Parenting Tips: ನಿಮ್ಮ ಮಗು ಓದೋಕೆ ಉದಾಸೀನಾ ಮಾಡ್ತಿದ್ಯಾ? ಈ ಟ್ರಿಕ್ಸ್ ಸ್ವಲ್ಪ ಟ್ರೈ ಮಾಡಿ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಮ್ಮ ಮಗುವಿಗೆ ಅಧ್ಯಯನ ಮಾಡಲು ಸ್ವಲ್ಪವೂ ಇಷ್ಟವಿಲ್ಲ ಎಂದಾದರೆ ಇಲ್ಲಿ ನಾವು ನಿಮಗೆ ಕೆಲವು ಸರಳ ಉಪಾಯಗಳನ್ನು ಹೇಳಲಿದ್ದೇವೆ. ಇವುಗಳ ಮೂಲಕ ನೀವು ನಿಮ್ಮ ಮಗುವನ್ನು ಓದುವಂತೆ ಮಾಡಬಹುದು.

  • Share this:

    ಮಕ್ಕಳಿಗೆ (Children’s) ಓದುವುದು, ಬರೆಯುವುದಕ್ಕಿಂತ ಹೆಚ್ಚು ಆಟ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ (Activities) ಮೇಲೆ ಹೆಚ್ಚು ಆಸಕ್ತಿ (Interest) ಇರುವುದನ್ನು ನೀವು ನೋಡಿರಬಹುದು. ಪೋಷಕರು (Parents) ಎಷ್ಟೇ ಕರೆದು ಓದಲು ಕೂರಿಸಿದರೂ ಮಕ್ಕಳ ಮನಸ್ಸು ಮಾತ್ರ ಆಟದತ್ತ ಇರುತ್ತದೆ. ಹೀಗಿದ್ದಾಗ ಮಕ್ಕಳನ್ನು ಹಿಡಿದು ಓದಲು (Study) ಸರಿಯಾದ ಗಮನ ನೀಡುವಂತೆ ಮಾಡುವುದು ತಂದೆ ಮತ್ತು ತಾಯಿಗೆ ದೊಡ್ಡ ಸವಾಲಿನ ಕೆಲಸವೇ ಆಗಿರುತ್ತದೆ. ಕೆಲವು ಪೋಷಕರು ಮಕ್ಕಳು ಓದದಿದ್ದರೆ, ಅಭ್ಯಾಸ ಮಾಡದಿದ್ದರೆ ಹೊಡೆದು, ಹೆದರಿಸಿ, ಬೆದರಿಸಿ ಓದಲು ಕೂರಿಸುತ್ತಾರೆ. ಆದರೆ ಒತ್ತಡ, ಒತ್ತಾಯ ಹೇರುವುದು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.


    ಅದಾಗ್ಯೂ, ನಿಮ್ಮ ಮಗುವಿಗೆ ಅಧ್ಯಯನ ಮಾಡಲು ಸ್ವಲ್ಪವೂ ಇಷ್ಟವಿಲ್ಲ ಎಂದಾದರೆ ಇಲ್ಲಿ ನಾವು ನಿಮಗೆ ಕೆಲವು ಸರಳ ಉಪಾಯಗಳನ್ನು ಹೇಳಲಿದ್ದೇವೆ. ಇವುಗಳ ಮೂಲಕ ನೀವು ನಿಮ್ಮ ಮಗುವನ್ನು ಓದುವಂತೆ ಮಾಡಬಹುದು.


    ಮಕ್ಕಳ ಓದಿನ ಕಡೆಗೆ ಆಸಕ್ತಿ ಹೆಚ್ಚಿಸಲು ಸಿಂಪಲ್ ಉಪಾಯ


    ಕರೋನಾ ಅವಧಿಯಲ್ಲಿ ಶಾಲೆ ಮುಚ್ಚಿದ್ದವು. ಆದರೀಗ ಶಾಲೆಗಳು ಓಪನ್ ಆಗಿವೆ. ಆದರೂ ಕೂಡ ಮಕ್ಕಳ ಮನಸ್ಸು ಓದಿನ ಕಡೆಗೆ ಕೇದ್ರೀಕೃತವಾಗುತ್ತಿಲ್ಲ. ಡೇ ಕೇರ್‌ನಿಂದಾಗಿ ಮಕ್ಕಳ ಗಮನ ಸಂಪೂರ್ಣವಾಗಿ ಅಧ್ಯಯನದಿಂದ ಹೊರಗೇ ಉಳಿದು ಹೋಗಿದೆ. ಪೋಷಕರು ಎಷ್ಟೇ ಪ್ರಯತ್ನ ಪಟ್ಟರೂ ಮಕ್ಕಳು ಓದಿನ ಕಡೆಗೆ ಆಸಕ್ತಿ ತೋರುತ್ತಿಲ್ಲ.


    ಇದನ್ನೂ ಓದಿ: ನಿಮ್ಮ ನಿದ್ರಾಭಂಗಕ್ಕೆ ಈ ಲಯ ತಪ್ಪುವುದೇ ಕಾರಣ, ಇಂದೇ ನಿಮ್ಮ ಅಭ್ಯಾಸಗಳನ್ನು ಸರಿಪಡಿಸಿ!


    ಮಕ್ಕಳ ಗಮನ ಕೇಂದ್ರೀಕರಿಸಲು ಪ್ರಯತ್ನಿಸಿ


    ಮಕ್ಕಳು ಒಂದೇ ಕಡೆ ಕುಳಿತು ಓದಲು ಬಯಸುವುದಿಲ್ಲ. ಇದರಿಂದ ಮಗುವಿಗೆ ಸಿಟ್ಟು ಮಾಡುವುದು, ಬೈಯುವುದು, ಗದರಿಸುವುದು ಮಾಡಬೇಡಿ. ಕೆಲವು ಸೂಕ್ತ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಮಕ್ಕಳನ್ನು ಓದಲು ಮತ್ತು ಅಭ್ಯಾಸದತ್ತ ಗಮನ ಕೇಂದ್ರೀಕರಿಸುವಂತೆ ಮಾಡಿ.


    ಮಗುವಿಗೆ ಒಳ್ಳೆಯ ಅಭ್ಯಾಸಗಳನ್ನು ಕಲಿಸಿ


    ಬಾಲ್ಯದಿಂದಲೇ ಮಗುವಿಗೆ ಒಳ್ಳೆಯ ಹಾಗೂ ಉತ್ತಮ ಕಲಿಕೆಯ ಅಭ್ಯಾಸ ರೂಢಿಸಿ. ಇದು ಮಗುವಿನ ದಿನಚರಿಯನ್ನು ಸರಿಯಾದ ರೀತಿಯಲ್ಲಿ ಫಾಲೋ ಮಾಡಲು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಮಗು ಹೆಚ್ಚು ಒತ್ತಡಕ್ಕೆ ಒಳಗಾಗದೇ ಸಮಯ ಪಾಲನೆ ಬಗ್ಗೆ ಅರಿವು ಹೊಂದಿ, ಬುದ್ಧಿವಂತಿಕೆಯಿಂದ ಕೆಲಸ ಮಾಡಲು ಕಲಿಯುತ್ತದೆ.


    ಮನೆಯ ವಾತಾವರಣ ಯಾವಾಗಲೂ ಟೆನ್ಶನ್ ಮುಕ್ತವಾಗಿರುವಂತೆ ನೋಡಿಕೊಳ್ಳಿ


    ಮನೆಯ ವಾತಾವರಣ ಯಾವಾಗಲೂ ಟೆನ್ಶನ್ ಮುಕ್ತವಾಗಿರುವಂತೆ ಪೋಷಕರು ನೋಡಿಕೊಳ್ಳಬೇಕು. ಯಾಕೆಂದರೆ ಇದು ನಿಮ್ಮ ಮಗುವಿನ ಮಾನಸಿಕ ಬೆಳವಣಿಗೆಗೆ ಉತ್ತಮ ಹಾದಿ ಮಾಡಿ ಕೊಡುತ್ತದೆ. ಉದ್ವೇ, ಒತ್ತಡ, ಸಿಟ್ಟು, ಜಗಳದ ಕೆಟ್ಟ ವಾತಾವರಣವನ್ನು ಆದಷ್ಟು ತಪ್ಪಿಸಿ. ಇ


    ದು ಮಗುವಿನ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಇದು ಮಗುವಿನ ಸ್ಟಡಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಒಳ್ಳೆಯ ವಾತಾವರಣ ಇರುವಂತೆ ನೋಡಿಕೊಳ್ಳಿ. ನೀವು ಟೆನ್ಷನ್‌ನಲ್ಲಿ ಇದ್ದರೂ, ಇದನ್ನು ನಿಮ್ಮ ಮಗುವಿನ ಮುಂದೆ ಬಹಿರಂಗಪಡಿಸಬೇಡಿ.


    ಮಗುವಿಗೆ ಒಂಟಿತನ ಫೀಲ್ ಆಗದಂತೆ ನೋಡಿಕೊಳ್ಳಿ


    ಮಗುವನ್ನು ಎಂದಿಗೂ ಒಂಟಿತನ ಅನುಭವಿಸಲು ಪೋಷಕರು ಬಿಡಬೇಡಿ. ಯಾವಾಗಲೂ ಅವರೊಂದಿಗೆ ಸಮಯ ಕಳೆಯಿರಿ. ಮಗುವಿನ ಮುಂದೆ ಯಾವುದೇ ಮಗುವನ್ನು ಹೋಲಿಕೆ ಮಾಡಿ ಉದಾಹರಣೆ ನೀಡುವ ತಪ್ಪು ಮಾಡಬೇಡಿ. ಇದು ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು.


    ಇದನ್ನೂ ಓದಿ: ಯಾವ ಡಯಟ್ ಪ್ಲಾನ್ ಫಾಲೋ ಮಾಡಿದ್ರೆ ವೇಗವಾಗಿ ತೂಕ ಕಡಿಮೆ ಮಾಡಬಹುದು? ಸಂಶೋಧನೆ ಕಂಡುಕೊಂಡಿದ್ದೇನು?


    ಇಷ್ಟವಿಲ್ಲದಿದ್ದಾಗ ಅಧ್ಯಯನದ ಒತ್ತಡ ಹೇರಬೇಡಿ


    ಮಗುವಿಗೆ ಅಧ್ಯಯನ ಮಾಡಲು ಇಷ್ಟವಿಲ್ಲದ ಸಮಯದಲ್ಲಿ ಸ್ವಲ್ಪ ಹೊತ್ತು ಬೇರೆ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಿ. ಯಾವುದೇ ಕಾರಣಕ್ಕೂ ಒತ್ತಾಯ ಮಾಡಬೇಡಿ. ಮಗುವು ತರಗತಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೆ ಆಗಾಗ ಪ್ರೇರೇಪಣೆ ನೀಡಿ. ಉಳಿದ ವಿಷಯದತ್ತ ಗಮನಹರಿಸುವಂತೆ ನೋಡಿಕೊಳ್ಳಿ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು