ಸಿದ್ಧಾಂತ್

ನಟ ಸಿದ್ಧಾಂತ್

Siddhant Vir Heart Attack: ಜಿಮ್ ವರ್ಕ್ ಔಟ್ ಮಾಡುವಾಗ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಅದರ ಬಗ್ಗೆ ಅರಿವು ಹೊಂದುವುದು ತುಂಬಾ ಮುಖ್ಯವಾಗಿದೆ. ಹೃದಯಾಘಾತದ ತುರ್ತು ಎಚ್ಚರಿಕೆ ಚಿಹ್ನೆಗಳನ್ನು ಅರ್ಥ ಮಾಡಿಕೊಳ್ಳುವುದು ಅನಿವಾರ್ಯ.

ಮುಂದೆ ಓದಿ ...
  • Share this:

    ಪ್ರಸಿದ್ಧ ಹಿಂದಿ ಟಿವಿ ಧಾರಾವಾಹಿ (Serial) ‘ಕಸೌಟಿ ಜಿಂದಗಿ ಕಿ’ ಯಿಂದ ಸಾಕಷ್ಟು ಜನಪ್ರಿಯತೆ (Famous) ಗಳಿಸಿದ್ದ ನಟ ಸಿದ್ಧಾಂತ್ ವೀರ್ ಸೂರ್ಯವಂಶಿ (Actor Siddhant Veer Suryavanshi) ಇಂದು ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾರೆ. ನಟ ಸಿದ್ದಾಂತ್ ಜಿಮ್‌ ನಲ್ಲಿ ತಾಲೀಮು ಮಾಡುವಾಗ ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಯುವ ನಟ ಸಿದ್ಧಾಂತ್ ವೀರ್ ಸೂರ್ಯವಂಶಿ, 'ಕುಸುಮ್' ಮತ್ತು 'ಕಸೌಟಿ ಜಿಂದಗಿ ಕಿ' ಯಂತಹ ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ಮನೆ ಮಾತಾಗಿದ್ದರು. ಇನ್ನು ನಟ ಸಿದ್ಧಾಂತ್ ವೀರ್ ಸೂರ್ಯವಂಶಿ ಅವರ ಸಾವಿನ ಸುದ್ದಿ ಕೇಳಿ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಅಷ್ಟೇ ಅಲ್ಲದೇ ಯುವಕರಲ್ಲಿ ಜಿಮ್ ನಲ್ಲಿ ತಾಲೀಮು ಮಾಡುವಾಗ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದು ತೀವ್ರ ಆತಂಕ ಸೃಷ್ಟಿಸಿದೆ.


    ತಾಲೀಮು ವೇಳೆ ಹೆಚ್ಚುತ್ತಿದೆ ಹೃದಯಾಘಾತ ಪ್ರಕರಣ


    ಇನ್ನು ತಾಲೀಮು ಮಾಡುವಾಗ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಅದರ ಬಗ್ಗೆ ಅರಿವು ಹೊಂದುವುದು ತುಂಬಾ ಮುಖ್ಯವಾಗಿದೆ. ಹೃದಯಾಘಾತದ ತುರ್ತು ಎಚ್ಚರಿಕೆ ಚಿಹ್ನೆಗಳನ್ನು ಅರ್ಥ ಮಾಡಿಕೊಳ್ಳುವುದು ಅನಿವಾರ್ಯ ಮತ್ತು ಮುಖ್ಯವಾಗಿದೆ. ಚಿಹ್ನೆಗಳನ್ನು ಅರ್ಥ ಮಾಡಿಕೊಂಡರೆ ತಕ್ಷಣ ಚಿಕಿತ್ಸೆ ನೀಡಬಹುದು.


    ತಜ್ಞರು ಹೇಳುವ ಪ್ರಕಾರ, ಹೃದಯಾಘಾತದ ನಂತರದ ಮೊದಲ ಒಂದು ಗಂಟೆ ಸಮಯವನ್ನು ಗೋಲ್ಡನ್ ಅವರ್ ಎಂದು ಕರೆಯುತ್ತಾರೆ. ಇದರಲ್ಲಿ ಒಬ್ಬ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಬದುಕಿಸಬಹುದಾಗಿದೆ.


    ಹೃದಯಾಘಾತಕ್ಕೂ ಮುನ್ನ ಸಿಗುವ ಸಂಕೇತಗಳಿವು!


    ಹೆದರಿಕೆ, ಹೊಟ್ಟೆ ನೋವು ಅಥವಾ ಉರಿಯೂತ


    ಕ್ಲೀವ್ಲ್ಯಾಂಡ್ ಕ್ಲಿನಿಕ್ ಪ್ರಕಾರ, ಯಾರಿಗಾದರೂ ಹೃದಯಾಘಾತ ಆದರೆ, ಅವರಿಗೆ ಎದೆ ನೋವು ಕಾಣಿಸಿಕೊಳ್ಳದೇ ಇರಬಹುದು. ಬದಲಾಗಿ ಅವರಲ್ಲಿ ಕಿಬ್ಬೊಟ್ಟೆಯ ನೋವು, ಸುಡುವ ಸಂವೇದನೆ ಅಥವಾ ಹೆದರಿಕೆ ಅಥವಾ ಬಲವಾಗಿ ವಾಂತಿಯ ಭಾವನೆ ಉಂಟಾಗಹುದು. ಈ ರೀತಿಯ ಸಮಸ್ಯೆ ಆದಾಗ ತಕ್ಷಣ ನಿಮ್ಮ ಜೊತೆ ಇರುವವರಿಗೆ ಇದನ್ನು ತಿಳಿಸಿ. ಇದರಿಂದ ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡಿ ಬದುಕಿಸಲು ಸಾಧ್ಯ.


    ಭುಜದಿಂದ ತೋಳು ನೋವು


    ಇನ್ನು ಹೃದಯಾಘಾತದ ವೇಳೆ ನೋವು ಎದೆಯಿಂದ ಪ್ರಾರಂಭವಾಗಿ ಭುಜ ಮತ್ತು ತೋಳಿಗೆ ಹೋಗುತ್ತದೆ. ಈ ಸಂಕೇತ ಹೃದಯಾಘಾತದ ಸಂಕೇತ ಎಂಬುದನ್ನು ತಿಳಿಯಿರಿ. ತಕ್ಷಣ ಎಚ್ಚೆತ್ತುಕೊಳ್ಳಿ. ಕೂಡಲೇ ಆಸ್ಪತ್ರೆಗೆ ತೆರಳಿ. ಭುಜದಿಂದ ತೋಳಿಗೆ ಉಂಟಾಗುವ ನೋವು ಹೃದಯದಲ್ಲಿ ನಿಮಗೆ ಸಮಸ್ಯೆ ಇದೆ ಎಂಬುದನ್ನು ಸೂಚಿಸುತ್ತದೆ.


     ಎದೆ ನೋವು


    ಮೇಯೊ ಕ್ಲಿನಿಕ್ ಪ್ರಕಾರ, ಹೃದಯಾಘಾತದ ಪ್ರಮುಖ ಲಕ್ಷಣ ಅಂದ್ರೆ ಎದೆ ನೋವು. ನಿಮ್ಮ ಅಪಧಮನಿ ನಿರ್ಬಂಧಿಸಲ್ಪಟ್ಟಾಗ ಅಥವಾ ನೀವು ಹೃದಯಾಘಾತದಿಂದ ಬಳಲುತ್ತಿದ್ದರೆ ಎದೆಯಲ್ಲಿ ನೋವು, ಬಿಗಿತ ಅಥವಾ ಒತ್ತಡ ಉಂಟಾಗುತ್ತದೆ.


    ದವಡೆ ನೋವು


    ದವಡೆಯ ಬಿಗಿತ ಅಥವಾ ದವಡೆಯಲ್ಲಿ ನೋವು ಉಂಟಾಗುವುದು ಸಹ ಹೃದಯಾಘಾತದ ಸಂಕೇತ ಆಗಿದೆ ಎನ್ನುತ್ತಾರೆ ತಜ್ಞರು. ಹಾಗಾಗಿ ಅದನ್ನು ನಿರ್ಲಕ್ಷ್ಯ ಮಾಡದೇ ಕೂಡಲೇ ವೈದ್ಯರನ್ನು ಭೇಟಿ ಮಾಡಿ.


    ಮೂರ್ಛೆಹೋದ ಭಾವನೆ


    ನಿಮ್ಮ ಎದೆಯಲ್ಲಿ ವಿಚಿತ್ರ ಭಾವನೆ ಮತ್ತು ಮೂರ್ಛೆಹೋದಂತೆ ನೀವು ಲಕ್ಷಣ ಅನುಭವಿಸಿದರೆ, ತಕ್ಷಣ ಯಾರಿಗಾದರೂ ತಿಳಿಸಿ ಮತ್ತು ಆಂಬ್ಯುಲೆನ್ಸ್ ಗೆ ಕರೆ ಮಾಡಿ. ಯಾಕಂದ್ರೆ ಇದು ಹೃದಯಾಘಾತದ ಸ್ಪಷ್ಟ ಸಂಕೇತವಾಗಿದೆ ಅಂತಾರೆ ತಜ್ಞರು.


    ಜಿಮ್ ಮಾಡುವಾಗಲೇ ನಟ ಸಿದ್ಧಾಂತ್ ವೀರ್ ಸೂರ್ಯವಂಶಿ ಸಾವು


    ಇನ್ನು ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ಸಿದ್ಧಾಂತ್ ವೀರ್ ಸೂರ್ಯವಂಶಿ ಅವರಿಗೆ ಕೇವಲ 46 ವರ್ಷ ವಯಸ್ಸಾಗಿತ್ತು. ಸಿದ್ದಾಂತ್ ಫಿಟ್ನೆಸ್ ಜೊತೆಗೆ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಬೆಳಗ್ಗೆ ಜಿಮ್ ಮಾಡುತ್ತಿದ್ದಾಗ ಹಠಾತ್ ಹೃದಯಾಘಾತವಾಗಿ 11 ಗಂಟೆಗೆ ಮೃತಪಟ್ಟಿದ್ದಾರೆ. ಪತ್ನಿ ಅಲೆಸಿಯಾ ರಾವುತ್ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

    Published by:renukadariyannavar
    First published: