• Home
 • »
 • News
 • »
 • lifestyle
 • »
 • Nail Biting: ನಿಮ್ಮ ಮಕ್ಕಳಿಗೂ ಉಗುರು ಕಚ್ಚುವ ಅಭ್ಯಾಸ ಇದ್ಯಾ? ಹಾಗಿದ್ರೆ ಇಲ್ಲಿವೆ ಕೆಲವು ಸಲಹೆಗಳು

Nail Biting: ನಿಮ್ಮ ಮಕ್ಕಳಿಗೂ ಉಗುರು ಕಚ್ಚುವ ಅಭ್ಯಾಸ ಇದ್ಯಾ? ಹಾಗಿದ್ರೆ ಇಲ್ಲಿವೆ ಕೆಲವು ಸಲಹೆಗಳು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಹೆಬ್ಬೆರಳು ಬಾಯಲ್ಲಿಟ್ಟುಕೊಂಡು ಚೀಪುವುದು ಮತ್ತು ಈ ಉಗುರುಗಳನ್ನು ಸದಾ ಕಚ್ಚುತ್ತಾ ಇರುವುದು ಮಕ್ಕಳಲ್ಲಿ ತುಂಬಾ ಸಾಮಾನ್ಯವಾಗಿರುತ್ತವೆ. ಆದಾಗ್ಯೂ, ಈ ಅಭ್ಯಾಸಗಳನ್ನು ಪೋಷಕರು ಬೇಗನೆ ಬಿಡಿಸದೆ ಇದ್ದರೆ, ಮುಂದೆ ಈ ಅಭ್ಯಾಸಗಳು ತುಂಬಾನೇ ಕೆಟ್ಟ ಪರಿಣಾಮವನ್ನು ಬೀರುವುದಲ್ಲದೆ, ನಾಲ್ಕು ಜನರ ಮಧ್ಯೆ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ.

ಮುಂದೆ ಓದಿ ...
 • Share this:

ಕೆಲವು ಮಕ್ಕಳಿಗೆ (Children) ವಿಚಿತ್ರವಾದ ಕೆಲವೊಂದು ಅಭ್ಯಾಸಗಳಿರುತ್ತವೆ. ಹೌದು.. ತಲೆ ಮತ್ತು ದೇಹವನ್ನು ಅಲ್ಲಾಡಿಸುವುದು, ಕೂತಾಗ ಕಾಲುಗಳನ್ನು ಅಲುಗಾಡಿಸುವುದು, ಮುಖ್ಯವಾಗಿ ಉಗುರು ಕಚ್ಚುವುದು ಮತ್ತು ಹೆಬ್ಬೆರಳು ಬಾಯಲ್ಲಿ ಇಟ್ಟುಕೊಂಡು ಚೀಪುವುದು ಹೀಗೆ ಕೆಲವು ಚಟಗಳಿರುವುದನ್ನು ಸಹಜವಾಗಿ ಕಾಣುತ್ತೇವೆ. ಹೆಬ್ಬೆರಳು (Thumb) ಬಾಯಲ್ಲಿಟ್ಟುಕೊಂಡು ಚೀಪುವುದು ಮತ್ತು ಈ ಉಗುರುಗಳನ್ನು (Nails) ಸದಾ ಕಚ್ಚುತ್ತಾ ಇರುವುದು ಮಕ್ಕಳಲ್ಲಿ ತುಂಬಾ ಸಾಮಾನ್ಯವಾಗಿರುತ್ತವೆ. ಆದಾಗ್ಯೂ, ಈ ಅಭ್ಯಾಸಗಳನ್ನು ಪೋಷಕರು (Parents) ಬೇಗನೆ ಬಿಡಿಸದೆ ಇದ್ದರೆ, ಮುಂದೆ ಈ ಅಭ್ಯಾಸಗಳು ತುಂಬಾನೇ ಕೆಟ್ಟ ಪರಿಣಾಮವನ್ನು ಬೀರುವುದಲ್ಲದೆ, ನಾಲ್ಕು ಜನರ ಮಧ್ಯೆ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ.


ಉಗುರು ಕಚ್ಚುವ ಅಭ್ಯಾಸ ನಿಮ್ಮ ಮಗುವಿನಲ್ಲಿ ಹೆಚ್ಚು ಕಾಲ ಉಳಿಯುತ್ತದೆ..
ಈ ಉಗುರು ಕಚ್ಚುವ ಅಭ್ಯಾಸ ನಿಮ್ಮ ಮಕ್ಕಳಿಗೆ ಇದ್ದರೆ, ಇದು ಇತರ ನಡವಳಿಕೆಗಳಿಗಿಂತ ಹೆಚ್ಚು ಕಾಲ ಉಳಿಯುತ್ತದೆ, ಕೆಲವೊಮ್ಮೆ ನಿಮ್ಮ ಮಕ್ಕಳ ಜೀವನದುದ್ದಕ್ಕೂ ಈ ಅಭ್ಯಾಸವಿರುತ್ತದೆ ಅಂತ ಹೇಳಬಹುದು. ಮಕ್ಕಳು ಸ್ವಾಭಾವಿಕವಾಗಿ ಅಭಿವೃದ್ಧಿಪಡಿಸಿಕೊಳ್ಳುವ ಈ ಅಭ್ಯಾಸವನ್ನು ತುಂಬಾ ಕುತೂಹಲ, ಬೇಸರ ಮತ್ತು ಒತ್ತಡ ಉಂಟಾದಾಗ ಮಾಡಿಕೊಳ್ಳುತ್ತಾರೆ.


ಉಗುರು ಕಚ್ಚುವುದು ನಿಮ್ಮ ಮಗುವಿನ ಹಲ್ಲುಗಳು ಮತ್ತು ಉಗುರುಗಳಿಗೆ ಹಾನಿ ಉಂಟು ಮಾಡಬಹುದು ಮತ್ತು ಇದು ನೋಡಲು ಸಹ ತುಂಬಾನೇ ಅಹಿತಕರವಾಗಿರುತ್ತದೆ. ಫುಟ್ ಹೆಲ್ತ್ ಪ್ರಾಕ್ಟೀಷನರ್ ಲೀನಾ ಪ್ರಕಾರ "ವಯಸ್ಕರಂತೆ, ಮಕ್ಕಳೂ ಸಹ ತಮ್ಮದೇ ಆದ ಒತ್ತಡಗಳು, ಅಹಿತಕರ ವಿಷಯಗಳು, ಅಹಿತಕರ ಭಾವನೆಗಳು ಇತ್ಯಾದಿಗಳನ್ನು ಹೊಂದಿರುತ್ತಾರೆ. ಆದರೆ ಅವುಗಳು ನಮಗೆ ಬಾಲಿಶವಾಗಿ ಕಾಣುತ್ತವೆ, ಆದರೆ ಆ ಮಗುವಿಗೆ ಅದು ಹೇಳಿಕೊಳ್ಳಲು ಆಗದ ಮತ್ತು ಕಷ್ಟಕರವಾದ ದೊಡ್ಡ ಸಮಸ್ಯೆ ಆಗಿರುತ್ತದೆ".


ಇದನ್ನೂ ಓದಿ: Chronic Diseases: ವೃದ್ಧರನ್ನು ಹೆಚ್ಚು ಕಾಲ ಕಾಡುತ್ತೆ ಈ ಆರೋಗ್ಯ ಸಮಸ್ಯೆಗಳು


ಪೋಷಕರು ಸಹ ತಮ್ಮ ಮಕ್ಕಳ ಈ ಕೆಟ್ಟ ಅಭ್ಯಾಸಗಳನ್ನು ತೊಡೆದು ಹಾಕಲು ಬಯಸುತ್ತಾರೆ ಮತ್ತು ಪ್ರಯತ್ನ ಸಹ ಮಾಡುತ್ತಾರೆ. ಆದರೆ ಸಾಮಾನ್ಯವಾಗಿ ಅದನ್ನು ಹೇಗೆ ಮಾಡಬೇಕೆಂದು ತಿಳಿದಿರುವುದಿಲ್ಲ. ಮಗುವು ಹೇಗೆ ಆತಂಕಕ್ಕೊಳಗಾಗಿದೆ, ಒತ್ತಡಕ್ಕೊಳಗಾಗಿದೆ ಅಥವಾ ಅಸಂತುಷ್ಟವಾಗಿದೆ ಎಂಬುದನ್ನು ತಿಳಿದುಕೊಳ್ಳಲು ಅನೇಕ ಮಾರ್ಗಗಳಿವೆ.


ಮಕ್ಕಳಲ್ಲಿ ಒತ್ತಡ ಮತ್ತು ಆತಂಕವಿದೆ ಅಂತ ಹೇಗೆ ಗೊತ್ತಾಗುತ್ತದೆ?
ಅವರು ಸಾಮಾನ್ಯವಾಗಿ ತಮ್ಮ ಕೂದಲನ್ನು ಎಳೆದುಕೊಳ್ಳಲು ಪ್ರಾರಂಭಿಸುತ್ತಾರೆ, ತಮ್ಮ ಹಲ್ಲುಗಳನ್ನು ಕಡೆಯಲು ಪ್ರಾರಂಭಿಸುತ್ತಾರೆ, ರಾತ್ರಿಯಲ್ಲಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ, ಕೆಲವು ಸಂದರ್ಭಗಳಲ್ಲಿ, ಅವರು ತಮ್ಮ ಹಾಸಿಗೆಯನ್ನು ಸಹ ಒದ್ದೆ ಮಾಡುತ್ತಾರೆ.


ಅಪ್ರಜ್ಞಾಪೂರ್ವಕ ಉಗುರು ಕಚ್ಚುವಿಕೆ ಎಂದರೆ ನಿಮ್ಮ ಮಗುವು ಟಿವಿ ನೋಡುವಾಗ ಅಥವಾ ಬೇಸರದಿಂದ ಕುಳಿತಾಗ ತನ್ನ ಉಗುರುಗಳನ್ನು ಕಚ್ಚಿಕೊಳ್ಳುವುದು. ತೀವ್ರವಾಗಿ ಉಗುರು ಕಚ್ಚಿಕೊಳ್ಳುವುದು ಎಂದರೆ ಅವನ ಅಥವಾ ಅವಳ ಬೆರಳುಗಳು ಕಡಿತಗಳು ಮತ್ತು ರಕ್ತಸಿಕ್ತವಾಗಿದ್ದರೆ, ಉಗುರುಗಳು ಹಾನಿಗೊಳಗಾಗಿದ್ದರೆ ಮತ್ತು ನೋವಿನಿಂದ ಕೂಡಿದ್ದರೆ ಪೋಷಕರು ಅದನ್ನು ಗಮನಿಸಬೇಕು ಮತ್ತು ಕೂಡಲೇ ಚಿಕಿತ್ಸೆ ಕೊಡಿಸಬೇಕು.


ಮಕ್ಕಳ ಈ ಉಗುರು ಕಚ್ಚುವ ಅಭ್ಯಾಸ ಬಿಡಿಸುವುದು ಹೇಗೆ?
ಮಕ್ಕಳ ತಜ್ಞರಾದ ಡಾ. ಸಾಮಿ ಮತ್ತು ಡಾ. ಅನಾ, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಕ್ಕಳಲ್ಲಿ ಉಗುರು ಕಚ್ಚುವುದನ್ನು ಕಡಿಮೆ ಮಾಡಲು ಪೋಷಕರಿಗೆ ಕೆಲವು ಸಲಹೆಗಳನ್ನು ಸೂಚಿಸಿದ್ದಾರೆ.


 • ಉಗುರು ಕಚ್ಚಿಕೊಳ್ಳುವುದಕ್ಕೆ ಮಕ್ಕಳನ್ನು ಶಿಕ್ಷಿಸಬೇಡಿ: ನೀವು ಮಕ್ಕಳನ್ನು ಈ ಅಭ್ಯಾಸಕ್ಕಾಗಿ ಅವರನ್ನು ಶಿಕ್ಷಿಸಿದರೆ, ಇದು ಕೆಲವೊಮ್ಮೆ ಅವರ ಆ ಅಭ್ಯಾಸವನ್ನು ಇನ್ನಷ್ಟು ಹದಗೆಡಿಸುತ್ತದೆ ಮತ್ತು ಹೆಚ್ಚಿನ ಉದ್ವಿಗ್ನತೆಗೆ ಕಾರಣವಾಗಬಹುದು ಮತ್ತು ಅವರು ಈ ಅಭ್ಯಾಸವನ್ನು ಕಡಿಮೆ ಮಾಡಿಕೊಳ್ಳುವ ಬದಲಿಗೆ ಇನ್ನೂ ಹೆಚ್ಚು ಸಹ ಮಾಡಬಹುದು. ಅದನ್ನು ನಿರ್ಲಕ್ಷಿಸಲು ಪ್ರಯತ್ನಿಸಿ ಮತ್ತು ತಾಳ್ಮೆಯಿಂದಿರಿ.

 • ಅವರ ಉಗುರುಗಳನ್ನು ಚಿಕ್ಕದಾಗಿಡಲು ಪ್ರಯತ್ನಿಸಿ: ಇದು ಅವರ ಉಗುರುಗಳ ಕೆಳಗಿನ ಮೇಲ್ಮೈ ಪ್ರದೇಶವನ್ನು ಕಡಿಮೆ ಮಾಡುತ್ತದೆ ಮತ್ತು ಕಚ್ಚಲು ಹೆಚ್ಚು ಕಷ್ಟಕರವಾಗಿಸುತ್ತದೆ.


ಇದನ್ನೂ ಓದಿ:  Storytelling: ಮಕ್ಕಳಿಗೆ ಕಥೆ ಹೇಳಿ, ಯಾಕಂದ್ರೆ ಅದರಿಂದ ಈ ಅದ್ಭುತ ಪ್ರಯೋಜನಗಳು ಸಿಗುತ್ತವೆ

 • ಇದಕ್ಕೆ ಪರ್ಯಾಯವನ್ನು ಕಂಡು ಹಿಡಿಯಿರಿ: ಉಗುರು ಕಚ್ಚುವಿಕೆಗೆ ಬದಲಿಯಾಗಿ ಆರೋಗ್ಯಕರವಾದುದನ್ನು ಬಳಸಲು ನೀವು ಪ್ರಯತ್ನಿಸಬಹುದು. ನೀವು ಫಿಡ್ಜೆಟ್ ಆಟಿಕೆ ಅಥವಾ ಒತ್ತಡದ ಚೆಂಡು ಅಥವಾ ಚ್ಯೂಯಿಂಗ್ ಗಮ್ ಅನ್ನು ನೀಡಿ ಅವರಿಗೆ ಅಗಿಯಲು ಹೇಳಿ.

 • ನಿಮ್ಮ ಮಗುವನ್ನು ವ್ಯಸ್ತವಾಗಿರಿಸಿ: ನಿಮ್ಮ ಮಗುವಿಗೆ ಬೇಸರವಾಗಬಹುದು ಮತ್ತು ಅದು ತನ್ನ ಉಗುರುಗಳನ್ನು ಕಚ್ಚಬಹುದು. ನಿಮ್ಮ ಮಕ್ಕಳಿಗೆ ಈ ಅಭ್ಯಾಸದಿಂದ ವಿಚಲಿತರಾಗುವಂತೆ ಮಾಡುವ ಹೊಸ ಚಟುವಟಿಕೆಗಳನ್ನು ನೀಡಿ ಮತ್ತು ಬ್ಯುಸಿಯಾಗಿರುವಂತೆ ನೋಡಿಕೊಳ್ಳಿ.

 • ನಡವಳಿಕೆಯಲ್ಲಿ ಮಾರ್ಪಾಡು ಮಾಡಿ: ಮಕ್ಕಳು ಉಗುರು ಕಚ್ಚುವ ಅಭ್ಯಾಸವನ್ನು ಹಾಗೆಯೇ ಮುಂದುವರೆಸಿದರೆ, ಅವರ ನಡವಳಿಕೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲು ಪ್ರಯತ್ನಿಸಿ.


ಅವರು ಅದನ್ನು ಏಕೆ ಮಾಡುತ್ತಿದ್ದಾರೆಂದು ನೀವು ಮೊದಲು ಅವರ ನಡವಳಿಕೆಯನ್ನು ಗಮನಿಸಿ ಮತ್ತು ಅವರು ನರ್ವಸ್, ಆತಂಕ, ಕಿರಿಕಿರಿ, ಒತ್ತಡ ಅಥವಾ ಬೇಸರಗೊಂಡಿದ್ದಾರೆಯೇ ಎಂದು ನೋಡಲು ಪ್ರಯತ್ನಿಸಿ. ಕಾರಣವನ್ನು ಕಂಡುಕೊಂಡ ನಂತರ ನೀವು ಅವರ ಸಮಸ್ಯೆಗೆ ಪರಿಹಾರವನ್ನು ಹುಡುಕಬಹುದು.

Published by:Ashwini Prabhu
First published: