ಅಡುಗೆ ಮನೆಯ ಸ್ವಚ್ಛತೆಯಲ್ಲಿ ಅತ್ಯಂತ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾದ ಸಿಂಕ್​ ಸ್ವಚ್ಛತೆಗೆ ಇರಲಿ ಆದ್ಯತೆ

ಸ್ಟವ್ ಮತ್ತು ಫ್ರಿಡ್ಜ್ ಅಡಿಭಾಗ ಸ್ವಚ್ಛಗೊಳಿಸುವುದು ಮುಖ್ಯ. ನೀವು ಇದನ್ನು ಮಾಡಲು ಬ್ರಶ್ ಗಳನ್ನು ಬಳಸಬಹುದು. ಅಡಿಗೆಮನೆಯಲ್ಲಿ ಜನ ಹೆಚ್ಚು ನಿರ್ಲಕ್ಷಿಸುವ ಭಾಗಗಳಲ್ಲಿ ಇದೂ ಒಂದು. ಅವು ಸ್ವಚ್ಛವಾಗಿರಲು ಅವುಗಳ ಮೇಲೆ ಗಮನ ಹರಿಸುವುದು ಸಹ ಮುಖ್ಯ.

news18
Updated:August 6, 2019, 2:46 PM IST
ಅಡುಗೆ ಮನೆಯ ಸ್ವಚ್ಛತೆಯಲ್ಲಿ ಅತ್ಯಂತ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾದ ಸಿಂಕ್​ ಸ್ವಚ್ಛತೆಗೆ ಇರಲಿ ಆದ್ಯತೆ
ಅಡುಗೆ ಮನೆ
news18
Updated: August 6, 2019, 2:46 PM IST
ಅಡುಗೆ ಮನೆಯಲ್ಲಿ ಕಸ ಅಥವಾ ಇತರ ಯಾವುದೇ ಕ್ರಿಮಿಗಳಿಂದ ಆಕ್ರಮಣಕ್ಕೆ ಒಳಗಾಗಬಹುದಾದ ಅಡುಗೆ ಮನೆಯ ಅತ್ಯಂತ ನಿರ್ಲಕ್ಷಿತ ಸ್ಥಳವೆಂದರೆ ಸಿಂಕ್. ಇಂತಹ ಸ್ಥಳಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಮತ್ತು ಆಗಾಗ್ಗೆ ಅವುಗಳನ್ನು ಸ್ವಚ್ಛಗೊಳಿಸುವುದು ಅತ್ಯಂತ ಮುಖ್ಯ.

ಹೆಚ್ಚಿನ ಜನ ಸಿಂಕ್ ಕಟ್ಟಿಕೊಳ್ಳದಂತೆ ತಡೆಯಲು ಯಾವುದೇ ವಿಧದ ಘನ ಪದಾರ್ಥಗಳನ್ನಿಡಲು ಲೋಹದ ಸಿಂಕ್ ಟ್ರ್ಯಾಪ್ ಬಳಸುತ್ತಾರೆ. ಇದು ಸಿಂಕ್ ಸ್ವಚ್ಛಗೊಳಿಸಲು ನೆರವಾಗುತ್ತದೆ. ನಿಯಮಿತವಾಗಿ ಸಿಂಕ್ ಸ್ವಚ್ಛಗೊಳಿಸಲು ಸ್ವಲ್ಪ ಸಮಯ ವ್ಯಯಿಸುವುದು ಮುಖ್ಯ. ನಿಮ್ಮ ಬಳಿ ಸ್ಟೀಲ್ ಸಿಂಕ್ ಇದ್ದರೆ, ಸ್ವಲ್ಪ ಬೇಕಿಂಗ್ ಸೋಡಾ ಚಿಮುಕಿಸಿ ಇಡೀ ಸಿಂಕ್ ಅನ್ನು ಬ್ರಶ್ ನಿಂದ ಸ್ವಚ್ಛಗೊಳಿಸಬಹುದು. ನಿಮ್ಮದು ಸೆರಾಮಿಕ್ ಸಿಂಕ್ ಆಗಿದ್ದಲ್ಲಿ, ಮಾರುಕಟ್ಟೆಯಲ್ಲಿ ದೊರೆಯುವ ಸ್ವಚ್ಛಕಾರಕ ದ್ರಾವಣಗಳನ್ನು ಬಳಸಿ ಸ್ವಚ್ಛಗೊಳಿಸಬೇಕು.ಕ್ಯಾಬಿನೆಟ್ ಫ್ರಂಟ್

ನಿಮ್ಮ ಕ್ಯಾಬಿನೆಟ್ ನೋಡಲು ಕೊಳಕಾಗಿ ಕಾಣದಿದ್ದರೂ, ಅದರ ಮೇಲೆ ಧೂಳು ಸಂಗ್ರಹವಾಗಿರುತ್ತದೆ. ಕ್ಯಾಸ್ಟಲ್ ಸೋಪ್ ಅನ್ನು ನೀರಿನೊಂದಿಗೆ ಮಿಶ್ರ ಮಾಡಿ ಆ ದ್ರಾವಣದಿಂದ ಕ್ಯಾಬಿನೆಟ್ ಒರೆಸಿ. ಇದನ್ನೇ ನಿಮ್ಮ ಕಬೋರ್ಡ್ ಸ್ವಚ್ಛಗೊಳಿಸಲೂ ಬಳಸಬಹುದು.ಫ್ರಿಡ್ಜ್ ಮತ್ತು ಸ್ಟವ್ ಅಡಿಭಾಗ

ಸ್ಟವ್ ಮತ್ತು ಫ್ರಿಡ್ಜ್ ಅಡಿಭಾಗ ಸ್ವಚ್ಛಗೊಳಿಸುವುದು ಮುಖ್ಯ. ನೀವು ಇದನ್ನು ಮಾಡಲು ಬ್ರಶ್ ಗಳನ್ನು ಬಳಸಬಹುದು. ಅಡಿಗೆಮನೆಯಲ್ಲಿ ಜನ ಹೆಚ್ಚು ನಿರ್ಲಕ್ಷಿಸುವ ಭಾಗಗಳಲ್ಲಿ ಇದೂ ಒಂದು. ಅವು ಸ್ವಚ್ಛವಾಗಿರಲು ಅವುಗಳ ಮೇಲೆ ಗಮನ ಹರಿಸುವುದು ಸಹ ಮುಖ್ಯ.

First published:August 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...