ಮೀಟ್​ Mr. ಪ್ರತೀಕ್​; ಶ್ವಾನಗಳಿಗೆ ಈತನೆಂದರೆ ಬಲು ಇಷ್ಟ ಯಾಕೆ ಗೊತ್ತೇ?


Updated:June 16, 2018, 5:35 PM IST
ಮೀಟ್​ Mr. ಪ್ರತೀಕ್​; ಶ್ವಾನಗಳಿಗೆ ಈತನೆಂದರೆ ಬಲು ಇಷ್ಟ ಯಾಕೆ ಗೊತ್ತೇ?

Updated: June 16, 2018, 5:35 PM IST
- ಸೌಮ್ಯಾ ಕಳಸಾ, ನ್ಯೂಸ್​ 18 ಕನ್ನಡ

ಬೆಂಗಳೂರು (ಜೂನ್​ 16): ಈತ ಶ್ವಾನಗಳ ಬೆಸ್ಟ್ ಫ್ರೆಂಡ್. ಮನೆಯ ಅಂಗಳಕ್ಕೆ ಕಾಲಿಟ್ಟ ಅಂದ್ರೆ ಸಾಕು ಆ ಮನೆಯ ನಾಯಿಗಳು ಖುಷಿಯಿಂದ ಅವನತ್ತ ನೆಗೆಯುತ್ತವೆ. ಆದ್ರೆ ಇವು ಆತನ ಮನೆಯ ನಾಯಿಗಳಲ್ಲ, ಬದಲಿಗೆ ಬೇರೆಯವರ ಮನೆಯ ನಾಯಿಗಳು. ಅಷ್ಟಕ್ಕೂ ನಾಯಿಗಳು ಈತನನ್ನು ಅಷ್ಟೊಂದು ಪ್ರೀತಿಸಲು ಏನು ಕಾರಣ ಅನ್ನೋದನ್ನು ಹೇಳ್ತೀವಿ.

ಪ್ರತೀಕ್ ಪ್ರತಿಷ್ಟಿತ ಐಟಿ ಕಂಪೆನಿಯೊಂದರ ಉದ್ಯೋಗಿ. ಆದ್ರೆ ಆತ ಬಿಡುವಿನ ಸಮಯದಲ್ಲಿ ಬಹಳ ಇಷ್ಟಪಟ್ಟು ಮಾಡೋ ಕೆಲಸ ಡಾಗ್ ಗ್ರೂಮಿಂಗ್. ತನ್ನದೊಂದು ದೊಡ್ಡ ಬ್ಯಾಗ್‍ನ್ನು ಹೆಗಲಿಗೇರಿಸಿಕೊಂಡು ಈತ ಗೇಟು ತೆರೆದು ಮನೆಯೊಳಗೆ ಕಾಲಿಡ್ತಾ ಇದ್ದ ಹಾಗೆ ಅಲ್ಲೇ ಇದ್ದ ನಾಯಿಗಳು ಖುಷಿಯಿಂದ ಇವನತ್ತ ಧಾವಿಸಿ ಬರುತ್ತವೆ. ಯಾಕಂದ್ರೆ ಪ್ರತೀಕ್ ಬಂದ್ರೆ ನಮಗೆ ಆಟವಾಡೋ ಸಮಯ ಅಂತ ಅವುಗಳಿಗೆ ಚೆನ್ನಾಗಿ ಗೊತ್ತು.ಮೊದಲು ಬ್ಯಾಗಿನಿಂದ ಒಂದಷ್ಟು ಪರಿಕರಗಳನ್ನ ಹೊರಗೆ ತೆಗೀತಾರೆ. ನಂತರ ಮೃದುವಾಗಿ ನಾಯಿಯ ರೋಮವನ್ನ ಬ್ರಷ್ ಮಾಡ್ತಾರೆ. ಹೀಗೆ ಮಾಡೋದ್ರಿಂದ ಉದುರಿರೋ ಕೂದಲುಗಳು ಸರಾಗವಾಗಿ ಹೊರಬರೋದಲ್ಲದೇ ರಕ್ತಸಂಚಾರವೂ ಚೆನ್ನಾಗಿ ಆಗುತ್ತೆ. ಆಮೇಲೆ ನೀರಿನಲ್ಲಿ ನಾಯಿಗೆ ಸ್ನಾನ ಮಾಡಿಸ್ತಾರೆ. ನಾಯಿಯ ಚರ್ಮಕ್ಕೆ ಸೂಕ್ತವಾದ ಶಾಂಪೂ ಬಳಸಿ ಅದಕ್ಕೊಂದು ಅದ್ಭುತವಾದ ಸ್ನಾನ ಕೊಡುವಾಗ ಆ ನಾಯಿ ಅದೆಷ್ಟು ಚೆನ್ನಾಗಿ ಇವ್ರಿಗೆ ಸಹಕಾರ ನೀಡುತ್ತೆ ಅಂದ್ರೆ ಒಂದು ಚೂರೂ ಗಲಾಟೆ ಮಾಡೋದಿಲ್ಲ. ಇಷ್ಟೆಲ್ಲಾ ಮಾಡ್ಬೇಕು ಅಂದ್ರೆ ಬಹಳ ತಾಳ್ಮೆ ಮತ್ತು ನಾಯಿಯ ಜೊತೆ ಉತ್ತಮ ಸ್ನೇಹ ಇರ್ಲೇಬೇಕು ಅಂತಾರೆ ಪ್ರತೀಕ್.ಹಾಗಂತ ಸುಮ್ನೆ ಬಂದು ನಿಮ್ಮನೆ ನಾಯಿಗೆ ಸ್ನಾನ ಮಾಡಿಸೋದು ಗ್ರೂಮಿಂಗಲ್ಲ. ಪ್ರತಿಯೊಂದು ನಾಯಿಗೂ ಒಂದೊಂದು ಗುಣ, ವೈಶಿಷ್ಟ್ಯ ಇರುತ್ತೆ. ಕೆಲವೊಂದು ನಾಯಿಗಳು ಅಷ್ಟು ಸುಲಭವಾಗಿ ಯಾರನ್ನೂ ನಂಬೋದಿಲ್ಲ. ಆಗ ಅದರ ಜೊತೆಗೊಂದು ವಾಕ್ ಹೋಗ್ತಾರೆ, ಅದನ್ನ ಮಾತಾಡಿಸ್ತಾರೆ. ಆಗ ನಿಧಾನಕ್ಕೆ ನಾಯಿ ಇವರು ಹೇಳಿದಂತೆ ಕೇಳೋಕೆ ಶುರುಮಾಡುತ್ತೆ. ಮನೆಯಲ್ಲಿರೋ ನಾಯಿಗಳ ಕೇರ್‍ಗೆ ಹೆಚ್ಚು ಸಮಯ ಕೊಡೋಕೆ ಆಗದವ್ರು ಪ್ರತೀಕ್‍ರನ್ನ ಸಂಪರ್ಕಿಸ್ತಾರೆ.
Loading...ಸ್ನಾನ ಆದ ನಂತರ ನಾಯಿಯನ್ನ ಚೆನ್ನಾಗಿ ಒರೆಸಿ ಅದರೊಂದಿಗೆ ಒಂದಷ್ಟು ಹೊತ್ತು ಆಟ ಆಡ್ತಾರೆ. ಅದರ ಅವಶ್ಯಕತೆಗೆ ತಕ್ಕಂತೆ ಒಂದಷ್ಟು ಸೌಲಭ್ಯಗಳನ್ನ ಕಲ್ಪಿಸಿಕೊಡೋಕೆ ನಾಯಿಯ ಮಾಲೀಕರ ಬಳಿ ಚರ್ಚೆ ಮಾಡ್ತಾರೆ. ಒಂದು ನಾಯಿಯನ್ನ ಗ್ರೂಮ್ ಮಾಡೋಕೆ ಕನಿಷ್ಟ ಎರಡೂವರೆ ಗಂಟೆಗಳಾದ್ರೂ ಬೇಕೇ ಬೇಕು. ನಾಯಿಗಳಿಗೂ ಮನಸ್ಸಿದೆ, ಅವುಗಳಿಗೂ ಆತ್ಮಗೌರವ ಇದೆ ಅನ್ನೋದು ಪ್ರತೀಕ್ ನಂಬಿಕೆ. ತಮಗೆ ಅತೀ ಇಷ್ಟವಾದ ಪ್ರಾಣಿಗಳ ಜೊತೆ ಸಮಯ ಕಳೆಯೋಕೆ, ಅವುಗಳನ್ನ ನೋಡಿಕೊಳ್ಳೋಕೆ ಡಾಗ್ ಗ್ರೂಮಿಂಗ್ ಒಂದೊಳ್ಳೆ ಮಾರ್ಗ ಒದಗಿಸಿಕೊಟ್ಟಿದೆ ಅನ್ನೋದು ಅವರ ಅಭಿಪ್ರಾಯ.ಜತೆಗೆ ಸಿಂಗಾಪುರದ ಪ್ರತಿಷ್ಟಿತ ಕಾಲೇಜೊಂದರಿಂದ ಡಾಗ್​ ಗ್ರೂಮಿಂಗ್​ ತರಬೇತಿಯನ್ನು ಪ್ರತೀಕ್​ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಡಾಗ್​ ಗ್ರೂಮಿಂಗ್​ ನಿಧಾನವಾಗಿ ಉದ್ಯಮವಾಗಿ ಬೆಳೆಯುತ್ತಿದೆ.

ಸಿಂಗಾಪುರದಲ್ಲಿ ತರಬೇತಿ ದೃಢೀಕರಣ ಪತ್ರ ಪಡೆಯುತ್ತಿರುವ ಪ್ರತೀಕ್​
First published:June 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...