ಯಶಸ್ಸಿಗೆ ಇಲ್ಲಿದೆ ಸರಳ ಸೂತ್ರ; ಈ ಕೆಲಸ ಮಾಡಿದ್ರೆ ಸಕ್ಸಸ್​​ ಗ್ಯಾರಂಟಿ!

ಸೋಲು ಗೆಲುವು ಜೀವನದಲ್ಲಿ ಮಾಮೂಲಿ. ಸೋಲು ನಿಮ್ಮನ್ನು ಗೆಲುವಿನತ್ತ ಕೊಂಡೊಯ್ಯವ ಔಷಧವಿದ್ದಾಗೆ. ಕೆಲಸವನ್ನು ಪ್ರಾರಂಭಿಸುವ ಮೊದಲು ನಿಮ್ಮ ಯೋಜನೆ ಹಾಗೂ ಯೋಚನೆಯ ಬಗ್ಗೆ ಗಮನವಿರಲಿ. ನಿಮ್ಮ ಯೋಚನೆ ಸರಿಯೆಂದಾದರೆ ಕೆಲಸವನ್ನು ಚಲದಿಂದ ಪ್ರಾರಂಭಿಸಿ. ಇದರಿಂದ ಯಶಸ್ಸಿನ ಗುರಿಯನ್ನು ಬೇಗ ತಲುಪ ಬಹುದು.

news18
Updated:August 15, 2019, 8:50 PM IST
ಯಶಸ್ಸಿಗೆ ಇಲ್ಲಿದೆ ಸರಳ ಸೂತ್ರ; ಈ ಕೆಲಸ ಮಾಡಿದ್ರೆ ಸಕ್ಸಸ್​​ ಗ್ಯಾರಂಟಿ!
@Sl
news18
Updated: August 15, 2019, 8:50 PM IST
ಇಂತಹ ಕೆಲಸ ನಿನ್ನಿಂದಾಗದು. ಅಂತಹ ಕೆಲಸ ನಾನು ಮಾಡಲು ಸಾಧ್ಯವೇ ಇಲ್ಲ ಎಂದು ಗೊಣಗುತ್ತಾ ಕೂರುವುದು ಅನೇಕರ ಲಕ್ಷಣ. ಇನ್ನೊಂದಷ್ಟು ಮಂದಿ ಕೆಲಸವನ್ನು ಪ್ರಾರಂಭಿಸುವ ಮೊದಲೇ ನೀನು ಸೋತು ಬಿಡುತ್ತೀಯಾ ಎಂದು ಭಯ ಪಡಿಸುತ್ತಾರೆ. ಇದರಿಂದಾಗಿ ನಮ್ಮಲ್ಲಿದ್ದ ಹುಮ್ಮಸ್ಸು, ಉತ್ಸಾಹ ಅಲ್ಲಿಯೇ ನೆಲಕಚ್ಚಿ ಹೋಗುತ್ತದೆ. ಈ ಗೊಣಗಾಟದ ಜನರ ಮುಂದೆ ನಿಮ್ಮನ್ನು ರೂಪಿಸಿಕೊಳ್ಳುವ ಏಕ ಮಾರ್ಗವೊಂದಿದೆ. ಅದೇನು ಗೊತ್ತಾ?

ಯಾವುದೇ ಕೆಲಸ ಮಾಡುವ ಮೊದಲು ಚಿಂತನೆ ಮಾಡಿ. ಧನಾತ್ಮಕ ಮತ್ತು ಋಣಾತ್ಮಕ ಚಿಂತನೆಗಳು ನಿಮ್ಮಲ್ಲಿ ಸಹಜವಾಗಿ ಸುಳಿದಾಡುತ್ತವೆ. ಅಂತಹ ಸಂದರ್ಭದಲ್ಲಿ ಚಲ ಬಿಡದೆ ಸಾಧಿಸುವ ಮಾರ್ಗದತ್ತ ಏಕಾಗೃತರಾಗಿ. ಋಣಾತ್ಮಕ ಚಿಂತನೆಗಳು ಹಿಂದುಳಿಯುವಂತೆ ಮಾಡುತ್ತದೆ. ಹೀಗಾಗಿ ಅಂತಹ ಚಿಂತನೆಗಳಿಂದ ಕೊಂಚ ದೂರವಿರಿ.

ಇದನ್ನೂ ಓದಿ: ಮಗನನ್ನು ಗೆಲ್ಲಿಸಲು ಇಡೀ ಜೋಡೆತ್ತು ಟೀಮ್ ಸದಸ್ಯರ ಫೋನ್ ಟ್ಯಾಪ್ ಮಾಡಿಸಿದ್ರಾ ಕುಮಾರಸ್ವಾಮಿ?

ಸೋಲು ಗೆಲುವು ಜೀವನದಲ್ಲಿ ಮಾಮೂಲಿ. ಸೋಲು ನಿಮ್ಮನ್ನು ಗೆಲುವಿನತ್ತ ಕೊಂಡೊಯ್ಯವ ಔಷಧವಿದ್ದಾಗೆ. ಕೆಲಸವನ್ನು ಪ್ರಾರಂಭಿಸುವ ಮೊದಲು ನಿಮ್ಮ ಯೋಜನೆ ಹಾಗೂ ಯೋಚನೆಯ ಬಗ್ಗೆ ಗಮನವಿರಲಿ. ನಿಮ್ಮ ಯೋಚನೆ ಸರಿಯೆಂದಾದರೆ ಕೆಲಸವನ್ನು ಚಲದಿಂದ ಪ್ರಾರಂಭಿಸಿ. ಇದರಿಂದ ಯಶಸ್ಸಿನ ಗುರಿಯನ್ನು ಬೇಗ ತಲುಪ ಬಹುದು.

ನೀವು ಮಾಡುವ ಒಳ್ಳೆಯ ಕೆಲಸದಲ್ಲಿ ಶ್ರದ್ಧೆ, ಕಾಳಜಿ ಇದ್ದಲ್ಲಿ ಹೊಸ ಹುಮ್ಮಸ್ಸು ಬರುತ್ತದೆ. ಹಿಡಿದ ಕೆಲಸವನ್ನು ಪೂರ್ಣಗೊಳಿಸುವ ಅದಮ್ಯ ವಿಶ್ವಾಸ ಹೆಚ್ಚಾಗುತ್ತದೆ. ಇದೇ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಯಶಸ್ಸಿನ ದಾರಿಯಲ್ಲಿ ಸಾಗಬೇಕೆಂಬುದೆ ನಮ್ಮ ಆಶಯ
First published:August 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...