Health Tips: ಟೊಮ್ಯಾಟೋದಿಂದ ಬಾದಾಮಿವರೆಗೆ, ಈ ಆಹಾರಗಳನ್ನು ತಿನ್ನುವಾಗ ತಪ್ಪುಗಳನ್ನು ಮಾಡಬೇಡಿ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸಾಮಾನ್ಯವಾಗಿ ನಾವು ಪ್ರತಿನಿತ್ಯ ತಿನ್ನುವಂತಹ ಆಹಾರ, ಹಣ್ಣುಗಳಲ್ಲಿ ಬಹಳಷ್ಟು ಪೋಷಕಾಂಶಗಳು ಇರುತ್ತದೆ. ಆದರೆ ಕೆಲವೊಂದು ಬಾರಿ ಅವುಗಳನ್ನು ಹೇಗೆ ತಿನ್ನಬೇಕೆಂದೇ ಗೊತ್ತಿರುವುದಿಲ್ಲ. ಈ ಸಂದರ್ಭದಲ್ಲಿ ಆರೋಗ್ಯದಲ್ಲಿ ಬಹಳಷ್ಟು ಸಮಸ್ಯೆಗಳಾಗಬಹುದು. ಹಾಗಿದ್ರೆ ಆ ತಪ್ಪುಗಳು ಯಾವುದೆಂದು ತಿಳಿಬೇಕಾದ್ರೆ ಈ ಲೇಖನವನ್ನೊಮ್ಮೆ ಓದಿ.

ಮುಂದೆ ಓದಿ ...
  • Share this:

ಪ್ರತಿಯೊಂದು ಆಹಾರವು (Food) ಅನೇಕ ವಿಧದ ಜೀವಸತ್ವಗಳು ಮತ್ತು ಖನಿಜ, ಪೋಷಕಾಂಶಗಳಿಂದ ತುಂಬಿರುತ್ತದೆ. ಅದನ್ನು ಸರಿಯಾದ ಸಮಯದಲ್ಲಿ, ಸರಿಯಾದ ಪ್ರಮಾಣದಲ್ಲಿ ಹಾಗೂ ಸರಿಯಾದ ಕ್ರಮದಲ್ಲಿ ತಿಂದರೆ ಮಾತ್ರ ಅದು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಹಾಗೆಯೇ ನಾವು ಆಹಾರವನ್ನು ತಪ್ಪಾಗಿ ತಿಂದಾಗ, ಅವುಗಳ ಪೌಷ್ಟಿಕಾಂಶ (Nutrition) ಮೌಲ್ಯಗಳು ಕಡಿಮೆಯಾಗುತ್ತದೆ. ಇಂದಿನ ಕಾಲದಲ್ಲಿ ಅದರಲ್ಲೂ ಕೊರೊನಾ ಸಾಂಕ್ರಾಮಿಕದ ನಂತರ ಅನೇಕರು ಆರೋಗ್ಯದ ಕುರಿತು ಕಾಳಜಿಗಳನ್ನು ಹೊಂದಿದ್ದಾರೆ. ಜೀವನ ಪದ್ಧತಿಯನ್ನು ಬದಲಾಯಿಸಿಕೊಂಡು, ಆರೋಗ್ಯಕರ (Health) ಆಹಾರ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ.


ಸ್ವಲ್ಪ ತಿಂದರೂ ಸರಿಯಾದದ್ದನ್ನು, ಸರಿಯಾದ ಪ್ರಮಾಣದಲ್ಲಿ ತಿನ್ನಬೇಕು ಎಂಬುದನ್ನು ಅರಿತುಕೊಂಡಿದ್ದಾರೆ. ಆದರೆ ಕೆಲವೊಮ್ಮೆ ಸರಿಯಾದ ಮಾಹಿತಿಯ ಕೊರತೆಯಿಂದ ನೀವು ತಪ್ಪಾದ ಆಹಾರ ಪದಾರ್ಥವನ್ನು ತಿನ್ನುತ್ತಿರಬಹುದು.


ಆದರೆ ಅದು ತಪ್ಪು. ಸರಿಯಾದ ಪ್ರಮಾಣದಲ್ಲಿ ಆಹಾರ ತಿಂದರೆ ಮಾತ್ರ ಅದರ ಪ್ರಯೋಜನ ಪಡೆಯಬಹುದು. ಹಾಗಿದ್ದರೆ ನಾವು ಸಾಮಾನ್ಯವಾಗಿ ಟೊಮ್ಯಾಟೋ, ಬಾದಾಮಿ, ಬೆಳ್ಳುಳ್ಳಿ, ಕೋಸುಗಡ್ಡೆ, ಕ್ಯಾರೆಟ್‌, ಅಗಸೆ ಬೀಜ ಮುಂತಾದವುಗಳನ್ನು ತಿನ್ನುವಾಗ ಮಾಡುವಂತಹ ತಪ್ಪುಗಳ್ಯಾವವು? ಅವುಗಳನ್ನು ಸರಿಪಡಿಸಿಕೊಳ್ಳುವುದು ಹೇಗೆ ಅನ್ನೋದನ್ನು ಈ ಲೇಖನದ ಮೂಲಕ ತಿಳಿಯೋಣ.


ಇದನ್ನೂ ಓದಿ: ಊಟವಾದ ಕೂಡಲೇ ವಾಂತಿಯಾಗುತ್ತಾ? ಹಾಗಾದ್ರೆ ಇದು ಈ ಕಾಯಿಲೆಯ ಸಂಕೇತವಾಗಿರಬಹುದು!


ನೀವು ಆಹಾರಗಳನ್ನು ತಪ್ಪಾಗಿ ತಿನ್ನುತ್ತಿರಬಹುದು!


1. ಟೊಮ್ಯಾಟೋ: ಸಾಮಾನ್ಯವಾಗಿ ಟೊಮ್ಯಾಟೋವನ್ನು ಸ್ಯಾಂಡ್‌ವಿಚ್‌ಗಳು ಮತ್ತು ಬರ್ಗರ್‌ಗಳ ನಡುವೆ ಹಸಿಯಾಗಿಯೇ ಸೇರಿಸಲಾಗುತ್ತದೆ. ಸಾಲ್ಸಾ ಮತ್ತು ಸಲಾಡ್‌ಗಳನ್ನು ತಯಾರಿಸಲು ಸಣ್ಣಗೆ ಕಟ್​ ಮಾಡಿ ಸೇರಿಸಲಾಗುತ್ತದೆ. ಆದರೆ ಹಸಿಯಾಗೇ ತಿನ್ನುವುದಕ್ಕಿಂತ ಟೊಮ್ಯಾಟೋಗಳನ್ನು ಬೇಯಿಸಿದರೆ ಅವುಗಳ ಪೌಷ್ಟಿಕಾಂಶದ ಮೌಲ್ಯ ಹೆಚ್ಚಾಗುತ್ತದೆ.


ಟೊಮ್ಯಾಟೋಗಳಲ್ಲಿ ಇರುವಂಥ "ಲೈಕೋಪೀನ್" ಬಿಸಿ ಮಾಡಿದಾಗ, ಹೆಚ್ಚು ಹೀರಿಕೊಳ್ಳುವ ರೂಪಕ್ಕೆ ಬದಲಾಗುತ್ತದೆ. ಆದ್ದರಿಂದ, ನೀವು ಹೆಚ್ಚು ಸಮಯ ಬೇಯಿಸಿದಷ್ಟೂ ಹೆಚ್ಚಿನ ಪೋಷಕಾಂಶವನ್ನು ಪಡೆಯುತ್ತೀರಿ. ಆದ್ದರಿಂದ, ಟೊಮ್ಯಾಟೋಗಳನ್ನು ಬೇಯಿಸಲು ಮರೆಯದಿರಿ.


2. ಬೆಳ್ಳುಳ್ಳಿ: ಬೆಳ್ಳುಳ್ಳಿ ಒಂದು ಅದ್ಭುತವಾದ ತರಕಾರಿಯಾಗಿದೆ. ಅದರ ಒಗ್ಗರಣೆಯ ಪರಿಮಳ ಬಾಯಲ್ಲಿ ನಿರೂರುವಂತೆ ಮಾಡುತ್ತದೆ. ಸಾಮಾನ್ಯವಾಗಿ ಎಲ್ಲರೂ ಬೆಳ್ಳುಳ್ಳಿ ಬಿಡಿಸಿ ಅದನ್ನು ಬಾಣಲೆಗೆ ಹಾಕಿ ಅಡುಗೆ ಮಾಡುತ್ತಾರೆ. ಆದರೂ, ಕತ್ತರಿಸಿದ ಬೆಳ್ಳುಳ್ಳಿಯನ್ನು ತಕ್ಷಣ ಬಾಣಲೆಯಲ್ಲಿ ಹಾಕಬಾರದು ಎಂದು ನಿಮಗೆ ತಿಳಿದಿದೆಯೇ?


ಸಾಂಕೇತಿಕ ಚಿತ್ರ


ಬೆಳ್ಳುಳ್ಳಿಯನ್ನು ಬಿಡಿಸಿ ತಕ್ಷಣವೇ ಅದನ್ನು ಉಪಯೋಗಿಸಬಾರದು. ಏಕೆಂದರೆ ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ ಎಂಬ ಅಂಶವು ಗಾಳಿಗೆ ಒಡ್ಡಿಕೊಂಡಾಗ ಕ್ರಿಯಾಶೀಲವಾಗುತ್ತದೆ. ಆಲಿಸಿನ್‌ನಲ್ಲಿ ಉರಿಯೂತದ ಮತ್ತು ಆಂಟಿಫಂಗಲ್ ಪರಿಣಾಮಗಳೆರಡೂ ಇರುತ್ತವೆ. ಹೀಗಾಗಿ, ಮುಂದಿನ ಬಾರಿ ನೀವು ಬೆಳ್ಳುಳ್ಳಿಯನ್ನು ಬಿಡಿಸಿದಾಗ ಅಥವಾ ಕಟ್‌ ಮಾಡಿದಾಗ 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಇಡಿ.


3. ಮೊಸರು: ಭಾರತದಲ್ಲಿ, ಮೊಸರು ಹೆಚ್ಚು ವ್ಯಾಪಕವಾಗಿ ಬಳಸುವಂತಹ ಪ್ರೋಬಯಾಟಿಕ್ ಆಹಾರವಾಗಿದೆ. ಹೆಚ್ಚಿನ ಕುಟುಂಬಗಳಲ್ಲಿ ಮೊಸರಿಲ್ಲದೇ ಊಟ ಪರಿಪೂರ್ಣವಾಗುವುದೇ ಇಲ್ಲ. ಆದರೆ ಮೊಸರಿನೊಂದಿಗೆ ಇರುವಂಥ ನೀರಿನ ಬಗ್ಗೆ ನೀವು ಎಂದಾದರೂ ಗಮನ ಹರಿಸಿದ್ದೀರಾ? ಬಹಳಷ್ಟು ಜನರು ಇದೇನು ನೀರು ಎಂದು ಚೆಲ್ಲುತ್ತಾರೆ.


ಆದರೆ ಇದು ಹಾಲೊಡಕು ಪ್ರೋಟೀನ್ ಆಗಿದೆ. ಇದು ಹಾಲಿನಿಂದ ತಯಾರಿಸಿದ ಪ್ರೋಟೀನ್ ಪುಡಿಗಳಲ್ಲಿ ಸಾಮಾನ್ಯ ಅಂಶವಾಗಿದೆ. ಹಾಗಾಗಿ ನೀವು ಅದನ್ನು ಚೆಲ್ಲುವ ಬದಲು ಸೇವಿಸಿದರೆ ಹೆಚ್ಚಿನ ಪ್ರೋಟೀನ್‌ ಅನ್ನು ಪಡೆಯುತ್ತೀರಿ.


4. ಸಿಟ್ರಸ್ ಹಣ್ಣುಗಳು: ಈಗಿನ ಬಿರು ಬೇಸಿಗೆಯಲ್ಲಿ ಸಿಟ್ರಸ್ ನಂತಹ ಹಣ್ಣುಗಳು ಹೆಚ್ಚು ತಾಜಾತನ ನೀಡುತ್ತವೆ. ತಾಜಾ ಕಿತ್ತಳೆ ಜ್ಯೂಸ್‌ ದಣಿದವರಿಗೆ ಹೊಸ ಚೈತನ್ಯ ನೀಡುತ್ತದೆ.


ಆದರೆ ನಿಮಗೆ ಗೊತ್ತಾ? ಆ ಹಣ್ಣಿನ ಸಿಪ್ಪೆಗಳು ಅದಕ್ಕೂ ನಾಲ್ಕು ಪಟ್ಟು ಹೆಚ್ಚು ಫೈಬರ್ ಮತ್ತು ರೋಗ ನಿರೋಧಕ ಅಂಶಗಳನ್ನು ಒಳಗೊಂಡಿದೆ. ಹಾಗಾಗಿ ಈ ಸಿಪ್ಪೆಗಳನ್ನು ನೀವು ತಿನ್ನುವುದರಿಂದ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಪಡೆಯುತ್ತೀರಿ.


ಅಂದಹಾಗೆ ಅದನ್ನು ರುಚಿಕರವಾಗಿಸಲು ಸಿಪ್ಪೆಗಳನ್ನು ತುರಿ ಮಾಡಬಹುದು, ಅದನ್ನು ನೀವು ಸಲಾಡ್‌ಗಳು ಅಥವಾ ಸಿಹಿತಿಂಡಿಗಳಿಗೆ ಸಹ ಸೇರಿಸಬಹುದು.


5. ಬಾದಾಮಿ: ಬಾದಾಮಿಯಲ್ಲಿ ವಿಟಮಿನ್ ಇ ಹೇರಳವಾಗಿ ಕಂಡುಬರುತ್ತದೆ. ನಮ್ಮ ಚರ್ಮ ಮತ್ತು ಕೂದಲನ್ನು ಪೋಷಿಸುವ ಕಾರಣದಿಂದ ಇದನ್ನು ಅನೇಕ ಸೌಂದರ್ಯವರ್ಧಕ ಮತ್ತು ತ್ವಚೆ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ.


ಆದರೆ ಬಾದಾಮಿ ಸಿಪ್ಪೆಯನ್ನು ತಿನ್ನಬಾರದು ಎಂದು ನಿಮಗೆ ತಿಳಿದಿದೆಯೇ? ಈ ಸಿಪ್ಪೆಯಿಂದಾಗಿ ನಮ್ಮ ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಬಾದಾಮಿಯನ್ನು ತಿನ್ನುವ ಮೊದಲು ನೆನೆಸಿ ಅದರ ಹೊರ ಸಿಪ್ಪೆಯನ್ನು ತೆಗೆಯಬೇಕು. ಬಿಸಿ ನೀರಿನಲ್ಲಿ ನೆನೆಸಿದರೂ ಸಿಪ್ಪೆಯನ್ನು ಸುಲಭವಾಗಿ ತೆಗೆಯಬಹುದು.


6. ಸ್ಟ್ರಾಬೆರಿ: ಈ ಬೆರ್ರಿ ಹಣ್ಣುಗಳು ನಿಮಗೆ ವಿಟಮಿನ್ ಸಿ ಒದಗಿಸುತ್ತವೆ. ಆದರೆ ನೀವು ಈ ಹಣ್ಣುಗಳನ್ನು ತಿನ್ನುವ ಮೊದಲು ಕತ್ತರಿಸಿದರೆ ನಿಮ್ಮ ವಿಟಮಿನ್ ಸಿ ನಿಮಗೆ ಸಿಗದೇ ಹೋಗಬಹುದು.


ಸಾಂಕೇತಿಕ ಚಿತ್ರ


ಏಕೆಂದರೆ ಸ್ಟ್ರಾಬೆರಿಗಳು ಬೆಳಕು ಮತ್ತು ಆಮ್ಲಜನಕಕ್ಕೆ ಒಡ್ಡಿಕೊಂಡಾಗ, ಅವುಗಳ ಜೀವಸತ್ವಗಳು ಒಡೆಯಲು ಪ್ರಾರಂಭಿಸುತ್ತವೆ. ಆದ್ದರಿಂದ ಅವುಗಳನ್ನು ಸಂಪೂರ್ಣವಾಗಿ ಒಮ್ಮೆಲೆ ತಿನ್ನಿ ಮತ್ತು ನೀವು ಅವುಗಳನ್ನು ತೆಗೆದಿಡಲು ಬಯಸಿದರೆ ಅವುಗಳನ್ನು ಸರಿಯಾಗಿ ಮುಚ್ಚಿಡಿ.


8. ಕ್ಯಾರೆಟ್: ಅವು ಬೀಟಾ-ಕ್ಯಾರೋಟಿನ್‌ನಲ್ಲಿ ಸಮೃದ್ಧವಾಗಿದ್ದು, ಇದರಲ್ಲಿ ವಿಟಮಿನ್‌ ಎ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಕ್ಯಾರೆಟ್‌ಗಳು ನಿಮ್ಮ ಕಣ್ಣುಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.


ಅಲ್ಲದೇ ಇದು ನಿಮ್ಮ ಹೃದಯದ ಆರೋಗ್ಯಕ್ಕೆ, ಕೊಲೆಸ್ಟ್ರಾಲ್‌ ಸಮತೋಲನಕ್ಕೆ ಹಾಗೂ ತೂಕ ನಷ್ಟದ ಗುರಿ ಸಾಧನೆಗೂ ಸಹಾಯ ಮಾಡುತ್ತದೆ. ಈ ಕ್ಯಾರೆಟ್‌ ಅನ್ನು ಹಸಿಯಾಗಿಯೇ ತಿನ್ನುವುದಕ್ಕಿಂತ ಬೇಯಿಸಿ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಸಂಪೂರ್ಣ ಕ್ಯಾರೆಟ್ ಅನ್ನು ಬೇಯಿಸಬೇಕು. ನಂತರ ಹೆಚ್ಚು ಪೋಷಕಾಂಶಗಳನ್ನು ಉಳಿಸಿಕೊಳ್ಳಲು ಸ್ಲೈಸ್ ಮಾಡಬೇಕು. ಕ್ಯಾರೆಟ್ ಬೇಯಿಸುವುದರಿಂದ ಹೆಚ್ಚು ಪ್ರಯೋಜನ ಸಿಗುತ್ತದೆ ಎಂದು ಹೇಳಲಾಗಿದೆ.




9. ಕಿವಿ ಹಣ್ಣು: ಕಿವಿಯನ್ನು ಸೇವಿಸುವಾಗ, ಬಹುತೇಕರು ಗಂಭೀರವಾದ ತಪ್ಪನ್ನು ಮಾಡುತ್ತಾರೆ. ಕಿವಿಯು ಒಂದು ಹಣ್ಣಾಗಿದ್ದು, ಇದನ್ನು ತಿನ್ನುವಾಗ ಸಿಪ್ಪೆಯೊಂದಿಗೆ ಸೇವಿಸಬೇಕು. ನೀವು ಕಿವಿ ಸ್ಮೂಥಿಯನ್ನು ಮಾಡಿದರೂ ಅದಕ್ಕೆ ಸಿಪ್ಪೆಯ ಜೊತೆಗೇ ಹಣ್ಣನ್ನು ಸೇರಿಸಿ.

top videos


    ಏಕೆಂದರೆ ಕಿವಿ ಸಿಪ್ಪೆಗಳು ಫೋಲೇಟ್ ಮತ್ತು ವಿಟಮಿನ್ ಇ ಸೇರಿದಂತೆ ಖನಿಜಗಳಿಂದ ಸಮೃದ್ಧವಾಗಿವೆ. ಕಿವಿ ಹಣ್ಣುಗಳನ್ನು ಸಿಪ್ಪೆಯೊಂದಿಗೆ ತಿನ್ನುವುದರಿಂದ 50% ಹೆಚ್ಚು ಫೈಬರ್, 32% ಹೆಚ್ಚು ವಿಟಮಿನ್ ಇ ಮತ್ತು 34% ಹೆಚ್ಚು ಫೋಲೇಟ್ ಅನ್ನು ಪಡೆಯುತ್ತೇವೆ. ಹಾಗಾಗಿ ಇನ್ಮುಂದೆ ಕಿವಿ ಹಣ್ಣನ್ನು ಸಿಪ್ಪೆಯೊಂದಿಗೆ ಸೇವಿಸಿ.

    First published: