ಮೈಕ್ರೊವೇವ್​ನಲ್ಲಿ​ ಆಹಾರ ಬಿಸಿ ಮಾಡಿ ತಿನ್ನುವವರಿಗೆ ಇಲ್ಲಿದೆ ಶಾಕಿಂಗ್​ ನ್ಯೂಸ್​

ಮೈಕ್ರೊವೇವ್​ನಲ್ಲಿ ಪ್ಲಾಸ್ಟಿಕ್​ ಪಾತ್ರೆಗಳನ್ನು ಬಳಸಿ ಆಹಾರವನ್ನು ಬಿಸಿ ಮಾಡಿದಾಗ ಅದರಲ್ಲಿನ 95 ರಷ್ಟು ರಾಸಾಯನಿಕ ಅಂಶಗಳು ಬಿಡುಗಡೆಯಾಗುತ್ತದೆ. ಈ ಆಹಾರವನ್ನು ಸೇವಿಸುದರಿಂದ ಬಂಜೆತನ, ಅಧಿಕ ರಕ್ತದ ಒತ್ತಡ, ಮೆದುಳು ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸುವ ಸಾಧ್ಯತೆ ಹೆಚ್ಚಿದೆ ಎಂದು ಸಂಶೋಧಕರು ಬಹಿರಂಗ ಪಡಿಸಿದ್ದಾರೆ.

news18
Updated:August 4, 2019, 9:57 PM IST
ಮೈಕ್ರೊವೇವ್​ನಲ್ಲಿ​ ಆಹಾರ ಬಿಸಿ ಮಾಡಿ ತಿನ್ನುವವರಿಗೆ ಇಲ್ಲಿದೆ ಶಾಕಿಂಗ್​ ನ್ಯೂಸ್​
ಮೈಕ್ರೊವೇವ್​
  • News18
  • Last Updated: August 4, 2019, 9:57 PM IST
  • Share this:
ನೀವು ಆಹಾರವನ್ನು ಮೈಕ್ರೊವೇವ್​ನಲ್ಲಿ ಬಿಸಿ ಮಾಡಿ ತಿನ್ನುತ್ತಿದ್ದೀರಾ.? ಹಾಗಿದ್ದರೆ ಎಚ್ಚರ. ಅನೇಕರು ಬೆಳಗ್ಗೆ ಮಿಕ್ಕಿದ ಆಹಾರವನ್ನು ಪ್ರೀಡ್ಜ್​ನಲ್ಲಿಟ್ಟು ನಂತರ ಬೇಕೆನಿಸಿದಾಗ ಮೈಕ್ರೊವೇವ್​ನಲ್ಲಿ ಬಿಸಿ ಮಾಡಿ ತಿನ್ನುತ್ತಾರೆ. ಆದರೆ ಇದರಿಂದ ಆರೋಗ್ಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ.

ಹೌದು. ಮೈಕ್ರೊವೇವ್​ನಲ್ಲಿ ಪ್ಲಾಸ್ಟಿಕ್​ ಪಾತ್ರೆಗಳನ್ನು ಬಳಸಿ ಆಹಾರವನ್ನು ಬಿಸಿ ಮಾಡಿದಾಗ ಅದರಲ್ಲಿನ ಶೇ.95 ರಷ್ಟು ರಾಸಾಯನಿಕ ಅಂಶಗಳು ಬಿಡುಗಡೆಯಾಗುತ್ತದೆ. ಈ ಆಹಾರವನ್ನು ಸೇವಿಸುದರಿಂದ ಬಂಜೆತನ, ಅಧಿಕ ರಕ್ತದ ಒತ್ತಡ, ಮೆದುಳು ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸುವ ಸಾಧ್ಯತೆ ಹೆಚ್ಚಿದೆ ಎಂದು ಸಂಶೋಧಕರು ಬಹಿರಂಗ ಪಡಿಸಿದ್ದಾರೆ.

ಮೈಕ್ರೊವೇವ್


ಪ್ಲಾಸ್ಟಿಕ್​ ಪಾತ್ರೆಗಳಲ್ಲಿ ಬಿಪಿಎ(ಬಿಸ್ಫೆನಾಲ್-ಎ) ಮತ್ತು ಪಾಥಲೇಟ್​ ರಾಸಾಯನಿಕ ಅಂಶಗಳಿರುತ್ತವೆ. ಮೈಕ್ರೊವೇವ್​ನಲ್ಲಿ ಬಿಸಿ ಮಾಡುವುದರಿಂದ ಬಿಪಿಎ ಆಹಾರದಲ್ಲಿ ಸೇರಿ ಬಂಜೆತನ, ಹಾರ್ಮೋನ್​ಗಳಲ್ಲಿ ಬದಲಾವಣೆ ಹಾಗೂ ಕ್ಯಾನ್ಸರ್​ ಸಮಸ್ಯೆಗಳಿಗೆ ಕಾರಣವಾಗಬಹುದು.
First published: August 4, 2019, 9:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading