Coconut Shell Idli: ನಂಬಿದ್ರೆ ನಂಬಿ, ತೆಂಗಿನ ಚಿಪ್ಪಿನಲ್ಲಿಯೂ ಇಡ್ಲಿ ಮಾಡಬಹುದು!

ನಿಮಗೆ ಇಡ್ಲಿಯನ್ನು ಇಡ್ಲಿಯ ಕುಕ್ಕರ್ ಇಲ್ಲದೆಯೇ ಹೇಗೆ ಮಾಡುವುದು ಅಂತ ಹೇಳಿ ಕೊಡುತ್ತೇವೆ. ನಿಮ್ಮ ಬಳಿ ಇಡ್ಲಿ ಮಾಡುವ ಕುಕ್ಕರ್ ಇಲ್ಲದೆ ಹೋದ ಸಂದರ್ಭದಲ್ಲಿ ಒಳ್ಳೆಯ ತೆಂಗಿನ ಚಿಪ್ಪನ್ನು ತೆಗೆದುಕೊಳ್ಳಿರಿ ಮತ್ತು ಆ ತೆಂಗಿನ ಒಳಗಿರುವ ಕೊಬ್ಬರಿ ಮತ್ತು ಆಚೆಯಿರುವಂತಹ ನಾರುಗಳನ್ನು ನೀಟಾಗಿ ತೆಗೆದು ಹಾಕಿ ಸ್ವಚ್ಛ ಮಾಡಿಕೊಳ್ಳಿರಿ. ನಂತರ ಈ ಕೆಳಗೆ ಸೂಚಿಸಿದಂತಹ ಪಾಕವಿಧಾನವನ್ನು ಅನುಸರಿಸಿ.

ತೆಂಗಿನ ಚಿಪ್ಪಿನಲ್ಲಿ ಇಡ್ಲಿ ತಯಾರಿ

ತೆಂಗಿನ ಚಿಪ್ಪಿನಲ್ಲಿ ಇಡ್ಲಿ ತಯಾರಿ

  • Share this:
ಅಡುಗೆ ಮಾಡುವುದು ಒಂದು ಕಲೆ, ಆ ಕಲೆ ಎಲ್ಲರಿಗೂ ಬರುವುದಿಲ್ಲ. ಒಬ್ಬರು ಅಡುಗೆ (Cooking) ಮಾಡಿದ ರೀತಿಯಲ್ಲಿ ಅದೇ ರೀತಿಯ ಮಸಾಲೆ (Spice) ಪದಾರ್ಥಗಳನ್ನು ಬಳಸಿಕೊಂಡು ಮಾಡಿದರೂ ಸಹ ಅದೇ ರುಚಿ ಬರುವುದಿಲ್ಲ. ಹೌದು.. ಅದಕ್ಕೆ ಈ ಅಡುಗೆಯನ್ನು ಒಂದು ಕಲೆ ಅಂತ ಹೇಳಬಹುದು. ಕೆಲವರು ಹೆಚ್ಚು ಮಸಾಲೆ ಪದಾರ್ಥಗಳು ಇರದೆ ಇದ್ದರೂ ಸಹ ಇರುವಂತಹ ಪದಾರ್ಥಗಳನ್ನು ಬಳಸಿಕೊಂಡು ಚೆನ್ನಾಗಿ ರುಚಿಕರವಾಗಿ ಅಡುಗೆಗಳನ್ನು ಮಾಡುತ್ತಾರೆ. ಅದೇ ಇನ್ನೂ ಕೆಲವರು ಎಲ್ಲಾ ಮಸಾಲೆ ಪದಾರ್ಥಗಳನ್ನು ಹಾಕಿದರೂ ಸಹ ಆ ಅಡುಗೆ ಅಷ್ಟೊಂದು ರುಚಿಯಾಗಿ (Taste) ಸ್ವಾದಿಷ್ಟಕರವಾಗಿ ಆಗುವುದಿಲ್ಲ. ಇದಕ್ಕೆ ಕಾರಣ ಎಂದರೆ ಅಡುಗೆ ಮಾಡುವ ಪದ್ದತಿ ಒಬ್ಬರಿಂದ ಒಬ್ಬರಿಗೆ ತುಂಬಾನೇ ಭಿನ್ನವಾಗಿರುತ್ತದೆ ಎಂದು ಹೇಳಬಹುದು.

ಒಂದು ಪದಾರ್ಥ ಇರದೆ ಇದ್ದರೂ ಸಹ ಮತ್ತು ಅಡುಗೆ ಮಾಡಲು ಬೇಕಾಗುವ ನಿರ್ದಿಷ್ಟವಾದ ಪಾತ್ರೆ ಇರದೆ ಇದ್ದರೂ ಸಹ ಕೆಲವರು ನೂತನ ಪ್ರಯೋಗ ಮಾಡಿ ಅದಕ್ಕೆ ಪರ್ಯಾಯವನ್ನು ಹುಡುಕಿಕೊಂಡು ಅಡುಗೆಯನ್ನು ಅಷ್ಟೇ ಚೆನ್ನಾಗಿ ಮಾಡಿ ಮುಗಿಸುತ್ತಾರೆ. ಅದರಲ್ಲೂ ನೀವು ದಕ್ಷಿಣ ಭಾರತದವರಾಗಿದ್ದರೆ, ಇಡ್ಲಿ ಮತ್ತು ದೋಸೆ ನಿಮಗೆ ಪ್ರತಿದಿನ ಉಪಾಹಾರಕ್ಕೆ ನೀಡಿದರೂ ಸಹ ಅವುಗಳನ್ನು ಬೋರ್ ಮಾಡಿಕೊಳ್ಳದಂತೆ ತಿಂದು ಮುಗಿಸುತ್ತೀರಿ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಇಡ್ಲಿ ಕುಕ್ಕರ್ ಇಲ್ಲದೆ ಇಡ್ಲಿ ತಯಾರಿಸುವುದು ಹೇಗೆ 
ನಿಮಗೆಲ್ಲಾ ತಿಳಿದಂತೆ ಇಡ್ಲಿ ಮಾಡಲು ಇಡ್ಲಿ ಕುಕ್ಕರ್ ಬೇಕು ಮತ್ತು ದೋಸೆ ಮಾಡಿಕೊಳ್ಳಲು ಒಂದು ನಾನ್ ಸ್ಟಿಕ್ ಪ್ಯಾನ್ ಬೇಕು. ಆದರೆ ಕೆಲವೊಮ್ಮೆ ನಿಮ್ಮ ಮನೆಯಲ್ಲಿ ಇಡ್ಲಿ ಮಾಡಲು ಇಡ್ಲಿ ಕುಕ್ಕರ್ ಇಲ್ಲ ಅಂತ ಅಂದುಕೊಳ್ಳಿ, ಆಗ ನೀವೇನು ಮಾಡುತ್ತೀರಿ. ಇಡ್ಲಿ ಕುಕ್ಕರ್ ಇಲ್ಲದೆ ಇಡ್ಲಿ ಹೇಗೆ ಆಗುತ್ತೆ ಅಂತ ನೀವು ನಮಗೆ ಪ್ರಶ್ನೆಯೊಂದನ್ನು ಕೇಳಬಹುದು.

ಇದನ್ನೂ ಓದಿ:  Breakfast Recipe: ಮಕ್ಕಳ ಲಂಚ್ ಬಾಕ್ಸ್​ಗೆ ಮಾಡಿ ರುಚಿಕರ ಒಗ್ಗರಣೆ ಶಾವಿಗೆ

ಬನ್ನಿ ಹಾಗಾದರೆ ನಿಮಗೆ ಇಡ್ಲಿಯನ್ನು ಇಡ್ಲಿಯ ಕುಕ್ಕರ್ ಇಲ್ಲದೆಯೇ ಹೇಗೆ ಮಾಡುವುದು ಅಂತ ಹೇಳಿ ಕೊಡುತ್ತೇವೆ. ನಿಮ್ಮ ಬಳಿ ಇಡ್ಲಿ ಮಾಡುವ ಕುಕ್ಕರ್ ಇಲ್ಲದೆ ಹೋದ ಸಂದರ್ಭದಲ್ಲಿ ಒಳ್ಳೆಯ ತೆಂಗಿನ ಚಿಪ್ಪನ್ನು ತೆಗೆದುಕೊಳ್ಳಿರಿ ಮತ್ತು ಆ ತೆಂಗಿನ ಒಳಗಿರುವ ಕೊಬ್ಬರಿ ಮತ್ತು ಆಚೆಯಿರುವಂತಹ ನಾರುಗಳನ್ನು ನೀಟಾಗಿ ತೆಗೆದು ಹಾಕಿ ಸ್ವಚ್ಛ ಮಾಡಿಕೊಳ್ಳಿರಿ. ನಂತರ ಈ ಕೆಳಗೆ ಸೂಚಿಸಿದಂತಹ ಪಾಕವಿಧಾನವನ್ನು ಅನುಸರಿಸಿ.

ಇಡ್ಲಿ ಮಾಡಲು ಬೇಕಾಗುವ ಸಾಮಾಗ್ರಿಗಳು

  • 2 ಕಪ್ ಅಕ್ಕಿ

  • 1/2 ಕಪ್ ಉದ್ದಿನ ಬೇಳೆ

  • 1/4 ಚಮಚ ಮೆಂತ್ಯೆ ಕಾಳುಗಳು

  • ಅಗತ್ಯವಿರುವಷ್ಟು ನೀರು

  • 2 ಟೇಬಲ್ ಸ್ಪೂನ್ ಎಣ್ಣೆ

  • ಒಂದು ತೆಂಗಿನಕಾಯಿ ಚಿಪ್ಪು


ಇದನ್ನು ಮಾಡುವುದು ಹೇಗೆ?
ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಮೆಂತ್ಯ ಬೀಜಗಳೊಂದಿಗೆ ರುಬ್ಬಿ ಕನಿಷ್ಠ 8 ಗಂಟೆಗಳ ಕಾಲ ಪಕ್ಕಕ್ಕೆ ಇಡಿ. ಎಂದರೆ ನೀವು ರಾತ್ರಿ ಹೊತ್ತಿನಲ್ಲಿ ರುಬ್ಬಿಕೊಂಡು ಅದನ್ನು ಒಂದು ಪಾತ್ರೆಗೆ ಹಾಕಿಕೊಂಡು ಅದರ ಮೇಲೆ ಒಂದು ತಟ್ಟೆಯನ್ನು ಮುಚ್ಚಿಡಿ. ಬೆಳಿಗ್ಗೆ ಎದ್ದಾಗ ಅದನ್ನು ತೆಗೆದು ಅದರಲ್ಲಿ ನಿಮಗೆ ಬೇಕಾದಷ್ಟು ಉಪ್ಪನ್ನು ಹಾಕಿಕೊಳ್ಳಿರಿ.

ನಂತರ ನಿಮ್ಮ ಬಳಿ ಇಡ್ಲಿ ಕುಕ್ಕರ್ ಇದ್ದಿದ್ರೆ ನೀವು ಆ ಕುಕ್ಕರ್ ನಲ್ಲಿರುವ ಇಡ್ಲಿ ಸ್ಟ್ಯಾಂಡ್ ಗಳಿಗೆ ನಯವಾಗಿ ಎಣ್ಣೆಯನ್ನು ಸವರಿ ಅದರ ಮೇಲೆ ಇಡ್ಲಿ ಹಿಟ್ಟನ್ನು ಹಾಕಿಕೊಂಡು ಅದನ್ನು ಕುಕ್ಕರ್ ನಲ್ಲಿ ಹಾಕಿ ಸ್ವಲ್ಪ ಸಮಯ ಬೇಯಿಸುತ್ತೀರಿ. ಆದರೆ ಇಲ್ಲಿ ಈ ಕೆಲಸವನ್ನು ಒಂದು ತೆಂಗಿನ ಚಿಪ್ಪು ಮಾಡುತ್ತದೆ ನೋಡಿ.

ಇದನ್ನೂ ಓದಿ:  Breakfast: ಬೆಂಗಳೂರಿನಲ್ಲಿದ್ದು, ಒಳ್ಳೆಯ ಟಿಫಿನ್ ಮಾಡ್ಬೇಕಾ? ಹಾಗಿದ್ರೆ ಈ ಹೊಟೇಲ್​ಗಳಿಗೆ ಒಮ್ಮೆ ಭೇಟಿ ಕೊಡಿ

ಚಿಪ್ಪನ್ನು ಸ್ವಚ್ಛಗೊಳಿಸಿ ಚಿಪ್ಪಿನ ಮೇಲೆ ಸ್ವಲ್ಪ ಎಣ್ಣೆಯನ್ನು ಉಜ್ಜಿ, ನಂತರ ಇಡ್ಲಿ ಹಿಟ್ಟನ್ನು ತೆಂಗಿನ ಚಿಪ್ಪಿಗೆ ಸುರಿಯಿರಿ. ನಂತರ ಅದನ್ನು ಹಬೆಯಲ್ಲಿ ಸ್ವಲ್ಪ ಸಮಯದವರೆಗೆ ಬೇಯಿಸಿ. ನಂತರ ಅದನ್ನು ಹೊರ ತೆಗೆದು ಅದಕ್ಕೆ ಸಾಂಬಾರ್ ಅಥವಾ ತೆಂಗಿನಕಾಯಿ ಚಟ್ನಿಯನ್ನು ಹಚ್ಚಿಕೊಂಡು ಬಿಸಿ ಬಿಸಿ ಇಡ್ಲಿಯನ್ನು ಆನಂದಿಸಿ.
Published by:Ashwini Prabhu
First published: