Baby Sleep: ನಿಮ್ಮ ಮಗು ಚೆನ್ನಾಗಿ ನಿದ್ರಿಸಬೇಕೆ? ಈ ಟಿಪ್ಸ್​ ಫಾಲೋ ಮಾಡಿ

ರಾತ್ರಿ ನಿದ್ದೆ ಮಕ್ಕಳಿಗೆ ಮತ್ತು ಪೋಷಕರಿಗೆ ಅತಿ ಅಗತ್ಯ. ರಾತ್ರಿ ಸಮಯ ಆಗಾಗ ಎಚ್ಚರ ಆಗುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಂಭವ ಹೆಚ್ಚಿರುತ್ತದೆ. ಆಗ ಪೋಷಕರು ತಮ್ಮನ್ನು ತಾವೇ ಮಕ್ಕಳಿಗೆ ಚೆನ್ನಾಗಿ ನಿದ್ದೆ ಬರಲು ನಾವೇನು ಮಾಡಬೇಕು? ನಮ್ಮಿಂದ ಮಗುವಿಗೆ ಏನಾದರೂ ಸಮಸ್ಯೆ ಆಗುತ್ತಿದೆಯೇ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರವನ್ನು ನಾವಿಂದು ಇಲ್ಲಿ ತಿಳಿಯೋಣ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
“ಮಕ್ಕಳು (Children) ಇರಬೇಕು ಮನೆ ತುಂಬಾ” ಎಂಬ ಜಾನಪದ ಹಾಡನ್ನು ನೀವು ಆಗಾಗ ಕೇಳಿಯೇ ಇರುತ್ತಿರಿ. ಮಕ್ಕಳು ಎಂದ್ರೆ ಅದೆಷ್ಟು ಸಂಭ್ರಮ, ಸಂತೋಷ. ಅವರು ಹುಟ್ಟಿದ ದಿನದಿಂದ ಮನೆಯ ವಾತಾವರಣವೇ ಸಂಪೂರ್ಣವಾಗಿ ಬದಲಾಗಿಬಿಡುತ್ತೆ. ಇನ್ನು ಈಗ ತಾನೇ ತಂದೆ ತಾಯಿ (Father, Mother) ಆಗಿ ಬಡ್ತಿ ಪಡೆದ ಪೋಷಕರಿಗೆ (Parents) ಮಗುವಿನ ಬಗ್ಗೆ ವಿಪರೀತ ಕಾಳಜಿ (Care) ಇದ್ದೆ ಇರುತ್ತದೆ. ಚಿಕ್ಕ ಮಕ್ಕಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಕಷ್ಟ. ಏಕೆಂದರೆ ಅವರಿಗೆ ಅಳುವುದು ಬಿಟ್ಟರೆ ಬೇರೆನು ಬರದು. ಮಕ್ಕಳಿಗೆ ಏನೇ ಸಮಸ್ಯೆ ಆದರೂ ಅಳುವುದೊಂದೆ (Cry) ಅವುಗಳಿಗೆ ಗೊತ್ತಿರುವ ವಿಚಾರ. ಹಾಗಾಗಿ ಸಾಮಾನ್ಯವಾಗಿ ರಾತ್ರಿಯೂ ಅಳುವ ಮಗು ತಾಯಿಯ ನಿದ್ದೆಯನ್ನೂ ಜೊತೆಗೇ ಮನೆಯ ಸದಸ್ಯರ ನಿದ್ದೆಯನ್ನೂ ಪ್ರಭಾವಿತಗೊಳಿಸುತ್ತದೆ.

ನಿಮ್ಮ ಮಗು "ಸರಿಯಾಗಿ ನಿದ್ರಿಸಲು" ಯಾವಾಗ ಕಲಿಯುತ್ತದೆ? ಈ ಪ್ರಶ್ನೆಗೆ ತಜ್ಞರು ನೀಡುವ ಉತ್ತರವೆಂದರೆ ಮಗುವಿನ ವಯಸ್ಸು, ಆರೋಗ್ಯ ಮತ್ತು ಬೆಳವಣಿಗೆಯ ಹಂತ ಹಾಗೂ ತಾನಾಗಿಯೇ ಸ್ವಯಂ-ಸಂತೈಸಿಕೊಳ್ಳಲು ಕಲಿತುಕೊಳ್ಳುವ ಸಮಯ ಮೊದಲಾದವುಗಳನ್ನು ಅವಲಂಬಿಸಿರುತ್ತದೆ.

ರಾತ್ರಿ ನಿದ್ದೆ ಮಕ್ಕಳಿಗೆ ಮತ್ತು ಪೋಷಕರಿಗೆ ಏಕೆ ಅಗತ್ಯ
ಇನ್ನು ಹೊಸದಾಗಿ ಮನೆಗ ಬಂದ ಮಗುವಿನಿಂದ ಪೋಷಕರಿಗೆ ನಿದ್ದೆಯ ಕೊರತೆ ಆಗುವುದು ಸರ್ವೆ ಸಾಮಾನ್ಯವಾದ ವಿಚಾರ. ಚಿಕ್ಕ ಮಕ್ಕಳಿಗೆ ರಾತ್ರಿಯ ಸಮಯದಲ್ಲಿ ಹೆಚ್ಚಿನ ಆರೈಕೆ ಬೇಕಾಗುತ್ತದೆ ಎಂದು ಎಲ್ಲ ಪೋಷಕರಿಗೂ ತಿಳಿದಿರುವ ವಿಚಾರ. ರಾತ್ರಿ ನಿದ್ದೆ ಮಕ್ಕಳಿಗೆ ಮತ್ತು ಪೋಷಕರಿಗೆ ಅತಿ ಅಗತ್ಯ. ರಾತ್ರಿ ಸಮಯ ಆಗಾಗ ಎಚ್ಚರ ಆಗುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಂಭವ ಹೆಚ್ಚಿರುತ್ತದೆ. ಆಗ ಪೋಷಕರು ತಮ್ಮನ್ನು ತಾವೇ ಮಕ್ಕಳಿಗೆ ಚೆನ್ನಾಗಿ ನಿದ್ದೆ ಬರಲು ನಾವೇನು ಮಾಡಬೇಕು? ನಮ್ಮಿಂದ ಮಗುವಿಗೆ ಏನಾದರೂ ಸಮಸ್ಯೆ ಆಗುತ್ತಿದೆಯೇ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರವನ್ನು ನಾವಿಂದು ಇಲ್ಲಿ ತಿಳಿಯೋಣ.

ಮಗು ಸರಿಯಾಗಿ ನಿದ್ದೆ ಮಾಡುತ್ತಿಲ್ಲವೇ? ಈ ಸಮಸ್ಯೆ ನಿಮ್ಮ ಮಗು ಎದುರಿಸುತ್ತಿದ್ದರೆ, ನಿಮಗೆ ನಾವು ಸರಿಯಾದ ಪೋಷಕರು ಆಗಲು ಸಾಧ್ಯವಾಗುತ್ತಿಲ್ಲ ಎಂದು ಅನಿಸುತ್ತಿದೆಯೇ? ಆದರೆ ಇದು ತಪ್ಪು. ಇದರರ್ಥ ನೀವು ಕೆಟ್ಟ ಪೋಷಕರು ಅಥವಾ ನಿಮ್ಮ ಮಗು ಅನಾರೋಗ್ಯದಿಂದ ಬಳಲುತ್ತಿದೆ ಎಂದು ಖಂಡಿತ ಅಲ್ಲ. ನೀವು ಮಲಗಿಸಿದ ಕೂಡಲೇ ಮಕ್ಕಳು ಮಲಗಬೇಕೆಂದು ಏಕೆ ಬಯಸುವಿರಿ? ಇದು ಸರಿ ಅಲ್ಲ ಅಲ್ವಾ? ಮಕ್ಕಳಿಗೆ ನಿದ್ದೆ ಬಂದರೆ ತಾವೇ ಮಲಗುತ್ತಾರೆ. ನೀವು ಬಲವಂತದಿಂದ ಮಲಗಿಸಲು ಪ್ರಯತ್ನಿಸಿದರೆ ಮಕ್ಕಳು ನಿದ್ದೆ ಮಾಡುವುದು ಹೇಗೆ ಸಾಧ್ಯ?

ಇದನ್ನೂ ಓದಿ: Mother Care: ಮಕ್ಕಳ ನಡುವೆ ಕೋಪ ಮತ್ತು ಪೈಪೋಟಿ ಬರುವುದೇಕೆ; ತಾಯಿಯಾದವಳು ಇದನ್ನು ಹೇಗೆ ನಿಭಾಯಿಸಬೇಕು?

ಮಕ್ಕಳ ನಿದ್ದೆಯ ಮಾನದಂಡಗಳಲ್ಲಿ ಪ್ರಮುಖವಾಗಿ ಮೂರು ವಿಧಗಳು ಪ್ರಸ್ತುತವಾಗಿ ಚಾಲ್ತಿಯಲ್ಲಿವೆ. ಅವುಗಳೆಂದರೆ : ಮೊದಲನೆಯದು ಸಾಂಸ್ಕೃತಿಕ ರೂಢಿ, ಎರಡನೆಯದು ಬಯೋಮೆಡಿಕಲ್ ರೂಢಿ ಮತ್ತು ಮೂರನೆಯದು ಜೈವಿಕ ಅಥವಾ ವಿಕಸನದ ರೂಢಿ, ಇವು ಮಕ್ಕಳ ನಿದ್ದೆಯ ಮೂರು ಮಾನದಂಡಗಲಾಗಿವೆ.

ಸಾಂಸ್ಕೃತಿಕ ರೂಢಿ
ಇದರಲ್ಲಿ ವಿಭಿನ್ನ ಸಾಂಸ್ಕೃತಿಕ ಗುಂಪುಗಳು ಹೊಂದಿರುವ ನಂಬಿಕೆಗಳನ್ನು ಈ ಸಾಂಸ್ಕೃತಿಕ ರೂಢಿ ಸೂಚಿಸುತ್ತದೆ. ಅದು ಯಾವುದು ಸರಿ ಎಂಬ ಕಲ್ಪನೆಗಳನ್ನು ಆಧಾರವಾಗಿಟ್ಟುಕೊಳ್ಳುತ್ತದೆ.

ಈ ಸಾಂಸ್ಕೃತಿಕ ರೂಢಿಯು ಚಿಕ್ಕ ಮಕ್ಕಳನ್ನು ಆಗಾಗ ಅಳಲು ಬಿಡಬೇಕು. ಜಾಸ್ತಿ ಎತ್ತಿಕೊಂಡು ಓಡಾಡಬಾರದು ಎಂಬುದನ್ನು ಹೇಳುತ್ತದೆ. ಇದರಿಂದ ಮಕ್ಕಳು ರಾತ್ರಿಯ ಸಮಯ ಉತ್ತಮವಾಗಿ ನಿದ್ದೆ ಮಾಡಲು ಸಹಾಯವಾಗುತ್ತದೆ ಎಂಬುದನ್ನು ಒತ್ತಿ ಹೇಳುತ್ತದೆ. ಚಿಕ್ಕ ಮಕ್ಕಳು ತಮ್ಮಷ್ಟಕ್ಕೆ ತಾವೇ ಮಲಗುವಂತೆ ಪೋಷಕರು ಪ್ರೇರೆಪಿಸಬೇಕು. ಮಗು ಮಲಗಲು ಜೋಕಾಲಿಯಲ್ಲಿ ಹಾಕಿ ತೂಗುವುದು ಅಥವಾ ಮುದ್ದಾಡುವುದನ್ನು ಮಾಡಬಾರದು.

ಬಯೋಮೆಡಿಕಲ್‌ ರೂಢಿ
ಮತ್ತೊಂದೆಡೆ, ಬಯೋಮೆಡಿಕಲ್ ಅಥವಾ ಕ್ಲಿನಿಕಲ್ ರೂಢಿಯು, ಪೋಷಕರ ಪುಸ್ತಕಗಳು, ವೆಬ್‌ಸೈಟ್‌ಗಳು ಮತ್ತು ಮಕ್ಕಳ ಚಿಕಿತ್ಸಾಲಯಗಳಲ್ಲಿನ ಚಾರ್ಟ್‌ಗಳನ್ನು ಹೊಂದಿರುತ್ತದೆ. ಇವು ಸಾಮಾನ್ಯ ಶಿಶು ನಿದ್ದೆಯ ಮಾರ್ಗಸೂಚಿಗಳಾಗಿ ಕಾರ್ಯ ನಿರ್ವಹಿಸುತ್ತವೆ.

ಉದಾಹರಣೆಗೆ, ಮೂರು ತಿಂಗಳ ಮಕ್ಕಳಿಗೆ ದಿನಕ್ಕೆ 14-16 ಗಂಟೆಗಳ ನಿದ್ರೆ ಬೇಕು ಮತ್ತು ದಿನಕ್ಕೆ ಮೂರು ಅಥವಾ ನಾಲ್ಕು ಚಿಕ್ಕ ಚಿಕ್ಕ ನಿದ್ರೆಯ ಅವಧಿಗಳಲ್ಲಿ ಅವರು ನಿದ್ದೆ ಮಾಡುತ್ತಾರೆ. ಇದನ್ನು ಪೋಷಕರು ಅನುಸರಿಸಬಹುದು ಈ ಸರಾಸರಿ ನಿದ್ರೆಯ ಮಾದರಿಗಳ ಚಾರ್ಟ್‌ಗಳನ್ನು ಅವಲಂಬಿಸುವುದಕ್ಕಿಂತ ಮುಖ್ಯವಾಗಿ ಮಗುವು ಎಚ್ಚರವಾಗಿರುವಾಗ ಮತ್ತು ಸಂತೋಷದಿಂದ ಇರುವಾಗ ಸಾಕಷ್ಟು ನಿದ್ರೆ ಮಾಡುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.

ಜೈವಿಕ ಅಥವಾ ವಿಕಸನೀಯ ರೂಢಿ
ಜೈವಿಕ ಅಥವಾ ವಿಕಸನೀಯ ರೂಢಿಯು ಕಡಿಮೆ ಹೆಚ್ಚು ಜನಪ್ರಿಯವಾಗಿಲ್ಲ. ಏಕೆಂದರೆ ಇದು ತಾಯಂದಿರು ಮತ್ತು ಶಿಶುಗಳ ಜನನದ ಮೊದಲ ತಿಂಗಳುಗಳಲ್ಲಿ ಹೇಗೆ ಮತ್ತು ಎಷ್ಟು ಹೊತ್ತು ನಿದ್ರೆ ಮಾಡುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಈ ಜೈವಿಕ ರೂಢಿಯು ಪರಿಗಣಿಸುತ್ತದೆ.

ನಿಮ್ಮ ಮಗುವಿನ ಬೆಳವಣಿಗೆಗೆ ಹೆಚ್ಚಿನ ನಿದ್ರೆ ಏಕೆ ಮುಖ್ಯ?
ಮಗುವಿನ ಕಡಿಮೆ ನಿದ್ರೆಯಿಂದ ನೀವು ಇಡೀ ದಿನ ಮಗುವನ್ನು ನೋಡಿಕೊಳ್ಳಲು ಕಷ್ಟವಾಗಬಹುದು ಮತ್ತು ದೈನಂದಿನ ಕೆಲಸಗಳನ್ನು ಸುಲಭವಾಗಿ ನಿರ್ವಹಿಸುವ ನಿಮ್ಮ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರ ಜೊತೆಗೆ ಮಗುವಿನ ಮೆದುಳಿನ ಸಮರ್ಪಕ ಬೆಳವಣಿಗೆಗೆ ಹೆಚ್ಚಿನ ನಿದ್ರೆಯ ಅಗತ್ಯ ಖಂಡಿತ ಇರುತ್ತದೆ.

ಇದನ್ನೂ ಓದಿ:  Weight Loss Tips: ಏರುತ್ತಿರುವ ತೂಕ ಕಂಟ್ರೋಲ್ ಮಾಡ್ಬೇಕಾ? ಮಲಗುವ ಮುನ್ನ ಇಷ್ಟು ಮಾಡಿ ಸಾಕು!

ಇದು ಮಗುವಿಗೆ ಅಗತ್ಯವಿರುವ ಗಮನವನ್ನು ನೀಡಲು ನಿಮಗೆ ಕಷ್ಟವಾಗುತ್ತದೆ. ನೀವು ನಿರಂತರವಾಗಿ ಚಿಂತೆಯಲ್ಲಿ ಮುಳುಗುತ್ತೀರಿ ಮತ್ತು ಮಗುವಿನ ಪೋಷಣೆಯ ಕೆಲಸವು ನಿಮಗೆ ಕಷ್ಟಕರವಾಗಿರುತ್ತದೆ, ಏಕೆಂದರೆ ನೀವು ತಾಳ್ಮೆಯನ್ನು ಕಳೆದುಕೊಳ್ಳುತ್ತೀರಿ ಮತ್ತು ನಿಮ್ಮ ಮಗುವಿಗೆ ನಂತರದ ಹಂತಗಳಲ್ಲಿ ಸ್ಥೂಲಕಾಯತೆ, ಏಕಾಗ್ರತೆಗೆ ಅಸಮರ್ಥತೆ ಮುಂತಾದ ಆಜೀವ ಸಮಸ್ಯೆಗಳನ್ನು ಎದುರಿಸಬಹುದು ಮತ್ತು ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಪೋಷಕರೇ, ನಿಮ್ಮ ಮಗುವಿನ ಸುಖಕರ ನಿದ್ರೆಗೆ ಇಲ್ಲಿವೆ ಇತರ ಸಲಹೆಗಳು:

ಮಲಗುವ ಸಮಯಕ್ಕೆ ಒಂದು ದಿನಚರಿಯನ್ನು ಪ್ರಾರಂಭಿಸಿ: ನಿಮ್ಮ ಮಗು ಈ ದಿನಚರಿಯನ್ನು ಅಪ್ಯಾಯತೆ ಎಂದು ಪರಿಗಣಿಸುವುದು ಮಾತ್ರವಲ್ಲದೇ, ಈಗ ನಿದ್ರೆಯ ಸಮಯ ಎಂದು ಮಗುವಿಗೆ ಸಂಕೇತ ನೀಡಿದಂತಾಗುತ್ತದೆ. ಮೊದಲು ಮಗುವಿಗೆ ಚೆನ್ನಾಗಿ ಬೆಚ್ಚನೆಯ ನೀರಿನ ಸ್ನಾನದಿಂದ ಪ್ರಾರಂಭಿಸಿ - ಬೆಚ್ಚಗಿನ ನೀರು ಹಿತವಾದ ಮತ್ತು ನಿದ್ರೆಯನ್ನು ಉಂಟುಮಾಡುತ್ತದೆ. ಕಥೆ, ಮುದ್ದಾಟಗಳು ಮತ್ತು ಲಾಲಿಗಳೊಂದಿಗೆ ಸ್ನಾನ ಮತ್ತು ಮುಂದಿನ ಕಾರ್ಯಗಳನ್ನು ಅನುಸರಿಸಿ.

ಮಗು ಸಾಕಷ್ಟು ನಿದ್ರೆ ಮಾಡುತ್ತದೆ ಎಂದು ಖಚಿತಪಡಿಸಿಕೊಳ್ಳಿ: ನಿಮ್ಮ ಮಗುವು ಸರಿಯಾಗಿ ನಿದ್ರೆ ಮಾಡದಿದ್ದರೆ ಅಂದರೆ ಕಡಿಮೆ ನಿದ್ರೆ ಮಾಡುತ್ತಿದ್ದರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ನಿದ್ರೆಯ ಅವಶ್ಯಕತೆಗಳು ವಯಸ್ಸಿನ ಪ್ರಕಾರ ಬದಲಾಗುತ್ತವೆ. ಆದ್ದರಿಂದ, ವೈದ್ಯರೊಂದಿಗೆ ಮಾತನಾಡುವುದು ಮತ್ತು ನಿಮ್ಮ ಮಗುವಿಗೆ ಅಗತ್ಯವಿರುವ ನಿದ್ರೆಯ ಪ್ರಮಾಣವನ್ನು ತಿಳಿದುಕೊಳ್ಳುವುದು ಒಳ್ಳೆಯದು.

ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿ ಮತ್ತು ಆರಾಮದಾಯಕವಾಗಿರಿಸಿ: ಪ್ರಕಾಶಮಾನವಾದ ಬೆಳಕಿನಿಂದಾಗಿ ನಿಮ್ಮ ಮಗು ಎಚ್ಚರಗೊಳ್ಳಬಹುದು ಅಥವಾ ನಿದ್ರಿಸಲು ಕಷ್ಟವಾಗಬಹುದು. ಆದ್ದರಿಂದ, ಕೊಠಡಿಯು ನಿದ್ರೆಯನ್ನು ಉಂಟುಮಾಡುವಷ್ಟು ಕತ್ತಲೆಯಾಗಿರಲಿ ಮತ್ತು ಯಾವುದೇ ಶಬ್ದ ಇರಬಾರದು ಮತ್ತು ಮಂದ ದೀಪಗಳನ್ನು ಆರಿಸಿಕೊಳ್ಳಿ. ಕೋಣೆಯ ಉಷ್ಣಾಂಶವನ್ನು ಸರಿಯಾಗಿ ನಿರ್ವಹಿಸಬೇಕು ಮತ್ತು ಬೆಡ್ ಶೀಟ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು.

ಮಗುವಿನ ಬಟ್ಟೆಗಳು ಆರಾಮದಾಯಕವಾಗಿರಲಿ: ನಿಮ್ಮ ಮಗುವಿಗೆ ಸರಿಯಾಗಿ ಡ್ರೆಸ್ ಮಾಡುವುದು ಸಹ ಮುಖ್ಯವಾಗಿದೆ ಇದರಿಂದ ಮಗು ಶಾಂತಿಯುತವಾಗಿ ಮಲಗಲು ಸಹಾಯವಾಗುತ್ತದೆ. ನಿಮ್ಮ ಮಗುವಿಗೆ ಬಟ್ಟೆ, ಕೈಗವಸುಗಳು ಮತ್ತು ಸಾಕ್ಸ್‌ಗಳನ್ನು ಹಾಕಿ. ಹಗಲಿನ ವೇಳೆಯಲ್ಲಿ ತಡವಾಗಿ ನಿದ್ರೆ ಮಾಡುವುದನ್ನು ತಪ್ಪಿಸಿ ಏಕೆಂದರೆ ಇದು ನಿಮ್ಮ ಮಗುವಿನ ವೇಳಾಪಟ್ಟಿಯನ್ನು ಹಾಳು ಮಾಡುತ್ತದೆ.

ಹಗಲಿನಲ್ಲಿ ಹೆಚ್ಚಿನ ಕ್ಯಾಲೊರಿಗಳ ಆಹಾರವನ್ನು ನೀಡಿ: ನಿಮ್ಮ ಮಗುವಿಗೆ ಹಗಲಿನಲ್ಲಿ ಸಾಕಷ್ಟು ಹೊಟ್ಟೆ ತುಂಬಿದರೆ ರಾತ್ರಿಯಲ್ಲಿ ಕಡಿಮೆ ಹಸಿವು ಇರುತ್ತದೆ (ಮತ್ತು ನಿದ್ರೆ ಮಾಡಲು ಉತ್ತಮವಾಗಿದೆ). ತಾಯಿಹಾಲು ಸೇವಿಸುತ್ತಿರುವ ಮಕ್ಕಳು ಪ್ರತಿ ಎರಡು ಮೂರು ಗಂಟೆಗಳಿಗೊಮ್ಮೆ ತಿನ್ನಬೇಕಾಗುತ್ತದೆ, ಅಂದರೆ ದಿನದ ಇಪ್ಪತ್ತನಾಲ್ಕು ಘಂಟೆಗಳ ಅವಧಿಯಲ್ಲಿ ಸುಮಾರು ಎಂಟರಿಂದ ಹನ್ನೆರಡು ಬಾರಿ! ಈ ಪ್ರಕ್ರಿಯೆ ಆರು ತಿಂಗಳ ವಯಸ್ಸಾಗುವಾಗ ಕೊಂಚ ಘನ ಆಹಾರಗಳನ್ನು ಸೇವಿಸಲು ಪ್ರಾರಂಭಿಸಿದಾಗ ಕಡಿಮೆಯಾಗುತ್ತದೆ. ಬಳಿಕ ಇದು ದಿನಕ್ಕೆ ಆರು ಬಾರಿ ಆಹಾರ ಸೇವಿಸುವುದಕ್ಕೆ ಇಳಿಯುತ್ತದೆ. ಮುಂದಿನ ತಿಂಗಳುಗಳಲ್ಲಿ ಈ ಪ್ರಮಾಣವೂ ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ.

ಇದನ್ನೂ ಓದಿ:  Sleeping Problem: ರಾತ್ರಿ ನಿದ್ರೆ ಸರಿಯಾಗಿ ಬರ್ತಿಲ್ವಾ? ಈ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ

ಕೊನೆಯ ಮಾತು
ಮಕ್ಕಳ ನಿದ್ರೆ ಬಗ್ಗೆ ಪೋಷಕರೂ ಚಿಂತೆ ಮಾಡುವ ಬದಲು ಈ ಸಲಹೆಗಳನ್ನು ಅನುಸರಿಸುವ ಮೂಲಕ ನಿಮ್ಮ ಮತ್ತು ಮಗುವಿನ ನಿದ್ರೆಗೆ ಭಂಗವಾಗದಂತೆ ಸುಖಕರ ನಿದ್ದೆ ಮಾಡಲು ಈ ಸಲಹೆಗಳು ಖಂಡಿತ ಪ್ರಯೋಜನಕಾರಿ ಆಗಿವೆ.
Published by:Ashwini Prabhu
First published: