Health Tips: ವಾಕಿಂಗ್ ಮಾಡಿದ್ರೂ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತಂತೆ

ವಾಕಿಂಗ್ ನಿಮ್ಮ ದೇಹ ಕೂಡ ಸರಿಯಾದ ಆಕಾರ ಪಡೆದುಕೊಳ್ಳುವುದು. ಆದರೆ ಅದರ ಅತಿ ದೊಡ್ಡ ಪ್ರಯೋಜನ ಇಲ್ಲಿದೆ – ಅದು ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಕೆಲಸವನ್ನು ಈ ಊಟದ ನಂತರ ನಡಿಗೆಯಿಂದ ಮಾತ್ರ ಸಾಧ್ಯವಿದೆ. ಅದರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಹಳೆ ಕಾಲದಿಂದಲೂ ಊಟದ (Lunch) ನಂತರ ಸ್ವಲ್ಪ ಸಮಯ ನಡೆಯುವುದರಿಂದ ಆಹಾರವು (Food) ಉತ್ತಮವಾಗಿ ಜೀರ್ಣಗೊಂಡು, ಆರೋಗ್ಯ (Health) ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕೆ ಬಹುತೇಕರು ಊಟದ ನಂತರ (After Lunch) ಚಿಕ್ಕ ವಾಕ್‌ (Walk) ಹೋಗಿ ಬರುತ್ತಾರೆ. ಪಾಶ್ಚಿಮಾತ್ಯ ಮೆಡಿಸಿನ್‌ನ ಪಿತಾಮಹ (Father of Medicine) ಎಂದು ಕರೆಸಿಕೊಳ್ಳುವ ಹಿಪೊಕ್ರೆಟಿಸ್‌ನ ಕಾಲದಿಂದಲೂ, ನಡಿಗೆಯ ಅನುಕೂಲಗಳು ಎಲ್ಲರಿಗೂ ತಿಳಿದಿವೆ. ನಡೆಯುವುದರಿಂದ ನಿಮ್ಮ ಉತ್ಸಾಹ ಹೆಚ್ಚಾಗುತ್ತದೆ, ಜೊತೆಗೆ ನಿಮ್ಮ ಸ್ನಾಯುಗಳು (Muscles) ಆರೋಗ್ಯವಾಗಿರುತ್ತವೆ, ಮತ್ತು ನಿಮ್ಮ ಆಯಸ್ಸು ಕೂಡ ಹೆಚ್ಚುತ್ತದೆ. ನಡೆಯುವುದರಿಂದ ನಿಮ್ಮ ಮೆಟಬಾಲಿಸಮ್ (Metabolism) ಹೆಚ್ಚಾಗುತ್ತದೆ ಹಾಗು ನಿಯಂತ್ರಣದಲ್ಲಿರುತ್ತದೆ.

ವಾಕಿಂಗ್ ನಿಮ್ಮ ದೇಹ ಕೂಡ ಸರಿಯಾದ ಆಕಾರ ಪಡೆದುಕೊಳ್ಳುವುದು. ಆದರೆ ಅದರ ಅತಿ ದೊಡ್ಡ ಪ್ರಯೋಜನ ಇಲ್ಲಿದೆ – ಅದು ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಕೆಲಸವನ್ನು ಈ ಊಟದ ನಂತರ ನಡಿಗೆಯಿಂದ ಮಾತ್ರ ಸಾಧ್ಯವಿದೆ. ಅದರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ.

ವಾಕಿಂಗ್ ಮಾಡುವುದರಿಂದಾಗುವ ಪಯೋಜನಗಳು 
ನೀವು ಊಟ ಮಾಡಿದ ನಂತರ ನಡಿಗೆಯನ್ನು ಅಭ್ಯಾಸ ಮಾಡಿಕೊಳ್ಳುವುದರಿಂದ, ಇದು ದೇಹದ ಜೀರ್ಣಕ್ರಿಯೆಗೆ ಸಹಾಯ ಆಗುತ್ತದೆ ಎಂದು ವಿಜ್ಞಾನಿಗಳು ಸಂಶೋಧನೆ ಮೂಲಕ ಇದನ್ನು ಅನ್ವೇಷಿಸಿದ್ದಾರೆ. ಯಾವುದೇ ಊಟದ ನಂತರ ಸ್ವಲ್ಪ ಹೊತ್ತು ವಾಕ್‌ ಹೋಗುವುದರಿಂದ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಟೈಪ್ 2 ಮಧುಮೇಹದಂತಹ ತೊಂದರೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಊಟದ ನಂತರ 60 ರಿಂದ 90 ನಿಮಿಷಗಳ ಕಾಲ ನಡೆಯುವುದು ನಮ್ಮ ದೇಹಕ್ಕೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ವಿಜ್ಞಾನಿಗಳು ಸಾಮಾನ್ಯ ಜನರಿಗೆ ಶಿಫಾರಸು ಮಾಡಿದ್ದಾರೆ.

ಇದನ್ನೂ ಓದಿ: Walking And Health: ತೂಕ ಇಳಿಕೆಗೆ ಪ್ರತಿದಿನ ಹತ್ತು ಸಾವಿರ ಹೆಜ್ಜೆ ನಡೆಯುವುದು ಎಷ್ಟು ಪರಿಣಾಮಕಾರಿ?

ಯಾವುದೇ ಸಮಯದಲ್ಲಿ ಮಾಡಬಹುದಾದ ಹಗುರವಾದ ನಡಿಗೆಯು ನಮ್ಮ ಆರೋಗ್ಯಕ್ಕೆ ಉತ್ತಮವಾಗಿದ್ದರೂ, ಊಟದ ನಂತರ 60 ರಿಂದ 90 ನಿಮಿಷಗಳ ಕಾಲ ಒಂದು ಸಣ್ಣ ವಾಕ್‌ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ವಿಶೇಷವಾಗಿ ಕಾರ್ಯ ನಿರ್ವಹಿಸುತ್ತದೆ.

ಊಟದ ನಂತರ ವಾಕ್‌ ಮಾಡದಿದ್ದರೆ ಏನಾಗಬಹುದು?
ಊಟದ ನಂತರ ವಾಕ್‌ ಹೋಗದೇ ಇದ್ದರೆ, ಅದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಗರಿಷ್ಠ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ. ಇದರ ಕುರಿತು ದಿ ನ್ಯೂಯಾರ್ಕ್ ಟೈಮ್ಸ್ ಜರ್ನಲ್ ಸ್ಪೋರ್ಟ್ಸ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಸಂಶೋಧಕರು ಏಳು ಅಧ್ಯಯನಗಳ ಫಲಿತಾಂಶಗಳನ್ನು ಸಂಶೋಧಿಸಿದ್ಧಾರೆ. ಇದರಲ್ಲಿ ಮನುಷ್ಯನು ಕುಳಿತುಕೊಳ್ಳುವ ಮತ್ತು ನಿಂತಿರುವ ಅಥವಾ ವಾಕಿಂಗ್ ಮಾಡುವ ಪರಿಣಾಮಗಳನ್ನು ಒಂದಕ್ಕೊಂದು ಹೋಲಿಸಿದಾಗ ಇನ್ಸುಲಿನ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟಗಳು ಸೇರಿದಂತೆ ಹೃದಯದ ಆರೋಗ್ಯದ ಅಳತೆಗಳ ಮೇಲೆ ಕೂಡ ಈ ವಾಕ್‌ ಮಾಡುವ ಪ್ರಯೋಜನವನ್ನು ಹೋಲಿಸಲಾಗಿದೆ. ಆಗ ತಿಳಿದು ಬಂದ ಸತ್ಯವೆಂದರೆ- ಊಟದ ನಂತರ 2 ರಿಂದ 3 ನಿಮಷಗಳ ಕಾಲ ನಡೆಯುವ ಹಗುರವಾದ ವಾಕಿಂಗ್, "ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮಿತಗೊಳಿಸುವುದರಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ" ಎಂದು ಅವರು ಸಂಶೋಧನೆಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಸಂಶೋಧನೆ ಏನು ಹೇಳಿದೆ?
ಈ ಸಂಶೋಧನೆಯು ಪ್ರಮುಖವಾಗಿ ಭಾರತೀಯರಿಗೆ ಪ್ರಯೋಜನಕಾರಿಯಾಗಿದೆ ಎಂದು ಫೋರ್ಟಿಸ್-ಸಿ-ಡಿಒಸಿ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಡಯಾಬಿಟಿಸ್, ಮೆಟಬಾಲಿಕ್ ಡಿಸೀಸ್ ಮತ್ತು ಎಂಡೋಕ್ರೈನಾಲಜಿಯ ಅಧ್ಯಕ್ಷ ಅನೂಪ್ ಮಿಶ್ರಾ ಹೇಳುತ್ತಾರೆ. ಅವರು, “ಭಾರತದ ಆಹಾರ ಪದ್ದತಿಯ ಪ್ರಕಾರ ಮತ್ತು ನಮ್ಮ ಊಟದ ಮಾದರಿಗಳನ್ನು ಗಮನಿಸಿದರೆ, ಊಟದ ನಂತರ ದೇಹದಲ್ಲಿ ಸಂಗ್ರಹವಾಗುವ ಸಕ್ಕರೆ ಅಂಶವು ಅತಿ ಹೆಚ್ಚಾಗಿರುತ್ತದೆ ಮತ್ತು ನಿಯಂತ್ರಿಸಲು ಕಷ್ಟವಾಗುತ್ತದೆ” ಎಂದು ಹೇಳಿದರು.

ಇದನ್ನೂ ಓದಿ: Diabetes: ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚು ಇದೆಯಾ? ಜೀವನಶೈಲಿಯಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಿ, ಕಂಟ್ರೋಲ್​ ಆಗುತ್ತೆ ನೋಡಿ

ಈ ಸಂಶೋಧನಾ ವರದಿಯ ಪ್ರಕಾರ “ಮನೆಗೆಲಸವನ್ನು ಮಾಡಲು ಅಥವಾ ನಿಮ್ಮ ದೇಹವನ್ನು ದಂಡಿಸಲು ನೀವು ಇತರ ಮಾರ್ಗಗಳನ್ನು ಅನುಸರಿಬಹುದು ಎಂದು ಸಹ ಶಿಫಾರಸು ಮಾಡಿದೆ. ಸ್ವಲ್ಪ ಸಮಯ ಮಾಡುವ ನಡಿಗೆಯು ನಮ್ಮ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೆಲಸದ ಸ್ಥಳದಲ್ಲಿ ಹೆಚ್ಚು ಸಮಯ ಕಳೆಯುವವರಿಗೆ, ಓಡುವ ಚಟುವಟಿಕೆಗಿಂತ 2 ರಿಂದ 3 ನಿಮಿಷಗಳ ಕಾಲ ಮಿನಿ ವಾಕ್‌ ಹೆಚ್ಚು ಪ್ರಯೋಜನಕಾರಿ ಮತ್ತು ಇದು ಅತ್ಯಂತ ಪ್ರಾಯೋಗಿಕ ಚಟುವಟಿಕೆ ಆಗಿದೆ” ಎಂದು ಹೇಳುತ್ತದೆ.
Published by:Ashwini Prabhu
First published: