• Home
  • »
  • News
  • »
  • lifestyle
  • »
  • Exercise: ದಿನಕ್ಕೆ ಇಷ್ಟು ನಿಮಿಷ ಮಾತ್ರ ವ್ಯಾಯಾಮ ಮಾಡಿ, ಜಾಸ್ತಿ ಮಾಡ್ಬೇಡಿ

Exercise: ದಿನಕ್ಕೆ ಇಷ್ಟು ನಿಮಿಷ ಮಾತ್ರ ವ್ಯಾಯಾಮ ಮಾಡಿ, ಜಾಸ್ತಿ ಮಾಡ್ಬೇಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮರಣ ಹೃದಯಘಾತದಂತಹ ಅಪಾಯಗಳಿಂದ ತಪ್ಪಿಸಿಕೊಳ್ಳಲು ಎಷ್ಟು ಹೊತ್ತು ವ್ಯಾಯಾಮ ಮಾಡಬೇಕು ಎಂಬ ಪ್ರಶ್ನೆ ನಿಮಲ್ಲಿ ಮೂಡುತ್ತಿರಬಹುದು ಅದಕ್ಕೆ ಉತ್ತರ ಇಲ್ಲಿದೆ.

  • News18 Kannada
  • Last Updated :
  • New Delhi, India
  • Share this:

ಅತಿಯಾದರೆ ಅಮೃತನೂ ವಿಷವೇ. ಉತ್ತಮ ಆರೋಗ್ಯಕ್ಕೆ ಎಲ್ಲವೂ ಮಿತವಾಗಿರಬೇಕು. ಇದು ವ್ಯಾಯಾಮದ ವಿಷಯದಲ್ಲೂ ಅನ್ವಯವಾಗುತ್ತದೆ. ಆರೋಗ್ಯವಾಗಿರಲು ಹೆಚ್ಚು ಹೊತ್ತು ವ್ಯಾಯಾಮ ಮಾಡ್ತೀವಿ ಅಂದರೆ ಅದು ಖಂಡಿತ ನಿಮ್ಮನ್ನು ಅಪಾಯಕ್ಕೆ (Danger) ತಳ್ಳುತ್ತದೆ ಅನ್ನೋದರಲ್ಲಿ ಸಂಶಯವೇ ಇಲ್ಲ. ಸರಿಯಾಗಿ ದೇಹಕ್ಕೆ ಎಷ್ಟು ಅಗತ್ಯವೋ ಅಷ್ಟು ವ್ಯಾಯಾಮವನ್ನೇ (Exercise) ಮಾಡುವುದೇ ಆರೋಗ್ಯದ (Health) ಮಂತ್ರ. ವಾಸ್ತವವಾಗಿ ಅತಿಯಾದ ವ್ಯಾಯಾಮವು  ಹೃದಯದ  ಸಮಸ್ಯೆಗಳಂತಹ (Heart Problem) ಹಲವು ಅಪಾಯಗಳನ್ನು ಹೊಂದಿದೆ. ಹಲವಾರು ಅಧ್ಯಯನಗಳು ತುಂಬಾ ಹೊತ್ತು ವ್ಯಾಯಾಮ ಮಾಡುವುದು ಜೀವಿತಾವಧಿಯನ್ನು ಕಡಿಮೆ ಮಾಡಬಹುದು ಎಂದು ಹೇಳಿವೆ.


ಹೆಚ್ಚು ವ್ಯಾಯಾಮ, ಹೆಚ್ಚಿನ ಪ್ರಯೋಜನಗಳು?
ಮೇಯೊ ಕ್ಲಿನಿಕ್ ಪ್ರೊಸೀಡಿಂಗ್ಸ್ ಜರ್ನಲ್‌ನಲ್ಲಿ ಪ್ರಕಟವಾದ 2021 ರ ಸಂಶೋಧನೆಯು ಹೆಚ್ಚಿನ ವ್ಯಾಯಾಮ ಮತ್ತು ಮರಣ ಫಲಿತಾಂಶಗಳ ನಡುವಿನ ಸಂಪರ್ಕವನ್ನು ಪರಿಶೀಲಿಸಿದೆ. ಸುಮಾರು 9,000 ವಯಸ್ಕರಿಂದ ದೀರ್ಘಾವಧಿಯ ಡೇಟಾವನ್ನು ಬಳಸಿಕೊಂಡ ಅಧ್ಯಯನವು ಕಾರ್ಡಿಯೋ ವ್ಯಾಯಾಮ, ಬಾಲ್ ಸ್ಪೋರ್ಟ್ಸ್, ವೇಟ್-ಲಿಫ್ಟಿಂಗ್ನಂತಹ ಹೆಚ್ಚಿನ ವ್ಯಾಯಾಮಗಳನ್ನು ಹೆಚ್ಚೆಚ್ಚು ಮಾಡುವುದರಿಂದ ಅಪಾಯ ಸಂಭವಿಸಬಹುದು ಎಂದು ಹೇಳಿದೆ. .


ಅತಿಯಾದ ವ್ಯಾಯಾಮ ಹೃದಯಕ್ಕೆ ಡೇಂಜರ್
ಅಮೇರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ: ಬೇಸಿಕ್ ಟು ಟ್ರಾನ್ಸ್ಲೇಶನಲ್ ಸೈನ್ಸ್‌ನಲ್ಲಿ ಈ ವರ್ಷ ಪ್ರಕಟವಾದ ವರದಿ ಹೆಚ್ಚು ವ್ಯಾಯಾಮವು ಹೃದಯದ ಆರೋಗ್ಯಕ್ಕೆ ಹಾನಿ ಎಂದು ತಿಳಿಸಿದೆ. ವ್ಯಾಯಾಮ ಮಾಡದೆ ಆಲಸಿಯಾಗಿದ್ದರೆ ಬೊಜ್ಜು ಶೇಖರಣೆಯಾಗಿ ಹೃದಯದ ಸಮಸ್ಯೆಗಳು ಉಂಟಾಗುತ್ತವೆ. ಅಂತೆಯೇ ಅತಿಯಾದ ವ್ಯಾಯಾಮ ಹೃದಯದ ಸಮಸ್ಯೆಯನ್ನು ಸೃಷ್ಟಿ ಮಾಡುತ್ತದೆ ಎನ್ನುವುದು ಸಹ ಅಷ್ಟೇ ಸತ್ಯ.


ದಿನಕ್ಕೆ 60 ನಿಮಿಷ, ವಾರದಲ್ಲಿ ಐದು ದಿನಗಳಂತೆ ವ್ಯಾಯಾಮ ಮಾಡುವುದು ಅಪಧಮನಿಯ ಗಟ್ಟಿಯಾಗುವಿಕೆ ಮತ್ತು ದಪ್ಪವಾಗುವಿಕೆಗೆ ಸಂಬಂಧಿಸಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಮಟ್ಟದ ತೀವ್ರವಾದ ವ್ಯಾಯಾಮವು ಹೃದಯದ ಸಂಕೋಚನ ಮತ್ತು ವಿಶ್ರಾಂತಿಯನ್ನು ನಿಯಂತ್ರಿಸುವ ಕಿಣ್ವಗಳಲ್ಲಿ ಅಸಮತೋಲನವನ್ನು ಉತ್ತೇಜಿಸುತ್ತದೆ ಎಂದು ಹೇಳಿದ್ದಾರೆ.


ಹೆಚ್ಚು ಓಡುವುದು ಕೂಡ ಅಪಾಯ
ಅದೇ ಸಂಶೋಧನಾ ತಂಡ 2015 ರಲ್ಲಿ ವಾರಕ್ಕೆ 60ರಿಂದ ಎರಡು ಗಂಟೆ ಓಡುವವರಲ್ಲೂ ಸಹ ಹೆಚ್ಚಿನ ಮರಣ ಫಲಿತಾಂಶಗಳನ್ನು ನೋಡಬಹುದು ಎಂದಿದೆ.


40ರ ಹರೆಯದಲ್ಲಿದ್ದವರು ಕಡಿಮೆ ತೀವ್ರವಾದ ವ್ಯಾಯಾಮಗಳನ್ನು ಮಾಡಿ
ಯುವಕರು ಕಾರ್ಡಿಯೋ ತರಬೇತಿಯಂತಹ ತೀವ್ರವಾದ ವ್ಯಾಯಾಮ ಮಾಡಬಹುದು. ಆದರೆ 40ರ ಹರೆಯದಲ್ಲಿರುವ ಮಧ್ಯ ವಯಸ್ಕರರು ಇಂತಹ ವ್ಯಾಯಾಮಗಳಿಂದ ದೂರವಿರುವುದು ಸೂಕ್ತ. 40 ಅಥವಾ 45 ವರ್ಷಗಳ ನಂತರ ಹೃದಯವು ಕಡಿಮೆ ಸ್ಥಿತಿಸ್ಥಾಪಕತ್ವವನ್ನು ಹೊಂದಿದೆ ಮತ್ತು ಹೃದಯಘಾತದಂತಹ ಅಪಾಯಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.


ಇದನ್ನೂ ಓದಿ: ಗರ್ಭಿಣಿಯರಲ್ಲಿ ಅಸಿಡಿಟಿ ಸಮಸ್ಯೆ ಕಾಡಿದ್ರೆ ಮಾತ್ರೆ ಬದಲು ಈ ವಸ್ತುಗಳನ್ನು ತಿನ್ನಿ


ಆದ್ದರಿಂದ ವಯಸ್ಸಾದಂತೆ ವಾಕಿಂಗ್, ಯೋಗ, ಸುಲಭ ಸೈಕ್ಲಿಂಗ್, ತೋಟಗಾರಿಕೆ ಇತ್ಯಾದಿಗಳಂತಹ ಕಡಿಮೆ ಶ್ರಮದಾಯಕ ದೈಹಿಕ ಚಟುವಟಿಕೆಗಳ ಮೇಲೆ ಗಮನಹರಿಸುವುದು ಸೂಕ್ತ.
ಹೀಗೆ ಮಾಡುವುದರಿಂದ ನಿಮ್ಮ ಜೀವನ ಶೈಲಿ ಚೆನ್ನಾಗಿರುವುದರ ಜೊತೆಗೆ ಅಪಾಯದ ಸಾಧ್ಯತೆಗಳು ಕಡಿಮೆ ಇರುತ್ತದೆ.


ವ್ಯಾಯಾಮಕ್ಕೆ ಸರಿಯಾದ ಸಮಯ ಎಷ್ಟು?
ಹಾಗಾದರೆ ಮರಣ ಹೃದಯಘಾತದಂತಹ ಅಪಾಯಗಳಿಂದ ತಪ್ಪಿಸಿಕೊಳ್ಳಲು ಎಷ್ಟು ಹೊತ್ತು ವ್ಯಾಯಾಮ ಮಾಡಬೇಕು ಎಂಬ ಪ್ರಶ್ನೆ ನಿಮಲ್ಲಿ ಮೂಡುತ್ತಿರಬಹುದು. ಹಾರ್ವರ್ಡ್ ವೈದ್ಯಕೀಯ ಶಾಲೆಯ ತಂಡವೊಂದು ನಡೆಸಿದ ಹೊಸ ಅಧ್ಯಯನವು ವ್ಯಾಯಾಮಕ್ಕೆ ಸಂಬಂಧಿಸಿದ ಹೆಚ್ಚಿನ ಮರಣ ಪ್ರಯೋಜನಗಳಿಗೆ ದೈನಂದಿನ ತರಬೇತಿಯ ಅಗತ್ಯವಿಲ್ಲ ಎಂದು ಕಂಡುಹಿಡಿದಿದೆ.


ಇದನ್ನೂ ಓದಿ: ಕೇವಲ 15 ನಿಮಿಷದಲ್ಲಿ ರೆಡಿಯಾಗುತ್ತೆ ಚಾಕೊಲೇಟ್​ ಕುಕ್ಕೀಸ್​, ಇಲ್ಲಿದೆ ರೆಸಿಪಿ


ನೀವು ವಾರಕ್ಕೆ ಓಟ, ಈಜು, ಸೈಕ್ಲಿಂಗ್ ಇತ್ಯಾದಿಗಳಂತಹ 75-150 ನಿಮಿಷಗಳ ತೀವ್ರವಾದ ವ್ಯಾಯಾಮವನ್ನು ಮಾಡುತ್ತಿದ್ದರೆ ಅದನ್ನು ವಾರಕ್ಕೆ ಕನಿಷ್ಠ 150 ನಿಮಿಷಗಳ ಮಧ್ಯಮ ವ್ಯಾಯಾಮಕ್ಕೆ ಬದಲಾಯಿಸಿ. ಅಂದರೆ ಅದೇ ಸಮಯದಲ್ಲಿ ನೀವು ಮಧ್ಯಮವಾಗಿ ವ್ಯಾಯಾಮ ಮಾಡುವುದರಿಂದ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ ಮತ್ತು ಜೀವಿತಾವಧಿ ಕೂಡ ಹೆಚ್ಚುತ್ತದೆ ಎನ್ನಲಾಗಿದೆ.ಹೃದಯದ ಮೇಲೆ ಹೆಚ್ಚು ಒತ್ತಡ ಉಂಟುಮಾಡುವ ವ್ಯಾಯಾಮಗಳನ್ನು ಈ ದಿನಗಳಲ್ಲಿ ಆದಷ್ಟು ಕಡಿಮೆ ಮಾಡುವುದು ಉತ್ತಮ.

First published: