• Home
  • »
  • News
  • »
  • lifestyle
  • »
  • Green Tea: ಗ್ರೀನ್ ಟೀ ಕುಡಿದರೆ ತೂಕ ಕಡಿಮೆಯಾಗುತ್ತಾ? ಇಲ್ಲಿದೆ ಮಾಹಿತಿ

Green Tea: ಗ್ರೀನ್ ಟೀ ಕುಡಿದರೆ ತೂಕ ಕಡಿಮೆಯಾಗುತ್ತಾ? ಇಲ್ಲಿದೆ ಮಾಹಿತಿ

ಗ್ರೀನ್ ಟೀ

ಗ್ರೀನ್ ಟೀ

ಗ್ರೀನ್ ಟೀ ಯು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಾ? ಅನುಮಾನ ಇದ್ರೆ ಈ ಲೇಖನ ಓದಿ.

  • News18 Kannada
  • Last Updated :
  • Karnataka, India
  • Share this:

ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಮತ್ತು ತಮ್ಮ ಫಿಟ್ನೆಸ್ (Fitness) ಅನ್ನು ಚೆನ್ನಾಗಿ ಕಾಪಾಡಿಕೊಳ್ಳುವ ಒಂದು ಪ್ರಯಾಣದಲ್ಲಿ ಬಹುತೇಕರು ಅನೇಕ ಆಹಾರಗಳನ್ನು ಮತ್ತು ಪಾನೀಯಗಳನ್ನು (Drinks) ಪ್ರಯತ್ನಿಸಿರುತ್ತಾರೆ. ಅಂತಹ ಪಟ್ಟಿಯಲ್ಲಿರುವ ಒಂದು ಸಾಮಾನ್ಯವಾದ ಪಾನೀಯ ಎಂದರೆ ಅದು ಗ್ರೀನ್ ಟೀ (Green Tea) ಅಂತಾನೆ ಹೇಳಬಹುದು. ಅನೇಕರು ದೇಹದ ತೂಕವನ್ನು ಕಡಿಮೆ ಮಾಡುತ್ತದೆ ಅಂತ ಈ ಗ್ರೀನ್ ಟೀ ಅನ್ನು ಕುಡಿಯುತ್ತಿರುತ್ತಾರೆ. ಆದರೆ ಕೆಲವು ಜನರು ‘ಗ್ರೀನ್ ಟೀ ಕುಡಿದರೂ ಸಹ ದೇಹದ ತೂಕದಲ್ಲಿ ಯಾವುದೇ ವ್ಯತ್ಯಾಸ (Diffrence) ಕಾಣಿಸುತ್ತಿಲ್ಲ’ ಅಂತ ಹೇಳುವುದನ್ನು ನಾವು ಆಗಾಗ್ಗೆ ಕೇಳಿರುತ್ತೇವೆ.


ಗ್ರೀನ್ ಟೀ ಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಇದು ಹೊಂದಿದೆ ಎಂದು ಹೇಳಬಹುದು. ಆದರೆ ಇದು ನಿಜವಾಗಿಯೂ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆಯೇ ಎಂಬುದರ ಬಗ್ಗೆ ಅನೇಕರಿಗೆ ಗೊಂದಲವಿದೆ. ಪೌಷ್ಟಿಕ ತಜ್ಞೆ ಮತ್ತು ಆಹಾರ ತಜ್ಞೆ ಗರಿಮಾ ಗೋಯಲ್ ಅವರು ಈ ಗ್ರೀನ್ ಟೀ ಯ ಬಗ್ಗೆ ಏನೆಲ್ಲಾ ಹೇಳಿದ್ದಾರೆ ನೋಡಿ.


ಗ್ರೀನ್ ಟೀ ಬಗ್ಗೆ ಪೌಷ್ಟಿಕ ತಜ್ಞೆ ಹೇಳಿದ್ದೇನು?


"ಗ್ರೀನ್ ಟೀ ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವ ಮೂಲಕ ದೇಹದಲ್ಲಿನ ತೂಕವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದರರ್ಥ ಇದು ದೇಹದಲ್ಲಿ ಶಕ್ತಿಯನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ ಮತ್ತು ಅದನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತದೆ. ಗ್ರೀನ್ ಟೀ ದಲ್ಲಿರುವ ಎರಡು ಸಕ್ರಿಯ ಪದಾರ್ಥಗಳಾದ ಕೆಫೀನ್ ಮತ್ತು ಕ್ಯಾಟೆಚಿನ್ ಈ ಪರಿಣಾಮಕ್ಕೆ ಕಾರಣವಾಗಿದೆ. ಕೊಬ್ಬಿನ ಶೇಖರಣೆ ಮತ್ತು ಹೆಚ್ಚುವರಿ ಕೊಬ್ಬಿನ ವಿಘಟನೆಗೆ ಅವು ಸಹಾಯ ಮಾಡುತ್ತವೆ ಎಂದು ನಂಬಲಾಗಿದೆ"


ಇದನ್ನೂ ಓದಿ: ಸೋಂಪುಕಾಳನ್ನು ಅಡುಗೆಯಲ್ಲಿ ಹೀಗೆ ಬಳಸಿದ್ರೆ ಆರೋಗ್ಯ ಪ್ರಯೋಜನಗಳು ಹಲವಾರು


ಗ್ರೀನ್ ಟೀ ದೇಹದಲ್ಲಿನ ಅತಿಯಾದ ತೂಕವನ್ನು ಕಡಿಮೆ ಮಾಡುತ್ತದೆ ಎಂದು ಸಿದ್ಧಾಂತಗಳು ಸೂಚಿಸುತ್ತಿದ್ದರೂ, ಪುರಾವೆಗಳು ವೈದ್ಯಕೀಯವಾಗಿ ಮಹತ್ವದ್ದಲ್ಲ ಎಂದು ತಜ್ಞರು ಹೇಳುತ್ತಾರೆ. "ಗ್ರೀನ್ ಟೀ ಯ ಬಗ್ಗೆ ಹೆಚ್ಚಿನ ಅಧ್ಯಯನಗಳು ಸೈದ್ಧಾಂತಿಕವಾಗಿವೆ, ಯಾವುದೇ ದೃಢವಾದ ಫಲಿತಾಂಶಗಳಿಲ್ಲ" ಎಂದು ಅವರು ಹೇಳಿದರು.


ಗ್ರೀನ್ ಟೀ ಬೇಗನೆ ಕೆಲಸ ಮಾಡುವುದಿಲ್ಲವಂತೆ


"ಗ್ರೀನ್ ಟೀ ಯು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ" ಎಂದು ಹೇಳುವ ಹಲವಾರು ಸಲಹೆಗಳನ್ನು ನೀವು ಅನೇಕ ಬಾರಿ ಕೇಳಿರುತ್ತೀರಿ. ಆದರೆ ಇದು ಅಷ್ಟೊಂದು ಬೇಗನೆ ಕೆಲಸ ಮಾಡುವುದಿಲ್ಲ. ಕೊಬ್ಬಿನ ಸಂಗ್ರಹಣೆಯ ಮೇಲೆ ಗ್ರೀನ್ ಟೀ ಯ ಪರಿಣಾಮವು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವಷ್ಟು ಗಮನಾರ್ಹವಾಗಿಲ್ಲ" ಎಂದು ಅವರು ವಿವರಿಸಿದರು.


ಗ್ರೀನ್ ಟೀ ಕುಡಿಯುವುದರಿಂದ ಆಗುವ ಪ್ರಯೋಜನಗಳೇನು?


"ಸ್ವಲ್ಪ ಮಟ್ಟಿಗೆ ಗ್ರೀನ್ ಟೀ ಯು ಪಾಲಿಫಿನಾಲ್ ಗಳು, ಕೆಫೀನ್ ಮತ್ತು ಖನಿಜಗಳನ್ನು ಹೊಂದಿರುತ್ತದೆ, ಇದು ಉತ್ಕರ್ಷಣ ನಿರೋಧಕಗಳಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಮುಕ್ತ ರಾಡಿಕಲ್ ಪ್ರತಿಕ್ರಿಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಫ್ರೀ ರಾಡಿಕಲ್ ಪ್ರತಿಕ್ರಿಯೆಗಳು ಆಕ್ಸಿಡೇಟಿವ್ ಒತ್ತಡವನ್ನು ಉಂಟು ಮಾಡುತ್ತವೆ ಮತ್ತು ನಿಮ್ಮ ಜೀವಕೋಶಗಳನ್ನು ಹಾನಿಗೊಳಿಸುತ್ತವೆ" ಎಂದು ಅವರು ಹೇಳಿದರು.


ಇದನ್ನೂ ಓದಿ: ಚಳಿಗಾಲದಲ್ಲಿ ಕಾಡುವ ನೆಗಡಿ, ಕೆಮ್ಮಿಗೆ ಅರಿಶಿಣ ಟೀ ಬೆಸ್ಟ್, ಮಾಡುವ ವಿಧಾನ ಇಲ್ಲಿದೆ


ಆಕ್ಸಿಡೇಟಿವ್ ಒತ್ತಡವನ್ನು ತಡೆಗಟ್ಟುವುದು, ಪ್ರತಿಯಾಗಿ, ಹಲವಾರು ದೀರ್ಘಕಾಲದ ಅಸ್ವಸ್ಥತೆಗಳನ್ನು ದೂರವಿಡುತ್ತದೆ ಎಂದು ಅವರು ಹೇಳಿದರು. "ಆದರೆ, ಹೆಚ್ಚು ಹೆಚ್ಚು ಗ್ರೀನ್ ಟೀ ಯನ್ನು ಸೇವಿಸುವುದರಿಂದ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಮತ್ತು ನೀವು ಬಯಸುವ ಪ್ರಯೋಜನಗಳನ್ನು ಪಡೆಯಲು ನಿಮಗೆ ಸಾಧ್ಯವಾಗದಿರಬಹುದು ಎಂಬುದನ್ನು ನೆನಪಿನಲ್ಲಿಡಿ" ಎಂದು ಅವರು ಹೇಳಿದರು.


ದಿನಕ್ಕೆ ಎಷ್ಟು ಕಪ್ ಗ್ರೀನ್ ಟೀ ಯನ್ನು ಸೇವಿಸಬೇಕು?


"ಗ್ರೀನ್ ಟೀ ಸೇವನೆಗೆ ಸುರಕ್ಷಿತವೆಂದು ಸಾಬೀತಾಗಿದೆ. ನೀವು ಗ್ರೀನ್ ಟೀ ಯನ್ನು ಅದರ ಆರೋಗ್ಯ ಪ್ರಯೋಜನಗಳ ಕಾರಣದಿಂದಾಗಿ ಸೇರಿಸಲು ಯೋಜಿಸುತ್ತಿದ್ದರೆ - ದಿನಕ್ಕೆ ಒಂದು ಅಥವಾ ಎರಡು ಕಪ್ ಗಳಷ್ಟು ಸಾಕು" ಎಂದು ಆಹಾರ ತಜ್ಞರು ಹೇಳಿದರು. ಆದಾಗ್ಯೂ, ಗ್ರೀನ್ ಟೀ ಯಲ್ಲಿರುವ ಸಂಯುಕ್ತಗಳು ನಿಮ್ಮ ಊಟದಿಂದ ಕೆಲವು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಪ್ರತಿಬಂಧಿಸುವುದರಿಂದ ನಿಮ್ಮ ಊಟ ಮತ್ತು ಗ್ರೀನ್ ಟೀ ನಡುವೆ ಸೂಕ್ತವಾದ ಅಂತರವನ್ನು ಕಾಪಾಡಿಕೊಳ್ಳಲು ಅವರು ಸಲಹೆ ನೀಡಿದರು.


"ಗ್ರೀನ್ ಟೀ ನಿಮ್ಮ ತೂಕ ಇಳಿಸುವ ಸಮಸ್ಯೆಗಳಿಗೆ ಪರಿಹಾರವಾಗದಿರಬಹುದು, ಆದರೆ ಅದನ್ನು ಸೇವಿಸುವುದು ನಿಮ್ಮ ಆರೋಗ್ಯವನ್ನು ಹೆಚ್ಚಿಸಲು ಬೋನಸ್ ಮಾರ್ಗವಾಗಿದೆ" ಎಂದು ಅವರು ಹೇಳಿದರು.

First published: