ನಾಗರ ಪಂಚಮಿ ದಿನ ಅಪ್ಪಿ ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ

zahir | news18
Updated:August 14, 2018, 7:29 PM IST
ನಾಗರ ಪಂಚಮಿ ದಿನ ಅಪ್ಪಿ ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ
zahir | news18
Updated: August 14, 2018, 7:29 PM IST
-ನ್ಯೂಸ್ 18 ಕನ್ನಡ

ಶ್ರಾವಣ ಮಾಸದ ಹಬ್ಬಗಳಿಗೆ ಮುನ್ನುಡಿ ಬರೆಯುವ ನಾಗರ ಪಂಚಮಿ ಹಬ್ಬವು ಇದೇ ಬುಧವಾರ (ಆ.15) ಆಚರಿಸಲಾಗುತ್ತದೆ. ಹಿಂದುಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ನಾಗರ ಪಂಚಮಿಯನ್ನು ಶ್ರಾವಣ ಮಾಸದ ಶುಕ್ಲಾ ಪಕ್ಷದ ಪಂಚಮಿ ದಿನದಂದು ಆಚರಿಸುತ್ತಾರೆ. ಈ ದಿನ ಶ್ರಧ್ದಾ ಭಕ್ತಿಯಿಂದ ನಾಗದೇವತೆಯನ್ನು ಪೂಜಿಸಲಾಗುತ್ತದೆ.

ಶ್ರಾವಣ ಮಾಸದಲ್ಲಿ ನಾಗ ಪೂಜೆ ಮಾಡುವುದರಿಂದ ಸರ್ಪದೋಷವನ್ನು ದೂರ ಮಾಡಿಕೊಳ್ಳಬಹುದು. ಈ ದಿನದಂದು ನಾಗರ ಕಲ್ಲಿಗೆ ಮತ್ತು ಹಾವಿಗೆ ಹಾಲೆರೆಯುವುದರಿಂದ ನಾಗದೇವತೆಯ ವಿಶೇಷ ಕೃಪೆಗೆ ಪಾತ್ರರಾಗಬಹುದು ಎಂದು ನಂಬಲಾಗುತ್ತದೆ. ಆರೋಗ್ಯ, ಆಯಸ್ಸು, ಸುಖ ಸಮೃದ್ಧಿ ಹೆಚ್ಚಿಸುವ ನಾಗಾರಾಧನೆಗೆ ವಿಶೇಷ ಮಾನ್ಯತೆ ನೀಡಲಾಗುತ್ತದೆ.

ನಾಗಪಂಚಮಿಯಂದು ವಿಶೇಷ ಪೂಜೆ ಸಲ್ಲಿಸುವುದರಿಂದ ಜಾತಕದ ರಾಹು-ಕೇತು ದೋಷಗಳನ್ನು ನಿವಾರಿಸಿಕೊಳ್ಳಬಹುದು. ಜಾತಕದಲ್ಲಿ ವಿಷಕನ್ಯೆ ಅಥವಾ ಅಶ್ವಗಂಧ ಯೋಗ ಹೊಂದಿರುವವರು ಈ ದಿನದಂದು ನಾಗಾರಾಧನೆ ಮಾಡಿದರೆ ಒಳಿತಾಗುತ್ತದೆ.

* ನಾಗರ ಪಂಚಮಿ ದಿನದಂದು ಬೆಳಿಗ್ಗೆ ಸ್ನಾನದ ನಂತರ ಪರಮಶಿವ ದೇವನಿಗೆ ಕೈ ಮುಗಿಯಬೇಕು. ಏಕೆಂದರೆ ನಾಗವನ್ನು ಶಿವನ ಆಭರಣವೆಂದು ಪೂಜಿಸಲಾಗುತ್ತದೆ. ಈ ದಿನದಂದು ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ಶಿವಕೃಪೆಗೆ ಪಾತ್ರರಾಗಬಹುದು.

* ಹಾವಿನ ಹುತ್ತ ಇಲ್ಲದಿದ್ದರೆ ಮನೆಯ ಮುಂದೆ ಮಣ್ಣಿನಿಂದ ಹುತ್ತವನ್ನು ತಯಾರಿಸಿ ಆರಾಧಿಸಿಕೊಳ್ಳಬಹುದು. ಹಾಗೆಯೇ ಸರ್ಪದ ಆಕೃತಿಯನ್ನು ಮನೆಯ ಮುಂದಿಡುವುದರಿಂದ ಆರ್ಥಿಕ ಲಾಭ ಉಂಟಾಗುತ್ತದೆ ಎಂದು ನಂಬಲಾಗುತ್ತದೆ.

* ಅಲ್ಲದೆ ಈ ದಿನದಂದು 'ಹೂ ಕುರು ಕುಲ್ಲೆ ಫಟು ಸ್ವಾಹ' ಎಂಬ ಮಂತ್ರವನ್ನು ಪಠಿಸುತ್ತಾ ಮನೆಯಲ್ಲಿ ನೀರನ್ನು ಪ್ರೋಕ್ಷಣೆ ಮಾಡುವುದರಿಂದ ಶಿವಶಂಕರನ ಮತ್ತು ನಾಗದೇವತೆಯ ಆಶೀರ್ವಾದ ಲಭಿಸುತ್ತದೆ.
Loading...

* ಶಿವಾರಾಧನೆ ಮಾಡದೇ ನಾಗಾರಾಧನೆ ಮಾಡಬಾರದು.

ನಾಗಪಂಚಮಿಯಂದು ಈ ಕಾರ್ಯಗಳನ್ನು ಮಾಡಬೇಡಿ.

1. ನಾಗದೇವತೆಯನ್ನು ಪೂಜಿಸುವವರು ಈ ದಿನದಂದು ಭೂಮಿಯನ್ನು ಅಗೆಯುವ ಮತ್ತು ಗಿಡ ಮರಗಳನ್ನು ಕತ್ತರಿಸುವ ಕೆಲಸವನ್ನು ಮಾಡಬಾರದು.

2. ನಾಗ ಪಂಚಮಿಯಂದು ಉಪವಾಸ ವೃತ ಕೈಗೊಂಡಿರುವವರು ಭೂಮಿಯನ್ನು ಅಗೆಯಬಾರದು.

3. ನಾಗಾರಾಧನೆ ಮಾಡಿದ ಬಳಿಕ ಉಳುಮೆ ಸೇರಿದಂತೆ ಯಾವುದೇ ಭೂಮಿ ಕೆಲಸಗಳನ್ನು ಮಾಡಬೇಡಿ.

4. ದೇಶದ ಅನೇಕ ಭಾಗಗಳಲ್ಲಿ ಈ ದಿನ ಹೊಲಿಗೆ ಹಾಕುವುದು ಕೂಡ ಅಪಶಕುನ ಎಂದು ನಂಬಲಾಗುತ್ತದೆ.

5. ಈ ದಿನದಂದು ಕಬ್ಬಿಣ ಅಥವಾ ತಾಮ್ರದ ಪಾತ್ರೆಗಳಲ್ಲಿ ಆಹಾರವನ್ನು ತಯಾರಿಸುವುದು ಕೂಡ ಅನಿಷ್ಟ ಎನ್ನಲಾಗುತ್ತದೆ.
First published:August 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ