Chicken: ಉಪ್ಪು,ಹುಳಿ,ಖಾರ ಸೇರಿಸುವುದರ ಜೊತೆಗೆ ಕೋಳಿಸಾರು ಮಾಡುವಾಗ ಇರಲಿ ಈ ಎಚ್ಚರ

Chicken Sambar Recipe : ನಮ್ಮ ರಾಜ್ಯದಲ್ಲಿ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಕೋಳಿಸಾರು ಮಾಡಲಾಗುತ್ತೆ . ಅದರಲ್ಲೂ ಮಂಡ್ಯ ಮೈಸೂರು ಶೈಲಿಯ ಕೋಳಿಸಾರು ಅಂದ್ರೆ ಎಲ್ಲಾ ಕಡೆ ಸಿಕ್ಕಾಪಟ್ಟೆ ಫೇಮಸ್.. ಇದನ್ನ ಬಿಟ್ಟರೆ ದಾವಣಗೆರೆ ಬೆಂಗಳೂರು ಹಾಸನ ಎಲ್ಲಾ ಕಡೆ ಒಂದೊಂದು ರೀತಿ ಕೋಳಿ ಸಾರು ಮಾಡಲಾಗುತ್ತೆ

ಚಿಕನ್ ಸಾಂಬಾರ್

ಚಿಕನ್ ಸಾಂಬಾರ್

  • Share this:
    ನಾನ್ ವೆಜ್ ನಲ್ಲಿ(Non-veg) ತರಹೇವಾರಿ ಖಾದ್ಯಗಳು(Dishes) ಇದ್ರು, ನಾನ್ ವೆಜ್ ಪ್ರಿಯರ ಮೊದಲ ಆಯ್ಕೆ ಮಾತ್ರ ಕೋಳಿ ಸಾರು.. (Chicken Sambar) ರಾಗಿಮುದ್ದೆ(Ragi mudde ) ಜೊತೆಗೆ ಸೂಪರ್ ಕಾಂಬಿನೇಷನ್ ಆಗಿರೋ ಕೋಳಿ ಸಾರಿಗೆ ಅದರದೇಯಾದ ಗತ್ತು ಗಮ್ಮತ್ತು ಇದೆ.  ಚೆನ್ನಾಗಿ ರುಬ್ಬಿ ಅರೆದ ಮಸಾಲೆಯ(Masala) ಜೊತೆ ಹದವಾಗಿ ಬೆಂದ ಕೋಳಿಯಲ್ಲಿ(Chicken), ಸಾರು ಮಾಡಿಕೊಂಡು ತಿನ್ನುವುದು ಅಂದರೆ ನಾನ್ ವೆಜ್ ಪ್ರಿಯರಿಗೆ ಅಚ್ಚುಮೆಚ್ಚು. ಆದರೆ ಕೆಲವರು ನಾನ್ವೆಜ್ ಮಾಡುವಾಗ ಹಲವಾರು ತಪ್ಪುಗಳನ್ನು ಮಾಡುತ್ತಾರೆ. ಅದ್ರಲ್ಲೂ ಕೋಳಿ ಸಾರು ಮಾಡುವಾಗ ಕೆಲ ತಪ್ಪುಗಳು ಮಾಡಿದ್ರೆ ಸಾರಿನ ರುಚಿ ಹೊರಟು ಹೋಗುತ್ತೆ. ಹೀಗಾಗಿ ಈ ಕೆಳಗಿನ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಮಾಡಿದ್ರೆ ಮೊದಲೇ ರುಚಿಯಾಗಿರುವ ಕೋಳಿ ಸಾರು, ಮತ್ತಷ್ಟು ರುಚಿಯಾಗಿರುತ್ತದೆ.

    ಕೋಳಿ ಸಾರು ಮಾಡುವಾಗ ಈ ತಪ್ಪು ಮಾಡಲೇಬೇಡಿ.

    ನಮ್ಮ ರಾಜ್ಯದಲ್ಲಿ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಕೋಳಿಸಾರು ಮಾಡಲಾಗುತ್ತೆ . ಅದರಲ್ಲೂ ಮಂಡ್ಯ ಮೈಸೂರು ಶೈಲಿಯ ಕೋಳಿಸಾರು ಅಂದ್ರೆ ಎಲ್ಲಾ ಕಡೆ ಸಿಕ್ಕಾಪಟ್ಟೆ ಫೇಮಸ್.. ಇದನ್ನ ಬಿಟ್ಟರೆ ದಾವಣಗೆರೆ ಬೆಂಗಳೂರು ಹಾಸನ ಎಲ್ಲಾ ಕಡೆ ಒಂದೊಂದು ರೀತಿ ಕೋಳಿ ಸಾರು ಮಾಡಲಾಗುತ್ತೆ.. ಆದ್ರೆ ಕೋಳಿಸಾರು ಮಾಡುವಾಗ ಎಲ್ಲಾ ಕಡೆಯೂ ಈ ತಪ್ಪುಗಳು ಪುನರಾವರ್ತನೆ ಆಗದಂತೆ ಎಚ್ಚರಿಕೆ ವಹಿಸಬೇಕು..

    1) ಸರಿಯಾಗಿ ಈರುಳ್ಳಿ ಫ್ರೈ ಮಾಡದೇ ಇರುವುದು

    ಈರುಳ್ಳಿ ಬಳಕೆ ಮಾಡದೆ ಕೋಳಿಸಾರು ತಯಾರಿ ಅಪೂರ್ಣ..ಕೋಳಿ ಸಾರು ಮಾಡಲು ಹದವಾದ ಮಸಾಲೆ ನಿರ್ಧಾರ ಮಾಡಲು ಈರುಳ್ಳಿ ಬಳಕೆ ಅಗತ್ಯ.. ಈರುಳ್ಳಿಯನ್ನು ಸರಿಯಾಗಿ ಫ್ರೈ ಮಾಡಿಕೊಂಡು ಮಸಾಲೆ ತಯಾರಿಸಿದರೆ ಅದರ ರುಚಿಯೇ ಬೇರೆ.. ಹೀಗಾಗಿ ಈರುಳ್ಳಿಯನ್ನು ಸರಿಯಾಗಿ ಫ್ರೈ ಮಾಡದೇ ಅಥವಾ ಅತಿಯಾಗಿ ಫ್ರೈ ಮಾಡಿದರೆ ಇದರಿಂದ ಮಸಾಲೆಯ ರುಚಿಯು ಕೆಡುವುದು.ಈರುಳ್ಳಿ ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿಸುವಷ್ಟು ಫ್ರೈ ಮಾಡಿ. ಫ್ರೈ ಮಾಡಿದ ಈರುಳ್ಳಿಯನ್ನು ಕೋಳಿ ಸಾರಿಗೆ ಹಾಕಲು ಅದನ್ನು ಸರಿಯಾಗಿ ದಪ್ಪಗೆ ರುಬ್ಬಿಕೊಳ್ಳಿ ಬೇಕು.

    ಇದನ್ನೂ ಓದಿ :ಸಖತ್​ ಸಂಡೇಗೆ ಹಳ್ಳಿ ಸ್ಟೈಲ್​ ಚಿಕನ್​ ಚಾಪ್ಸ್​​ ರೆಸಿಪಿ: ಆಹಾ.. ಸ್ವರ್ಗಕ್ಕೆ ಮೂರೇ ಗೇಣು!

    2) ಮಸಾಲೆಗೆ ತಕ್ಕ ನೀರು ಸೇರಿಸದಿರುವುದು

    ಕೋಳಿ ಸಾರಿನ ರುಚಿ ಅಡಗಿರುವುದು ಮಸಾಲೆಯಲ್ಲಿ.. ಹೀಗಾಗಿ ನಾವು ಎಷ್ಟು ಪ್ರಮಾಣದ ಮಸಾಲೆ ತಯಾರಿಸಿ ಕೊಂಡಿರುತ್ತೇವೆ ಅದಕ್ಕೆ ಅಗತ್ಯ ಪ್ರಮಾಣದ ನೀರನ್ನು ಕೋಳಿ ಸಾರಿಗೆ ಸೇರಿಸುವುದು ಅಗತ್ಯ.

    3) ತಾಜಾವಾಗಿ ತಯಾರಿಸಿದ ಮಸಾಲೆಗಳ ಬಳಕೆ ಮಾಡದೇ ಇರುವುದು

    ತಾಜಾವಾಗಿ ತಯಾರಿಸಿರುವಂತಹ ಮಸಾಲೆಗಳು ಯಾವುದೇ ಕೋಳಿ ಸಾರಿಗೆ ಒಳ್ಳೆಯ ರುಚಿ ನೀಡುವುದು. ಕೆಲವೊಂದು ಒಣ ಮಸಾಲೆಗಳನ್ನು ಮೊದಲೇ ತಯಾರಿಸಿಕೊಂಡು ಹುಡಿ ಮಾಡಿಟ್ಟುಕೊಳ್ಳಬೇಕು. ಸಾಸಿವೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅಥವಾ ತೆಂಗಿನ ಪೇಸ್ಟ್ ನ್ನು ತಾಜಾವಾಗಿ ತಯಾರಿಸಿಕೊಂಡು ಬಳಸಿದರೆ ಆಗ ರುಚಿ ಹೆಚ್ಚಾಗುವುದು.ಇನ್ನು ಅಡುಗೆ ಮಾಡುವ ಮೊದಲು ಒಣ ಮಸಾಲೆಗಳನ್ನು ತಯಾರಿಸಿ ಮತ್ತು ತಾಜಾ ಮಸಾಲೆಗಳನ್ನು ಒಂದು ಗಂಟೆಗೆ ಮೊದಲು ತಯಾರಿಸಿ

    ಇದನ್ನೂ ಓದಿ :ಸಿಂಪಲ್​​ ಈರುಳ್ಳಿ ಚಿಕನ್​ ಗ್ರೇವಿ: 20 ನಿಮಿಷದಲ್ಲೇ ರೆಡಿ, ಕೊಂಚ ಖಾರ-ಸಖತ್​ ರುಚಿ​!

    4) ಸರಿಯಾಗಿ ಒಗ್ಗರಣೆ ಹಾಕದೆ ಇರುವುದು

    ಕೆಲವರು ಕೋಳಿ ಸಾರಿಗೆ ಒಗ್ಗರಣೆ ಹಾಕದೆ ಹಾಗೆ ಬಿಡುವರು. ಆದರೆ ಒಗ್ಗರಣೆ ಹಾಕಿದರೆ ಅದರಿಂದ ಕೋಳಿ ಸಾರಿನ ರುಚಿಯು ನಿಮ್ಮ ನಾಲಗೆಯಲ್ಲಿ ಯಾವಾಗಲೂ ಇರುವುದು. ಒಗ್ಗರಣೆ ಇಲ್ಲದೆ ಇದ್ದರೆ ಆಗ ಕೋಳಿ ಸಾರಿಗೆ ಹೆಚ್ಚು ರುಚಿ ಬರದು.

    5) ಸರಿಯಾಗಿ ಚಿಕನ್ ಬೇಯಿಸದೇ ಇರುವುದು

    ಕೋಳಿ ಸಾರಿನ ಪ್ರಮುಖ ಅಂಶ ಅಂದ್ರೆ ಮಾಂಸ.. ಸರಿಯಾಗಿ ಚಿಕನ್ ಬೆಂದಿರದಿದ್ರೆ ನೀವು ಎಷ್ಟೇ ರುಚಿಯಾಗಿ ಚಿಕನ್ ಸಾಂಬಾರ್ ಮಾಡಲು ಹೋದರು ಅದು ವ್ಯರ್ಥ.. ಮಸಾಲೆಯ ಜೊತೆ ತಕ್ಕಂತೆ ಕೋಳಿ ಸರಿಯಾದ ಹದದಲ್ಲಿ ಬೆಂದಾಗ ಕೋಳಿ ಸಾರಿಗೆ ಅದರದೇ ಆದ ರುಚಿ ಬರುತ್ತದೆ
    Published by:ranjumbkgowda1 ranjumbkgowda1
    First published: