Natural Hair Dye: ಆಲೂಗಡ್ಡೆ ಸಿಪ್ಪೆ ಬಳಸಿ ಹೀಗೆ ಮಾಡಿದ್ರೆ ಬಿಳಿ ಕೂದಲು ಕೂಡಲೇ ಕಪ್ಪಾಗುತ್ತೆ, ಟ್ರೈ ಮಾಡಿ ನೋಡಿ!

Natural Hair Dye: ಕೆರಟಿನ್ ಕೂದಲಿನ ಬೆಳವಣಿಗೆಗೆ ಬೇಕಾಗಿರುವಂತಹ ಪ್ರಮುಖ ಪ್ರೋಟಿನ್. ಕೆರಟಿನ್ ನಲ್ಲಿ ಮೆಲನಿನ್ ಕೊರತೆ ಅಥವಾ ಇಲ್ಲದೆ ಇರುವ ಕಾರಣದಿಂದ ಕೂದಲು ಬಿಳಿಯಾಗಬಹುದು. ಅನುವಂಶೀಯತೆ, ವಯಸ್ಸು ಮತ್ತು ದೇಹದಲ್ಲಿ ಆಗುವಂತಹ ಹಾರ್ಮೋನು ಅಸಮತೋಲನದಿಂದಾಗಿ ಮೆಲನಿನ್ ಕೊರತೆ ಉಂಟಾಗಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮನುಷ್ಯ ತನ್ನ ಯವ್ವನದಿಂದ(Young age) ಮುಪ್ಪಿನ ಕಡೆಗೆ(old age) ಸಾಗುತ್ತಿದ್ದಂತೆ ದೇಹದಲ್ಲಿ(Body) ಶಕ್ತಿಯು ಕುಂದುತ್ತಾ ಹೋಗುವುದು. ಅದಕ್ಕೆ ಸಾಕ್ಷಿ ಎನ್ನುವಂತೆ ತಲೆಯ ಕೂದಲುಗಳು(Hair) ಸಹ ನಿಧಾನವಾಗಿ ತಮ್ಮ ಬಣ್ಣವನ್ನು(Color) ಕಳೆದುಕೊಳ್ಳುತ್ತವೆ. ಆರಂಭದಲ್ಲಿ ಒಂದೊಂದೇ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತವೆ. ದಿನ ಕಳೆದಂತೆ ಉಳಿದ ಕೂದಲುಗಳು ಸಹ ಬಿಳಿ ಬಣ್ಣಕ್ಕೆ(Grey Hair) ಬದಲಾಗುತ್ತವೆ. ಆದರೆ ಇಂದಿನ ದಿನಮಾನದಲ್ಲಿ ಬಿಳಿ ಕೂದಲು ಉಂಟಾಗಲು ವಯಸ್ಸಾಗಲೇ ಬೇಕಿಲ್ಲ. ಚಿಕ್ಕ ಮಕ್ಕಳ ಕೂದಲು ಸಹ ಬಿಳಿ ಬಣ್ಣಕ್ಕೆ ತಿರುಗುವುದನ್ನು ಕಾಣಬಹುದು.

  ಇನ್ನು ಕಳಪೆ ಮಟ್ಟದ ಶಾಂಪೂ, ಕಂಡೀಷನರ್, ಕೇಶ ಬಣ್ಣ ಹಾಗೂ ಅಧಿಕ ಸಮಯಗಳ ಕಾಲ ಎ.ಸಿ ಕೆಳಗೆ ಕುಳಿತು ಕೆಲಸ ಮಾಡುವುದರಿಂದಲೂ ಕೂದಲು ಬಹುಬೇಗ ತನ್ನ ಆರೋಗ್ಯ ಹಾಗೂ ಬಣ್ಣವನ್ನು ಕಳೆದುಕೊಳ್ಳುತ್ತದೆ. ಕೂದಲ ಬಣ್ಣವನ್ನು ಬದಲಿಸಿಕೊಳ್ಳುವುದು ಇಂದಿನ ದಿನದಲ್ಲಿ ಒಂದು ಫ್ಯಾಷನ್ ಆಗಿರಬಹುದು. ಆದರೆ ಕಪ್ಪು ಕೂದಲುಗಳ ಮಧ್ಯೆ ಇಣುಕುವ ಬಿಳಿ ಕೂದಲುಗಳು ನಮ್ಮ ಆಕರ್ಷಣೆಯನ್ನು ಕುಂದಿಸುತ್ತವೆ.

  ಇದನ್ನೂ ಓದಿ: ಕೂದಲು ತುಂಬಾ ಉದುರುತ್ತಿದ್ರೆ ಈ ಆಹಾರಗಳಿಂದ ದೂರವಿರಿ

  ಪ್ರಸ್ತುತ ವಯಸ್ಸಾದವರು ಮಾತ್ರವಲ್ಲ, ಯುವಕ-ಯುವತಿಯರೂ ಬಿಳಿ ಕೂದಲಿನಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣ ಅನಾರೋಗ್ಯಕರ ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿ. ಹೀಗಾಗಿ ಬಿಳಿ ಕೂದಲನ್ನು ಮರೆಮಾಡಲು ಜನರು ಅನೇಕ ಕೂದಲಿನ ಉತ್ಪನ್ನಗಳನ್ನು ಹೆಚ್ಚಾಗಿ ಬಳಸುತ್ತಾರೆ, ಆದರೆ ಈ ಉತ್ಪನ್ನಗಳಲ್ಲಿ ಅನೇಕ ಹಾನಿಕಾರಕ ರಾಸಾಯನಿಕಗಳು ಕಂಡುಬರುತ್ತವೆ, ಇದು ಕೂದಲಿಗೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ.

  ಅಂತಹ ಪರಿಸ್ಥಿತಿಯಲ್ಲಿ, ನೀವು ಮನೆಮದ್ದುಗಳ ಸಹಾಯದಿಂದ ಬಿಳಿ ಕೂದಲನ್ನು ತೊಡೆದು ಹಾಕಬಹುದು. ಹೀಗಾಗಿ ಮನೆಯಲ್ಲಿಯೇ ಸುಲುಭವಾಗಿ ಸಿಗುವ ಆಲೂಗಡ್ಡೆಯಿಂದ ತಲೆ ಕೂದಲನ್ನೂ ಕಪ್ಪಾಗಿಸಿಕೊಳ್ಳಬಹುದು.

  ಆಲೂಗಡ್ಡೆ ಸಿಪ್ಪೆಯಿಂದ ಕಪ್ಪಾಗಲಿದೆ ಕೂದಲು

  ಕೆರಟಿನ್ ಕೂದಲಿನ ಬೆಳವಣಿಗೆಗೆ ಬೇಕಾಗಿರುವಂತಹ ಪ್ರಮುಖ ಪ್ರೋಟೀನ್. ಕೆರಟಿನ್ ನಲ್ಲಿ ಮೆಲನಿನ್ ಕೊರತೆ ಅಥವಾ ಇಲ್ಲದೆ ಇರುವ ಕಾರಣದಿಂದ ಕೂದಲು ಬಿಳಿಯಾಗಬಹುದು. ಅನುವಂಶೀಯತೆ, ವಯಸ್ಸು ಮತ್ತು ದೇಹದಲ್ಲಿ ಆಗುವಂತಹ ಹಾರ್ಮೋನು ಅಸಮತೋಲನದಿಂದಾಗಿ ಮೆಲನಿನ್ ಕೊರತೆ ಉಂಟಾಗಬಹುದು.

  ಮಾರುಕಟ್ಟೆಯಲ್ಲಿ ಸಿಗುವಂತಹ ಕೆಲವು ರಾಸಾಯನಿಕಗಳು ಕೂದಲನ್ನು ಬಿಳಿಯಾಗಿಸಿ, ನಿಮಗೆ ಕಾಂತಿಯುತ ಕೂದಲು ನೀಡಬಹುದು. ಆದರೆ ಇದು ದೀರ್ಘಕಾಲಕ್ಕೆ ತುಂಬಾ ಹಾನಿಯುಂಟು ಮಾಡುವುದು. ಹೀಗಾಗಿ ಮನೆಯಲ್ಲಿ ಸಿಗುವ ಆಲೂಗಡ್ಡೆ ಬಳಸಿಕೊಂಡು ನೀವು ಮನೆಯಲ್ಲೇ ಮಾಸ್ಕ್ ತಯಾರಿಸಿಕೊಳ್ಳಬಹುದು. ಇದನ್ನೂ ಬಳಸುವ ಮೂಲಕ ಕೂದಲು ಕಪ್ಪಾಗಿಸಿ ಕೊಳ್ಳಬಹುದು.

  ಆಲೂಗಡ್ಡೆ ಸಿಪ್ಪೆ ಮಾಸ್ಕ್ ತಯಾರಿಸುವ ವಿಧಾನ

  ಆಲೂಗಡ್ಡೆ ಸಿಪ್ಪೆಯನ್ನು ಬಳಸುವುದರಿಂದ ಕೂದಲನ್ನು ಸುಲಭವಾಗಿ ಕಪ್ಪಾಗಿಸಬಹುದು. ಆಲೂಗೆಡ್ಡೆ ಸಿಪ್ಪೆಯು ನೈಸರ್ಗಿಕ ಬಣ್ಣವಾಗಿ ಕಾರ್ಯನಿರ್ವಹಿಸುವ ಪಿಷ್ಟವನ್ನು ಹೊಂದಿರುತ್ತದೆ. ಕೂದಲು ಕಪ್ಪಾಗಲು ಆಲೂಗಡ್ಡೆಯ ಸಿಪ್ಪೆಯನ್ನು ಒಂದು ಕಪ್ ನೀರಿನಲ್ಲಿ ಕುದಿಸಿ. ಇದರ ನಂತರ ಅದನ್ನು ತಣ್ಣಗಾಗಿಸಿ ಮತ್ತು ಬಾಟಲಿ ಅಥವಾ ಜಾರ್ನಲ್ಲಿ ತುಂಬಿಸಿ. ಬಳಿಕ ಅದಕ್ಕೆ ಕೆಲವು ಹನಿ ಲ್ಯಾವೆಂಡರ್ ಎಣ್ಣೆಯನ್ನು ಸೇರಿಸಿ. ನಿಮ್ಮ ನೈಸರ್ಗಿಕ ಕೂದಲು ಬಣ್ಣದ ಎಣ್ಣೆ ಸಿದ್ಧವಾಗುತ್ತದೆ. ಬಳಿಕ ಇದನ್ನು ಕೂದಲಿನ ಮೇಲೆ ಅನ್ವಯಿಸಿ ಮತ್ತು ಮೃದುವಾಗಿ ಮಸಾಜ್ ಮಾಡಿ.

  ಕೂದಲಿನ ಮೇಲೆ ಸುಮಾರು 1 ಗಂಟೆ ಬಿಡಿ. ಸ್ವಲ್ಪ ಸಮಯದ ನಂತರ ತಣ್ಣೀರಿನಿಂದ ಕೂದಲನ್ನು ತೊಳೆಯಿರಿ. ವಾರದಲ್ಲಿ ಎರಡರಿಂದ ಮೂರು ಬಾರಿ ಈ ಎಣ್ಣೆಯನ್ನು ಬಳಸುವುದರಿಂದ ಬಿಳಿ ಕೂದಲಿನ ಸಮಸ್ಯೆ ದೂರವಾಗುತ್ತದೆ.

  ಇದನ್ನೂ ಓದಿ: ಶಾಂಪೂವನ್ನು ಈ ರೀತಿಯಾಗಿ ಬಳಸಿದ್ರೆ ಸ್ಟ್ರಾಂಗ್​ & ಲಾಂಗ್​ ಹೇರ್ ನಿಮ್ಮದಾಗುತ್ತೆ..!

  ಕೂದಲು ಉದರುವ ಸಮಸ್ಯೆಗೆ ಪರಿಹಾರ

  ಆಲೂಗಡ್ಡೆ ಸಿಪ್ಪೆಯ ಈ ಪಾಕ ವಿಧಾನ ಕೂದಲು ಕಪ್ಪಾಗುವುದರ ಜೊತೆಗೆ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಎ, ವಿಟಮಿನ್ ಬಿ ಮತ್ತು ವಿಟಮಿನ್ ಸಿ ತಲೆ ಬುರುಡೆಯಲ್ಲಿ ಸಂಗ್ರಹವಾಗಿರುವ ಎಣ್ಣೆಯನ್ನು ತೆಗೆದುಹಾಕುವ ಮೂಲಕ ತಲೆಹೊಟ್ಟು ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಇದರಿಂದ ಕೂದಲು ಉದುರುವ ಸಮಸ್ಯೆ ದೂರವಾಗುತ್ತದೆ
  Published by:ranjumbkgowda1 ranjumbkgowda1
  First published: