Food: ಊಟಕ್ಕೆ ಅನ್ನ ಮತ್ತು ರೊಟ್ಟಿ ಒಟ್ಟಿಗೆ ತಿನ್ನಬಾರದಂತೆ, ಇದು ಭಾರೀ ಡೇಂಜರ್ ಅಂತಾರೆ ತಜ್ಞರು!

Roti and Rice: ಕೆಲವರಿಗೆ ರೊಟ್ಟಿ ಜೊತೆಗೆ ಚಪಾತಿ ಇರಲೇಬೇಕು. ಇನ್ನು ಕೆಲವರಿಗೆ ಮೊಸರು, ತರಕಾರಿ ಹೀಗೆ ನಾನಾ ಬಗೆಯ ಪದಾರ್ಥಗಳು ಊಟದ ಜೊತೆಗೆ ಇರಲೇಬೇಕು.. ಆದರೆ ಈ ರೀತಿ ಒಂದೇ ಸಮಯದಲ್ಲಿ 2 ಪದಾರ್ಥ ತಿನ್ನುವುದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.

ರೊಟ್ಟಿ ಹಾಗೂ ಅನ್ನ

ರೊಟ್ಟಿ ಹಾಗೂ ಅನ್ನ

  • Share this:
    ಹುಟ್ಟಿನಿಂದಲೇ ಯಾರೂ ರೋಗಿಗಳಾಗಿರುವುದಿಲ್ಲ(Patient). ಆದರೆ ಕ್ರಮೇಣ ಅವರ ಆಹಾರ(Food) ಅಭ್ಯಾಸ(Habit) ಮತ್ತು ಜೀವನಶೈಲಿ(Lifestyle) ಸರಿಯಾಗಿರದ ಕಾರಣ ಅನಾರೋಗ್ಯಕ್ಕೆ(Unhealthy) ಒಳಗಾಗುತ್ತಾರೆ. ಆರೋಗ್ಯವಂತರಾಗಿ ಜನಿಸುವ ನಾವು ನಮ್ಮ ಬುದ್ಧಿಯನ್ನು ಬಳಸದೆ ಇಲ್ಲಸಲ್ಲದ ಆಹಾರಾಭ್ಯಾಸ(Food habit) ಬೆಳೆಸಿಕೊಂಡು ರೋಗಿಷ್ಟರಾಗುತ್ತೇವೆ. ಹಸಿವಾದಾಗ(Hungry) ಏನಾದರೂ ಆಗಬಹುದೆಂದು ನಾವು ಹೊಟ್ಟೆಗೆ ಹಾಕಿಕೊಂಡು ಹಸಿವು ನೀಗಿಸಿಕೊಳ್ಳುತ್ತೇವೆ. ಆದರೆ ನಾವು ತಿನ್ನುವ ಆಹಾರ ಕ್ರಮ ಮತ್ತು ಸರಿಯಾದ ಪೋಷಕಾಂಶಗಳಿರುವ ಆಹಾರಗಳನ್ನು ತಿನ್ನುತ್ತಿದ್ದೇವೆಯಾ? ನಾವು ತಿನ್ನುತ್ತಿರುವ ಆಹಾರ(Food) ನಮ್ಮ ಆರೋಗ್ಯದ(Health) ಮೇಲೆ ಯಾವೆಲ್ಲಾ ಪರಿಣಾಮ ಬೀರಬಹುದೆಂದು ನಾವು ಗಮನಿಸುವುದೇ ಇಲ್ಲ. ಆಹಾರ ಸೇವನೆಯಿಂದಷ್ಟೇ ದೇಹಕ್ಕೆ ಶಕ್ತಿ ಬರುವುದಿಲ್ಲ. ಸರಿಯಾದ ಪೋಷಕಾಂಶ ಮತ್ತು ಆರೋಗ್ಯಕರವಾಗಿರುವ ಆಹಾರದಿಂದ ಮಾತ್ರ ದೇಹದ ಬೆಳವಣಿಗೆ ಮತ್ತು ದೇಹಕ್ಕೆ ಶಕ್ತಿ ಬರಲು ಸಾಧ್ಯ. ಇಲ್ಲವಾದಲ್ಲಿ ಎಷ್ಟು ತಿಂದರೂ ಅದು ನೀರಿನಲ್ಲಿಟ್ಟ ಹೋಮದಂತಾಗುತ್ತದೆ.ಹೀಗಾಗಿ ಕೆಲವೊಂದು ಆಹಾರಗಳ ಜೊತೆಗೆ ಮತ್ತೊಂದು ಆಹಾರವನ್ನು ಸೇವನೆ ಮಾಡಬಾರದು.. ಹೀಗೆ ಮಾಡುವುದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ..

    ರೊಟ್ಟಿ ಜೊತೆ ಅನ್ನ ತಿನ್ನುವ ಮುನ್ನ ಎಚ್ಚರ

    ಕೆಲವರಿಗೆ ರೊಟ್ಟಿ ಜೊತೆಗೆ ಚಪಾತಿ ಇರಲೇಬೇಕು. ಇನ್ನು ಕೆಲವರಿಗೆ ಮೊಸರು, ತರಕಾರಿ ಹೀಗೆ ನಾನಾ ಬಗೆಯ ಪದಾರ್ಥಗಳು ಊಟದ ಜೊತೆಗೆ ಇರಲೇಬೇಕು.. ಆದರೆ ಈ ರೀತಿ ಒಂದೇ ಸಮಯದಲ್ಲಿ 2 ಪದಾರ್ಥ ತಿನ್ನುವುದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ರೊಟ್ಟಿ ಜೊತೆಗೆ ಅನ್ನ ತಿನ್ನುವ ಅಭ್ಯಾಸವು ಕೆಲವರಲ್ಲಿ ಇರುತ್ತದೆ.. ಈ ರೀತಿ ತಿನ್ನುವ ಮೊದಲು ಒಮ್ಮೆ ಯೋಚಿಸಿ ತಿನ್ನುವುದು ಸೂಕ್ತ.

    ಇದನ್ನೂ ಓದಿ: ಈ ಹಣ್ಣಿನ ರಸ ಕುಡಿದರೆ ಕೇವಲ 3 ಗಂಟೆಯಲ್ಲಿ ರಕ್ತದಲ್ಲಿನ ಸಕ್ಕರೆ ಕಮ್ಮಿ ಆಗುತ್ತಂತೆ

    1) ತೂಕ ಹೆಚ್ಚಳ: ತೂಕ ಇಳಿಕೆಗಾಗಿ ನೀವು ನಾನ ಪ್ರಯತ್ನಗಳನ್ನು ಮಾಡುತ್ತಿದ್ದಾರೆ, ಸರಿಯಾದ ರೀತಿಯಲ್ಲಿ ಆಹಾರ ಸೇವನೆ ಮಾಡದೇ ಇದ್ದರೆ ಅದು ವ್ಯರ್ಥ.. ಅದ್ರಲ್ಲೂ ಮಧ್ಯಾಹ್ನ ಅಥವಾ ರಾತ್ರಿಯ ಊಟದ ವೇಳೆ ರೊಟ್ಟಿಯೊಂದಿಗೆ ಅನ್ನವನ್ನು ತಿನ್ನುವುದರಿಂದ ಕ್ಯಾಲೋರಿ ಹೆಚ್ಚಾಗುತ್ತದೆ. ಇದು ಬೊಜ್ಜಿನ ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ. ಒಮ್ಮೆ ದೇಹಕ್ಕೆ ಕೊಬ್ಬು ಸೇರಿಕೊಂಡರೆ, ಅದನ್ನು ಕಡಿಮೆ ಮಾಡುವುದು ಕಷ್ಟವಾಗುತ್ತದೆ. ತೂಕ ಇಳಿಸುವುದು ಬಾಯಲ್ಲಿ ಹೇಳಿದಷ್ಟು ಸುಲಭವಲ್ಲ.

    2) ಅಜೀರ್ಣದ ಸಮಸ್ಯೆ: ಕೆಲವರು ರೊಟ್ಟಿ ತಿಂದ ನಂತರವೂ ಹೆಚ್ಚಿನ ಪ್ರಮಾಣದಲ್ಲಿ ಅನ್ನ ತಿನ್ನುತ್ತಾರೆ. ಇದು  ಅಜೀರ್ಣ ಹಾಗೂ ಗ್ಯಾಸ್ಟ್ರಿಕ್ ಗೆ ಕಾರಣವಾಗಬಹುದು. ಎರಡೂ ಸರಿಯಾಗಿ ಜೀರ್ಣವಾಗದ ಕಾರಣ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳುತ್ತದೆ.

    3) ಕ್ಯಾಲೋರಿ ಹೆಚ್ಚಳ: ರೊಟ್ಟಿ ಮತ್ತು ಅನ್ನವನ್ನು ಒಟ್ಟಿಗೆ ತಿನ್ನುವುದರಿಂದ ಹೊಟ್ಟೆ ಭಾರವಾಗುತ್ತದೆ. ಇದಲ್ಲದೆ ನಿದ್ರೆ ಬರುವುದಿಲ್ಲ. ತಜ್ಞರ ಪ್ರಕಾರ,ಮಧ್ಯಾಹ್ನ ಅಥವಾ ರಾತ್ರಿ ಅನ್ನ ಸೇವನೆ ಮಾಡಲು ಬಯಸಿದ್ದರೆ ಅನ್ನವನ್ನು ಮಾತ್ರ ತಿನ್ನಬೇಕು. ಚಪಾತಿ ತಿನ್ನಲು ಬಯಸಿದ್ದರೆ ಚಪಾತಿಯನ್ನು ಮಾತ್ರ ತಿನ್ನಬೇಕು.

    4) ಉಸಿರಾಟಕ್ಕೆ ತೊಂದರೆ: ಅನ್ನ ತಂಪು ಆಹಾರ. ಉಸಿರಾಟದ ಕಾಯಿಲೆ ಅಥವಾ ಅಸ್ತಮಾದಿಂದ ಬಳಲುತ್ತಿರುವವರು ಅನ್ನವನ್ನು ತ್ಯಜಿಸಬೇಕು ಇಲ್ಲವೆ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಅತಿಯಾದ ಅನ್ನ ಸೇವನೆ ಉಸಿರಾಟದ ತೊಂದರೆ ಹೆಚ್ಚಿಸುತ್ತದೆ.

    ಇದನ್ನೂ ಓದಿ: 30 ಸೆಕೆಂಡ್​ಗಳಲ್ಲಿ ನೀವು ಈ 3 ಕೆಲಸ ಮಾಡೋಕೆ ಸಾಧ್ಯ ಆದ್ರೆ ನಿಮ್ಮ ಆರೋಗ್ಯ ಸಖತ್ತಾಗಿದೆ ಎಂದರ್ಥ, ಟ್ರೈ ಮಾಡಿ

    5) ಮಧುಮೇಹ: ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ಸೇವನೆಯು  ದೇಹದಲ್ಲಿ ಮಧುಮೇಹ ಹಾಗೂ ಸ್ಥೂಲಕಾಯತೆಗೆ ಕಾರಣವಾಗಬಹುದು. ಇದು ಹೃದಯ ಮತ್ತು ಮೂತ್ರಪಿಂಡಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಲ್ಬಣಿಸುತ್ತದೆ

    6) ಜೀರ್ಣಕ್ರಿಯೆಯಲ್ಲಿ ವ್ಯತ್ಯಾಸ: ರಾತ್ರಿ ಅನ್ನ ಹಾಗೂ ರೊಟ್ಟಿ ಎರಡನ್ನೂ ಸೇವನೆ ಮಾಡಿದರೆ ಹೊಟ್ಟೆಯಲ್ಲಿ ಸಮಸ್ಯೆಗಳು ಶುರುವಾಗುತ್ತವೆ. ರಾತ್ರಿಯಲ್ಲಿ ಜೀರ್ಣಕ್ರಿಯೆಯು ನಿಧಾನವಾಗಿರುತ್ತದೆ. ಆದ್ದರಿಂದ ಲಘು ಆಹಾರವನ್ನು ಸೇವಿಸಿ.
    Published by:ranjumbkgowda1 ranjumbkgowda1
    First published: